Home
ಸುದ್ದಿಜಾಲ

ಆನ್‌ಲೈನ್‌ನಲ್ಲಿ ಮಹಿಳೆಯರ ಬಗ್ಗೆ ನಿಂದನಾತ್ಮಕ ಪೋಸ್ಟ್‌: ಎಚ್ಚರ

By Suneel

ಫೇಸ್‌ಬುಕ್‌, ಟ್ವಿಟರ್‌, ಇನ್‌ಸ್ಟಗ್ರಾಂನಂತಹ ಸಾಮಾಜಿಕ ತಾಣದಲ್ಲಿ ವ್ಯಕ್ತಿಗಳ ವಿರುದ್ಧ, ಮಹಿಳೆಯರ ವಿರುದ್ಧ ನಿಂದನಾತ್ಮಕ ಪೋಸ್ಟ್‌ಗಳು ಕಾಣುವುದು ಹಲವರಿಗೆ ಸಾಮಾನ್ಯವಾಗಿರಬಹುದು. ಆದ್ರೆ ಇನ್ನುಮುಂದೆ ಇಂತಹ ಪೋಸ್ಟ್‌ಗಳಿಗೆ ಅಧಿಕೃತವಾಗಿ ಕಡಿವಾಣ ಬೀಳಲಿದೆ. ಮಹಿಳೆ ಮತ್ತು ಮಕ್ಕಳ ವಿರುದ್ಧದ ನಿಂದನಾತ್ಮಕ ಮತ್ತು ಕಿರುಕುಳ ಟ್ರೋಲ್‌ಗಳು, ಪೋಸ್ಟ್‌ಗಳನ್ನು ಆನ್‌ಲೈನ್‌ನಲ್ಲಿ ಪೋಸ್ಟ್‌ ಮಾಡುವವರು ಕಾನೂನಿನ ಪ್ರಕಾರ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು 'ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ' ಸಚಿವೆ 'ಮನೇಕಾ ಗಾಂಧಿ'ಯವರು ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ಲೇಖನದ ಸ್ಲೈಡರ್‌ ಕ್ಲಿಕ್ಕಿಸಿ ಓದಿರಿ.

ನಿಮ್ಮ ಫೇಸ್‌ಬುಕ್‌ ಪ್ರೊಫೈಲ್‌ಗೆ ಯಾರು ಭೇಟಿನೀಡಿದ್ದಾರೆ ತಿಳಿಯುವುದು ಹೇಗೆ?

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವಾಲಯ

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವಾಲಯ

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವಾಲಯವಯ 'ಮಹಿಳೆ ಮತ್ತು ಮಕ್ಕಳ ವಿರುದ್ಧ ನಿಂದನಾತ್ಮಕವಾಗಿ ಆನ್‌ಲೈನ್‌ನಲ್ಲಿ ಪೋಸ್ಟ್‌ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪ್ರಕಟಣೆ ಹೊರಡಿಸಿದೆ.

ಭಾರತೀಯ ಹಾಡುಗಾರ್ತಿ 'ಸೋನಾ ಮಹಾಪಾತ್ರ

ಭಾರತೀಯ ಹಾಡುಗಾರ್ತಿ 'ಸೋನಾ ಮಹಾಪಾತ್ರ

ಇತ್ತೀಚೆಗಷ್ಟೆ ಸುಲ್ತಾನ್‌ ಸಿನಿಮಾ ಶೂಟಿಂಗ್‌ ಮುಗಿದ ವೇಳೆಯಲ್ಲಿ ಸಲ್ಮಾನ್‌'ರವರು ತಮ್ಮ ಶೂಟಿಂಗ್ ಮುಗಿದ ನಂತರದಲ್ಲಿ ಕುಸ್ತಿ ಶೂಟ್ ನಲ್ಲಿ ನನ್ನ ದೇಹ ಎಷ್ಟು ದುರ್ಬಲವಾಗಿತ್ತೆಂದರೆ ಅತ್ಯಾಚಾರಕ್ಕೆ ಗುರಿಯಾದ ಮಹಿಳೆಯ ಸ್ಥಿತಿಯಷ್ಟು ದುರ್ಬಲವಾಗಿತ್ತು. ಶೋಚನೀಯವಾಗಿತ್ತು ಎಂದು ತಮ್ಮ ಸ್ಥಿತಿಯನ್ನು ಹೇಳಿದ್ದರ ಬಗ್ಗೆ ವಿಮರ್ಶೆ ಮಾಡಿದ್ದ ಭಾರತೀಯ ಹಾಡುಗಾರ್ತಿ 'ಸೋನಾ ಮಹಾಪಾತ್ರ'ರವರು ಆನ್‌ಲೈನ್‌ ಮೂಲಕ ನಿಂದನೆ ಮತ್ತು ಟ್ರೋಲ್‌ಗಳಿಗೆ ಒಳಗಾಗಿದ್ದರು.

ಭಾರತ ಸರ್ಕಾರ

ಭಾರತ ಸರ್ಕಾರ

ಸೋನಾ ಮಹಾಪಾತ್ರ ಮತ್ತು ಇತರೆ ಹಲವು ಮಹಿಳೆಯರು ಎದುರಿಸಿದ ಕಿರುಕುಳ ಮತ್ತು ಆನ್‌ಲೈನ್‌ ಟ್ರೋಲ್‌ಗಳ ಹಿನ್ನೆಲೆಯಲ್ಲಿ ಭಾರತದ ಸರ್ಕಾರ ಮಹಿಳೆಯರ ವಿರೋಧಿ ಆನ್‌ಲೈನ್‌ ಚಟುವಟಿಕೆಗಳನ್ನು ನಿರ್ವಹಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪ್ರಕಟಿಸಿದೆ.

ಮನೆಕಾ ಗಾಂಧಿ

ಮನೆಕಾ ಗಾಂಧಿ

ನೀವು ಮಹಿಳೆಯರೇ ನಿಮ್ಮ ಬಗ್ಗೆ ಯಾರು ನಿಂದನೆ ಮತ್ತು ಟ್ರೋಲ್ ಮಾಡಿದ್ದಾರೆ ಎಂಬುದನ್ನು [email protected] ಗೆ ಮಾಹಿತಿ ನೀಡಿ ಎಂದು 'ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ' ಮನೆಕಾ ಗಾಂಧಿ ಟ್ವೀಟ್‌ ಮಾಡಿದ್ದರೆ. ಅಲ್ಲದೇ ಮನೆಕಾ'ರವರು ರಾಷ್ಟ್ರೀಯಾ ಮಹಿಳಾ ಅಯೋಗದಲ್ಲಿ ಮಹಿಳೆಯರ ನಿಂದನಾತ್ಮಕ ನಿದರ್ಶನಗಳ ಮೇಲ್ವಿಚಾರಣೆಗೆ ಪ್ರತ್ಯೇಕ ಇಲಾಖೆ ಕೇಳಿದ್ದಾರೆ.

ಮನೆಕಾ'ರವರು ವರದಿಗಾರರಿಗೆ ಹೇಳಿದ್ದೇನು?

ಮನೆಕಾ'ರವರು ವರದಿಗಾರರಿಗೆ ಹೇಳಿದ್ದೇನು?

ಮನೆಕಾ ಗಾಂಧಿ'ರವರ ಟ್ವೀಟ್‌ಗೆ ಆನ್‌ಲೈನ್‌ನಲ್ಲಿ ನಿಂದನೆಗೆ ಒಳಗಾಗಿದ್ದ 'ಸೋನಾ ಮಹಾಪಾತ್ರ' ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ. ಅವರನ್ನು ನಿಂದನೆ ಮಾಡಿದವರನ್ನು ಟ್ವಿಟರ್‌ ಅನ್ನು ಸಂಪರ್ಕಿಸಿ ವ್ಯಕ್ತಿಯನ್ನು ಸೆರೆಹಿಡಿಯಲಾಗುವುದು ಎಂದು ಹೇಳಿದ್ದಾರೆ.

 ಮಹಿಳೆಯ ವಿರುದ್ಧ ಆನ್‌ಲೈನ್‌ನಲ್ಲಿ ದಾಳಿ

ಮಹಿಳೆಯ ವಿರುದ್ಧ ಆನ್‌ಲೈನ್‌ನಲ್ಲಿ ದಾಳಿ

ಈ ಹಿಂದೆ ಮನೆಕಾ ಗಾಂಧಿ'ಯವರು ಆನ್‌ಲೈನ್‌ ಮೂಲಕ ಮಹಿಳೆಯರ ವಿರುದ್ಧ ದಾಳಿ ನಡೆಸಿದ್ದಲ್ಲಿ ಅದನ್ನು ದೌರ್ಜನ್ಯ ಎಂದು ಪರಿಗಣಿಸಲಾಗುವುದು ಎಂದು ಹೇಳಿದ್ದರು. ಅಲ್ಲದೇ ವ್ಯಕ್ತಿಯ ವಿರುದ್ಧದ ದೂರು, ಫೇಕ್‌ ಪ್ರೊಫೈಲ್‌ ಮತ್ತು ಮೋಸವನ್ನು ಪತ್ತೆ ಹಚ್ಚಲು ಅಧಿಕೃತ ವೆಬ್‌ಸೈಟ್‌ ಸಲಹೆಯನ್ನು ಕೇಳಿದ್ದರು.

ಟ್ವೀಟ್‌

ಟ್ವೀಟ್‌

ಮನೆಕಾ'ರವರ ಹೇಳಿಕೆಗೆ ಟ್ವಿಟರ್‌ನಲ್ಲಿ ಪ್ರತಿಕ್ರಿಯೆ ಹೇಗಿದೆ ಎಂಬುದನ್ನು ಚಿತ್ರದಲ್ಲಿ ನೋಡಿ.

ಟ್ವೀಟ್‌

ಟ್ವೀಟ್‌

ಮನೆಕಾ ಗಾಂಧಿ'ರವರ ಹೇಳಿಕೆಗೆ ಟ್ವಿಟರ್‌ನಲ್ಲಿ ಪ್ರತಿಕ್ರಿಯೆ ಹೇಗಿದೆ ಎಂಬುದನ್ನು ಚಿತ್ರದಲ್ಲಿ ನೋಡಿ.

ಟ್ವೀಟ್‌

ಟ್ವೀಟ್‌

ಮನೆಕಾ ಗಾಂಧಿ'ರವರ ಹೇಳಿಕೆಗೆ ಟ್ವಿಟರ್‌ನಲ್ಲಿ ಪ್ರತಿಕ್ರಿಯೆ ಹೇಗಿದೆ ಎಂಬುದನ್ನು ಚಿತ್ರದಲ್ಲಿ ನೋಡಿ.

ಗಿಜ್‌ಬಾಟ್‌

ಗಿಜ್‌ಬಾಟ್‌

ಓದಿರಿ ಗಿಜ್‌ಬಾಟ್‌ ಲೇಖನಗಳು

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
Indian government steps up efforts to check online trolling against women.Read more about this in kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+