Home
ಸುದ್ದಿಜಾಲ

Adobe: ನೀವು ಅಡೋಬ್ ಅಪ್ಲಿಕೇಶನ್ ಬಳಕೆ ಮಾಡುತ್ತೀರಾ? ಹಾಗಿದ್ರೆ ತಕ್ಷಣವೇ ಈ ಕೆಲಸ ಮಾಡಿ! ಇಲ್ಲವಾದ್ರೆ ತುಂಬಾ ಕಷ್ಟ

ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು (Smartphones, laptops) ಹಾಗೂ ಇತರೆ ಸ್ಮಾರ್ಟ್‌ ಡಿವೈಸ್‌ಗಳು ಇಂದು ವಿವಿಧ ರೀತಿಯಲ್ಲಿ ಬಳಕೆದಾರರಿಗೆ ಪ್ರಯೋಜನಗಳನ್ನು ನೀಡುತ್ತಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಫೋನ್‌ ಮೂಲಕವೇ ಹೆಚ್ಚಿನ ಬ್ಯಾಂಕ್‌ ಕಾರ್ಯಗಳು ಸಹ ನಡೆಯುತ್ತಿವೆ. ಆದರೆ, ಇಷ್ಟೇ ಪ್ರಮಾಣದಲ್ಲಿ ಭದ್ರತಾ ಸಮಸ್ಯೆಗಳನ್ನೂ ಸಹ ಈ ಡಿವೈಸ್‌‌ಗಳು ಎದುರಿಸುವಂತೆ ಆಗಿದೆ.

ಹೌದು, ಸ್ಮಾರ್ಟ್‌ಫೋನ್‌ ಹಾಗೂ ಲ್ಯಾಪ್‌ಟಾಪ್‌ ಬಳಕೆದಾರರಿಗೆ ಎಷ್ಟು ಪ್ರಯೋಜನಕಾರಿಯೋ ಅಷ್ಟೇ ಪ್ರಮಾಣದಲ್ಲಿ ಸಮಸ್ಯೆಗಳು ಎದುರಾಗುತ್ತಿವೆ. ಈ ಸಂಬಂಧ ತಕ್ಷಣವೇ ಎಚ್ಚೆತ್ತುಕೊಳ್ಳುವ ಸರ್ಕಾರ ಅಥವಾ ಸಂಬಂಧಿಸಿದ ಸಂಸ್ಥೆಗಳು ನವೀಕರಣಕ್ಕಾಗಿ ಸಲಹೆ ನೀಡುತ್ತಾರೆ. ಅದರಂತೆ ಈಗ ಅಡೋಬ್ ಅಪ್ಲಿಕೇಶನ್‌ ನಲ್ಲಿ (Adobe application) ಸಮಸ್ಯೆ ತಲೆ ದೂರಿದ್ದು, ಸರ್ಕಾರ ಎಲ್ಲಾ ಅಡೋಬ್ ಅಪ್ಲಿಕೇಶನ್‌ ಬಳಕೆದಾರರಿಗೆ ಗಂಭೀರ ಎಚ್ಚರಿಕೆ ನೀಡಿದೆ. ಹಾಗಿದ್ರೆ, ಅಡೋಬ್ ಬಳಕೆದಾರರು ಏನು ಮಾಡಬೇಕು?, ಇದರಲ್ಲಿ ಕಾಣಿಸಿಕೊಂಡಿರುವ ಸಮಸ್ಯೆಗಳು ಏನು ಅನ್ನೋದನ್ನು ತಿಳಿಸಿಕೊಡಲಾಗಿದೆ ಓದಿರಿ.

ನೀವು ಅಡೋಬ್ ಅಪ್ಲಿಕೇಶನ್ ಬಳಕೆ ಮಾಡುತ್ತೀರಾ? ಹಾಗಿದ್ರೆ ತಕ್ಷಣವೇ ಈ ಕೆಲಸ ಮಾಡಿ!..

