Subscribe to Gizbot

ನಿಮ್ಮ ಫೇಸ್‌ಬುಕ್‌ ಪ್ರೊಫೈಲ್‌ಗೆ ಯಾರು ಭೇಟಿನೀಡಿದ್ದಾರೆ ತಿಳಿಯುವುದು ಹೇಗೆ?

Written By:

ಸಾಮಾಜಿಕ ತಾಣಗಳು ಮತ್ತು ಸ್ಮಾರ್ಟ್‌ಫೋನ್‌ ಯುಗದಲ್ಲಿರುವ ಎಲ್ಲರಿಗೂ ಕುತೂಹಲ ಅನ್ನೋದು ಮುಂಜಾನೆ ಬೆಡ್‌ ಮೇಲಿನಿಂದ ಹೇಳುವಾಗಲೇ ನೆನ್ನೆ ರಾತ್ರಿ ತಡವಾಗಿ ಯಾರ್‌ ನನಗೆ ವಾಟ್ಸಾಪ್‌ ಮೆಸೇಜ್‌ ಮಾಡಿರಬಹುದು ಎಂಬುದನ್ನು ಚೆಕ್‌ ಮಾಡುವುದರಿಂದ ಪ್ರಾರಂಭವಾಗುತ್ತದೆ. ನಂತರ ಫೇಸ್‌ಬುಕ್‌ ಲೈಕ್‌ಗಳು, ವಿಮರ್ಶೆಗಳು, ಮೆಸೇಜ್‌ಗಳನ್ನು ಚೆಕ್‌ ಮಾಡೋದು. ಆಮೇಲೆ ಇಸ್ಟಗ್ರಾಂ, ಟ್ವಿಟರ್‌ ಇದ್ರೆ ಅದನ್ನು ಚೆಕ್‌ ಮಾಡಿ ಸ್ನೇಹಿತರಿಗೆ ಗುಡ್‌ ಮಾರ್ನಿಂಗ್‌ ಹೇಳುವುದು. ಒಟ್ಟಿನಲ್ಲಿ ಮನೆಯಲ್ಲಿರುವವರನ್ನೇ ಕೊನೆಯಲ್ಲಿ ನೋಡುವುದು, ಅವರೊಂದಿಗೆ ಮಾತನಾಡುವುದು.

ಅಂದಹಾಗೆ ಪ್ರಪಂಚದ ಸಾಮಾಜಿಕ ತಾಣ ದೈತ್ಯ ಫೇಸ್‌ಬುಕ್‌ ಎಲ್ಲರ ಅಚ್ಚುಮೆಚ್ಚಿನ, ಅತಿಹೆಚ್ಚು ಬಳಕೆದಾರರನ್ನು ಹೊಂದಿರುವ ಸೋಶಿಯಲ್ ಮೀಡಿಯಾ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಫೇಸ್‌ಬುಕ್ ಬಳಕೆದಾರ ತನ್ನ ಪ್ರೊಫೈಲ್‌ ಅನ್ನು ಯಾರು ನೋಡಬಹುದು ಎಂದು ಸೆಟ್ಟಿಂಗ್‌ ಮೂಲಕ ವ್ಯವಸ್ಥೆ ಮಾಡಬಹುದು. ಆದರೆ ಇತ್ತೀಚೆಗೆ ಹಲವು ಬಳಕೆದಾರರಿಗೆ ತನ್ನ ಫೇಸ್‌ಬುಕ್‌ ಪ್ರೊಫೈಲ್‌ ಅನ್ನು ಯಾರು ಯಾರು ನೋಡಿರಬಹುದು ಎಂದು ತಿಳಿಯುವ ಕುತೂಹಲ ಹೆಚ್ಚಾಗಿದೆ. ಆದರೆ ಅದನ್ನು ತಿಳಿಯುವುದು ಹೇಗೆ ಎಂದು ಹಲವರು ಪ್ರಶ್ನೆ ಮಾಡಿದ್ದರು.

ಆದ್ದರಿಂದ ಇಂದಿನ ಲೇಖನದಲ್ಲಿ ಫೇಸ್‌ಬುಕ್‌ ಬಳಕೆದಾರರು ತಮ್ಮ ಪ್ರೊಫೈಲ್‌ ಅನ್ನು ಯಾರು ಯಾರು ನೋಡಿದ್ದಾರೆ ಎಂದು ತಿಳಿಯುವುದು ಹೇಗೆ ಎಂಬುದನ್ನು ತಿಳಿಸುತ್ತಿದ್ದೇವೆ. ಮಾಹಿತಿಗಾಗಿ ಸ್ಲೈಡರ್‌ ಕ್ಲಿಕ್ಕಿಸಿ ಓದಿರಿ.

ಶಾಶ್ವತವಾಗಿ ಫೇಸ್‌ಬುಕ್‌ ಖಾತೆ ಡಿಲೀಟ್‌ ಮಾಡುವುದು ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹಂತ 1

ಹಂತ 1

ಫೇಸ್‌ಬುಕ್ ಖಾತೆಗೆ ಲಾಗಿನ್‌ ಆಗಿ, ನಂತರ ನಿಮ್ಮ ಪ್ರೊಫೈಲ್‌ ಅನ್ನು ಒಪನ್‌ ಮಾಡಿ.

ಹಂತ 2

ಹಂತ 2

ಫೇಸ್‌ಬುಕ್‌ ಪ್ರೊಫೈಲ್‌ ಪೇಜ್‌ ಒಪನ್‌ ಆದ ನಂತರ ಪೇಜ್‌ನಲ್ಲಿಯೇ ಮೌಸ್‌ ಪಾಯಿಂಟ್‌ ಇಟ್ಟು ಬಲಭಾಗದ ಬಟನ್ ಕ್ಲಿಕ್‌ ಮಾಡಿ "View page Source" ಆಯ್ಕೆ ಮಾಡಿ. ಈ ಚಿತ್ರ ನೋಡಿ ತಿಳಿಯಿರಿ.

 ಹಂತ 3

ಹಂತ 3

ಈ ಹಂತದಲ್ಲಿ CTRL+F ಪ್ರೆಸ್‌ ಮಾಡಿ 'initialchat' ಎಂದು ಟೈಪಿಸಿ ಎಂಟರ್‌ ಬಟನ್‌ ಪ್ರೆಸ್‌ ಮಾಡಿ. ಚಿತ್ರ ನೋಡಿ ಸಹ ತಿಳಿಯಿರಿ.

ಹಂತ 4

ಹಂತ 4

ಚಿತ್ರದಲ್ಲಿರುವಂತೆ ನೀವು ಟೈಪಿಸಿದ ಪದ ಸಿಗುತ್ತದೆ ಮತ್ತು ಹೆಚ್ಚಿನ ಫೇಸ್‌ಬುಕ್ ಐಡಿಗಳ ಪಟ್ಟಿ ತೆರೆದುಕೊಳ್ಳುತ್ತದೆ. ಚಿತ್ರ ನೋಡಿರಿ.

ಹಂತ 5

ಹಂತ 5

ಉದಾಹರಣೆಗೆ (100009387769920) ಫೇಸ್‌ಬುಕ್‌ ಐಡಿಗಳನ್ನು ಕಾಪಿ ಮಾಡಿ ಮಾಡಿ ಅದನ್ನು ಬ್ರೌಸರ್‌ನ ಯುಆರ್‌ಎಲ್‌ ನಲ್ಲಿ www.facebook.com/100009387769920 ಎಂದು ಟೈಪಿಸಿ ಎಂಟರ್‌ ಮಾಡಿ.

ಹಂತ 6

ಹಂತ 6

ಫೇಸ್‌ಬುಕ್‌ ಐಡಿ ಎಂಟರ್‌ ಮಾಡಿದ ನಂತರ ನಿಮ್ಮ ಪ್ರೊಫೈಲ್‌ಗೆ ಇತ್ತೀಚೆಗೆ ಭೇಟಿ ನೀಡಿರುವ ಸ್ನೇಹಿತರ ಪ್ರೊಫೈಲ್‌ ಒಪನ್‌ ಆಗುತ್ತದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಬ್ರಿಟಿಷ್‌ ಮಹಿಳೆಯ ಖಾತೆಯನ್ನು ಬ್ಯಾನ್ ಮಾಡಿದ ಫೇಸ್‌ಬುಕ್; ಹೆಸರು ISIS

'ಫೇಸ್‌ಬುಕ್‌ ಪೇಜ್‌' ಕ್ರಿಯೇಟ್ ಮಾಡುವುದು ಹೇಗೆ?

ಓದಿರಿ ಗಿಜ್‌ಬಾಟ್‌ ಲೇಖನಗಳು

ಓದಿರಿ ಗಿಜ್‌ಬಾಟ್‌ ಲೇಖನಗಳು

ಫೇಸ್‌ಬುಕ್‌ ಗಿಜ್‌ಬಾಟ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
How To Know Who has visited your Facebook profile? Read More about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot