Home
ಸುದ್ದಿಜಾಲ

ಭಾರತದಲ್ಲಿ 14 ಮೊಬೈಲ್ ಆಪ್‌ಗಳನ್ನು ಬ್ಯಾನ್‌ ಮಾಡಿದ ಸರ್ಕಾರ: ಪಾಕ್‌ನಲ್ಲಿ ಉಗ್ರರು ಬಳಸುತ್ತಿದ್ದ ಆಪ್‌ಗಳಿವು!

ಭಾರತ ಸರ್ಕಾರ ಮಹತ್ವದ ನಿರ್ಧಾರವೊಂದನ್ನು ಮಾಡಿದ್ದು, ಈ ಮೂಲಕ ತಕ್ಷಣದಿಂದಲೇ ಜಾರಿಗೆ ಬರುವಂತೆ 14 ಮೊಬೈಲ್ ಆಪ್ ಗಳನ್ನು ಬ್ಯಾನ್ ಮಾಡಿದೆ. ಇದನ್ನು ಭಾರತದಲ್ಲಿ ವಿವೇಚನೆಯಿಲ್ಲದೆ ಬಳಕೆ ಮಾಡಲಾಗುತ್ತಿತ್ತಂತೆ. ದುರಂತದ ವಿಷಯ ಏನೆಂದರೆ ಈ ಎಲ್ಲಾ ಆಪ್‌ಗಳನ್ನು ಪಾಕ್‌ನಲ್ಲಿ ಇರುವ ಭಯೋತ್ಪಾದಕ ಗುಂಪು ಬಳಕೆ ಮಾಡುತ್ತಿತ್ತು ಎಂಬ ಶಾಕಿಂಗ್ ವಿಷಯ ಹೊರಬಿದ್ದಿದೆ.

ಹೌದು, ಭಾರತದ ವಿರುದ್ಧ ಪಾಕ್‌ ಸದಾಕಾಲ ಕತ್ತಿ ಮಸೆಯುತ್ತಿದ್ದರೂ ಸಹ ಭಾರತದ ಶಕ್ತಿ ವಿರುದ್ಧ ಎಂದೂ ಎದೆತಟ್ಟಿ ನಿಲ್ಲಲು ಸಾಧ್ಯವಾಗುತ್ತಿಲ್ಲ. ಈ ನಡುವೆ ಪಾಕಿಸ್ತಾನಿ ಭಯೋತ್ಪಾದಕರು ಈ ಆಪ್‌ಗಳನ್ನು ಬಳಕೆ ಮಾಡಿಕೊಂಡು ಭಾರತದಲ್ಲಿ ದೇಶ ವಿರೋಧಿ ಚಟುವಟಿಕೆ ನಡೆಸಲು ಮುಂದಾಗಿದ್ದರು ಎಂದು ಸರ್ಕಾರ ಕಂಡುಕೊಂಡಿದೆ. ಹಾಗಿದ್ರೆ, ಯಾವೆಲ್ಲಾ ಆಪ್‌ಗಳನ್ನು ಬ್ಯಾನ್‌ ಮಾಡಲಾಗಿದೆ?,ಈ ಆಪ್‌ ಬಳಕೆ ಮಾಡಿಕೊಂಡು ಭಯೋತ್ಪಾದಕರು ಹೇಗೆಲ್ಲಾ ಭಾರತದ ವಿರುದ್ಧ ಸಂಚು ರೂಪಿಸುತ್ತಿದ್ದರು ಎಂಬ ಭಯಾನಕ ವಿಚಾರ ತಿಳಿದುಕೊಳ್ಳಿ.

ಭಾರತದಲ್ಲಿ 14 ಮೊಬೈಲ್ ಆಪ್‌ಗಳನ್ನು ಬ್ಯಾನ್‌ ಮಾಡಿದ ಸರ್ಕಾರ...

ಈಗ ಭಾರತದಲ್ಲಿ ಬ್ಯಾನ್‌ ಮಾಡಲಾಗಿರುವ ಆಪ್ ಗಳ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.ಆದರೆ, ಕೆಲವು ಮೂಲಗಳನ್ನು ನಂಬುವುದಾದರೆ ಸರ್ಕಾರವು ನಿಷೇಧಿಸಿರುವ ಆಪ್‌ಗಳಲ್ಲಿ ಬಿಚಾಟ್‌ ಸೇರಿದಂತೆ ಹಲವು ಆಪ್‌ಗಳು ಸೇರಿವೆ. ಈ ಆಪ್‌ಗಳು ಕಾಶ್ಮೀರದ ಭಯೋತ್ಪಾದಕರು ತಮ್ಮ ಬೆಂಬಲಿಗರು ಗ್ರೌಂಡ್‌ ವರ್ಕರ್ಸ್‌ (OGWs) ಜೊತೆ ಸಂವಹನ ನಡೆಸಲು ಬಳಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಭಾರತೀಯ ಕಾನೂನು ಸಂಬಂಧ ಈ ಆಪ್‌ಗಳ ಬಗ್ಗೆ ವಿಚಾರಣೆ ನಡೆಸಲು ಆಪ್‌ ನಿರ್ವಾಹಕರನ್ನು ಸಂಪರ್ಕ ಮಾಡಲು ಸರ್ಕಾರ ಮುಂದಾಗಿದೆ. ಆದರೆ, ಭಾರತದಲ್ಲಿ ಯಾವುದೇ ಪ್ರತಿನಿಧಿಗಳನ್ನು ಹೊಂದಿಲ್ಲ ಎಂದು ಸರ್ಕಾರ ಕಂಡುಕೊಂಡಿದೆ. ಜೊತೆಗೆ ಈ ಆಪ್‌ಗಳು ಭಾರತದಲ್ಲಿ ಯಾವುದೇ ರೀತಿಯ ಆಪ್‌ನಿರ್ವಹಣೆಯ ಕಚೇರಿಗಳನ್ನು ಹೊಂದಿಲ್ಲ ಎಂದು ತಿಳಿದುಬಂದಿಎ. ಈ ಮೂಲಕ ತಕ್ಷಣವೇ ಸರ್ಕಾರ ಎಚ್ಚೆತ್ತುಕೊಂಡಿದೆ.

ಈ ಆಪ್‌ಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಪ್ರಚಾರ ಮತ್ತು ಯುವಕರನ್ನು ಪ್ರಚೋದಿಸುವ ಕಾರ್ಯ ಮಾಡಿವೆ ಎಂದು ಹಿರಿಯ ಗುಪ್ತಚರ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಇನ್ನು ಕಳೆದ ಕೆಲವು ವರ್ಷಗಳಿಂದ, ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ಸಂವಹನ ಜಾಲವನ್ನು ನಾಶಮಾಡಲು ಸರ್ಕಾರ ಪ್ರಯತ್ನಿಸುತ್ತಿದೆ. ಇದರ ಭಾಗವಾಗಿಯೇ ಈ ಕ್ರಮ ಜರುಗಿಸಲಾಗಿದೆ.

ಭಾರತದಲ್ಲಿ 14 ಮೊಬೈಲ್ ಆಪ್‌ಗಳನ್ನು ಬ್ಯಾನ್‌ ಮಾಡಿದ ಸರ್ಕಾರ...

