Subscribe to Gizbot

ನಾಸಾದ ಗಗನಯಾತ್ರಿಗಳ ತಂಡಕ್ಕೆ ನಮ್ಮ ರಾಜಾಚಾರಿ ಆಯ್ಕೆ!!

Written By:

ಕಲ್ಪನಾ ಚಾವ್ಲಾ, ಸುನಿತಾ ವಿಲಿಯಮ್ಸ್ ಬಳಿಕ ಭಾರತದ ಹೆಸರನ್ನು ಜಾಗತಿಕ ಮಟ್ಟಕ್ಕೇರಿಸಲು ಮತ್ತೋರ್ವ ಭಾರತೀಯ ರೆಡಿಯಾಗಿದ್ದಾರೆ.! ಹೌದು, ಖ್ಯಾತ ಬಾಹ್ಯಾಕಾಶ ಸಂಸ್ಥೆ ನಾಸಾದ 12 ಮಂದಿಯ ಗಗನಯಾತ್ರಿಗಳ ತಂಡದಲ್ಲಿ ಭಾರತೀಯ ರಾಜಾಚಾರಿ ಅವರು ಸ್ಥಾನ ಪಡೆದಿದ್ದಾರೆ.!!

ಈ ಬಗ್ಗೆ ಸ್ವತಃ ನಾಸಾ ಮಾಹಿತಿ ನೀಡಿದ್ದು, 2017ರ ಗಗನಯಾತ್ರಿಗಳ ತಂಡದಲ್ಲಿ ಭಾರತೀಯ ಮೂಲದ ಬಾಹ್ಯಾಕಾಶ ವಿದ್ಯಾರ್ಥಿ ರಾಜಾಚಾರಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದೆ. ಹಾಗಾಗಿ, ಮತ್ತೊಮ್ಮೆ ಭಾರತೀಯ ದೇಶದ ಗೌರವ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಕಾಶಿಸುವಂತೆ ಮಾಡಿದ್ದಾರೆ.

ನಾಸಾದ ಗಗನಯಾತ್ರಿಗಳ ತಂಡಕ್ಕೆ ನಮ್ಮ ರಾಜಾಚಾರಿ ಆಯ್ಕೆ!!

ಅಮೆರಿಕದ ಏರ್‌ಫೋರ್ಸ್ ಅಕಾಡೆಮಿಯಲ್ಲಿ ಗಗನಯಾತ್ರಿ ಎಂಜಿನಿಯರಿಂಗ್ ಮತ್ತು ಇಂಜಿನಿಯರಿಂಗ್ ವಿಜ್ಞಾನ ವಿಷಯಗಳಲ್ಲಿ ಪದವಿ ಪಡೆದ ರಾಜಾಚಾರಿ ಅವರು ಮಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯಲ್ಲಿ ಏರೋನಾಟಿಕ್ಸ್ ಮತ್ತು ಆಸ್ಟ್ರೋನಾಟಿಕ್ಸ್ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.!!

ನಾಸಾದ ಗಗನಯಾತ್ರಿಗಳ ತಂಡಕ್ಕೆ ನಮ್ಮ ರಾಜಾಚಾರಿ ಆಯ್ಕೆ!!

ಪ್ರಸ್ತುತ ನಾಸಾ ಆಯ್ಕೆ ಮಾಡಿರುವ 12ಮಂದಿಯ ಗಗನಯಾತ್ರಿಗಳ ತಂಡದಲ್ಲಿ ರಾಜಾಚಾರಿ ಆಯ್ಕೆಯಾಗಿದ್ದು, ಆಗಸ್ಟ್ನಲ್ಲಿ ಅವರು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಮತ್ತು ರಾಜಾಚಾರಿ ಅವರು ಮುಂದಿನ ಎರಡು ವರ್ಷಗಳ ಕಾಲ ಗಗನಯಾತ್ರಿ ಅಭ್ಯರ್ಥಿಯಾಗಿ ತರಬೇತಿ ಪಡೆಯಲಿದ್ದಾರೆ.

ಓದಿರಿ: ಭಾರತದಲ್ಲಿ ಇದೇ 13ಕ್ಕೆ ನೋಕಿಯಾ ಆಂಡ್ರಾಯ್ಡ್ ಬಿಡುಗಡೆ!!..ಬೆಲೆ ಎಷ್ಟು? ಎಲ್ಲೆಲ್ಲಿ ಮಾರಾಟ?

English summary
Indian-American Raja Chari, a Lieutenant Colonel with the US Air Force. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot