ಬೆಂಗಳೂರು ಬಿಎಂಟಿಸಿ ಬಸ್ಸುಗಳಲ್ಲಿ ಉಚಿತ ವೈಫೈ

By Suneel
|

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ 200 ವೊಲ್ವೋ ಬಸ್ಸುಗಳಿಗೆ ಉಚಿತ ವೈಫೈ ಅಳವಡಿಸುವ ನಿರ್ಧಾರ ಮಾಡಿದ್ದು, ಬಸ್ಸುಗಳಲ್ಲಿ ಪ್ರಯಾಣ ಮಾಡುವ ಎಲ್ಲಾ ಸಾರ್ವಜನಿಕರು ಉಚಿತ ವೈಫೈ ಸೇವೆ ಪಡೆಯಬಹುದಾಗಿದೆ. ಈ ಅನುಕೂಲದಿಂದ ಐಟಿ ಉದ್ಯೋಗಿಗಳು ಪ್ರಯಾಣ ವೇಳೆ ಕೆಲಸ ನಿರ್ವಹಿಸಲು ಸಹಾಯಕವಾಗಿದೆ. ಗಿಜ್‌ಬಾಟ್‌ ಲೇಖನದಲ್ಲಿ ಈ ಬಗ್ಗೆ ವಿಶೇಷ ಮಾಹಿತಿ ನೀಡಿದ್ದು ಹೆಚ್ಚಿನ ಮಾಹಿತಿಗಾಗಿ ಲೇಖನದ ಸ್ಲೈಡರ್‌ಗಳನ್ನು ಓದಿ.

ಓದಿರಿ: ಅತಿ ವಿಸ್ಮಯದ ಫೋಟೋಗಳು ಐಫೋನ್‌ನಲ್ಲಿ

ಬಿಎಂಟಿಸಿ ಬಸ್ಸಿನಲ್ಲಿ ಉಚಿತ ವೈಫೈ

ಬಿಎಂಟಿಸಿ ಬಸ್ಸಿನಲ್ಲಿ ಉಚಿತ ವೈಫೈ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯೂ ವೊಲ್ವೋ ಬಸ್ಸುಗಳಲ್ಲಿ ಉಚಿತವಾಗಿ ವೈಫೈ ಸೌಲಭ್ಯ ನೀಡಲು ನಿರ್ಧರಿಸಿದೆ.

 ವಿಮಾನ ನಿಲ್ದಾಣ ಮತ್ತು ಐಟಿ ಕಾರಿಡಾರ್‌ ಮಾರ್ಗ

ವಿಮಾನ ನಿಲ್ದಾಣ ಮತ್ತು ಐಟಿ ಕಾರಿಡಾರ್‌ ಮಾರ್ಗ

ವೈಫೈ ಸೌಲಭ್ಯವನ್ನು ಬಿಎಂಟಿಸಿ ಕೇವಲ ವಿಮಾನ ನಿಲ್ದಾಣ ಮತ್ತು ಐಟಿ ಕಾರಿಡಾರ್ ಮಾರ್ಗದ ವೊಲ್ವೋ ಬಸ್ಸುಗಳಿಗೆ ಮಾತ್ರ ಒದಗಿಸುವುದಾಗಿ ಹೇಳಿದೆ.

ವೈಫೈ ನೀಡಲು ಕಾರಣ

ವೈಫೈ ನೀಡಲು ಕಾರಣ

ಬಿಎಂಟಿಸಿ ಪ್ರಮುಖವಾಗಿ ಈ ನಿರ್ಧಾರವನ್ನು ಐಟಿ ಉದ್ಯೋಗಿಗಳನ್ನು ಸೆಳೆಯಲು ಕೈಗೊಂಡಿರುವುದಾಗಿ ಹೇಳಲಾಗಿದೆ.

 200 ಬಸ್ಸುಗಳಿಗೆ ವೈಫೈ

200 ಬಸ್ಸುಗಳಿಗೆ ವೈಫೈ

ಕೆಂಪೇಗೌಡ ವಿಮಾನ ನಿಲ್ದಾಣ ಮತ್ತು ಐಟಿ ಕಾರಿಡಾರ್ ಮಾರ್ಗದಲ್ಲಿ ಸಂಚರಿಸುವ 200 ವೊಲ್ವೋ ಬಸ್ಸುಗಳಿಗೆ ಉಚಿತ ವೈಫೈ ಸೇವೆ ಅಳವಡಿಸಲಾಗುತ್ತಿದೆ.

ವೈಫೈ ಸೇವೆ ಸಮೀಕ್ಷೆ

ವೈಫೈ ಸೇವೆ ಸಮೀಕ್ಷೆ

ಈ ಮೊದಲು ವೊಲ್ವೋ ಬಸ್ಸುಗಳಲ್ಲಿ ವೈಫೈ ಸೌಲಭ್ಯ ಒದಗಿಸುವ ಬಗ್ಗೆ ಸಮೀಕ್ಷೆ ನೆಡೆಸಿದ್ದು, ವೈಫೈ ಸೇವೆ ಸಹಾಯಕವಾಗುವ ಸಕಾರಾತ್ಮಕ ವರದಿ ಬಂದಿದೆ. ಆದ್ದರಿಂದ ಬಿಎಂಟಿಸಿ ಪ್ರಾಯೋಗಿಕವಾಗಿ ಈ ನಿರ್ಧಾರ ಕೈಗೊಂಡಿದೆ.

ಪ್ರಯಾಣದ ವೇಳೆಯೂ ಕೆಲಸ ನಿರ್ವಹಿಸಿ

ಪ್ರಯಾಣದ ವೇಳೆಯೂ ಕೆಲಸ ನಿರ್ವಹಿಸಿ

ಕೆಂಪೇಗೌಡ ಬಸ್‌ ನಿಲ್ದಾಣದಿಂದ ಎಲೆಕ್ಟ್ರಾನಿಕ್‌ ಸಿಟಿ, ವೈಟ್‌ಫೀಲ್ಡ್‌ ಸ್ಥಳಗಳಿಗೆ ತಲುಪಲು ಒಂದೂವರೆ ಗಂಟೆ ಸಮಯ ಬೇಕು, ಕೆಲವು ಸಿಬ್ಬಂದಿಗಳು ಕಾರು, ಟ್ಯಾಕ್ಸಿಗಳಲ್ಲಿ ಹೋಗುತ್ತಾರೆ. ಅವರು ವೋಲ್ವೋ ಬಸ್ಸುಗಳಲ್ಲಿ ಹೋದರೆ ಪ್ರಯಾಣದ ಸಮಯದಲ್ಲೂ ಕೆಲಸ ನಿರ್ವಹಿಸಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಓದಿ

Best Mobiles in India

English summary
BMTC planed to put free Wi-Fi on it's Volvo bus.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X