Subscribe to Gizbot

ಆಪಲ್‌ ಟಾಪ್‌ 10 ಆಪ್‌ಗಳ ಪಟ್ಟಿ ರಿಲೀಸ್!..ಫೇಸ್‌ಬುಕ್‌, ಸ್ನ್ಯಾಪ್‌ಚಾಟ್‌ಗೆ ಜಾಗವಿಲ್ಲ!!

Written By:

ವಿಶ್ವದ ಟೆಕ್ ದಿಗ್ಗಜ ಕಂಪೆನಿ ಆಪಲ್ ತನ್ನ ಐಫೋನ್ ಮತ್ತು ಐಪಾಡ್‌ಗಳಲ್ಲಿ ಬಳಕೆಯಾದ ಈ ವರ್ಷದ ಟಾಪ್‌ ಟೆನ್‌ ಆಪ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.! ಆಪಲ್‌ನ ಈ ಪಟ್ಟಿಯಲ್ಲಿ ಜನಪ್ರಿಯ ಆಪ್‌ಗಳಾದ ಫೇಸ್‌ಬುಕ್‌ ಮತ್ತು ಸ್ನ್ಯಾಪ್‌ಚಾಟ್‌ ಟಾಪ್‌ ಟೆನ್‌ ಪಟ್ಟಿಯಲ್ಲಿ ಜಾಗ ಪಡೆಯಲು ವಿಫಲವಾಗಿವೆ.!!

ವರ್ಷದ ಜನಪ್ರಿಯ ಆಪ್‌ಗಳನ್ನು ಆಯ್ಕೆ ಮಾಡಿರುವ ಆಪಲ್ ಕಂಪೆನಿ ಆಪ್‌ ಸ್ಟೋರ್‌ನಲ್ಲಿ ಅತಿ ಹೆಚ್ಚು ಟ್ಯಾಪ್ ಮಾಡಲಾಗಿರುವ ಮತ್ತು ಉಚಿತ ಆಪ್‌ಗಳನ್ನು ಪರಿಗಣಿಸಿದ್ದು, ಹಾಗಾದರೆ, ಆಪಲ್ ಪಟ್ಟಿಯ ಪ್ರಕಾರ ವರ್ಷದ ಟಾಪ್ 10 ಆಪ್‌ಗಳು ಯಾವುವು ಮತ್ತು ಅವುಗಳ ವಿಶೇಷತೆ ಏನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬಿಟ್‌ಮೋಜಿ( Bitmoji)

ಬಿಟ್‌ಮೋಜಿ( Bitmoji)

ಈ ವರ್ಷದ ಟಾಪ್‌ ಆಪ್‌ಗಳ ಪಟ್ಟಿಯಲ್ಲಿದ ಸ್ಥಾನ ಪಡೆದುಕೊಂಡಿದೆ. ಈ ಆಪ್‌ನ ಲೈಬ್ರರಿಯಲ್ಲಿರುವ ಅಸಂಖ್ಯ ಸ್ಟಿಕರ್‌ಗಳನ್ನು ಬಳಸಿಕೊಂಡು ನಿಮ್ಮದೇ ಆದ ಕಾರ್ಟೂನ್‌ ರಚಿಸಬಹುದಾಗಿರುವುದರಿಂದ ಈ ಆಪ್‌ ಪ್ರಸಕ್ತ ಸಾಲಿನಲ್ಲಿ ಹೆಚ್ಚು ಗಮನ ಸೆಳೆದಿದೆ ಎನ್ನಬಹುದು.!!

ಸ್ಪೋಟಿಫೈ (spotify)

ಸ್ಪೋಟಿಫೈ (spotify)

ಅತ್ಯುತ್ತಮವಾದ ಸಂಗೀತವನ್ನು ಆಲಿಸಲು ಮತ್ತು ಭಾರಿ ಪ್ರಮಾಣದ ಸಂಗೀತ ಸಂಗ್ರಹವಿರುವ ಸ್ಪೋಟಿಫೈ ಆಪ್‌ ಅನ್ನು ಅತ್ಯುತ್ತಮವಾದ ಆಪ್‌ ಎಂದು ಪರಿಗಣಿಸಲಾಗಿದೆ. ನಿಮಗೆ ಬೇಕಾದ ಯಾವುದೇ ಟ್ರ್ಯಾಕ್‌, ಆರ್ಟಿಸ್ಟ್‌ ಅಥವಾ ಆಲ್ಬಮ್‌ಗಳನ್ನು ಹುಡುಕಿಕೊಂಡು ನಿಮಗಿಷ್ಟವಾದ ಹಾಡನ್ನು ಈ ಆಪ್‌ ಮೂಲಕ ಕೇಳಬಹುದು.

