ಸದ್ಯದಲ್ಲೇ ಬರಲಿದೆ GPS ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ!..ಇನ್ನು ಕ್ಯೂ ಇರಲ್ಲ!
ಪ್ರಸ್ತುತ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ಸಂಗ್ರಹಿಸಲು ಫಾಸ್ಟ್‌ಟ್ಯಾಗ್ ವ್ಯವಸ್ಥೆ ಬಳಕೆ ಮಾಡಲಾಗುತ್ತಿದೆ. ಆದರೆ ಕೆಲವೇ ದಿನಗಳಲ್ಲಿ ಫಾಸ್ಟ್‌ಟ್ಯಾಗ್ ವ್ಯವಸ್ಥೆ ಬಂದ್ ಆಗಲಿದ್ದು, ಫಾಸ್ಟ್‌ಟ್ಯಾಗ್ ವ್ಯವಸ್ಥೆ ಬದಲಾಗಿ ಜಿಪಿಎಸ್ (GPS-based) ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ ಜಾರಿಗೆ ಬರಲಿದೆ.
ಪ್ರಸಕ್ತ ವರ್ಷದ ಏಪ್ರಿಲ್ ತಿಂಗಳಿನಿಂದಲೇ ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಗೆ ಪರಿವರ್ತನೆಯಾಗಲಿದೆ ಎಂದು ಹೆದ್ದಾರಿ ಸಚಿವರು ಘೋಷಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಜಾರಿಗೆ ತರಲು ಸರ್ಕಾರವು ಸಲಹೆಗಾರರನ್ನು ನೇಮಿಸಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವರಾದ ನಿತಿನ್ ಗಡ್ಕರಿ ಗುರುವಾರ ತಿಳಿಸಿದರು.

ಇನ್ನು GPS ಆಧಾರಿತ ಎಲೆಕ್ಟ್ರಾನಿಕ ಟೋಲ್ ಸಂಗ್ರಹ ವ್ಯವಸ್ಥೆಯ ಭಾಗವಾಗಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಇವುಗಳಿಗೆ ಆಟೋಮ್ಯಾಟಿಕ್ ನಂಬರ್ ಪ್ಲೇಟ್ ಗುರುತಿಸುವ ವ್ಯವಸ್ಥೆಯನ್ನು ಸಹ ಲಿಂಕ್ ಮಾಡಲಾಗುತ್ತದೆ. ಈ ಡಿವೈಸ್ ವಾಹನ ಚಲನೆಯನ್ನು ಮೇಲ್ವಿಚಾರಣೆ ಮಾಡುತ್ತದೆ ಅಲ್ಲದೇ ಹೆದ್ದಾರಿಯಲ್ಲಿ ವಾಹನಗಳ ಎಂಟ್ರಿ ಹಾಗೂ ಎಕ್ಸಿಟ್ (ಆಗಮನ ಹಾಗೂ ನಿರ್ಗಮನ) ಗುರುತಿಸುತ್ತದೆ.
ಹಾಗೆಯೇ ಇದು ಪ್ರಯಾಣಿಸಿದ ದೂರವನ್ನು ಲೆಕ್ಕಾಚಾರ ಮಾಡುತ್ತದೆ. ವಿಶೇಷ ಎಂದರೆ, ದಾಟಿದ ಟೋಲ್ ಪ್ಲಾಜಾಗಳನ್ನು ಕೂಡಾ ಇದು ಪತ್ತೆ ಮಾಡುತ್ತದೆ. ಅಲ್ಲದೇ ಇದರ ಜೊತೆಗೆ ಟೋಲ್ ಬೆಲೆಯನ್ನು ನಿಗದಿಪಡಿಸುತ್ತದೆ. ಈ ನೂತನ ವ್ಯವಸ್ಥೆಯಲ್ಲಿ ಟೋಲ್ ಶುಲ್ಕವನ್ನು ಕಡಿತ ಮಾಡಬಹುದಾಗಿದೆ.

