Home
ಸುದ್ದಿಜಾಲ

ಮೈಕ್ರೋಸಾಫ್ಟ್ ಓಎಸ್ ಕೈಬಿಡಲಿದೆ ಸರ್ಕಾರ? ಇನ್ಮುಂದೆ 'ಮಾಯಾ' ಶಕ್ತಿ, ಚಕ್ರವ್ಯೂಹದ ಕಾವಲು!

ಭಾರತ ಹಿಂದೆಂದಿಗಿಂತಲೂ ಈಗ ಎಲ್ಲಾ ರಂಗದಲ್ಲಿ ಅಗ್ರ ಸ್ಥಾನ ಪಡೆಯುತ್ತಿದೆ. ಅದರಲ್ಲೂ ಟೆಕ್ನಾಲಜಿ ವಿಷಯದಲ್ಲಂತೂ ದಾಪುಗಾಲು ಹಾಕಿ ಮುನ್ನುಗ್ಗುತ್ತಿದೆ. ಜೊತೆಗೆ ಸೈಬರ್ ದಾಳಿಗಳು ಮತ್ತು ಮಾಲ್‌ವೇರ್ ದಾಳಿಗಳು ನಾಗರಿಕರು ಮತ್ತು ಸಂಸ್ಥೆಗಳಿಗೆ ಮಾತ್ರವಲ್ಲದೆ ಸರ್ಕಾರಿ ವ್ಯವಸ್ಥೆಗಳಿಗೂ ದೊಡ್ಡ ಬೆದರಿಕೆಯಾಗಿದ್ದು, ಇನ್ಮುಂದೆ ಈ 'ಚಕ್ರವ್ಯೂಹ' ಭೇದಿಸುವುದು ಅಷ್ಟು ಸುಲಭದ ಮಾತಲ್ಲ.

ಹೌದು, ಭಾರತದ ರಕ್ಷಣಾ ಸಚಿವಾಲಯ ಹೊಸ ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸುತ್ತಿದೆ. ಈ ನಡುವೆ ದೇಶದಲ್ಲಿ ಹೆಚ್ಚಿನ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸುರಕ್ಷಿತ ಆಪರೇಟಿಂಗ್ ಸಿಸ್ಟಮ್ (OS) ಅನ್ನು ಬಳಸಲು ಭಾರತದ ಮುಂದಾಗಿದೆ ಎಂದು ತಿಳಿದುಬಂದಿದೆ. ಪರಿಣಾಮ ಈವರೆಗೂ ಬಳಕೆ ಮಾಡಲಾಗುತ್ತಿದ್ದ ಮೈಕ್ರೋಸಾಫ್ಟ್ ಓಎಸ್ ಅನ್ನು ಕೈಬಿಡಲಾಗುತ್ತದೆ ಎಂದೂ ಸಹ ಹೇಳಲಾಗುತ್ತಿದೆ. ಹಾಗಿದ್ರೆ, ಭಾರತದ ಸರ್ಕಾರದ ಮುಂದಿನ ನಡೆ ಏನು?, ಯಾವೆಲ್ಲಾ ಕಾರಣಕ್ಕೆ ಈ ನಿರ್ಧಾರ ಮಾಡಲಾಗಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಮೈಕ್ರೋಸಾಫ್ಟ್ ಓಎಸ್ ಕೈಬಿಡಲಿದೆ ಸರ್ಕಾರ? ಇನ್ಮುಂದೆ 'ಮಾಯಾ' ಶಕ್ತಿ...

ಸೈಬರ್ ದಾಳಿಗೆ ಬ್ರೇಕ್‌ : ದೇಶಾದ್ಯಂತ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಸೈಬರ್ ದಾಳಿ ಮತ್ತು ಮಾಲ್ವೇರ್ ದಾಳಿ ಹಿನ್ನೆಲೆಯಲ್ಲಿ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಮಿಲಿಟರಿ ಉದ್ದೇಶಗಳಿಗಾಗಿ ಮೈಕ್ರೋಸಾಫ್ಟ್ ಓಎಸ್ ಅನ್ನು ತಪ್ಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ವರದಿಯಾಗಿದೆ. ಈ ಮೈಕ್ರೋಸಾಫ್ಟ್ ಬದಲಿಗೆ ಸರ್ಕಾರ ಮಾಯಾ (Maya) ಎಂಬ ಓಎಸ್ ಅನ್ನು ಬಳಕೆ ಮಾಡಲು ಮುಂದಾಗಿದೆ.

ಇನ್ನು ಮಾಯಾ ಓಎಸ್‌ನೊಂದಿಗೆ ಚಕ್ರವ್ಯೂಹ್ (Chakravyuh) ಎಂಡ್-ಪಾಯಿಂಟ್ ಆಂಟಿ-ಮಾಲ್ವೇರ್ ಮತ್ತು ಆಂಟಿವೈರಸ್ ಅನ್ನು ಸ್ಥಾಪಿಸಲು ಸರ್ಕಾರ ಮುಂದಾಗಿದೆ ಎಂದು ತಿಳಿದುಬಂದಿದೆ. ಆದರೆ, ಸರ್ಕಾರವಾಗಲಿ ಅಥವಾ ಸಂಬಂಧಿಸಿದ ಅಧಿಕಾರಿಗಳಾಗಲಿ ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಅದಾಗ್ಯೂ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಇಂಟರ್ನೆಟ್ ಪ್ರವೇಶದೊಂದಿಗೆ ಮಾಯಾ ಓಎಸ್‌ (Maya OS) ಆರಂಭ ಆಗಲಿದೆ ಎನ್ನಲಾಗಿದೆ.

ಅಡ್ವಾನ್ಸ್ಡ್ ಪರ್ಸಿಸ್ಟೆಂಟ್ ಥ್ರೆಟ್ (ATP) ಗ್ರೂಪ್‌ಗಳು ಇಂಟರ್‌ನೆಟ್‌ಗೆ ಸಂಪರ್ಕಗೊಂಡಿರುವ ರಕ್ಷಣಾ ಇಲಾಖೆಯ ಕಂಪ್ಯೂಟರ್ ನೆಟ್‌ವರ್ಕ್‌ ಒಳಗೆ ನುಸುಳಲು ನಿರಂತರವಾಗಿ ಪ್ರಯತ್ನಿಸುತ್ತಿವೆ. ನಿರ್ಣಾಯಕ ಮತ್ತು ಕಾರ್ಯತಂತ್ರದ ಮಾಹಿತಿಯನ್ನು ಈ ಮೂಲಕ ಸೋರಿಕೆ ಮಾಡುವ ಕೆಲಸ ಮಾಡುತ್ತವೆ. ಜೊತೆಗೆ ಮಾಲ್ವೇರ್ ದಾಳಿಗಳು ಸಹ ಗಂಭೀರ ಅಪಾಯವನ್ನುಂಟುಮಾಡಲಿದ್ದು, ಈ ಕಾರಣಕ್ಕೆ ಹೊಸ ಓಎಸ್‌ ಹಾಗೂ ಚಕ್ರವ್ಯೂಹ್‌ ಅನ್ನು ಬಳಕೆ ಮಾಡಲು ಸರ್ಕಾರ ಮುಂದಾಗಿದೆ.

