ಮಿತಿಮೀರಿ ಸಾಮಾಜಿಕ ಜಾಲತಾಣ ಬಳಸಿದ ಸೈನಿಕರ ಮೊಬೈಲ್ ನಾಶ!..ವಿಡಿಯೋ!!
ಸೈನಿಕರು ತಮ್ಮ ಪ್ರೀತಿಪಾತ್ರರೊಂದಿಗೆ ಬೆಸೆಯಲು ಕಾರಣವಾಗಿರುವ ಸಾಮಾಜಿಕ ಜಾಲತಾಣಗಳನ್ನು ಮಿತಿಮೀರಿ ಬಳಸುತ್ತಿರುವುದು ಪತ್ತೆಯಾದ ಹಿನ್ನೆಲೆ ಸೈನಿಕರ ಮೊಬೈಲ್‌ಗಳನ್ನು ನಾಶ ಮಾಡಲು ಮುಖ್ಯಕಾರಣ ಎನ್ನಲಾಗಿದೆ.!!
ಕರ್ತವ್ಯದ ಅವಧಿಯಲ್ಲಿ ಮೊಬೈಲ್ ಫೋನ್ ಬಳಕೆಗೆ ನಿರ್ಬಂಧವಿದ್ದರೂ ಮೊಬೈಲ್ ಬಳಕೆ ಮಾಡುತ್ತಿದ್ದ ಸೈನಿಕರ ಮೊಬೈಲ್‌ಗಳನ್ನು ನಾಶಮಾಡುತ್ತಿರುವ ವಿಡಿಯೋ ವೈರೆಲ್ ಆಗಿದೆ.! ಕರ್ತವ್ಯ ನಿರತ ಯೋಧರಿಂದ ವಶಪಡಿಸಿಕೊಂಡಿರುವ ಸುಮಾರು 50ಕ್ಕೂ ಹೆಚ್ಚು ಮೊಬೈಲ್‌ಗಳನ್ನು ಸೇನೆ ನಾಶಪಡಿಸಿದೆ.!!
ಕರ್ತವ್ಯದ ಅವಧಿಯಲ್ಲಿ ಮೊಬೈಲ್ ಫೋನ್ ಬಳಕೆ ಜೊತೆಗೆ ಸೈನಿಕರು ತಮ್ಮ ಪ್ರೀತಿಪಾತ್ರರೊಂದಿಗೆ ಬೆಸೆಯಲು ಕಾರಣವಾಗಿರುವ ಸಾಮಾಜಿಕ ಜಾಲತಾಣಗಳನ್ನು ಮಿತಿಮೀರಿ ಬಳಸುತ್ತಿರುವುದು ಪತ್ತೆಯಾದ ಹಿನ್ನೆಲೆ ಸೈನಿಕರ ಮೊಬೈಲ್‌ಗಳನ್ನು ನಾಶ ಮಾಡಲು ಮುಖ್ಯಕಾರಣ ಎನ್ನಲಾಗಿದೆ.!!

ಶತ್ರು ರಾಷ್ಟ್ರಗಳ ವಕ್ತಾರ ಮಹಿಳೆಯರು ಮತ್ತು ಪುರುಷರು ಸಾಮಾಜಿಕ ಜಾಲತಾಣಗಳ ಮೂಲಕ ಸೈನಿಕರನ್ನು ಸಂಪರ್ಕಿಸಿ ದೇಶದ ಗೌಪ್ಯ ಮಾಹಿತಿ ಕದಿಯುವುದು ಮುಂತಾದ ಕೃತ್ಯಗಳ ಬಗ್ಗೆ ಎಚ್ಚರಿಕೆ ನೀಡುತ್ತಿದ್ದರೂ, ಯೋಧರ ಮಿತಿಮೀರಿ ಸಾಮಾಜಿಕ ಜಾಲತಾಣಗಳ ಬಳಕೆ ಪತ್ತೆಯಾದ ಹಿನ್ನೆಲೆಯಲ್ಲಿ ಸೇನೆ ಈ ಕ್ರಮ ಕೈಗೊಂಡಿದೆ.!!

ಸೇನಾ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಯೋಧರಿಗೆ ಹಿರಿಯ ಅಧಿಕಾರಿಗಳು ಖಡಕ್ ಎಚ್ಚರಿಕೆ ನೀಡಿದ್ದು, ಯೋಧರ ಎದುರಲ್ಲೇ ಮೊಬೈಲ್‌ಗಳನ್ನು ಕಲ್ಲಿನಿಂದ ಜಜ್ಜಿ ಪುಡಿಮಾಡಿರುವ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಹರಿದಾಡಿದೆ. ಇನ್ನು ಈ ರೀತಿಯಾಗಿ ಮೊಬೈಲ್ ನಾಶ ಮಾಡಿದ ಪ್ರಕರಣಗಳು ಹಲವು ಸಾರಿ ನಡೆದಿದೆ ಎನ್ನಲಾಗಿದೆ.!!
ಓದಿರಿ: ಆಪಲ್ ಟಾಪ್ 10 ಆಪ್‌ಗಳ ಪಟ್ಟಿ ರಿಲೀಸ್!..ಫೇಸ್‌ಬುಕ್, ಸ್ನ್ಯಾಪ್‌ಚಾಟ್‌ಗೆ ಜಾಗವಿಲ್ಲ!!


Click it and Unblock the Notifications








