ದೇಶದ ಮೊದಲ ಸ್ಟಾರ್ಟ್ಅಪ್ ಜಿಲ್ಲೆಯಾಗಿ ಮಂಗಳೂರು ಆಯ್ಕೆ!!
ಮೋದಿಯವರ ಸ್ಟಾರ್ಟ್ಅಪ್ ದೇಶದ ಆಸೆಯಂತೆ ಕೆಲವೇ ದಿವಸಗಳಲ್ಲಿ ಮಂಗಳೂರು ದೇಶದ ಮೊದಲ ಸ್ಟಾರ್ಟ್ಆಪ್ ಜಿಲ್ಲೆ ಎನ್ನುವ ಕೀರ್ತಿಗೆ ಭಾಜನವಾಗಲಿದೆ.
ಕರ್ನಾಟಕದ ಕರಾವಳಿ ರಾಜಧಾನಿ ಮಂಗಳೂರು ದೇಶದ ಮೊದಲ ಸ್ಟಾರ್ಟ್ಅಪ್ ಜಿಲ್ಲೆಯಾಗಿ ಆಯ್ಕೆಯಾಗುತ್ತದೆ ಎನ್ನುವ ಸುದ್ದಿಯನ್ನು ಪ್ರಮುಖ ಇಂಗ್ಲೀಷ ಪತ್ರಿಕೆ ಟೈಮ್ಸ್ ಆಫ್ ಇಂಡಿಯಾ ವರದಿಮಾಡಿದೆ.! ಇಡೀ ಜಿಲ್ಲೆಯಲ್ಲಿ ಎಲ್ಲಾ ಸೌಲಭ್ಯಗಳನ್ನು ಉನ್ನತೀಕರಿಸಿ ಡಿಜಿಟಲ್ ನೆಟ್‌ವರ್ಕ್ ಬೆಳೆಸಲು ಕೇಂದ್ರ ಸರ್ಕಾರ ಅನುದಾನ ನೀಡುತ್ತಿದೆ ಎನ್ನಲಾಗಿದೆ.
ಈ ಬಗ್ಗೆ ಮಾತನಾಡಿರುವ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆ ನಿರ್ಮಲಾ ಸೀತಾರಾಮನ್ ಈ ಯೋಜನೆ ಬಗ್ಗೆ ಮಾಹಿತಿ ನೀಡಿದ್ದು, ಬೆಂಗಳೂರು ಮತ್ತು ಹೈದರಾಬಾದ್ ಹೊರತುಪಡಿಸಿ ಇತರೆ ನಗರಗಳಲ್ಲೂ ಉದ್ಯಮಕ್ಕೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಮಂಗಳೂರನ್ನು ಸ್ಟಾರ್ಟ್ಅಪ್ ಜಿಲ್ಲೆಯಾಗಿ ಆಯ್ಕೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಜಿಯೋ ಕೊಟ್ರು ಗೂಗಲ್ ಕೊಡ್ತಿಲ್ಲ!!..ಇಂಟರ್‌ನೆಟ್ ಬಳಕೆದಾರರಿಗೆ ಆಘಾತ!
ನಗರದ ಯಾವ ಯಾವ ವಲಯದಲ್ಲಿ ಸ್ಟಾರ್ಟ್ಅಪ್‌ಗಳನ್ನು ಆರಂಭಿಸಬಹುದು ಎಂಬುದರ ಬಗ್ಗೆ ಈಗಾಗಲೇ ನೀತಿ ಆಯೋಗ ವಿವಿಧ ಇಲಾಖೆಗಳನ್ನು ಕೇಳಿದೆ ಎನ್ನುವ ಮಾಹಿತಿ ಬಂದಿದ್ದು, ಕೆಲವೇ ದಿವಸಗಳಲ್ಲಿ ಮಂಗಳೂರು ದೇಶದ ಮೊದಲ ಸ್ಟಾರ್ಟ್ಆಪ್ ಜಿಲ್ಲೆ ಎನ್ನುವ ಕೀರ್ತಿಗೆ ಭಾಜನವಾಗಲಿದೆ.

ಕಳೆದ ವರ್ಷ ಪ್ರಧಾನಮಂತ್ರಿ ಮೋದಿಯವರು ದೇಶದಲ್ಲಿ ಸ್ಟಾರ್ಟ್ಅಪ್ ನಗರಗಳನ್ನು ಸೃಷ್ಟಿಸಬೇಕು ಎಂದು ಕರೆ ನೀಡಿ ಇದರ ಬಗ್ಗೆ ಘೋಷಣೆಯನ್ನು ಸಹ ನೀಡಿದ್ದರೂ. ಇದೀಗ ಇದರ ಮೊದಲ ಹೆಜ್ಜೆಯಾಗಿ ಕರಾವಳಿ ಜಿಲ್ಲೆ ಆಯ್ಕೆಯಾಗಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವೇ.!!


Click it and Unblock the Notifications