ಭಾರತದ ಮೇಲೆ ಯುಎಸ್, ಚೀನಾದಿಂದ ಸೈಬರ್ ದಾಳಿ
ಭಾರತದಲ್ಲಿ ಸೈಬರ್ ದಾಳಿಗಳು ಹೆಚ್ಚುತ್ತಿದ್ದು, ಇಲ್ಲಿ ಕ್ರಿಮಿನಲ್ ಪಟ್ಟಿಯೂ ಬೆಳೆಯುತ್ತಿದ್ದು, ಚೀನಾ ರಷ್ಯಾ ಮತ್ತು ಯುಎಸ್ ದೇಶಗಳಿಂದ ಈ ಕ್ರಿಮಿನ್‌ಗಳು ಬಾರತದ ಮೇಲೆ ದಾಳಿಯನ್ನು ನಡೆಸುತ್ತಿದ್ದಾರೆ ಎಂಬುದು ಪತ್ತೆಯಾಗಿದೆ. ಎಪಿಟಿ (ಅಡವಾನ್ಸ್‌ಡ್ ಪರ್ಸಿಸ್ಟೆಂಟ್ ಥ್ರೆಟ್) ದಾಳಿಗಳ ಮೂಲಕ ಗ್ರಾಹಕರ ಡೇಟಾವನ್ನು ಕದಿಯಲಾಗುತ್ತಿದೆ ಎಂಬುದಾಗಿ ಸಾಫ್ಟ್‌ವೇರ್ ಸಂಸ್ಥೆ ಕ್ಯಾಸ್‌ಪಾಸ್ಕಿ ತಿಳಿಸಿದೆ.
ಓದಿರಿ: ಬೆಂಗಳೂರು ಬಿಎಂಟಿಸಿ ಬಸ್ಸುಗಳಲ್ಲಿ ಉಚಿತ ವೈಫೈ
ಎಪಿಟಿ ಟೂಲ್ ಅನ್ನು ಬಳಸಿಕೊಂಡು ನೆಟ್‌ವರ್ಕ್/ಡಿವೈಸ್ ಮೇಲೆ ದಾಳಿಕೋರರು ಪ್ರಾಬಲ್ಯವನ್ನು ಪಡೆದುಕೊಳ್ಳುತ್ತಿದ್ದಾರೆ ಮತ್ತು ಈ ಕ್ರಿಯೆ ದೀರ್ಘ ಸಮಯದಿಂದ ನಡೆದುಕೊಂಡು ಬರುತ್ತಿದೆ ಎಂಬುದಾಗಿ ತಿಳಿದು ಬಂದಿದೆ. ಬಳಕೆದಾರರ ಡೇಟಾವನ್ನು ಕದಿಯುವುದು ಮಾತ್ರವೇ ಇವರ ಉದ್ದೇಶವಾಗಿದ್ದು ಬಳಕೆದಾರರಿಗೆ ಮತ್ತು ಸಂಸ್ಥಗೆ ಹಾನಿ ಮಾಡುವುದಲ್ಲ ಎಂಬುದಾಗಿ ಸಂಸ್ಥೆ ತಿಳಿಸಿದೆ. ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ಈ ಕುರಿತು ಮತ್ತಷ್ಟು ಸುದ್ದಿಯನ್ನು ನಾವು ನಿಮಗೆ ತಿಳಿಸುತ್ತಿದ್ದೇವೆ.

ಭಾರತದ ಮೇಲೆ ಪರಿಣಾಮ
ಎಪಿಟಿ ದಾಳಿಗಳು ಜಾಗತಿಕವಾಗಿ ಹೆಚ್ಚುತ್ತಿದ್ದು ಭಾರತಕ್ಕೆ ಇದರ ಪರಿಣಾಮ ತೀವ್ರತೆರನಾಗಿದೆ.

ದಾಳಿಕೋರರ ಮೂಲ ದೇಶಗಳು
ಚೀನಾ, ಯುಎಸ್ ಮತ್ತು ರಷ್ಯಾ ಅಂತೆಯೇ ಇನ್ನಿತರ ದೇಶಗಳಿಂದ ಈ ದಾಳಿಕೋರರು ಜನ್ಮತಾಳುತ್ತಿದ್ದಾರೆ.

ಎಪಿಟಿ ದಾಳಿಗಳು
2012 ರಲ್ಲಿಯೇ ಎಪಿಟಿ ದಾಳಿಗಳು ಪತ್ತೆಯಾಗಿದ್ದು, 2013 ರಲ್ಲಿ ಈ ಸಂಖ್ಯೆ 7 ಆಗಿದ್ದರೆ, 2014 ರಲ್ಲಿ 11 ಮತ್ತು 2015 ರಲ್ಲಿ 10 ಆಗಿದೆ.

ದಾಳಿಯ ತೀವ್ರತೆ ಹೆಚ್ಚು
ಇಂಟರ್ನೆಟ್/ನೆಟ್‌ವರ್ಕ್‌ಗೆ ಹೆಚ್ಚಿನ ಡಿವೈಸ್‌ಗಳು ಸಂಪರ್ಕಗೊಂಡಂತೆಲ್ಲಾ, ದಾಳಿಯ ತೀವ್ರತೆ ಕೂಡ ಹೆಚ್ಚಾಗುತ್ತಿದೆ.

ಅಂತರ್ಜಾಲ ವ್ಯವಸ್ಥೆ
ಸೈಬರ್ ಕ್ರಿಮಿನಲ್‌ಗಳು ಮತ್ತು ಇತರ ದಾಳಿಕೋರರು ಅಂತರ್ಜಾಲ ವ್ಯವಸ್ಥೆಯ ಮೂಲಕ ದೇಶಕ್ಕೆ ಸಂಚಕಾರವನ್ನುಂಟು ಮಾಡುತ್ತಿದ್ದಾರೆ.

ವೈಫೈ, ಬ್ಲ್ಯೂಟೂತ್ ಬಳಕೆ
ನೆಟ್‌ವರ್ಕ್‌ಗಳು ಮತ್ತು ಸಂವಹನ ಮಾಧ್ಯಮಗಳಾದ ವೈಫೈ, ಬ್ಲ್ಯೂಟೂತ್ ಮತ್ತು 3ಜಿ ಯ ಮೇಲೆ ಹೆಚ್ಚು ಲಕ್ಷ್ಯವನ್ನು ಹರಿಸುತ್ತಿದ್ದಾರೆ.

ಬಳಕೆದಾರರ ಡೇಟಾ ಕದಿಯುವುದು
ಬಳಕೆದಾರರ ಡೇಟಾವನ್ನು ಕದಿಯುವುದು ಮಾತ್ರವೇ ಇವರ ಉದ್ದೇಶವಾಗಿದ್ದು ಬಳಕೆದಾರರಿಗೆ ಮತ್ತು ಸಂಸ್ಥಗೆ ಹಾನಿ ಮಾಡುವುದಲ್ಲ ಎಂಬುದಾಗಿ ಸಂಸ್ಥೆ ತಿಳಿಸಿದೆ.


Click it and Unblock the Notifications