ಗೂಗಲ್‌ ಮ್ಯಾಪ್ಸ್- (google maps)

ಗೂಗಲ್‌ ಮ್ಯಾಪ್ಸ್- (google maps)

ಗೂಗಲ್‌ ಮ್ಯಾಪ್‌ಗೆ ಸೆಡ್ಡುಹೊಡೆಯುವ ಮತ್ತೊಂದು ಆಪ್‌ ಇಲ್ಲ ಎನ್ನಬಹುದು. ರಿಯಲ್‌ ಟೈಮ್‌ ಜಿಪಿಎಸ್ ನೇವಿಗೇಷನ್, ಸ್ಟ್ರೀಟ್ ವಿವ್ಯೂ ಸೇರಿ ಭೂಮಂಡಲದ ಅಪಾರ ಮಾಹಿತಿಯನ್ನು ಹೊತ್ತಿರುವ ಈ ಆಪ್‌ ಅನ್ನು ಬಳಕೆದಾರರು ಹೆಚ್ಚು ಇಷ್ಟಪಡಲು ಕಾರಣಗಳು ನೂರಾರಿವೆ.!!

ಜಿಮೇಲ್- gmail!!

ಜಿಮೇಲ್- gmail!!

ಗೂಗಲ್‌ ಅತ್ಯಂತ ಪ್ರಮುಖ ಪ್ರಾಡೆಕ್ಟ್ ಆಗಿರುವ ಆನ್‌ಲೈನ್ ಸಂದೇಶ ಜಾಲ ಜಿಮೇಲ್ ಈ ವರ್ಷದ ಟಾಪ್‌ ಆಪ್‌ಗಳ ಪಟ್ಟಿಯಲ್ಲಿದೆ. ಬಳಕೆದಾರರ ಸ್ನೇಹಿ ಹಾಗೂ ಅತ್ಯಂತ ಸರಳ ಆಪ್‌ ಆಗಿರುವ ಜಿಮೇಲ್ ಡೈವ್‌ನಲ್ಲಿ 15 ಜಿಬಿ ಉಚಿತ ಸಂಗ್ರಹಣಾ ಸಾಮರ್ಥ್ಯ ಇರುವುದು ಇದರ ಬಳಕೆಯನ್ನು ಮತ್ತಷ್ಟು ಹೆಚ್ಚಿಸಿದೆ ಎನ್ನಬಹುದು.!!

ಯುಟ್ಯೂಬ್ - youtube!!

ಯುಟ್ಯೂಬ್ - youtube!!

ಅತ್ಯಂತ ಕಡಿಮೆ ಬೆಲೆಗೆ ಡೇಟಾ ಸಿಗುತ್ತಿರುವುದು ಯುಟ್ಯೂಬ್ ವೀಕ್ಷಣೆಗಾರರ ಸಂಖ್ಯೆ ಹೆಚ್ಚಲು ಕಾರಣವಾಗಿದೆ. ಸಿನಿಮಾ, ಮನರಂಜನೆ ಮತ್ತು ವಿಶೇಷ ವಿಡಿಯೋಗಳಿಗಾಗಿ ಹೆಚ್ಚು ಹೆಸರಾಗಿರುವ ಯೂಟ್ಯೂಬ್ ಬಳಕೆ ಸಾಮಾನ್ಯ ಎನಿಸುತ್ತದೆ.!!

ಇನ್‌ಸ್ಟಾಗ್ರಾಮ್- instagram!!

ಇನ್‌ಸ್ಟಾಗ್ರಾಮ್- instagram!!

ಫೋಟೋ(ವಿಡಿಯೋ ಕೂಡ) ಷೇರಿಂಗ್ ಆಪ್‌ಗಳ ಪೈಕಿ ಇನ್‌ಸ್ಟಾಗ್ರಾಮ್ ಆಪ್‌ ಮೊದಲ ಸ್ಥಾನದಲ್ಲಿ ನಿಂತಿದೆ. ಸಾಮಾಜಿಕ ಜಾಲತಾಣಗಳಿಗಿಂತ ಭಿನ್ನವಾದ ಫೋಟೋ ಷೇರಿಂಗ್ ಆಪ್‌ ಇನ್‌ಸ್ಟಾಗ್ರಾಮ್ ಬಳಕೆದಾರರ ಫೇವ್‌ರೇಟ್ ಆಪ್‌ಗಳಲ್ಲಿ ಒಂದು.!!

ಅಮೆಜಾನ್‌ -amazon!!

ಅಮೆಜಾನ್‌ -amazon!!