ಈ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡಿರುವ ಕೆಲವು ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದು, ಮಾಯಾ ವಿಂಡೋಸ್ ತರಹದ ಇಂಟರ್ಫೇಸ್ ಮತ್ತು ಎಲ್ಲಾ ಕಾರ್ಯಗಳನ್ನು ಹೊಂದಿದೆ. ಬಳಕೆದಾರರು ಇದಕ್ಕೆ ಬದಲಾದಾಗ ಯಾವುದೇ ಹೆಚ್ಚಿನ ವ್ಯತ್ಯಾಸವನ್ನು ಗಮನಿಸಲು ಸಾಧ್ಯವಾಗುವುದಿಲ್ಲ. ಅದರಂತೆ ಈ ಮಾಯಾವನ್ನು ಆಗಸ್ಟ್ 15 ರ ಮೊದಲು ಸೌತ್ ಬ್ಲಾಕ್‌ನಲ್ಲಿರುವ ಎಲ್ಲಾ ಇಂಟರ್ನೆಟ್-ಸಂಪರ್ಕಿತ ಕಂಪ್ಯೂಟರ್‌ಗಳಲ್ಲಿ ಸ್ಥಾಪಿಸಲು ಪ್ರಸ್ತಾಪಿಸಲಾಗಿದೆ ಎಂದು ತಿಳಿಸಿದ್ದಾರೆ.

ಅದರಂತೆ ಈ ಹೊಸ ಓಎಸ್‌ ಅನ್ನು ಭೂಸೇನೆ, ವಾಯುಪಡೆ ಮತ್ತು ನೌಕಾಪಡೆಗಳನ್ನು ಬಳಕೆ ಮಾಡಲಾಗುತ್ತದೆ. ಈಗಾಗಲೇ ಇದನ್ನು ನೌಕಾಪಡೆಯಲ್ಲಿ ಮೌಲ್ಯಮಾಪನ ಮಾಡಲಾಗಿದ್ದು, ಇದು ಎಂಡ್‌ಪಾಯಿಂಟ್ ಡಿಟೆಕ್ಷನ್ ಮತ್ತು ಪ್ರೊಟೆಕ್ಷನ್ ಸಿಸ್ಟಮ್ ಆಗಿದೆ ಎಂದು ತಿಳಿದುಬಂದಿದೆ. ಈ ಹಿಂದೆ ವಿಂಡೋಸ್ ಓಎಸ್ ಅನ್ನು ಭಾರತದ ಸ್ವಂತ ಓಎಸ್‌ನೊಂದಿಗೆ ಬದಲಾಯಿಸುವ ಕ್ರಮಗಳು ಸಹ ನಡೆದಿದ್ದು, ಈ ಕಾರಣದಿಂದಲೇ ಹೆಚ್ಚು ಭದ್ರತೆ ವ್ಯವಸ್ಥೆ ಮೂಲಕ ಸೇವೆ ಸಲ್ಲಿಸುತ್ತಿವೆ.

ಮೈಕ್ರೋಸಾಫ್ಟ್ ಓಎಸ್ ಕೈಬಿಡಲಿದೆ ಸರ್ಕಾರ? ಇನ್ಮುಂದೆ 'ಮಾಯಾ' ಶಕ್ತಿ...

ಇನ್ನು ಈ ಮಾಯಾ ಓಎಸ್ ಅನ್ನು ಕೇವಲ ಆರು ತಿಂಗಳಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಇದು ಯಶಸ್ವಿಯಾದರೆ ಹೆಚ್ಚಿನ ವ್ಯವಸ್ಥೆಗಳಿಗೆ ವಿಸ್ತರಿಸಲು ಸರ್ಕಾರ ಮುಂದಾಗಿದೆ ಎನ್ನುವ ಮಾತುಗಳು ಸಹ ಕೇಳಿಬರುತ್ತಿವೆ. ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಈ ವ್ಯವಸ್ಥೆ ತನ್ನದೇ ಆದ ರೀತಿಯಲ್ಲಿ ದೇಶಕ್ಕೆ ಸಹಾಯ ಮಾಡಲಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ದೇಶ ಸುಭದ್ರವಾಗಲು ಸಹಕಾರಿ.

Best Mobiles in India

English summary
Indian Ministry of Defense is developing new technologies. Meanwhile, Maya OS and Chakravyuh antivirus are to introduce.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+