ವಿಮಾನದಲ್ಲಿ ಐಫೋನ್ X ಅನ್ನು ತಂದ ವ್ಯಕ್ತಿಯ ಬಂಧನ: ಯಾಕೆ..?
ಮುಂಬೈನಲ್ಲಿ ಮೊನ್ನೆ ತಾನೇ ಐಫೋನ್ X ಖರೀದಿಸಲು ಕುದುರೆಯ ಮೇಲೆ ಬ್ಯಾಂಡ್ ನೊಂದಿಗೆ ಬಂದು ವ್ಯಕ್ತಿಯೊಬ್ಬ ಸುದ್ದಿಯಾಗಿದ್ದ. ಈ ನೆನಪು ಮಾಸುವ ಮುನ್ನವೇ ಐಪೋನ್ X ಸಂಬಂಧ ಮುಂಬೈ ಮತ್ತೆ ಸುದ್ದಿಯಲ್ಲಿದೆ. ಅದುವೇ ವಿದೇಶದಿಂದ ಬಂದ ಐಪೋನ್ X ಗಳನ್ನು ವಶಪಡಿಸಿಕೊಂಡ ಕಾರಣಕ್ಕಾಗಿ.

ಭಾರತದಲ್ಲಿ ಈಗಾಗಲೇ ಐಪೋನ್ X ಲಾಂಚ್ ಆಗಿದ್ದು, ಗ್ರಾಹಕರು ಈ ದುಬಾರಿ ಫೋನ್ ಕೊಳ್ಳಲು ಮುಗಿಬಿಳುತ್ತಿದ್ದಾರೆ. ಈ ಹಿನ್ನಲೆಯಲ್ಲಿ ವಿದೇಶದಿಂದ ಮುಂಬೈಗೆ ವಿಮಾನದಲ್ಲಿ ಬಂದ ಪ್ರಯಾಣಿಕ ತನ್ನನೊಂದಿಗೆ 11 ಐಪೋನ್ Xಗಳನ್ನು ಹೊತ್ತುತಂದು ಏರ್ ಫೋರ್ಟ್ ಅಧಿಕಾರಿಗಳ ಅತಿಥಿಯಾಗಿದ್ದಾನೆ.

ಐಫೋನ್ X ಭಾರಿ ಬೇಡಿಕೆ:
ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯನ್ನು ಸೃಷ್ಠಿಸಿಕೊಂಡಿರುವ ಐಫೋನ್ X ಅನ್ನು ಕೊಂಡುಕೊಳ್ಳಲು ಹೆಚ್ಚಿನ ಜನರು ಮುಗಿಳುತ್ತಿರುವ ಹಿನ್ನಲೆಯಲ್ಲಿ ವಿದೇಶದಲ್ಲಿ ಕಡಿಮೆ ಬೆಲೆಗೆ ದೊರೆಯುತ್ತಿರುವ ಫೋನ್ ಅನ್ನು ಭಾರತದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ತರುತ್ತಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

10,57,388 ಮೌಲ್ಯದ ಫೋನ್:
ಭವೇಶ್ ವಿರಾನಿ ಎಂಬಾತ ಮುಂಬೈಗೆ ಒಟ್ಟು 11 ಐಪೋನ್ Xಗಳನ್ನು ಹೊತ್ತು ತಂದಿದ್ದ ಎನ್ನಲಾಗಿದೆ. ಈ ಐಪೋನ್ X ಗಳ ಒಟ್ಟು ಮೊತ್ತ ರೂ.10,57,388 ಎನ್ನಲಾಗಿದೆ. ಇಷ್ಟು ಪ್ರಮಾಣದ ಫೋನ್ ಗಳನ್ನು ಯಾವ ಕಾರಣಕ್ಕೆ ಹೊತ್ತು ತಂದಿದ್ದ ಎನ್ನುವುದರ ಕುರಿತು ವಿಚಾರಣೆಯನ್ನು ನಡೆಸಲಾಗುತ್ತಿದೆ.

ಅಮೆರಿಕಾದಲ್ಲಿ ಕಳವು:
ಒಂದು ದಿನದ ಹಿಂದೆ ಇದೆ ಐಪೋನ್ X ಅಮೆರಿಕಾದಲ್ಲಿ ಆಪಲ್ ಸ್ಟೋರ್ ಸೇರುವ ಮುನ್ನವೇ ಕಳ್ಳತನವಾಗಿತ್ತು. ಫೋನ್ ಸಾಗಿಸುತ್ತಿದ್ದ ಟ್ರಕ್ ನಿಂದಲೇ ಸುಮಾರು 300 ಫೋನ್ ಗಳನ್ನು ಎಗರಿಸಲಾಗಿತ್ತು.


Click it and Unblock the Notifications








