ಭಾರತದಿಂದ ಅತ್ಯಾಧುನಿಕ ಇಂಟರ್‌ಸೆಪ್ಟರ್‌ ಕ್ಷಿಪಣಿಯ ಯಶಸ್ವಿ ಪರೀಕ್ಷೆ

By Suneel
|

ಭಾರತ ತನ್ನ ರಕ್ಷಣಾ ವ್ಯವಸ್ಥೆಗೆ ಈಗ ಮತ್ತೊಂದು ಕಿರೀಟ ಪಡೆದಿದೆ. ಭಾನುವಾರ (ಮೇ 16)ಸ್ವದೇಶಿ ಅಭಿವೃದ್ದಿಯ ಶಬ್ಧಾತೀತ ವೇಗದ ವಿರೋಧಿ ಕ್ಷಿಪಣಿಯನ್ನು ನಾಶಪಡಿಸುವ ಇಂಟರ್‌ಸೆಪ್ಟರ್‌ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ. ಅದು ಒಳಬರುವ ಯಾವುದೇ ಶತ್ರು ಕ್ಷಿಪಣಿಯನ್ನು ನಾಶ ಮಾಡುವ ಅತ್ಯಾಧುನಿಕ ಸಾಮರ್ಥ್ಯ ಹೊಂದಿದೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ.

1

1

ಭಾರತ ತನ್ನ ತಂತ್ರಜ್ಞಾನ ಅಭಿವೃದ್ದಿಯೊಂದಿಗೆ ರಕ್ಷಣಾ ವ್ಯವಸ್ಥೆಗಾಗಿ ಬಹುಪದರಗಳ ಸೂಪರ್‌ಸಾನಿಕ್‌ 'ಇಂಟರ್‌ಸೆಪ್ಟರ್‌ ಕ್ಷಿಪಣಿ'ಯನ್ನು ಪರೀಕ್ಷಿಸಿದೆ. ರಕ್ಷಣಾ ವ್ಯವಸ್ಥೆಗಾಗಿ ಅಭಿವೃದ್ದಿಪಡಿಸಿರುವ ಇಂಟರ್‌ಸೆಪ್ಟರ್‌ ಕ್ಷಿಪಣಿ ಬೆಂಕಿ ಹೊಂದಿರುವ ಅತ್ಯಾಧುನಿಕ ಕ್ಷಿಪಣಿಯಾಗಿದೆ. ಅಲ್ಲದೇ ಯಾವುದೇ ವಿರೋಧಿ ಕ್ಷಿಪಣಿಯನ್ನು ನಾಶಮಾಡುವ ಸಾಮರ್ಥ್ಯಹೊಂದಿದೆ.

2

2

"ಇಂಟರ್‌ಸೆಪ್ಟರ್‌ ಕ್ಷಿಪಣಿಯನ್ನು ವಿವಿಧ ಪ್ಯಾರಾಮೀಟರ್‌ನಲ್ಲಿ ಫ್ಲೈಟ್‌ ಮೋಡ್‌ನಲ್ಲಿ ಪರೀಕ್ಷೆ ನಡೆಸಲಾಗಿದ್ದು ಯಶಸ್ವಿಯಾಗಿದೆ" ಎಂದು ರಕ್ಷಣಾ ಸಂಶೋಧನೆ ಅಭಿವೃದ್ದಿ ಸಂಸ್ಥೆಯ ಮೂಲಗಳು ತಿಳಿಸಿವೆ.

3

3

ಫೈಯರ್‌ ಅತ್ಯಾಧುನಿಕ ಇಂಟರ್‌ಸೆಪ್ಟರ್‌ ಕ್ಷಿಪಣಿಯನ್ನು ನೌಕಾ ಆವೃತ್ತಿಯ ಪೃಥ್ವಿ ಕ್ಷಿಪಣಿಯ ವಿರೋಧಿಯಾಗಿ ಆಗಿ ಬಂಗಾಳ ಕೊಲ್ಲಿಯಲ್ಲಿ ನಿಲ್ಲಿಸಿದ್ದ ಹಡಗೊಂದರಿಂದ ಹಾರಿಸಲಾಗಿತ್ತು. ಇದು ಸಂಫೂರ್ಣವಾಗಿ ಒಳ ಬರುವ ವಿರೋಧಿ ಕ್ಷಿಪಣಿಗಳನ್ನು ಎದುರಿಸುವ ಮತ್ತು ನಾಶಮಾಡುವ ಸಾಮರ್ಥ್ಯಹೊಂದಿದೆ ಎನ್ನಲಾಗಿದೆ.