ಜಗತ್ತಿನ ಆನ್‌ಲೈನ್‌ ಶಾಪಿಂಗ್‌ ದೈತ್ಯ ಅಮೆಜಾನ್ ಅನ್ನು ಹಿಡಿಯುವವರೇ ಇಲ್ಲವಾಗಿದೆ. ಗ್ರಾಹಕರ ಹಿತರಕ್ಷಣೆ ಜೊತೆಗೆ ಉತ್ತಮ ಸೇವೆ ನೀಡುತ್ತಿರುವ ಅಮೆಜಾನ್‌ಗೆ ಗ್ರಾಹಕರು ಮನಸೋತಿದ್ದು ಈ ಭಾರಿ ಜನಪ್ರಿಯ ಪಟ್ಟಯಲ್ಲಿ ಸ್ಥಾನ ಪಡೆಯಲು ಕಾರಣವಾಗಿದೆ.!!

ವಿಶ್- wish

ವಿಶ್- wish

ಭಾರತದಲ್ಲಿ ಹೆಚ್ಚು ಪ್ರಚಾರ ಪಡೆಯದ ಯುರೋಪ್‌ ಮತ್ತು ನಾರ್ಥ್‌ ಅಮೆರಿಕದಲ್ಲಿ ಪ್ರಸಿದ್ದವಾಗಿರುವ ಮತ್ತೊಂದು ಆನ್‌ಲೈನ್‌ ಶಾಪಿಂಗ್‌ ಆಪ್‌ ವಿಶ್!!.ಆಕರ್ಷಕ ಡೀಲ್‌ಗಳೊಂದಿಗೆ ಆನ್‌ಲೈನ್‌ ಶಾಪಿಂಗ್‌ನಲ್ಲಿ ಜನಪ್ರಿಯವಾಗಿರುವ ವಿಶ್ ಕಂಪೆನಿ ಬಳಕೆದಾರರ ರಿವ್ಯೂಗಳನ್ನು ನೀಡುವುದರಲ್ಲಿ ಎತ್ತಿದ ಕೈ.!!

ಸೌಂಡ್‌ ಕ್ಲೌಡ್‌- soundcloud

ಸೌಂಡ್‌ ಕ್ಲೌಡ್‌- soundcloud

ಮ್ಯೂಸಿಕ್‌ ಮತ್ತು ಆಡಿಯೋ ಸ್ಟ್ರೀಮಿಂಗ್‌ ಪ್ಲಾಟ್‌ಫಾರ್ಮ್‌ಗಳ ಪೈಕಿ ಸೌಂಡ್‌ ಕ್ಲೌಡ್‌ಗೆ ತನ್ನದೇ ಆದ ಸ್ಥಾನವಿದೆ.! 15 ಕೋಟಿಗೂ ಹೆಚ್ಚು ಹಾಡುಗಳ ಸಂಗ್ರಹಣೆ ಹೊಂದಿರುವ ಸೌಂಡ್‌ಕ್ಲೌಡ್‌ಗೆ ನಿರಂತರವಾಗಿ ಸಂಗೀತವನ್ನು ಅಪ್‌ಲೋಡ್‌ ಮಾಡುವ ಸಂಗೀತಗಾರರು ಮತ್ತು ಆರ್ಟಿಸ್ಟ್‌ಗಳ ಕಮ್ಯುನಿಟಿಯನ್ನೂ ಈ ಆಪ್‌ ಹೊಂದಿದೆ.!!

ವೇಜ್- Waze!!

ವೇಜ್- Waze!!

ಅಮೆರಿಕದಲ್ಲಿ ಹೆಚ್ಚು ಜನಪ್ರಿಯವಾಗಿರುವ ಟ್ರಾಫಿಕ್‌, ಸ್ಟ್ರೀಟ್, ಪೊಲೀಸ್‌ ಮತ್ತು ಅಪಘಾತದ ಅಪ್‌ಡೇಟ್‌ಗಳನ್ನು ನೀಡು ವೇಜ್ ಆಪ್ ಪ್ರಸಕ್ತ ಸಾಲಿನ ಟಾಪ್‌ ಆಪ್‌ಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಮತ್ತೊಂದು ಆಪ್‌.! ವಾಯ್ಸ್‌ ನೇವಿಗೇಟ್, ರೋಡ್‌ ಮ್ಯಾಪ್ ಜೊತೆಗೆ ಇತರ ಮಾಹಿತಿಗಳನ್ನು ಈ ಆಪ್ ನೀಡಲಿದೆ.!!

ಓದಿರಿ:ಎಲ್ಲಾ ಫೋನ್‌ಗಳಲ್ಲಿಯೂ 'ಗೂಗಲ್' ಇರಲು ಕಾರಣವೇನು?..ಗೊತ್ತಾದ್ರೆ ಶಾಕ್ ಆಗ್ತೀರಾ!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Apple reveals 2017’s most popular apps. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot