Home
ಸುದ್ದಿಜಾಲ

online game: ಭಾರತೀಯ ಗೇಮರ್‌ಗಳು ವರ್ಷಕ್ಕೆ 12 ಲಕ್ಷದವರೆಗೆ ಗಳಿಸುತ್ತಿದ್ದಾರಂತೆ! ಮತ್ಯಾಕೆ ಬೇರೆ ಕೆಲಸ?

ಭಾರತದಲ್ಲಿ ಗೇಮಿಂಗ್‌ ಮಾರ್ಕೆಟ್ (online game) ಬಹಳ ದೊಡ್ಡದಾಗಿ ಬೆಳೆಯುತ್ತಿದೆ. ಈ ಕಾರಣಕ್ಕೆ ಭಾರತ ಸರ್ಕಾರ ಇದರ ಮೇಲೆ ವಿವಿಧ ರೀತಿಯಲ್ಲಿ ಹದ್ದಿನ ಕಣ್ಣಿಟ್ಟಿದೆ. ಈ ನಡುವೆ ಭಾರತೀಯ ಗೇಮಿಂಗ್ ಸಮುದಾಯವು ಕೇವಲ ಮೋಜಿಗಾಗಿ ಮಾತ್ರವಲ್ಲದೆ ಇದನ್ನೇ ಪೂರ್ಣ ಪ್ರಮಾಣದ ವೃತ್ತಿಯಾಗಿ ಅನುಸರಿಸುತ್ತಿದೆ ಎಂದು ತಿಳಿದುಬಂದಿದೆ.

ಹೌದು, ಈಗಂತೂ ಗೇಮ್‌ ಆಡಲೆಂದೇ ವಿಶೇಷ ಡಿವೈಸ್‌ಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಅಂದರೆ ಗೇಮಿಂಗ್‌ ಉದ್ದೇಶಕ್ಕಾಗಿಯೇ ಸ್ಮಾರ್ಟ್‌ಫೋನ್‌ಗಳು ಹಾಗೂ ಗೇಮಿಂಗ್‌ ಕನ್ಸೋಲ್‌ಗಳನ್ನು ವಿವಿಧ ಫೀಚರ್ಸ್‌ನೊಂದಿಗೆ ಲಾಂಚ್‌ ಮಾಡಲಾಗಿದೆ. ಈ ಎಲ್ಲಾ ಬೆಳವಣಿಗೆ ಹಿನ್ನೆಲೆ ಆಟಗಾರರು ಈ ವೃತ್ತಿಯಲ್ಲಿ ವರ್ಷಕ್ಕೆ ಸುಮಾರು 6-12 ಲಕ್ಷ ಗಳಿಸುತ್ತಿದ್ದಾರೆ ಎಂದು ವರದಿಯಾಗಿದೆ. ಹಾಗಿದ್ರೆ ಏನಿದು ಹೊಸ ವರದಿ?, ಅಷ್ಟಕ್ಕೂ ಇಷ್ಟೊಂದು ಸಂಪಾದನೆ ಮಾಡಲು ಸಾಧ್ಯವೇ ಅನ್ನೋ ವಿಷಯವನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಭಾರತೀಯ ಗೇಮರ್‌ಗಳು ವರ್ಷಕ್ಕೆ 12 ಲಕ್ಷದವರೆಗೆ ಗಳಿಸುತ್ತಿದ್ದಾರಂತೆ!

ಇ-ಸ್ಪೋರ್ಟ್ಸ್ ಪಂದ್ಯಾವಳಿಗಳಲ್ಲಿ ಏರಿಕೆ: ಭಾರತದಲ್ಲಿ ಇ-ಸ್ಪೋರ್ಟ್ಸ್ ಪಂದ್ಯಾವಳಿಗಳಲ್ಲಿ ಏರಿಕೆ ಕಂಡುಬಂದಿದೆ. ಇದು ಗೇಮಿಂಗ್ ಉದ್ಯಮದಲ್ಲಿ ಗಮನಾರ್ಹ ಹೂಡಿಕೆಯನ್ನು ಸೂಚಿಸಿದ್ದು, ಕಳೆದ ಕೆಲವು ವರ್ಷಗಳಲ್ಲಿ ಭಾರತೀಯ ಗೇಮಿಂಗ್ ಸಮುದಾಯ ಅಕಾ (aka) ಭಾರತೀಯ ಇ-ಸ್ಪೋರ್ಟ್ಸ್ ಘಾತೀಯವಾಗಿ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದೆ. ಜೊತೆಗೆ ಮೊಬೈಲ್ ಮತ್ತು ಪಿಸಿ ಗೇಮರ್‌ಗಳೆರಡೂ ಜಾಗತಿಕವಾಗಿಯೂ ಅಗ್ರ ಸ್ಥಾನ ಪಡೆಯುತ್ತಿವೆ.