ಈ ಹೊಸ ಪ್ರಕ್ರಿಯೆಯಿಂದ ಟೋಲ್ ಪ್ಲಾಜಾಗಳಲ್ಲಿ ಇನ್ಮುಂದೆ ಹೆಚ್ಚಿನ ದಟ್ಟಣೆ ಇರುವುದಿಲ್ಲ. ಅಲ್ಲದೇ ಪೇದೇ ಪದೆ ವಾಹನಗಳನ್ನು ನಿಲ್ಲಿಸಿ ಫಾಸ್ಟ್‌ಟ್ಯಾಗ್ ತೋರಿಸಬೇಕಾದ ಅಗತ್ಯವೂ ಇಲ್ಲವಾಗುತ್ತದೆ. ಹೊಸ ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ ಜಾರಿಗೆ ಬಂದರೆ, ಪ್ರಯಾಣಿಕರು ಪ್ರಯಾಣಿಸುವ ದೂರಕ್ಕೆ ಅನುಗುಣವಾಗಿ ಬೆಲೆಯನ್ನು ಕಡಿತಗೊಳಿಸಲಾಗುತ್ತದೆ ಎಂದು ವರದಿಯಾಗಿದೆ.
ಸದ್ಯ ಫಾಸ್ಟ್‌ಟ್ಯಾಗ್ ವ್ಯವಸ್ಥೆಯಲ್ಲಿ ಪ್ರಯಾಣಿಕರು ಪ್ರಮಾಣಿಸುವ ದೂರವು ಕಡಿಮೆಯಾದರೂ ಸಹ ಪೂರ್ಣ ಪ್ರಮಾಣದ ಹಣವನ್ನು ಟೋಲ್ ಪ್ಲಾಜಾಗಳಲ್ಲಿ ಸಂಗ್ರಹ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಇನ್ಮುಂದೆ ಈ ವ್ಯವಸ್ಥೆಯನ್ನು ಬದಲಾವಣೆ ಕೇಂದ್ರ ಸರ್ಕಾರ ಮುಂದಾಗಿದೆ.
ಕೇಂದ್ರ ಸರ್ಕಾರ 2021ರಲ್ಲಿ ಪ್ರತಿ ವಾಹನಕ್ಕೂ ಫಾಸ್ಟ್‌ಟ್ಯಾಗ್ ಕಡ್ಡಾಯಗೊಳಿಸಿದೆ. ಆದರೆ 2024ರ ಏಪ್ರಿಲ್ ವೇಳೆಗೆ ಹೊಸ ಟೋಲ್ ಸಂಗ್ರಹ ವ್ಯವಸ್ಥೆ ಜಾರಿಗೆ ರತಲಾಗುವುದು ಎಂದು ಕೇಂದ್ರದ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ತಿಳಿಸಿದ್ದಾರೆ.
GPS ಆಧಾರಿತ ಟೋಲ್ ಸಿಸ್ಟಮ್ ಈ ರೀತಿ ಕೆಲಸ ಮಾಡುತ್ತದೆ
ಜಿಪಿಎಸ್ ಆಧಾರಿತ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆಯು ಹೆದ್ದಾರಿಗಳಲ್ಲಿ ಅಳವಡಿಸಲಾಗಿರುವ ಕ್ಯಾಮೆರಾಗಳ ಮೂಲಕ ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವಿಕೆ (ANPR) ವ್ಯವಸ್ಥೆಯನ್ನು ಬಳಸುತ್ತದೆ. ಅಲ್ಲದೇ ವಾಹನವು ಪ್ರಯಾಣಿಸುವ ದೂರದ ಆಧಾರದ ಮೇಲೆ ಟೋಲ್‌ಗಳನ್ನು ಕಡಿತಗೊಳಿಸುತ್ತದೆ. ಪ್ರಸ್ತುತ, ಫಾಸ್ಟ್ಯಾಗ್ ಪ್ಲಾಜಾಗಳಲ್ಲಿ RFID ಆಧಾರಿತ ಟೋಲ್ ಸಂಗ್ರಹವನ್ನು ಬಳಸುತ್ತದೆ.
ಹಾಗೆಯೇ ಬಳಕೆದಾರರು ಬ್ಯಾಂಕ್ ಪೋರ್ಟಲ್‌ಗಳು, ಸ್ಮಾರ್ಟ್‌ಫೋನ್‌ಗಳಲ್ಲಿನ ಡಿಜಿಟಲ್ ಯುಪಿಐ ಆಪ್‌ಗಳ ಮತ್ತು ಅಧಿಕೃತ NHAI ಆಪ್ ಮೂಲಕ ಆನ್‌ಲೈನ್‌ನಲ್ಲಿ ಫಾಸ್ಟ್ಯಾಗ್ ಬ್ಯಾಲೆನ್ಸ್ ಅನ್ನು ಚೆಕ್ ಮಾಡಬಹುದಾಗಿದೆ.
ಕ್ರಮ 1 : ಬ್ಯಾಂಕ್ ನೀಡುವ ಫಾಸ್ಟ್ಯಾಗ್ ಬ್ಯಾಲೆನ್ಸ್ ಚೆಕ್ ಮಾಡಲು, ಆನ್‌ಲೈನ್‌ನಲ್ಲಿ ಮೀಸಲಾದ ಪೋರ್ಟಲ್‌ಗೆ ಭೇಟಿ ನೀಡಬಹುದು.
ಕ್ರಮ 2 : ನೀವು ಬ್ಯಾಂಕ್ ಖಾತೆಗೆ ಲಾಗಿನ್ ಆಗಬೇಕು ಮತ್ತು ಬ್ಯಾಲೆನ್ಸ್ ಚೆಕ್ ಮಾಡಲು ಮೇನ್‌ಪೇಜ್‌ನಿಂದ ಫಾಸ್ಟ್ಯಾಗ್ ಆಯ್ಕೆಗೆ ಹೋಗಿ.
NHAI ವಾಲೆಟ್ ಆಯ್ಕೆಯ ಮೂಲಕ ಚೆಕ್ ಮಾಡ ಬಯಸಿದರೆ, ನಿಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ನೀವು ಅದನ್ನು ಮಾಡಬಹುದು. ಇದನ್ನು ಆಂಡ್ರಾಯ್ಡ್ ಮತ್ತು ಐಒಎಸ್ ಸ್ಮಾರ್ಟ್‌ಫೋನ್‌ಗಳಲ್ಲಿ ಮಾಡಬಹುದು. ಆದಾಗ್ಯೂ, ನಾವು ಆಂಡ್ರಾಯ್ಡ್ ಓಎಸ್‌ಗೆ ಸಂಬಂಧಿಸಿದಂತೆ ಹಂತಗಳನ್ನು ತಿಳಿಸಲಾಗಿದೆ.
ಕ್ರಮ 1: ಗೂಗಲ್ ಪ್ಲೇ ಸ್ಟೋರ್ ತೆರೆಯಿರಿ ಮತ್ತು 'My FASTag' ಅಪ್ಲಿಕೇಶನ್‌ನ ಸರ್ಚ್ ಮಾಡಿ.
ಕ್ರಮ 2: ನಂತರ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ ಮತ್ತು ಇನ್‌ಸ್ಟಾಲ್ ಮಾಡಿ.
ಕ್ರಮ 3: ನಿಮ್ಮ ಖಾತೆಯನ್ನು ನಿಮಗೆ ಲಾಗ್ ಇನ್ ಮಾಡಿ. (ನೀವು ಮೊದಲ ಬಾರಿಗೆ ಅಪ್ಲಿಕೇಶನ್ ಬಳಸುತ್ತಿದ್ದರೆ ನೀವು ನೋಂದಾಯಿಸಿಕೊಂಡಿದ್ದೀರಿ) ಎಂದು ಖಚಿತಪಡಿಸಿಕೊಳ್ಳಿ.
ಕ್ರಮ 4: ಲಾಗಿನ್ ಯಶಸ್ವಿಯಾದ ನಂತರ, ಲಭ್ಯವಿರುವ ಬ್ಯಾಲೆನ್ಸ್ ಅನ್ನು ನೋಡಬಹುದಾಗಿದೆ.


Click it and Unblock the Notifications