ಅಡೋಬ್ ಬಳಕೆದಾರರಿಗೆ ಸರ್ಕಾರದಿಂದ ಎಚ್ಚರಿಕೆ: ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-In) ವಿವಿಧ ಅಡೋಬ್ ಆಪ್‌ಗಳಲ್ಲಿ ಬಹು ದುರ್ಬಲತೆಗಳನ್ನು ಕಂಡುಕೊಂಡಿದೆ. ಜೊತೆಗೆ ಈ ಬಗ್ಗೆ ಹೆಚ್ಚಿನ ತೀವ್ರತೆಯ ಎಚ್ಚರಿಕೆಯನ್ನು ಸಹ ನೀಡಲಾಗಿದೆ. ಸರ್ಕಾರ ನೀಡಿದ ಎಚ್ಚರಿಕೆಯಂತೆ ಇದು ಗುರಿಪಡಿಸಿದ ಸಿಸ್ಟಮ್‌ನಲ್ಲಿ ಭದ್ರತಾ ನಿರ್ಬಂಧಗಳನ್ನು ಬೈಪಾಸ್ ಮಾಡಲು ಆಕ್ರಮಣಕಾರರಿಗೆ ಅವಕಾಶ ನೀಡುತ್ತದೆ ಎಂದು ತಿಳಿಸಲಾಗಿದೆ.

ಯಾವೆಲ್ಲಾ ಅಡೋಬ್ ಆಪ್‌ಗಳಲ್ಲಿ ಸಮಸ್ಯೆ ಇದೆ?:
-ಕೋಲ್ಡ್ ಫ್ಯೂಷನ್ 2023 ಅಪ್‌ಡೇಟ್ 5 ಮತ್ತು ಹಿಂದಿನ ಆವೃತ್ತಿ
- ಕೋಲ್ಡ್ ಫ್ಯೂಷನ್ 2021 ಅಪ್‌ಡೇಟ್ 11 ಮತ್ತು ಹಿಂದಿನ ಆವೃತ್ತಿ
-ರೋಬೋಹೆಲ್ಪ್ ಸರ್ವರ್ RHS 11.4 ಮತ್ತು ಹಿಂದಿನ ಆವೃತ್ತಿ
-ಅಕ್ರೋಬ್ಯಾಟ್ DC 23.006.20360 ಮತ್ತು ಹಿಂದಿನ ಆವೃತ್ತಿ
-ಅಕ್ರೋಬ್ಯಾಟ್ ರೀಡರ್ DC 23.006.20360 ಮತ್ತು ಹಿಂದಿನ ಆವೃತ್ತಿ
-ಅಕ್ರೋಬ್ಯಾಟ್ 2020 20.005.30524 ಮತ್ತು ಹಿಂದಿನ ಆವೃತ್ತಿ

ನೀವು ಅಡೋಬ್ ಅಪ್ಲಿಕೇಶನ್ ಬಳಕೆ ಮಾಡುತ್ತೀರಾ? ಹಾಗಿದ್ರೆ ತಕ್ಷಣವೇ ಈ ಕೆಲಸ ಮಾಡಿ!..

-ಅಕ್ರೋಬ್ಯಾಟ್ ರೀಡರ್ 2020 20.005.30524 ಮತ್ತು ಹಿಂದಿನ ಆವೃತ್ತಿ
-ಅಡೋಬ್ ಇನ್ ಡಿಸೈನ್ ID18.5 ಮತ್ತು ಹಿಂದಿನ ಆವೃತ್ತಿ
-ಅಡೋಬ್ ಇನ್ ಡಿಸೈನ್ ID17.4.2 ಮತ್ತು ಹಿಂದಿನ ಆವೃತ್ತಿ
-ಫೋಟೋಶಾಪ್ 2023 24.7.1 ಮತ್ತು ಹಿಂದಿನ ಆವೃತ್ತಿ
-ಫೋಟೋಶಾಪ್ 2024 25.0 ಮತ್ತು ಹಿಂದಿನ ಆವೃತ್ತಿ
-ಅಡೋಬ್ ಬ್ರಿಡ್ಜ್ 13.0.4 ಮತ್ತು ಹಿಂದಿನ ಆವೃತ್ತಿ

ನೀವು ಅಡೋಬ್ ಅಪ್ಲಿಕೇಶನ್ ಬಳಕೆ ಮಾಡುತ್ತೀರಾ? ಹಾಗಿದ್ರೆ ತಕ್ಷಣವೇ ಈ ಕೆಲಸ ಮಾಡಿ!..