ಇನ್ನು ಭಾರತೀಯ ಗೇಮರುಗಳು ಕೇವಲ ವಿನೋದ ಮತ್ತು ಕಂಟೆಂಟ್‌ ರಚನೆಗಾಗಿ ತಮ್ಮ ಗೇಮಿಂಗ್ ಕೌಶಲ್ಯಗಳನ್ನು ಬಳಕೆ ಮಾಡದೆ ಗೇಮಿಂಗ್ ಅನ್ನು ಕಾನೂನುಬದ್ಧ ವೃತ್ತಿ ಮಾರ್ಗವಾಗಿ ಅನುಸರಿಸುತ್ತಿದ್ದಾರೆ ಎಂದು ವರದಿಯಿಂದ ತಿಳಿದುಬಂದಿದೆ. ಹೆಚ್‌ಪಿ ಭಾರತೀಯ ಗೇಮಿಂಗ್ ಲ್ಯಾಂಡ್‌ಸ್ಕೇಪ್‌ನ ಇತ್ತೀಚಿನ ಅಧ್ಯಯನವು ಸುಮಾರು ಅರ್ಧದಷ್ಟು ಗೇಮರುಗಳು ಗಮನಾರ್ಹ ಆದಾಯವನ್ನು ಗಳಿಸುತ್ತಿದ್ದಾರೆ ಎಂದು ಉಲ್ಲೇಖ ಮಾಡಿದೆ. ಅಂದರೆ ಆನ್‌ಲೈನ್‌ ಗೇಮಿಂಗ್‌ನಲ್ಲಿ ಗೇಮರ್‌ಗಳು ಸುಮಾರು 6 ​​ರಿಂದ 12 ಲಕ್ಷ ರೂ. ಗಳವರೆಗೆ ಗಳಿಸುತ್ತಿದ್ದಾರಂತೆ.

ಭಾರತೀಯ ಗೇಮರ್‌ಗಳು ವರ್ಷಕ್ಕೆ 12 ಲಕ್ಷದವರೆಗೆ ಗಳಿಸುತ್ತಿದ್ದಾರಂತೆ!

ಇನ್ನು ಈ ಆಧ್ಯಯನಕ್ಕಾಗಿ ಭಾರತದಾದ್ಯಂತ ಸುಮಾರು 3500 ಜನರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಅದರಲ್ಲಿ 15 ಶ್ರೇಣಿ-1 ಮತ್ತು ಶ್ರೇಣಿ-2 ನಗರಗಳಿಂದ 500 ಪೋಷಕರು ಇದರಲ್ಲಿ ಇದ್ದರು. ಭಾಗವಹಿಸಿದವರಲ್ಲಿ 70 ಪ್ರತಿಶತ ಪಿಸಿ ಬಳಕೆದಾರರು ಮತ್ತು 30 ಪ್ರತಿಶತ ಮೊಬೈಲ್ ಗೇಮರುಗಳು ಇದ್ದು, ಪ್ರತಿಕ್ರಿಯಿಸಿದವರಲ್ಲಿ 75 ಪ್ರತಿಶತ ಪುರುಷರು ಮತ್ತು 25 ಪ್ರತಿಶತ ಮಹಿಳೆಯರಾಗಿದ್ದಾರೆ.

ಈ ಅಧ್ಯಯನವು ಒಂದು ಕಾರ್ಯಸಾಧ್ಯವಾದ ವೃತ್ತಿ ಮಾರ್ಗವಾಗಿ ಕಂಡಿದ್ದು, ಗೇಮಿಂಗ್ ಕಡೆಗೆ ಗಮನಾರ್ಹ ಪ್ರವೃತ್ತಿಯನ್ನು ಬಹಿರಂಗಪಡಿಸಿದೆ. 2023 ರಲ್ಲಿ ಸರಿಸುಮಾರು ಅರ್ಧದಷ್ಟು ಭಾರತೀಯ ಗೇಮರ್‌ಗಳು 6 ರಿಂದ 12 ಲಕ್ಷದ ನಡುವೆ ವಾರ್ಷಿಕ ಆದಾಯವನ್ನು ಗಳಿಕೆ ಮಾಡುತ್ತಿದ್ದಾರೆ ಎಂದು ಇದರಿಂದ ತಿಳಿದುಬಂದಿದೆ. ಪ್ರಮುಖವಾಗಿ ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಗಣನೀಯ ಏರಿಕೆಯನ್ನು ತೋರಿಸಿದೆ.

