ಜಾಗತಿಕ ಸೈಬರ್ ಕ್ರಿಮಿನಲ್‌ಗಳಿಗೆ ಆಹಾರವಾಗಲಿರುವ ಆಧಾರ್: ತಜ್ಞರ ಎಚ್ಚರಿಕೆ
ದೇಶದಲ್ಲಿ ಯಾವುದೇ ಸೇವೆ ಬೇಕಾದರೂ ಆಧಾರ್ ಕಡ್ಡಾಯ ಎಂದು ಕೇಂದ್ರ ಸರಕಾರವು ನಿಯಮವನ್ನು ತರುತ್ತಿರುವ ಬೆನ್ನಲೇ ಆಧಾರ್ ದೇಶದ ಸೈಬರ್ ಕ್ರೈಮ್‌ಗೆ ಅತೀ ದೊಡ್ಡ ಆಹಾರವಾಗಲಿದೆ ಎಂದು ಸೈಬರ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಓದಿರಿ: ವಿಮಾನದಲ್ಲಿ ಐಫೋನ್ X ಅನ್ನು ತಂದ ವ್ಯಕ್ತಿಯ ಬಂಧನ: ಯಾಕೆ..?
ಆಧಾರ್ ಕಾರ್ಡ್ ಅನ್ನು ಪ್ಯಾನ್ ನೊಂದಿಗೆ ಲಿಂಕ್ ಮಾಡಿಕೊಳ್ಳಿ, ಬ್ಯಾಂಕ್ ಖಾತೆಯೊಂದಿಗೆ ಸಂಪರ್ಕಿಸಿ, ಸಿಮ್ ಕಾರ್ಡ್ ನಂಬರ್ ನೊಂದಿಗೆ ಲಿಂಕ್ ಮಾಡಿ, ಡೈವಿಂಗ್ ಲೈಸೆನ್ಸ್ ಬೇಕು ಎಂದರು ಆಧಾರ್ ಬೇಕೆ ಬೇಕು ಎನ್ನುವ ಸ್ಥಿತಿಯನ್ನು ಸರಕಾರವು ನಿರ್ಮಾಣ ಮಾಡುತ್ತಿದೆ. ಯಾವುದೇ ಸರಕಾರಿ ಸೇವೆಯು ಬೇಕೆಂದರೆ ಆಧಾರ್ ಇರಲೇಬೇಕಾಗಿದೆ. ಆದರೆ ಇದೇ ಆಪತ್ತಿಗೆ ಕಾರಣವಾಗಿದೆ.

ಸೈಬರ್ ಕ್ರೈಮ್ ಗೆ ಆಹ್ವಾನ:
ಆಧಾರ್ ಕಾರ್ಡ್ ಬಳಕೆಯನ್ನು ಹೆಚ್ಚು ಮಾಡಿದಷ್ಟು ಸೈಬರ್ ಕ್ರೈಮ್ ಗೆ ಆಹ್ವಾನ ನೀಡಿದಂತೆ ಎಂದು ಸೈಬರ್ ತಜ್ಞರು ಅಭಿಪ್ರಯ ಪಟ್ಟಿದ್ದಾರೆ. ಇದರಿಂದ ದೇಶದ ಭದ್ರತೆಗೆ ಹೆಚ್ಚಿನ ಸವಾಲು ಎದುರಾಗಲಿದೆ ಎನ್ನಲಾಗಿದೆ.

ಜಾಗತಿಕ ಸೈಬರ್ ಕ್ರೈಮ್ ಭೀತಿ:
ಆಧಾರ್ ಮಾಹಿತಿಗಳನ್ನು ಅತ್ಯಂತ ಸುಕ್ಷಿತವಾಗಿ ಇಡುವಂತ ವ್ಯವಸ್ಥೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ತಜ್ಞರು ಜಾಗತಿಕ ಸೈಬರ್ ಕ್ರಿಮಿನಲ್ ಗಳು ಆಧಾರ್ ಮಾಹಿತಿಗಳನ್ನು ಕಳವು ಮಾಡಿ ದೇಶದ ಪ್ರಗತಿಗೆ ಸವಾಲು ಹಾಕುವ ಸಾಧ್ಯತೆ ಬಗ್ಗೆ ಎಚ್ಚರಿಸಿದ್ದಾರೆ.

ಆಧಾರ್ ಮಾಹಿತಿ ಕಳುವಾದರೆ ಕಷ್ಟ:
ಈಗಾಗಲೇ ಹಲವಾರು ಬಾರಿ ಆಧಾರ್ ಮಾಹಿತಿ ಲೀಕ್ ಆಗಿದ್ದು, ಇದು ದೇಶದ ಭದ್ರತೆ ಮತ್ತು ಅಭಿವೃದ್ಧಿಗೆ ಮಾರಕವಾಗಲಿದೆ. ಇದರಿಂದ ದೇಶದ ಹಣಕಾಸಿ ವ್ಯವಸ್ಥೆಯು ಕುಸಿಯಲಿದೆ ಎನ್ನಲಾಗಿದೆ. ಇದು ಮುಂದಿನ ದಿನದಲ್ಲಿ ಮಾರಕವಾಗಲಿದೆ.

ಸೈಬರ್ ದಾಳಿ:
ದೇಶದ ಪ್ರತಿಯೊಬ್ಬ ನಾಗರೀಕನ ಮಾಹಿತಿಯನ್ನು ಸಂಗ್ರಹಿಸಿರುವ ಆಧಾರ್ ಅನ್ನು ಹ್ಯಾಕ್ ಮಾಡಿ, ದೇಶದ ಮೇಲೆ ಬಾಂಬ್ ದಾಳಿಯ ಮಾದರಿಯಲ್ಲಿ ಆಧಾರ್ ದಾಳಿ ಮಾಡಲು ಶತ್ರು ರಾಷ್ಟ್ರಗಳು ಮುಂದಾಗಬಹುದು ಎನ್ನಲಾಗಿದೆ.


Click it and Unblock the Notifications