4

4

ಉದ್ದೇಶಿತ ಕ್ಷಿಪಣಿ ಮತ್ತು ಇಂಟರ್‌ಸೆಪ್ಟರ್‌ ಎರಡನ್ನು ಸಹ ಭಾನುವಾರ 11.15 ಗಂಟೆಯಲ್ಲಿ ಹಾರಿಸಲಾಗಿ ಅತ್ಯಾಧುನಿಕ ವಾಯುಪಡೆ ರಕ್ಷಣಾ ಕ್ಷಿಪಣಿ ಅಬ್ದುಲ್‌ ಕಲಾಂ ದ್ವೀಪದ ಪ್ರದೇಶದಲ್ಲಿ ರೆಡಾರ್ ಸಿಗ್ನಲ್‌ ಮೂಲಕ ಟ್ರ್ಯಾಕ್‌ ಮಾಡಿ ಒಳಬರುವ ಕ್ಷಿಪಣಿಯನ್ನು ನಾಶಮಾಡಿತು ಎಂದು ಮೂಲಗಳು ತಿಳಿಸಿವೆ.

5

5

ಇಂಟರ್‌ಸೆಪ್ಟರ್‌ ನಾಶ ಮಾಡುವ ಸಾಮರ್ಥ್ಯವನ್ನು ಅನೇಕ ಟ್ರ್ಯಾಕಿಂಗ್ ಮೂಲಗಳಿಂದ ವಿಶ್ಲೇಷಣೆ ಪಡೆಯುತ್ತದೆ ಎಂದು ಡಿಆರ್‌ಡಿಒ ವಿಜ್ಞಾನಿ ಹೇಳಿದ್ದಾರೆ.

6

6

ಇಂಟರ್‌ಸೆಪ್ಟರ್‌ 7.5 ಮೀಟರ್‌ ಉದ್ದನೆಯ ಏಕ ಹಂತದ ಘನ ಕ್ಷಿಪಣಿ ಹೊಂದಿದ್ದು, ಮಾರ್ಗಸೂಚಿ ವ್ಯವಸ್ಥೆಯನ್ನು ಹೊಂದಿದೆ. ಅತ್ಯಾಧುನಿಕ ತಂತ್ರಜ್ಞಾನದ ಕಂಪ್ಯೂಟರ್‌ ಮತ್ತು ಇಲೆಕ್ಟ್ರೋ ಮೆಕಾನಿಕಲ್‌ ಆಕ್ಟಿವೇಟರ್‌ ಅನ್ನು ಸಹ ಹೊಂದಿದೆ

7

7

ಇಂಟರ್‌ಸೆಪ್ಟರ್‌ ಕ್ಷಿಪಣಿಯು ಸ್ವಯಂ ಮೊಬೈಲ್‌ ಲಾಂಚರ್‌ ಹೊಂದಿದೆ. ಪ್ರತಿಬಂಧ ಸುರಕ್ಷಿತ ಡೇಟಾ ಲಿಂಕ್, ಸ್ವಯಂ ಟ್ರ್ಯಾಕಿಂಗ್‌, ಸ್ವಯಂ ಮರಳಿ ಲ್ಯಾಂಡ್‌ ಆಗುವ ಸಾಮರ್ಥ್ಯವನ್ನು ಮತ್ತು ಅತ್ಯಾಧುನಿಕ ರೆಡಾರ್‌ ಅನ್ನು ಸಹ ಹೊಂದಿದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ರೂ 700 ಕ್ಕಿಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾದ ಟಾಪ್‌ ಮೊಬೈಲ್‌ಗಳುರೂ 700 ಕ್ಕಿಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾದ ಟಾಪ್‌ ಮೊಬೈಲ್‌ಗಳು

ನಾಸಾ ಚಂದ್ರನ ಮೇಲೆ ಹಿಂದಿರುಗಿ ಹೋಗದಿರಲು ಕಾರಣವೇನು ಗೊತ್ತೇ?ನಾಸಾ ಚಂದ್ರನ ಮೇಲೆ ಹಿಂದಿರುಗಿ ಹೋಗದಿರಲು ಕಾರಣವೇನು ಗೊತ್ತೇ?

ಏಲಿಯನ್ ಇರುವ ಬಗೆಗಿನ ವಾಸ್ತವ ಘಟನೆಗಳುಏಲಿಯನ್ ಇರುವ ಬಗೆಗಿನ ವಾಸ್ತವ ಘಟನೆಗಳು

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್ ಪೇಜ್‌

ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
India successfully test-fires advanced interceptor missile. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X