ಸ್ಮಾರ್ಟ್‌ಫೋನ್ ಬಳಕೆದಾರರು ಹೆಚ್ಚಿನ ಅಪಾಯದಲ್ಲಿ...ಭಾರತ ಸರ್ಕಾರದಿಂದ ಎಚ್ಚರಿಕೆ
ಸಾಮಾನ್ಯವಾಗಿ ಸ್ಮಾರ್ಟ್‌ಫೋನ್‌ನಲ್ಲಿನ ಆಪ್‌ಗಳಲ್ಲಿ ಹಲವಾರು ದೋಷಗಳು ಕಂಡುಬರುತ್ತಿದ್ದ ಹಿನ್ನೆಲೆ ಗೂಗಲ್ ಪ್ಲೇ ಸ್ಟೋರ್ ಹಾಗೂ ಇನ್ನಿತರೆ ಮೂಲಗಳಿಂದ ಬಳಕೆದಾರರಿಗೆ ಎಚ್ಚರಿಕೆ ನೀಡಲಾಗುತ್ತಿತ್ತು. ಆದರೆ ಈ ಬಾರಿ ಸರ್ಕಾರವೇ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಗಂಭೀರ ಎಚ್ಚರಿಕೆ ನೀಡಿದೆ. ಈ ಮೂಲಕ ಸ್ಮಾರ್ಟ್‌ಫೋನ್ ಬಳಕೆ ಮಾಡುವ ಎಲ್ಲರೂ ಬಹಳ ಎಚ್ಚರಿಕೆಯಿಂದ ತಮ್ಮ ಡಿವೈಸ್ ಬಳಕೆ ಮಾಡಬೇಕಿದೆ.

ಹೌದು, ನೀವೇನಾದರೂ ಸ್ಮಾರ್ಟ್‌ಫೋನ್ ಬಳಸುತ್ತಿದ್ದರೆ ಇಂದಿನಿಂದಲೇ ಎಚ್ಚರಿಕೆ ವಹಿಸಿ. ಯಾಕೆಂದರೆ ಭಾರತ ಸರ್ಕಾರ ಈ ಸಂಬಂಧ ಎಚ್ಚರಿಕೆ ನೀಡಿದ್ದು, ಅದರಂತೆ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ನ ಓಎಸ್‌ನಲ್ಲೇ ಅನೇಕ ದೋಷಗಳು ವರದಿಯಾಗಿವೆ ಎಂದು ಸಚಿವಾಲಯ ದೃಢಪಡಿಸಿದೆ. ಈ ದೋಷಗಳ ಮೂಲಕ ದಾಳಿಕೋರರು ನಿಮ್ಮ ಸೂಕ್ಷ್ಮ ಮಾಹಿತಿಯನನ್ನು ತಮ್ಮ ವಶಕ್ಕೆ ಪಡೆಯಬಹುದಾಗಿದೆ. ಹಾಗಿದ್ರೆ ಓಎಸ್‌ನಲ್ಲಿ ಕಂಡು ಬಂದ ದೋಷ ಏನು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.
ಭಾರತ ಸರ್ಕಾರ ನೀಡಿದ ಎಚ್ಚರಿಕೆ ಏನು?
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (CERT-In) ಆಂಡ್ರಾಯ್ಡ್ ಓಎಸ್‌ನಲ್ಲಿ ಅನೇಕ ದೋಷಗನ್ನು ಪತ್ತೆ ಮಾಡಿದ್ದು, ಈ ದೋಷಗಳು ಆನ್‌ಲೈನ್ ದಾಳಿಕೋರರಿಗೆ ನಿಮ್ಮ ಡಿವೈಸ್‌ನಲ್ಲಿ ಸೂಕ್ಷ್ಮ ಮಾಹಿತಿಯನ್ನು ಪ್ರವೇಶಿಸಲು ಅನುಮತಿಸಬಹುದು ಎಂದು ಎಚ್ಚರಿಕೆ ನೀಡಿದೆ.
CERT-In ವರದಿಯ ಪ್ರಕಾರ ಸ್ಮಾರ್ಟ್‌ಫೋನ್‌ನಲ್ಲಿನ ಆಂಡ್ರಾಯ್ಡ್ ಓಎಸ್‌ನ ಹಲವು ವಿಭಾಗಗಳಿಗೆ ಈ ಸಮಸ್ಯೆ ಎದುರಾಗಲಿದೆ ಎನ್ನಲಾಗಿದೆ. ಅಂದರೆ ಫ್ರೇಮ್ ವರ್ಕ್, ಸಿಸ್ಟಮ್ ಕಂಪೋನೆಟ್, ಗೂಗಲ್ ಪ್ಲೇ ಸಿಸ್ಟಮ್ ಅಪ್‌ಡೇಟ್, ಕರ್ನೆಲ್, ಮೀಡಿಯಾ ಟೆಕ್ ಕಂಪೋನೆಟ್, ಯುನಿಸಾಕ್ ಕಂಪೋನೆಟ್, ಕ್ವಾಲ್ಕಮ್ ಕಂಪೋನೆಟ್ ಹಾಗೂ ಸೋರ್ಸ್ ಕ್ವಾಲ್ಕಮ್ ಕಂಪೋನೆಟ್ ವಿಭಾಗದಲ್ಲಿ ಈ ದೋಷಗಳು ಕಂಡುಬರಲಿವೆ. ಇವೇನಾದರೂ ತಮ್ಮ ಕೆಲಸವನ್ನು ಸಡಿಲಗೊಳಿಸಿದರೆ ಹ್ಯಾಕರ್ಸ್ ಅಥವಾ ಆನ್‌ಲೈನ್ ವಂಚಕರು ಸುಲಭವಾಗಿ ಸ್ಮಾರ್ಟ್‌ಫೋನ್ ಬಳಕೆದಾರರ ಸೂಕ್ಷ್ಮ ಮಾಹಿತಿಯನ್ನು ಪಡೆಯಲಿದ್ದಾರೆ ಎಂದು ತಿಳಿಸಲಾಗಿದೆ.

ಹಳೆಯ ಓಎಸ್ ಗೆ ಎಫೆಕ್ಟ್ ಇಲ್ಲ...
ಸಾಮಾನ್ಯವಾಗಿ ಹೊಸ ಆವೃತ್ತಿಯ ಓಎಸ್‌ಗಳನ್ನು ಹೆಚ್ಚು ಭದ್ರತೆ ಇರುವ ಹಾಗೂ ಈ ಹಿಂದೆ ಇದ್ದ ಸಮಸ್ಯೆಯನ್ನು ಹೊಂದಿರುವುದಿಲ್ಲ ಎಂದು ನಂಬಲಾಗುತ್ತದೆ. ದುರಂತ ಎಂದರೆ ಈ ದೋಷಗಳು ಈಗ ಹೊಸ ಓಎಸ್‌ನಲ್ಲಿಯೇ ಕಾಣಿಸಿಕೊಂಡಿವೆ. ಈ ಮೂಲಕ ಯಾರ್ಯಾರು ಇತ್ತೀಚೆಗೆ ಹೊಸ ಸ್ಮಾರ್ಟ್‌ಫೋನ್ ಖರೀದಿ ಮಾಡಿದ್ದಾರೋ ಅವರು ಈ ಸಮಸ್ಯೆಗೆ ಗುರಿಯಾಗುವ ಸಂಭವ ಇದೆ ಎನ್ನಲಾಗಿದೆ.
ಇನ್ನು ಆಂಡ್ರಾಯ್ಡ್ 12 ರಿಂದ ಆಂಡ್ರಾಯ್ಡ್ ;ಓಎಸ್ 10, 11, 12, 12L ಮತ್ತು 13ರಲ್ಲಿ ಚಾಲನೆಯಲ್ಲಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಈ ಸಮಸ್ಯೆಗಳು ತೀವ್ರವಾಗಿ ಕಾಣಿಸಿಕೊಳ್ಳಲಿವೆ ಎಂಬ ಮಾಹಿತಿ ತಿಳಿದುಬಂದಿದೆ. ಅದರಲ್ಲೂ ಫ್ರೇಮ್ ವರ್ಕ್ ಘಟಕದಲ್ಲಿ ಹೆಚ್ಚಿನ ದುರ್ಬಲತೆ ಇದ್ದು, ಈ ಮೂಲಕ ಸಮಸ್ಯೆ ಹೆಚ್ಚಳಕ್ಕೆ ಇದು ಕಾರಣವಾಗಬಹುದು ಎಂದು ತಿಳಿಸಲಾಗಿದೆ.
70% ಮಾರುಕಟ್ಟೆ ಹೊಂದಿರುವ ಆಂಡ್ರಾಯ್ಡ್ ಓಎಸ್
ಇನ್ನು ಸ್ಯಾಮ್‌ಸಂಗ್ ಗ್ಯಾಲಕ್ಸಿ, ಒಪ್ಪೋ, ವಿವೋ, ಶಿಯೋಮಿ ಹಾಗೂ ಇನ್ನಿತರೆ ಪ್ರಮುಖ ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್ ಓಎಸ್‌ಮೂಲಕ ಕಾರ್ಯನಿರ್ವಹಿಸಲಿದ್ದು, ಈ ಸ್ಮಾರ್ಟ್‌ಫೊನ್‌ಗಳನ್ನು ಸಾಮಾನ್ಯವಾಗಿ ಬಹುಪಾಲು ಮಂದಿ ಖರೀದಿ ಮಾಡಿದ್ದಾರೆ. ಹಾಗೆಯೇ ಈ ಗೂಗಲ್ ಬೆಂಬಲಿತ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ಸುಮಾರು 70% ಮಾರುಕಟ್ಟೆ ಪಾಲನ್ನು ಹೊಂದಿರುವ ಜಗತ್ತಿನಾದ್ಯಂತ ಹೆಚ್ಚು ಬಳಸಲಾಗುವ ಮೊಬೈಲ್ ಓಎಸ್ ಆಗಿಯೂ ಗುರುತಿಸಿಕೊಂಡಿದೆ.

ಇನ್ನು ಸಾಮಾನ್ಯವಾಗಿ ಯಾವುದೇ ಬಳಕೆದಾರರು ಕೇವಲ ಕರೆ ಮಾಡಲು ಅಥವಾ ಮೆಸೆಜ್ ಕಳುಹಿಸಲು ಸ್ಮಾರ್ಟ್‌ಫೋನ್ ಬಳಕೆ ಮಾಡುವುದಿಲ್ಲ. ಬದಲಾಗಿ ಸ್ಮಾರ್ಟ್‌ಫೋನ್ ಅನ್ನು ಬ್ಯಾಂಕಿಂಗ್ ವಹಿವಾಟುಗಳು, ಫೋಟೋ ಉದ್ದೇಶಕ್ಕೆ, ಆನ್‌ಲೈನ್ ಸಭೆಗಳು ಮತ್ತು ಇನ್ನಿತರೆ ವಿಷಗಳಿಗೆ ಬಳಕೆಯಾಗುತ್ತವೆ. ಈ ಹೀಗಾಗಿ ಓಎಸ್‌ನಲ್ಲಿ ಕಂಡುಬಂದಿರುವ ಈ ಸಮಸ್ಯೆಯಿಂದ ಈ ರೀತಿಯ ಚಟುವಟಿಕೆಗಳು ಸುಲಭವಾಗಿ ಆನ್‌ಲೈನ್ ಕಳ್ಳರಿಗೆ ತಿಳಿಯುತ್ತದೆ ಎನ್ನುವುದು ಈಗ ಆತಂಕದ ವಿಷಯವಾಗಿದೆ. ಇನ್ನು ಈ ಸಮಸ್ಯೆಯಿಂದ ಈಗಾಗಲೇ ಓಎಸ್ ನಲ್ಲಿ ಭದ್ರತೆ ಹೆಚ್ಚು ಮಾಡಲಾಗುತ್ತಿದ್ದು, ತಕ್ಷಣವೇ ನಿಮ್ಮ ಫೋನ್ ಅಪ್‌ಡೇಟ್ ಆಗಿದೆಯೇ ಇಲ್ಲವೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.


Click it and Unblock the Notifications








