ಒಂದುಗೂಡಿದ ಭಾರತ ಮತ್ತು ಚೀನಾ!..ಅಮೆರಿಕಾ ವಿರುದ್ಧ ಡೇಟಾ ಯದ್ಧಕ್ಕೆ ಕ್ಷಣಗಣನೆ!

|

ಆಧುನಿಕ ಜಗತ್ತಿನ ಸಂಪತ್ತು ಎಂದು ಕರೆಯಲ್ಪಡುವ ದತ್ತಾಂಶ (ಡೇಟಾ) ವನ್ನು ಸ್ಥಳೀಯವಾಗಿ ಸಂಗ್ರಹಿಸಲು ಭಾರತ ಒತ್ತು ನೀಡಿದೆ. ಜಿ20 ಶೃಂಗಸಭೆಯಲ್ಲಿ ದತ್ತಾಂಶದ ಬಗೆಗೆ ತನ್ನ ವಾದವನ್ನು ಮಂಡಿಸಿರುವ ಭಾರತ, ದತ್ತಾಂಶ ಹೊಸ ರೂಪದ ಸಂಪತ್ತು. ಹಾಗಾಗಿ, ಈ ವಿಚಾರದಲ್ಲಿ ಅಭಿವೃದ್ಧಿಶೀಲ ದೇಶಗಳ ಅಗತ್ಯಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾದ ಅಗತ್ಯ ಇದೆ ಎಂದು ಪ್ರತಿಪಾದಿಸಿದೆ. ಆದರೆ, ಈ ಕ್ರಮವು ಡಿಜಿಟಲ್ ವ್ಯಾಪಾರದ ಹರಿವಿಗೆ ತಡೆಯುಂಟು ಮಾಡುತ್ತದೆ ಎಂದು ಟ್ರಂಪ್ ಹೇಳಿದ್ದಾರೆ.

ಒಂದುಗೂಡಿದ ಭಾರತ ಮತ್ತು ಚೀನಾ!..ಅಮೆರಿಕಾ ವಿರುದ್ಧ ಡೇಟಾ ಯದ್ಧಕ್ಕೆ ಕ್ಷಣಗಣನೆ!

ಹೌದು, ತಂತ್ರಜ್ಞಾನ ಕಂಪೆನಿಗಳು ತಮ್ಮ ಸರ್ವರ್‌ಗಳನ್ನು(ದತ್ತಾಂಶ ಸಂಗ್ರಹಿಸುವ ಸಾಧನಗಳು) ನಮ್ಮ ದೇಶದಲ್ಲೇ ಇಡಬೇಕು ( ಡೇಟಾ ಲೋಕಲೈಸೇಶನ್) ಎಂಬುದಾಗಿ ಭಾರತ ಮತ್ತು ಚೀನಾ ದೇಶಗಳು ಒತ್ತಾಯಿಸುತ್ತಿವೆ. ಆದರೆ, ದತ್ತಾಂಶ ವಿಕೇಂದ್ರೀಕರಣವನ್ನು ಅಮೆರಿಕ ವಿರೋಧಿಸುತ್ತದೆ. ಅಮೆರಿಕಾವು ದತ್ತಾಂಶಗಳ ಮುಕ್ತ ಹರಿವಿಕೆಯ ಪರವಾಗಿದೆ. ಈ ನಿಟ್ಟಿನಲ್ಲಿ ಸಮಾನ ಮನಸ್ಕ ಭಾಗೀದಾರರೊಂದಿಗೆ ಕೆಲಸ ಮಾಡಲು ಉತ್ಸುಕವಾಗಿರುವುದಾಗಿ ತಿಳಿಸಿ ಚೀನಾ ಮತ್ತು ಭಾರತಕ್ಕೆ ಸ್ಪಷ್ಟ ಸಂದೇಶ ನೀಡಿದ್ದಾರೆ.

ದತ್ತಾಂಶಗಳ ಮುಕ್ತ ಹರಿಯುವಿಕೆಯಿಂದದಾಗಿ ಬಲವಾದ ಖಾಸಾಗಿತನ ರಕ್ಷ, ಬಂಡವಾಳ ಪಡೆಯಲು ಅವಕಾಶ ಮತ್ತು ಹೊಸತನಗಳಿಂದಾಗಿ ಡಿಜಿಟಲ್ ಆರ್ಥಿಕತೆಯಲ್ಲಿ ಅಮೆರಿಕಾ ಯಶಸ್ಸನ್ನು ಕಂಡಿದೆ. ಎಲ್ಲ ಜನರೂ ಸಶಕ್ತರಾಗುವ ಡಿಜಿಟಲ್‌ ವ್ಯಾಪಾರದ ಭವಿಷ್ಯವನ್ನು ನಾವು ಎದುರು ನೋಡುತ್ತಿದ್ದೇವೆ. ಮುಕ್ತ, ನ್ಯಾಯಸಮ್ಮತ ಮತ್ತು ಮಾರುಕಟ್ಟೆ ಆಧಾರಿತ ಡಿಜಿಟಲ್‌ ಅರ್ಥ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವಲ್ಲಿ ಜಿ20 ರಾಷ್ಟ್ರಗಳ ಭಾಗೀದಾರಿಕೆಯನ್ನು ಅಮೆರಿಕ ಬಯಸುತ್ತಿದೆ ಎಂದು ಟ್ರಂಪ್ ಅವರು ಪ್ರತಿಪಾದಿಸಿದ್ದಾರೆ.

