ಭಾರತದಲ್ಲಿ 2,500 ಉಚಿತ ವೈಫೈ ಹಾಟ್‌ಸ್ಪಾಟ್ ಸ್ಥಳಗಳು
2,500 ಹಾಟ್‌ಸ್ಪಾಟ್‌ಗಳನ್ನು 256 ಸ್ಥಳಗಳಲ್ಲಿ ಅಳವಡಿಸುವ ಮುಖಾಂತರ ಮುಂದಿನ ಹಣಕಾಸು ವರ್ಷದ ಅವಧಿಯೊಳಗೆ 50 ಕೋಟಿ ಇಂಟರ್ನೆಟ್ ಚಂದಾದಾರರನ್ನು ಹೊಂದುವ ಮಹತ್ವದ ಗುರಿಯನ್ನು ಸರ್ಕಾರ ಹೊಂದಿರುವುದಾಗಿ ಟೆಲಿಕಾಂ ಸಚಿವರಾದ ರವಿ ಶಂಕರ್ ಪ್ರಸಾದ್ ಹೇಳಿದ್ದಾರೆ. ಸಾರ್ವಜನಿಕರಿಗೆ ಉಚಿತವಾಗಿ ಸಿಗುವ ವೈಫೈ ಹಾಟ್‌ಸ್ಪಾಟ್ ಹಾಗೂ ಅನುಕೂಲಗಳ ಬಗ್ಗೆ ವಿಶೇಷ ಮಾಹಿತಿಯನ್ನು ಲೇಖನದ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.
ಓದಿರಿ: ಪ್ರಪಂಚದ ಮೊದಲ ಸ್ಮೊಕೆಬಲ್ ಸ್ಮಾರ್ಟ್‌ಫೋನ್ : ಜುಪಿಟರ್ ಐಓ 3

2,500 ವೈಫೈ ಹಾಟ್‌ಸ್ಪಾಟ್
2,500 ಹಾಟ್‌ಸ್ಪಾಟ್‌ಗಳನ್ನು 256 ಸ್ಥಳಗಳಲ್ಲಿ ಅಳವಡಿಸುವ ಮುಖಾಂತರ ಮುಂದಿನ ಹಣಕಾಸು ವರ್ಷದ ಅವಧಿಯೊಳಗೆ 50 ಕೋಟಿ ಇಂಟರ್ನೆಟ್ ಚಂದಾದಾರರನ್ನು ಹೊಂದುವ ಮಹತ್ವದ ಗುರಿಯನ್ನು ಸರ್ಕಾರ ಹೊಂದಿರುವುದಾಗಿ ಟೆಲಿಕಾಂ ಸಚಿವರಾದ ರವಿ ಶಂಕರ್ ಪ್ರಸಾದ್ ಹೇಳಿದ್ದಾರೆ.

ಮೊಬೈಲ್ ಬಳಕೆದಾರರ ಸಂಖ್ಯೆ 100 ಕೋಟಿ
ಇಂದು ಮೊಬೈಲ್ ಬಳಕೆದಾರರ ಸಂಖ್ಯೆ 100 ಕೋಟಿ ಇದೆ. ಇಂಟರ್ನೆಟ್ ಬಳಸುವವರ ಸಂಖ್ಯೆ 40 ಕೋಟಿ. ಇನ್ನು 3-4 ವರ್ಷಗಳಲ್ಲಿ 20 ರಿಂದ 30 ಕೋಟಿ ಇಂಟರ್ನೆಟ್ ಬಳಕೆದಾರರು ಸೇರ್ಪಡೆಯಾಗುತ್ತಾರೆ. ಆದ್ದರಿಂದ ಮುಂದಿನ 6-7 ತಿಂಗಳುಗಳಲ್ಲಿ 50 ಕೋಟಿ ಇಂಟರ್ನೆಟ್ ಚಂದಾದಾರನ್ನು ಹೊಂದುವ ಗುರಿ ಇಟ್ಟುಕೊಂಡಿದ್ದೇವೆ ಎಂದು ಹೇಳಿದ್ದಾರೆ.

ಬಿಎಸ್ಎನ್ಎಲ್
"ಡಿಜಿಟಲ್ ಇಂಡಿಯಾ ಅಭಿಯಾನದಲ್ಲಿ ವೈಫೈ ಸೌಲಭ್ಯ ಪ್ರಮುಖ ಪಾತ್ರ ವಹಿಸಲಿದೆ. ಮುಂದಿನ ಹಣಕಾಸು ವರ್ಷದೊಳಗೆ ಸಾರ್ವಜನಿಕವಲಯದ ಬಿಎಸ್‌ಎನ್‌ಎಲ್ 256 ಸ್ಥಳಗಳಲ್ಲಿ 2,500 ವೈಫೈ ಹಾಟ್‌ಸ್ಪಾಟ್‌ಗಳನ್ನು ಅಳವಡಿಸುವ ಯೋಜನೆ ಕೈಗೊಂಡಿದೆ. ಇದು ಈಗಾಗಲೇ 200 ಸ್ಥಳಗಳಲ್ಲಿ 500 ವೈಫೈ ಹಾಟ್‌ಸ್ಪಾಟ್‌ಗಳನ್ನು ನೀಡಿದೆ" ಎಂದು ಮುಂಬೈ ಷೇರು ವಿನಿಮಯ ಕೇಂದ್ರ ಸಾರ್ವಜನಿಕರಿಗೆ ಒದಗಿಸುವ ವೈಫೈ ಸೌಲಭ್ಯ ಉದ್ಘಾಟಿಸಿ ಹೇಳಿದರು.

2014 ರಲ್ಲಿ ಡಿಜಿಟಲ್ ಇಂಡಿಯಾ ಅನಾವರಣ
2014 ರಲ್ಲಿ ಒಂದು ಲಕ್ಷ ಕೋಟಿ ವೆಚ್ಚದಲ್ಲಿ "ಡಿಜಿಟಲ್ ಇಂಡಿಯಾ" ಯೋಜನೆಯನ್ನು ಅನಾವರಣ ಮಾಡಿದೆ. ಡಿಜಿಟಲ್ ವ್ಯವಸ್ಥೆಯಿಂದ ಮಾಹಿತಿ ವರ್ಗಾವಣೆ ಉದ್ದೇಶವನ್ನು ಈ ಯೋಜನೆ ಹೊಂದಿದೆ.

ಗಿಜ್‌ಬಾಟ್

ಗಿಜ್‌ಬಾಟ್
ಗಿಜ್‌ಬಾಟ್‌ನ ನಿರಂತರ ಲೇಖನಗಳಿಗಾಗಿ ಲೈಕ್ ಮಾಡಿ ಫೇಸ್‌ಬುಕ್ ಫೇಜ್ ಹಾಗೂ ಓದಿರಿ ಕನ್ನಡ.ಗಿಜ್‌ಬಾಟ್.ಕಾಂ


Click it and Unblock the Notifications