ಭಾರತೀಯ ಗೇಮರ್‌ಗಳು ವರ್ಷಕ್ಕೆ 12 ಲಕ್ಷದವರೆಗೆ ಗಳಿಸುತ್ತಿದ್ದಾರಂತೆ!

ಈ ಬೆಳವಣಿಗೆ ನಡುವೆ ಬೆಳೆಯುತ್ತಿರುವ ಗೇಮಿಂಗ್ ಉದ್ಯಮವನ್ನು ಬೆಂಬಲಿಸಲು, ಹೆಚ್‌ಪಿ 'ಹೆಚ್‌ಪಿ ಗೇಮಿಂಗ್ ಗ್ಯಾರೇಜ್' ಅನ್ನು ಆರಂಭ ಮಾಡಿದೆ. ಇದು ಇ-ಸ್ಪೋರ್ಟ್ಸ್ ನಿರ್ವಹಣೆ ಮತ್ತು ಆಟದ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸಿದ ಉಚಿತ ಆನ್‌ಲೈನ್ ವೃತ್ತಿಪರ ಪ್ರಮಾಣಪತ್ರ ನೀಡುವ ಕಾರ್ಯಕ್ರಮವಾಗಿದೆ. ಇದು ಭಾರತೀಯ ಗೇಮಿಂಗ್ ಉತ್ಸಾಹಿಗಳಿಗೆ ಇ-ಸ್ಪೋರ್ಟ್ಸ್ ನಿರ್ವಹಣೆ, ಆಟದ ವಿನ್ಯಾಸ ಮತ್ತು ಆಟದ ಪ್ರೋಗ್ರಾಮಿಂಗ್‌ನಲ್ಲಿ ಅವರ ಜ್ಞಾನ ಮತ್ತು ಕೌಶಲ್ಯಗಳನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾದ ಕ್ಯುರೇಟೆಡ್ ಆನ್‌ಲೈನ್ ಮಾಡ್ಯೂಲ್‌ಗಳಿಗೆ ಪ್ರವೇಶವನ್ನು ನೀಡುತ್ತದೆ.

ಭಾರತೀಯ ಗೇಮರ್‌ಗಳು ವರ್ಷಕ್ಕೆ 12 ಲಕ್ಷದವರೆಗೆ ಗಳಿಸುತ್ತಿದ್ದಾರಂತೆ!

ಈ ವಿಶೇಷ ಕಾರ್ಯಕ್ರಮವನ್ನು edX ನಲ್ಲಿ ಆಯೋಜನೆ ಮಾಡಲಾಗಿದ್ದು, ಇಂಗ್ಲಿಷ್, ಹಿಂದಿ ಮತ್ತು ತೆಲುಗು ಸೇರಿದಂತೆ 12 ಭಾಷೆಗಳಲ್ಲಿ ಗೇಮಿಂಗ್ ಪ್ರಿಯರಿಗೆ ಲಭ್ಯ ಇದೆ. ಇದರೊಂದಿಗೆ ಈ ವರ್ಷದ ಆರಂಭದಲ್ಲಿ, ಹೆಚ್‌ಪಿ ಭಾರತದಾದ್ಯಂತ ಓಮೆನ್ ಪ್ಲೇಗ್ರೌಂಡ್ ಮಳಿಗೆಗಳನ್ನು ಪರಿಚಯಿಸಿದೆ. ಈ ಮಳಿಗೆಗಳು ಪಿಸಿ ಗೇಮಿಂಗ್ ಉತ್ಸಾಹಿಗಳಿಗೆ ಕೇಂದ್ರವಾಗಿ ಕೆಲಸ ಮಾಡುತ್ತಿದ್ದು, ಗೇಮಿಂಗ್ ಜಗತ್ತಿನಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಮತ್ತು ಅವರ ಕೌಶಲ್ಯಗಳನ್ನು ಹೆಚ್ಚಿಸಲು ಸಹಾಯ ಮಾಡಲಿದೆ.

Best Mobiles in India

English summary
The report revealed that Indian gamers are just not using their gaming skills for fun and content creation, but are pursuing online game as a legitimate career path. Gamers earn around Rs 6 to 12 lakh on gaming.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+