-ಅಡೋಬ್ ಬ್ರಿಡ್ಜ್ 14.0.0 ಮತ್ತು ಹಿಂದಿನ ಆವೃತ್ತಿ
-ಅಡೋಬ್ ಫ್ರೇಮ್ ಮೇಕರ್ ಪಬ್ಲಿಷಿಂಗ್ ಸರ್ವರ್ ಆವೃತ್ತಿ - 2022 ಮತ್ತು ಹಿಂದಿನ ಆವೃತ್ತಿ
-ಅಡೋಬ್ ಇನ್‌ಕಾಪಿ 18.5 ಮತ್ತು ಹಿಂದಿನ ಆವೃತ್ತಿ
-ಅಡೋಬ್ ಇನ್‌ಕಾಪಿ 17.4.2 ಮತ್ತು ಹಿಂದಿನ ಆವೃತ್ತಿ
-ಅಡೋಬ್ ಅನಿಮೇಟ್ 2023 23.0.2 ಮತ್ತು ಹಿಂದಿನ ಆವೃತ್ತಿ
-ಅಡೋಬ್ ಡೈಮೆನ್ಶನ್ 3.4.9 ಮತ್ತು ಹಿಂದಿನ ಆವೃತ್ತಿ
-ಅಡೋಬ್ ಮೀಡಿಯಾ ಎನ್‌ಕೋಡರ್ 24.0.2 ಮತ್ತು ಹಿಂದಿನ ಆವೃತ್ತಿ

ನೀವು ಅಡೋಬ್ ಅಪ್ಲಿಕೇಶನ್ ಬಳಕೆ ಮಾಡುತ್ತೀರಾ? ಹಾಗಿದ್ರೆ ತಕ್ಷಣವೇ ಈ ಕೆಲಸ ಮಾಡಿ!..

-ಅಡೋಬ್ ಮೀಡಿಯಾ ಎನ್‌ಕೋಡರ್ 23.6 ಮತ್ತು ಹಿಂದಿನ ಆವೃತ್ತಿ
-ಅಡೋಬ್ ಆಡಿಷನ್ 24.0 ಮತ್ತು ಹಿಂದಿನ ಆವೃತ್ತಿ
-ಅಡೋಬ್ ಆಡಿಷನ್ 23.6.1 ಮತ್ತು ಹಿಂದಿನ ಆವೃತ್ತಿ
-ಅಡೋಬ್ ಪ್ರೀಮಿಯರ್ ಪ್ರೊ 24.0 ಮತ್ತು ಹಿಂದಿನ ಆವೃತ್ತಿ
-ಅಡೋಬ್ ಪ್ರೀಮಿಯರ್ ಪ್ರೊ 23.6 ಮತ್ತು ಹಿಂದಿನ ಆವೃತ್ತಿ
-ಅಡೋಬ್ ಆಫ್ಟರ್ ಎಫೆಕ್ಟ್ಸ್ 24.0.2 ಮತ್ತು ಹಿಂದಿನ ಆವೃತ್ತಿ
-ಅಡೋಬ್ ಆಫ್ಟರ್ ಎಫೆಕ್ಟ್ಸ್ 23.6 ಮತ್ತು ಹಿಂದಿನ ಆವೃತ್ತಿ

