ಮಂಗಳಯಾನದ ಮೊದಲ ಅಡ್ಡಿ ನಿವಾರಣೆ:ಉಪಗ್ರಹ ಸುರಕ್ಷಿತ
ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಕೈಗೊಂಡಿರುವ ಐತಿಹಾಸಿಕ ಮಂಗಳಯಾನಕ್ಕೆ ನಿನ್ನೆ ಎದುರಾಗಿದ್ದ ಮೊದಲ ಅಡ್ಡಿ ನಿವಾರಣೆಯಾಗಿದೆ.ಇಂದು(ನ.12) ಬೆಳಗ್ಗೆ 5 ಗಂಟೆಗೆ ಕಾರ್ಯಾಚರಣೆ ನಡೆಸಿ ಉಪಗ್ರಹವನ್ನು ಒಂದು ಲಕ್ಷ ಕಿ.ಮೀ ದೂರಕ್ಕೆ ಇಸ್ರೋ ಯಶಸ್ವಿಯಾಗಿ ನೂಕಿದೆ.
ಭೂಮಿಯಿಂದ 78,276 ಕಿ.ಮೀ ದೂರದಲ್ಲಿರುವ ಉಪಗ್ರಹವನ್ನು 1,18,642 ಕಿ.ಮೀ ಎತ್ತರಕ್ಕೆ ಯಶಸ್ವಿಯಾಗಿ ಏರಿಸಿದ್ದು ನೌಕೆ ಸರಿಯಾದ ಪಥದಲ್ಲಿದೆ ಎಂದು ಇಸ್ರೋ ಹೇಳಿದೆ.

ಉಪಗ್ರಹವನ್ನುಎತ್ತರಕ್ಕೆ ಏರಿಸಲು ಇಸ್ರೋ ಸೋಮವಾರ( ನ.12) ಮುಂಜಾನೆ ನಡೆಸಿದ ಕಾರ್ಯಾಚರಣೆ ತಾಂತ್ರಿಕ ದೋಷದಿಂದಾಗಿ ವೈಫಲ್ಯ ಅನುಭವಿಸಿತ್ತು. ಉಪಗ್ರಹದ ಎತ್ತರವನ್ನು ಹಂತಹಂತವಾಗಿ ಏರಿಸುತ್ತಿರುವ ಇಸ್ರೋದ ಮೂರು ಹಂತದ ಕಾರ್ಯಾಚರಣೆ ಯಶಸ್ವಿಯಾಗಿ, ನಾಲ್ಕನೇಯ ಹಂತದ ಕಾರ್ಯಾಚರಣೆಯನ್ನು ನಿನ್ನೆ ನಸುಕಿನ ಜಾವ 2 ಗಂಟೆ 6 ನಿಮಿಷಕ್ಕೆ ಇಸ್ರೋ ಹಮ್ಮಿಕೊಂಡಿತ್ತು.
ಭೂಮಿಯಿಂದ 71,623 ಕಿ.ಮೀ ದೂರದಲ್ಲಿರುವ ಉಪಗ್ರಹ ಸೆಕೆಂಡ್‌ಗೆ 130 ಮೀಟರ್ ವೇಗದಲ್ಲಿ ಚಲಿಸಿ 1ಲಕ್ಷ ಕಿ.ಮೀ ಕ್ರಮಿಸಬೇಕಿತ್ತು.ಆದರೆ ಇಂಜಿನ್‌ಗೆ ಇಂಧನ ಪೂರೈಕೆ ಸ್ಥಗಿತಗೊಂಡದ್ದರಿಂದ ಉಪಗ್ರಹ ಸೆಕೆಂಡ್‌ಗೆ 35 ಮೀಟರ್ ವೇಗದಲ್ಲಿ ಚಲಿಸಿ 78,276 ಕಿ.ಮೀ ಎತ್ತರಕ್ಕೆ ಏರಿಸಲು ಮಾತ್ರ ಇಸ್ರೋಗೆ ಸಾಧ್ಯವಾಗಿತ್ತು.
ಭೂ ಕಕ್ಷೆಯಲ್ಲಿ ಸುತ್ತಾಡುತ್ತಿರುವ ಉಪಗ್ರಹ ತನ್ನ 9 ತಿಂಗಳ ಮಂಗಳ ಯಾನವನ್ನು ಡಿ.1ರಿಂದ ಕೈಗೊಳ್ಳಲಿದ್ದು, 2014ರ ಸೆ.24ರಂದು ಮಂಗಳ ಕಕ್ಷೆ ತಲುಪುವಂತೆ ಇಸ್ರೋ ಯೋಜನೆ ರೂಪಿಸಿದೆ.
ಇದನ್ನೂ ಓದಿ: ಮಂಗಳ ಗ್ರಹದಲ್ಲಿ ನೀರು ಪತ್ತೆ

Post by ISRO.

Click it and Unblock the Notifications