ಒಂದುಗೂಡಿದ ಭಾರತ ಮತ್ತು ಚೀನಾ!..ಅಮೆರಿಕಾ ವಿರುದ್ಧ ಡೇಟಾ ಯದ್ಧಕ್ಕೆ ಕ್ಷಣಗಣನೆ!

ಆದರೆ, ಟ್ರಂಪ್ ಅವರು ಪ್ರತಿಪಾದಿಸಿರುವ ವಿಷಯಕ್ಕೆ ಭಾರತವೂ ಸೇರಿ ಜಗತ್ತಿನಾದ್ಯಂತ ಹಲವು ದೇಶಗಳು ವಿರುಧ್ಧವಾಗಿವೆ. ದತ್ತಾಂಶ ವಿಕೇಂದ್ರೀಕರಣ ಪ್ರಯತ್ನದಲ್ಲಿ ತೊಡಗಿಕೊಂಡಿರುವ ರಾಷ್ಟ್ರಗಳು ಅಮೆರಿಕಾದ ಸಾರ್ವಭೌಮತ್ವವನ್ನು ಒಪ್ಪುವುದಿಲ್ಲ ಎಂದು ಹೇಳಲಾಗುತ್ತಿದೆ. ದತ್ತಾಂಶ ಎಂಬುದು ಕೇವಲ ಆಧುನಿಕ ಜಗತ್ತಿನ ಸಂಪತ್ತು ಮಾತ್ರವಲ್ಲ. ಬದಲಾಗಿ ಒಂದು ರಾಷ್ಟ್ರದ ಅಸ್ತಿತ್ವದ ಪ್ರಶ್ನೆ ಎಂದು ಅಭಿವೃದ್ಧಿಶೀಲ ಪರಿಗಣಿಸಿವೆ. ಇದಿರಿಂದಾಗಿ ಟ್ರಂಪ್ ಅವರ ಈ ನಿಲುವು ದತ್ತಾಂಶ ಯದ್ಧಕ್ಕೆ ಕಾರಣವಾಗಬಹುದು ಎಂದು ಹೇಳಲಾಗಿದೆ.

ಓದಿರಿ: ಆಧಾರ್ ಕಾರ್ಡ್‌ನಲ್ಲಿನ ತಪ್ಪುಗಳನ್ನು ಆನ್‌ಲೈನಿನಲ್ಲೇ ಸರಿಪಡಿಸುವುದು ಹೇಗೆ?

ಈ ಬಗ್ಗೆ ಮಾತನಾಡಿರುವ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಜಯ್‌ ಗೋಖಲೆ ಅವರು, ದತ್ತಾಂಶವನ್ನು ನಾವು ಇದನ್ನು ದೇಶೀಯ ನೆಲೆಯಲ್ಲಿಯೂ ನೋಡುತ್ತಿದ್ದೇವೆ. ಆದರೆ, ಇದರ ನಿಯಮ ರೂಪಿಸುವಿಕೆ ಅಂತರರಾಷ್ಟ್ರೀಯವಾಗಿ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಇನ್ನು ಚೀನಾ, ಭಾರತವೂ ಜಗತ್ತಿನಾದ್ಯಂತ ನಡೆಯುತ್ತಿರುವ ದತ್ತಾಂಶ ವಿಕೇಂದ್ರೀಕರಣ ಪ್ರಯತ್ನಗಳ ವಿರುದ್ಧ ಗೂಗಲ್‌, ಮಾಸ್ಟರ್‌ ಕಾರ್ಡ್‌, ವೀಸಾ ಮತ್ತು ಅಮೆಜಾನ್‌ನಂತಹ ಅಮೆರಿಕದ ಕಂಪನಿಗಳು ಲಾಬಿ ನಡೆಸುತ್ತಿರುವುದನ್ನು ನಾವು ನೋಡಬಹುದು.

Best Mobiles in India

English summary
India Goes Against Developed Countries Like U.S. And Japan; Wants Data To Be Saved Locally. We recognise the importance of the interface between trade and the digital economy. We also affirm the role of data for development. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X