ಇವುಗಳಲ್ಲಿ ಕಂಡುಬಂದಿರುವ ಸಮಸ್ಯೆ ಏನು?: CERT-In ಅಡೋಬ್ ಉತ್ಪನ್ನಗಳಲ್ಲಿ ಅನೇಕ ದುರ್ಬಲತೆಗಳನ್ನು ಉಲ್ಲೇಖಿಸಿದೆ. ಅದು ಆಕ್ರಮಣಕಾರರಿಗೆ ಭದ್ರತಾ ನಿರ್ಬಂಧಗಳನ್ನು ಬೈಪಾಸ್ ಮಾಡಲು ಹಾಗೂ ಅನಿಯಂತ್ರಿತ ಕೋಡ್ ಅನ್ನು ರಿಮೋಟ್ ಆಗಿ ಕಾರ್ಯಗತಗೊಳಿಸಲು ಜೊತೆಗೆ ಸೂಕ್ಷ್ಮ ಮಾಹಿತಿಯನ್ನು ಕದಿಯಲು ಮತ್ತು ಸಿಸ್ಟಮ್‌ನಲ್ಲಿ ಸೇವೆಯ ನಿರಾಕರಣೆ (DoS) ಷರತ್ತುಗಳನ್ನು ನಿರ್ವಹಿಸಲು ಸ್ಕ್ಯಾಮರ್‌ಗಳಿಗೆ ಸುಲಭವಾಗಿ ಅವಕಾಶ ನೀಡುತ್ತದೆ ಎಂದು ಉಲ್ಲೇಖಿಸಲಾಗಿದೆ.

ಹಾಗಿದ್ರೆ ಬಳಕೆದಾರರು ಏನು ಮಾಡಬೇಕು?: CERT-In ಈ ಅಡೋಬ್ ಆಪ್‌ಗಳ ಬಳಕೆದಾರರಿಗೆ ಸಾಧ್ಯವಾದಷ್ಟು ಬೇಗ ಸೂಕ್ತವಾದ ಪ್ಯಾಚ್ ಅನ್ನು ಅನ್ವಯಿಸಲು ಸಲಹೆ ನೀಡಿದೆ. ಅಂದರೆ ಬಳಕೆದಾರರು ತೊಂದರೆಗೆ ಒಳಗಾದ ಅಪ್ಲಿಕೇಶನ್‌ಗಳ ಇತ್ತೀಚಿನ ಆವೃತ್ತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು ಮತ್ತು ಇನ್‌ಸ್ಟಾಲ್‌ ಮಾಡಿಕೊಳ್ಳುವ ಮೂಲಕ ಈ ಸಮಸ್ಯೆಯಿಂದ ಪಾರಾಗಬಹುದಾಗಿದೆ. ಇಲ್ಲವಾದರೆ ಸ್ಕ್ಯಾಮರ್‌ಗಳು ನಿಮ್ಮ ಡಿವೈಸ್‌ಗೆ ದಾಳಿ ಮಾಡುವುದರ ಜೊತೆಗೆ ನಿಮ್ಮ ಖಾಸಗಿ ಮಾಹಿತಿಯನ್ನು ಕದಿಯುವ ಹಾಗೂ ನಿಮಗೆ ಹಣ ವಂಚನೆ ಮಾಡುವ ಕೆಲಸಕ್ಕೆ ಕೈ ಹಾಕುತ್ತಾರೆ.

13,91,457 ಸೈಬರ್ ಘಟನೆ ವರದಿ ಮಾಡಿದ CERT-In: ಈ ನಡುವೆ ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-In) ತನ್ನ ವಾರ್ಷಿಕ ವರದಿ 2022 ಅನ್ನು ಬಿಡುಗಡೆ ಮಾಡಿದ್ದು, ಕಳೆದ ವರ್ಷ 13,91,457 ಸೈಬರ್ ಘಟನೆಗಳನ್ನು ನಿರ್ವಹಿಸಿದೆ ಎಂದು ಉಲ್ಲೇಖಿಸಿದೆ. CERT-In 2021 ರಲ್ಲಿ ನಿರ್ವಹಿಸಿದ 14,02,809 ಘಟನೆಗಳಿಗಿಂತ ಸ್ವಲ್ಪ ಕಡಿಮೆಯಾಗಿದೆ.

Best Mobiles in India

English summary
Vulnerability has been reported in Adobe application and the government has issued a serious warning to all Adobe application users.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+