Home
ಸುದ್ದಿಜಾಲ

Samsung: ಭಾರತ ಸರ್ಕಾರದಿಂದ ಈ ಸ್ಯಾಮ್‌ಸಂಗ್‌ ಫೋನ್‌ ಬಳಕೆದಾರರಿಗೆ ಎಚ್ಚರಿಕೆ: ಭಾರೀ ಅಪಾಯ ಎಂದ ಅಧಿಕಾರಿಗಳು

ಸ್ಯಾಮ್‌ಸಂಗ್‌ ಫೋನ್‌ಗಳಿಗೆ (Samsung phone) ಭಾರತದಲ್ಲಿ ಭರ್ಜರಿ ಬೇಡಿಕೆ ಇದೆ. ಅದರಲ್ಲೂ ನಮ್ಮ ದೇಶ ಈ ಫೋನ್‌ಗಳಿಗೆ ದೊಡ್ಡ ಮಾರುಕಟ್ಟೆಯಾಗಿದೆ. ಈ ನಡುವೆ ಸ್ಯಾಮ್‌ಸಂಗ್‌ ಫೋನ್ ಬಳಕೆದಾರರು ಬೆಚ್ಚಿ ಬೀಳುವ ಮಾಹಿತಿಯೊಂದನ್ನು ಭಾರತ ಸರ್ಕಾರ ನೀಡಿದೆ.

ಹೌದು, ಇದೀಗ ಭಾರತ ಸರ್ಕಾರ (Government of India) ಸ್ಯಾಮ್‌ಸಂಗ್‌ ಬಳಕೆದಾರರಿಗೆ ಭದ್ರತಾ ವಿಚಾರಕ್ಕೆ ಸಂಬಂಧಿಸಿದಂತೆ ಎಚ್ಚರಿಕೆ ನೀಡಿದ್ದು, ತಕ್ಷಣವೇ ನವೀಕರಣ ಮಾಡಿ ಎಂದು ತಿಳಿಸಿದೆ. ನೀವೇನಾದರೂ ಈಗ ನವೀಕರಣ (update) ಮಾಡಲಿಲ್ಲ ಎಂದರೆ ಖಂಡಿತಾ ನಿಮ್ಮ ಡೇಟಾ ಸ್ಕ್ಯಾಮರ್‌ಗಳಿಗೆ ಆಹಾರವಾಗಲಿದೆ. ಹಾಗಿದ್ರೆ, ಯಾವ ಫೋನ್‌ ಬಳಕೆದಾರರು ಈ ಕೆಲಸವನ್ನು ಮಾಡಬೇಕು?, ಈ ಫೋನ್‌ಗಳಲ್ಲಿ ಕಂಡು ಬಂದ ದೋಷಗಳು ಏನು ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಭಾರತ ಸರ್ಕಾರದಿಂದ ಈ ಸ್ಯಾಮ್‌ಸಂಗ್‌ ಫೋನ್‌ ಬಳಕೆದಾರರಿಗೆ ಎಚ್ಚರಿಕೆ...

ತುರ್ತು ನವೀಕರಣದ ಎಚ್ಚರಿಕೆ: ಭಾರತ ಸರ್ಕಾರವು ಸ್ಯಾಮ್‌ಸಂಗ್ ಮೊಬೈಲ್ ಫೋನ್ ಬಳಕೆದಾರರಿಗೆ ಬಹು ದುರ್ಬಲತೆಗಳ ಬಗ್ಗೆ ಹೆಚ್ಚಿನ ಅಪಾಯದ ಎಚ್ಚರಿಕೆ ನೀಡಿದೆ. ಈ ದುರ್ಬಲತೆಗಳು ಗಮನಾರ್ಹ ಬೆದರಿಕೆಗಳನ್ನು ಉಂಟುಮಾಡುತ್ತವೆ ಎಂದು ತಿಳಿಸಲಾಗಿದ್ದು, ರಕ್ಷಣಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲು ಬಳಕೆದಾರರಿಗೆ ಇದೀಗ ಸಲಹೆ ನೀಡಲಾಗಿದೆ. ಅಂದರೆ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ ಆಫ್ ಇಂಡಿಯಾ (CERT-In) ಮೂಲಕ ಈ ಫೋನ್ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ.