ಗಮನಾರ್ಹ ವಿಷಯ ಏನೆಂದರೆ ಈ ಆಪ್‌ಗಳು ವಿವಿಧ ದೇಶಗಳಲ್ಲಿ ಸರ್ವರ್‌ಗಳನ್ನು ಹೊಂದಿದ್ದು, ಅವುಗಳನ್ನು ಪತ್ತೆಹಚ್ಚಲು ಕಷ್ಟವಾಗುತ್ತದೆ. ಅಲ್ಲದೆ, ಭಾರೀ ಎನ್‌ಕ್ರಿಪ್ಶನ್‌ನಿಂದಾಗಿ ಈ ಅಪ್ಲಿಕೇಶನ್‌ಗಳನ್ನು ಪ್ರತಿಬಂಧಿಸಲು ಯಾವುದೇ ಮಾರ್ಗವಿಲ್ಲ ಎಂದು ಕಂಡುಕೊಳ್ಳಲಾಗಿದೆ. ಈ ಕಾರಣಕ್ಕೆ ಮಾಹಿತಿ ತಂತ್ರಜ್ಞಾನ ಕಾಯಿದೆ, 2000 ರ ಸೆಕ್ಷನ್ 69A ಅಡಿಯಲ್ಲಿ ಈ ಅಪ್ಲಿಕೇಶನ್‌ಗಳನ್ನು ಬ್ಯಾನ್‌ ಮಾಡಲಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.

ಬ್ಯಾನ್‌ ಮಾಡಲಾದ ಆಪ್‌ಗಳಿವು: ಕ್ರಿಪ್ವೈಸರ್, ಎನಿಗ್ಮಾ, ಸೇಫ್ಸ್ವಿಸ್,ವಿಕ್ರಮ್, ಮೀಡಿಯಾಫೈರ್, ಬ್ರಿಯಾರ್, ಬಿಚಾಟ್‌, ನಂದ್‌ಬಾಕ್ಸ್, ಕೋನಿಯನ್, ಐಎಮ್ಓ, ಎಲಿಮೆಂಟ್‌, ಸೆಕೆಂಡ್‌ ಲೈನ್‌, ಝಂಗಿ, ತ್ರೀಮಾ ಆಪ್‌ಗಳನ್ನು ಬ್ಯಾನ್‌ ಮಾಡಲಾಗಿದೆ. ಈ ಆಪ್‌ಗಳಲ್ಲಿ ಕೆಲವನ್ನು ಭಾರತದ ಯೋಧರಿಂದ ಹತರಾದವರ ಬಳಿ ಪತ್ತೆ ಮಾಡಲಾಗಿದೆ. ಈ ಬಗ್ಗೆ ಪ್ರಕರಣಗಳ ತನಿಖೆಯಲ್ಲಿ ತೊಡಗಿರುವ ಹಿರಿಯ ಸರ್ಕಾರಿ ಅಧಿಕಾರಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಭಾರತದಲ್ಲಿ 14 ಮೊಬೈಲ್ ಆಪ್‌ಗಳನ್ನು ಬ್ಯಾನ್‌ ಮಾಡಿದ ಸರ್ಕಾರ...

ಕೆಲವು ದಿನಗಳ ಹಿಂದೆ ಭಾರತದಲ್ಲಿ ಭದ್ರತಾ ಪಡೆಗಳ ಮೇಲೆ ಭಯೋತ್ಪಾದಕ ದಾಳಿ ನಡೆದಿತ್ತು. ಇದರಲ್ಲಿ ಹಲವು ಸೈನಿಕರು ಸಾವಿಗೀಡಾಗಿದ್ದರು ಅಂದಿನಿಂದ ಪಾಕ್ ನಂಟು ಪತ್ತೆ ಹಚ್ಚಲು ಸರ್ಕಾರ ತನ್ನದೇ ಆದ ರೀತಿಯಲ್ಲಿ ಕಾರ್ಯಪ್ರವೃತ್ತವಾಗಿದೆ. ಈ ನಡುವೆ ಭಾರತ ಸರ್ಕಾರವು ಈ ಹಿಂದೆ 250 ಕ್ಕೂ ಹೆಚ್ಚು ಚೀನೀ ಅಪ್ಲಿಕೇಶನ್‌ಗಳನ್ನು ನಿಷೇಧಿಸಿತ್ತು. ಈ ಆಪ್‌ಗಳು ಸಹ ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆಗೆ ಧಕ್ಕೆ ತಂದಿವೆ ಎಂದು ಆರೋಪಿಸಲಾಗಿತ್ತು.

Best Mobiles in India

English summary
Indian government has banned these 14 mobile apps in India. The government found that these apps were used to plot and lure terrorists inside India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+