Subscribe to Gizbot

ಭಾರತದಲ್ಲಿ ಡಿಜಿಟಲ್ ಪಾವತಿಗೆ ಸೈಬರ್ ಭದ್ರತೆಯೇ ಕಂಟಕ! ಏನಿದು ವರದಿ?

Written By:

500-1000 ರೂ ಮುಖಬೆಲೆಯ ನೋಟುಗಳ ನಿಷೇಧದ ನಂತರ ಭಾರತದಲ್ಲಿ ಡಿಜಿಟಲ್ ಪಾವತಿಗೆ ಮಹತ್ವ ಹೆಚ್ಚಿದ್ದು, ಡಿಜಿಟಲ್ ಪಾವತಿಗೆ ಬೇಡಿಕೆ ಹೆಚ್ಚಿದಂತೆ ಸೈಬರ್ ಭದ್ರತೆಯೂ ಪ್ರಮುಖವಾದ ವಿಷಯವಾಗಿರಲಿದೆ ಎಂದು ಅಸೋಚಾಮ್-ಪಿಡಬ್ಲ್ಯೂಸಿ ಅಧ್ಯಯನ ವರದಿ ಹೇಳಿದೆ.

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸೈಬರ್ ದಾಳಿ ಪ್ರಕರಣಗಳು ಭಾರತದಲ್ಲಿನ ಡಿಜಿಟಲ್ ಪಾವತಿ ಬಗ್ಗೆ ಆತಂಕ ಮೂಡಿಸುತ್ತಿವೆ. 2014 ರಲ್ಲಿ 44,679 ಪ್ರಕರಣಗಳು ಮತ್ತು 2015 ರಲ್ಲಿ 49,455 ಪ್ರಕರಣಗಳು ಸೈಬರ್ ಅಪರಾದದ ಬಗ್ಗೆ ದಾಖಲಾಗಿದ್ದರೆ, 2016 ರಲ್ಲಿ 39,730 ಸೈಬರ್ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಅಸೋಚಾಮ್-ಪಿಡಬ್ಲ್ಯೂಸಿ ಸಂಸ್ಥೆ ಹೇಳಿದೆ.

ಭಾರತದಲ್ಲಿ ಡಿಜಿಟಲ್ ಪಾವತಿಗೆ ಸೈಬರ್ ಭದ್ರತೆಯೇ ಕಂಟಕ! ಏನಿದು ವರದಿ?

ಜಿಯೋ ಉಚಿತ ಆಫರ್: ಏರ್‌ಟೆಲ್‌ ನಂತರ ದೂರು ದಾಖಲಿಸಿದ ಐಡಿಯಾ!!

ಇನ್ನು ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳಲ್ಲಿ ನಗದು ರಹಿತ ವಹಿವಾಟು ಯೋಜನೆಯನ್ನು ಉಲ್ಲೇಖಿಸಿ, ಇಂತಹ ಸೈಬರ್ ಅಭದ್ರತೆ ಪ್ರಕರಣಗಳು ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳಲ್ಲಿ ಎದುರಾಗುವುದು ಅಪರೂಪ ಎಂದು ಅಧ್ಯಯನ ವರದಿ ಹೇಳಿದೆ.

ಭಾರತದಲ್ಲಿ ಡಿಜಿಟಲ್ ಪಾವತಿಗೆ ಸೈಬರ್ ಭದ್ರತೆಯೇ ಕಂಟಕ! ಏನಿದು ವರದಿ?

ಬ್ಯಾಂಕ್ ಖಾತೆಗಳ ಮೇಲೆ ಸೈಬರ್ ದಾಳಿ ನಡೆಯುತ್ತಿರುವ ಪ್ರಕರಣಗಳು ಹೆಚ್ಚಿದ್ದು, ಎಟಿಎಂ ಕಾರ್ಡ್ ಗಳನ್ನು ಹ್ಯಾಕ್ ಮಾಡಿ ಮತ್ತು ಬ್ಯಾಂಕ್ ನಿಂದ ಕಾಲ್‌ ಮಾಡಿರುವುದಾಗಿ ಹೇಳಿ ಪಾಸ್‌ವರ್ಡ್ ಪಡೆದು ಜನರಿಗೆ ವಂಚಿಸುತ್ತಿರುವ ಪ್ರಕರಣಗಳು ಹೆಚ್ಚಾಗಿವೆ ಎಂದು ತಿಳಿಸಿದೆ.

English summary
A surge in the cyber security related incidents in India has been noticed with a total of 39730 incidents reported in the first 10 months of 2016. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot