Co-Win ಬಗ್ಗೆ ನಿಮಗೆಲ್ಲಾ ಗೊತ್ತು U-WIN ಬಗ್ಗೆ ಗೊತ್ತಾ!?: ಇಲ್ಲಿದೆ ಸಂಪೂರ್ಣ ವಿವರ!
ಭಾರತ ಸರ್ಕಾರ ಕೊರೊನಾ ಬಂದ ನಂತರ ಡಿಜಿಟಲ್ ವ್ಯವಸ್ಥೆಯಲ್ಲಿ ತುಂಬಾ ಶ್ರೀಮಂತವಾಗುತ್ತಾ ಸಾಗುತ್ತಿದೆ. ಪ್ರತಿ ಹಂತದಲ್ಲೂ ಭಾರತ ಡಿಜಿಟಲ್ ವ್ಯವಸ್ಥೆಗೆ ತನ್ನನ್ನು ತಾನು ಒಗ್ಗಿಸಿಕೊಳ್ಳುತ್ತಿದೆ. ಇದರ ನಡುವೆ Co-Win ಅನ್ನು ಪರಿಚಯಿಸುವ ಮೂಲಕ ಕೊರೊನಾದ ವಿರುದ್ಧ ಎಲ್ಲರೂ ಸಮರ ಸಾರುವಂತೆ ಮಾಡಲಾಗಿತ್ತು. ಹಾಗೆಯೇ ಈಗ U-WIN ಬಗ್ಗೆ ಘೋಷಣೆ ಮಾಡಲಾಗಿದೆ.

ಹೌದು, Co-Win ಯೋಜನೆಯಡಿ ಜನರು ಕೊರೊನಾ ಲಸಿಕೆ ಹಾಗೂ ಕೊರೊನಾ ಸಂಬಂಧದ ಇತರೆ ಮಾಹಿತಿಯನ್ನು ಸುಲಭವಾಗಿ ಪಡೆದುಕೊಳ್ಳುವಂತೆ ಮಾಡಲಾಗಿದೆ. ಇದರ ಯಶಸ್ಸಿನ ನಂತರ ಭಾರತದ ಜನರಿಗೆ ಸುಲಭ ಮಾರ್ಗ ಕಲ್ಪಿಸಿಕೊಡುವ ಭಾಗವಾಗಿ ಈಗ U-WIN ಅನ್ನು ಆರಂಭಿಸಲಾಗುತ್ತಿದೆ. ಹಾಗಿದ್ರೆ, ಏನಿದು U-WIN ?. ಇದರಿಂದ ಭಾರತದ ಜನರಿಗೆ ಆಗುವ ಅನುಕೂಲ ಏನು? ಎಂಬ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.
ಏನಿದು U-WIN ?
ಯುನಿವರ್ಸಲ್ ಇಮ್ಯುನೈಸೇಶನ್ ಪ್ರೋಗ್ರಾಂ ಅನ್ನು ಡಿಜಿಟೈಜ್ ಮಾಡಲು ಸರ್ಕಾರವು U-WIN ಅನ್ನು ಪ್ರಾರಂಭಿಸಲು ಮುಂದಾಗಿದೆ. ಹಾಗೆಯೇ ಭಾರತದ ಯುನಿವರ್ಸಲ್ ಇಮ್ಯುನೈಸೇಶನ್ ಪ್ರೋಗ್ರಾಂ (UIP) ಅನ್ನು ಡಿಜಿಟಲೀಕರಣಗೊಳಿಸುವ ಕಾರ್ಯಕ್ರಮವನ್ನು ಪ್ರತಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಈಗಾಗಲೇ ಆರಂಭಿಸಲಾಗಿದೆ.
Co-WIN ಪ್ಲಾಟ್‌ಫಾರ್ಮ್‌ನ ಯಶಸ್ಸಿನ ನಂತರ ಈ ಬೆಳವಣಿಗೆ ಕಂಡುಬಂದಿದೆ. ಇದರಲ್ಲಿ ಕೊರೊನಾ ವ್ಯಾಕ್ಸಿನೇಷನ್‌ಗಳಿಗಾಗಿ ಎಲೆಕ್ಟ್ರಾನಿಕ್ ರಿಜಿಸ್ಟ್ರಿಯನ್ನು ನೀಡಲಾಗುತ್ತಿತ್ತು. ಅದನ್ನೇ ಈಗ ಸರ್ಕಾರವು ಪುನರಾವರ್ತಿಸಿದ್ದು, ಈ ಹೊಸ ಯೋಜನೆಗೆ U-WIN ಎಂದು ಹೆಸರು ನೀಡಲಾಗಿದೆ.

ಯಾರಿಗೆ ಲಾಭ?
ಇನ್ಮುಂದೆ ಮಕ್ಕಳು ಮತ್ತು ಗರ್ಭಿಣಿಯರು ತಮ್ಮ ವ್ಯಾಕ್ಸಿನೇಷನ್ ಕಾರ್ಡ್‌ಗಳನ್ನು ಕೊಂಡೊಯ್ಯುವುದು, ವ್ಯಾಕ್ಸಿನ್ ಹಾಕಿಸಿಕೊಳ್ಳಲು ಹೆಣಗಾಡುವುದು ತಪ್ಪುತ್ತದೆ. ಈ ರೀತಿಯ ಸಮಸ್ಯೆಯನ್ನು ನಿವಾರಿಸಲೆಂದೇ ಸರ್ಕಾರ ಶೀಘ್ರದಲ್ಲಿ ಎಲ್ಲಾ ಕಡೆ ಈ U-WIN ಅನ್ನು ಕಾರ್ಯಗತಗೊಳಿಸಲಿದೆ.
ಈ ಪ್ಲಾಟ್‌ಫಾರ್ಮ್‌ನಲ್ಲಿ ಜರುಗುವ ಕೆಲಸಗಳೇನು?
U-WIN ನಲ್ಲಿ ಎಲ್ಲಾ ಗರ್ಭಿಣಿಯರನ್ನು ನೋಂದಾಯಿಸಲು ಮತ್ತು ಲಸಿಕೆ ಹಾಕಲು, ಅವರ ಹೆರಿಗೆಯ ಫಲಿತಾಂಶವನ್ನು ದಾಖಲಿಸಲು, ಪ್ರತಿ ನವಜಾತ ಹೆರಿಗೆಯ ವಿವರವನ್ನು ನೋಂದಾಯಿಸಲು, ಜನನ ಪ್ರಮಾಣಗಳನ್ನು ದಾಖಲಿಸಲು ಹಾಗೂ ಹೆರಿಗೆಯ ನಂತರದ ಎಲ್ಲಾ ಲಸಿಕೆ ವಿವರವನ್ನು ನಿರ್ವಹಿಸಲು ಇದನ್ನು ಬಳಕೆ ಮಾಡಲಾಗುತ್ತದೆ.
ಇದಿಷ್ಟೇ ಅಲ್ಲದೆ, ರೋಗನಿರೋಧಕ ಸೇವೆಗಳು, ವ್ಯಾಕ್ಸಿನೇಷನ್ ಸ್ಥಿತಿ ನವೀಕರಿಸುವುದು, ವಿತರಣಾ ಫಲಿತಾಂಶ, RI ಸೆಷನ್‌ಗಳ ಯೋಜನೆಯನ್ನು ಬಳಕೆ ಮಾಡಿಕೊಳ್ಳಲು ಇದು ತುಂಬಾ ಸಹಕಾರಿಯಾದ ಪ್ಲಾಟ್‌ಫಾರ್ಮ್ ಆಗಿ ರೂಪುಗೊಳ್ಳಲಿದೆ. ಇದರೊಂದಿಗೆ ವ್ಯಾಕ್ಸಿನೇಷನ್‌ಗಾಗಿ ವೈಯಕ್ತಿಕವಾಗಿ ಟ್ರ್ಯಾಕಿಂಗ್ ಸೌಲಭ್ಯ ಸಹ ನೀಡಲಾಗುತ್ತದೆ. ಎಲ್ಲಾ ಗರ್ಭಿಣಿಯರು ಮತ್ತು ನವಜಾತ ಶಿಶುಗಳ ಡಿಜಿಟಲ್ ನೋಂದಣಿಗಳು ಸುಲಭವಾಗಿ ಇಲ್ಲಿ ಜರುಗಲಿದ್ದು, ಮುಂಬರುವ ಡೋಸ್‌ಗಳಿಗಾಗಿ ಜ್ಞಾಪನೆಗಳು ಸಹ ಬಳಕೆದಾರರಿಗೆ ಸಿಗಲಿದೆ.
ಹಾಗೆಯೇ, ಆರೋಗ್ಯ ಕಾರ್ಯಕರ್ತರು ಮತ್ತು ಕಾರ್ಯಕ್ರಮ ನಿರ್ವಾಹಕರು ಈ U-WIN ಮೂಲಕ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು, ಲಸಿಕೆ ವಿಷಯ ಸೇರಿದಂತೆ ಇನ್ನಿತರೆ ಮಾಹಿತಿಯನ್ನು ನೈಜ-ಸಮಯದಲ್ಲಿ ದಾಖಲು ಮಾಡಲು ಸಾಧ್ಯವಾಗುತ್ತದೆ.

ಡಿಜಿಟೈಸೇಶನ್ ಆದ ಇಮ್ಯುನೈಸೇಶನ್
ಈ ಸೇವೆಯ ಮೂಲಕ ಇನ್ಮುಂದೆ ಗರ್ಭಿಣಿಯರು ಮತ್ತು ಮಕ್ಕಳ ಲಸಿಕೆ ಸ್ವೀಕೃತಿ ಮತ್ತು ಲಸಿಕೆ ಕಾರ್ಡ್ ವಿವರವನ್ನು ABHA ID (ಆಯುಷ್ಮಾನ್ ಭಾರತ್ ಆರೋಗ್ಯ ಖಾತೆ) ಗೆ ಲಿಂಕ್ ಮಾಡಲಾಗುತ್ತದಂತೆ. ಇದರೊಂದಿಗೆ ಫಲಾನುಭವಿಗಳನ್ನು ಪತ್ತೆ ಮಾಡಲು ಹಾಗೂ ಲಸಿಕೆ ಹಾಕಲು ಎಲ್ಲಾ ರಾಜ್ಯಗಳು ಮತ್ತು ಜಿಲ್ಲೆಗಳು ಸಾಮಾನ್ಯ ಡೇಟಾಬೇಸ್ ಅನ್ನು ಬಳಕೆ ಮಾಡುವುದರಿಂದ ಈ ಕಾರ್ಯ ಇನ್ನಷ್ಟು ಸುಲಭವಾಗಲಿದೆ.
ಇದಿಷ್ಟೇ ಅಲ್ಲದೆ, ಈ ಪ್ಲಾಟ್‌ಫಾರ್ಮ್ ಮೂಲಕ ನಾಗರಿಕರು ಸಮೀಪದಲ್ಲಿ ನಡೆಯುತ್ತಿರುವ ದಿನನಿತ್ಯದ ಆರೋಗ್ಯ ಸಂಬಂಧಿ ಚಟುವಟಿಕೆಯನ್ನು ಅಥವಾ ಬುಕ್ ಅಪಾಯಿಂಟ್‌ಮೆಂಟ್‌ಗಳನ್ನು ಪರಿಶೀಲಿಸಬಹುದಾಗಿದೆ.
ಪ್ರಮುಖ ವಿಷಯ ಎಂದರೆ ಫಲಾನುಭವಿಗಳ ಟ್ರ್ಯಾಕಿಂಗ್ ಅನ್ನು ಸುಲಭಗೊಳಿಸುವ ಈ ಪ್ಲಾಟ್‌ಫಾರ್ಮ್, ಫಲಾನುಭವಿಗಳಿಗೆ ಸ್ಥಳದಲ್ಲೇ ಪ್ರಮಾಣಪತ್ರಗಳನ್ನು ಪಡೆಯುವ ಅವಕಾಶ ನೀಡುತ್ತದೆ. ಇದರೊಂದಿಗೆ ಅವರು ಬಯಸಿದಾಗ ಸೈಟ್‌ಗೆ ಭೇಟಿ ನೀಡಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಈ ಎಲ್ಲಾ ಪ್ರಮಾಣಪತ್ರಗಳನ್ನು ಡಿಜಿ-ಲಾಕರ್‌ಗಳಲ್ಲಿ ಸಂಗ್ರಹಿಸಲಾಗುತ್ತದೆ ಎನ್ನುವುದು ನಿಮ್ಮ ಗಮನಕ್ಕಿರಲಿ.


Click it and Unblock the Notifications