CERT-In ಇದೀಗ ಈ ಸಮಸ್ಯೆಯನ್ನು Vulnerability Note CIVN-2023-0360 ಎಂದು ಲೇಬಲ್ ಮಾಡಿದೆ. ಸ್ಯಾಮ್‌ಸಂಗ್ ಮೊಬೈಲ್‌ ಆಂಡ್ರಾಯ್ಡ್‌ ಆವೃತ್ತಿಗಳು 11, 12, 13, ಮತ್ತು 14 ಮೇಲೆ ಪರಿಣಾಮ ಬೀರುವ ನಿರ್ಣಾಯಕ ಭದ್ರತಾ ಸಮಸ್ಯೆಗಳನ್ನು ಈ ವೇಳೆ ಉಲ್ಲೇಖ ಮಾಡಲಾಗಿದ್ದು, ಈ ದುರ್ಬಲತೆಗಳು ಮುಂದಿನ ದಿನಗಳಲ್ಲಿ ಅಂದರೆ ಸಂಭಾವ್ಯ ಸಮಸ್ಯೆಗಳನ್ನು ಉಂಟು ಮಾಡಬಹುದು ಎಂದು ತಿಳಿಸಲಾಗಿದೆ.

ಭಾರತ ಸರ್ಕಾರದಿಂದ ಈ ಸ್ಯಾಮ್‌ಸಂಗ್‌ ಫೋನ್‌ ಬಳಕೆದಾರರಿಗೆ ಎಚ್ಚರಿಕೆ...

ದಾಳಿಕೋರರಿಗೆ ಭದ್ರತಾ ನಿರ್ಬಂಧಗಳನ್ನು ಬೈಪಾಸ್ ಮಾಡಲು, ಸೂಕ್ಷ್ಮ ಮಾಹಿತಿಯನ್ನು ಪ್ರವೇಶಿಸಲು ಮತ್ತು ಉದ್ದೇಶಿತ ವ್ಯವಸ್ಥೆಗಳಲ್ಲಿ ಅನಿಯಂತ್ರಿತ ಕೋಡ್ ಅನ್ನು ಕಾರ್ಯಗತಗೊಳಿಸಲು ಈ ದೀಷ ಸಹಾಯ ಆಗುತ್ತದೆ ಎಂದು ಎಚ್ಚರಿಸಲಾಗಿದೆ. ಈ ದುರ್ಬಲತೆಗಳು ವೈವಿಧ್ಯಮಯವಾಗಿದ್ದು, ಸ್ಯಾಮ್‌ಸಂಗ್‌ನ ವಿವಿಧ ಘಟಕಗಳ ಮೇಲೆ ಪರಿಣಾಮ ಬೀರುತ್ತವೆ ಎಂದು ಸಂಶೋಧಕರು ಮಾಹಿತಿ ನೀಡಿದ್ದಾರೆ.

ಫೇಸಿಯಾಲ್ ರೆಕಗ್ನಿಷನ್ ಸಾಫ್ಟ್‌ವೇರ್‌ನಲ್ಲಿ ಓವರ್‌ಫ್ಲೋ ದೋಷ, ಎಆರ್‌ ಎಮೋಜಿ ಆಪ್‌ನೊಂದಿಗೆ ದೃಢೀಕರಣ ಸಮಸ್ಯೆ, ನಾಕ್ಸ್ ಭದ್ರತಾ ಸಾಫ್ಟ್‌ವೇರ್‌ನಲ್ಲಿ ದೋಷಗಳ ತಪ್ಪಾದ ನಿರ್ವಹಣೆ, ವಿವಿಧ ಸಿಸ್ಟಮ್ ಘಟಕಗಳಲ್ಲಿ ಸ್ಟೋರೇಜ್‌ ದೋಷಗಳು, ಸಾಫ್ಟ್‌ಸಿಮ್ಡ್ ಲೈಬ್ರರಿಯಲ್ಲಿ ತಪ್ಪಾದ ಡೇಟಾ ಸೈಜ್‌ ಪರಿಶೀಲನೆ, ಸ್ಮಾರ್ಟ್ ಕ್ಲಿಪ್ ಆಪ್‌ನಲ್ಲಿ ಅಮಾನ್ಯವಾದ ಬಳಕೆದಾರ ಇನ್‌ಪುಟ್‌,ಕೆಲವು ಆಪ್‌ಗಳಲ್ಲಿ ಸಂವಹನಗಳನ್ನು ಹೈಜಾಕ್ ಮಾಡುವುದು ಸೇರಿದಂತೆ ಅನೇಕ ಸಮಸ್ಯೆಗಳು ಇಲ್ಲಿ ಎದುರಾಗುತ್ತವೆ ಎಂದು ಉಲ್ಲೇಖಿಸಲಾಗಿದೆ.

ಯಾವೆಲ್ಲಾ ಡಿವೈಸ್‌ಗಳು ಅಪಾಯದಲ್ಲಿವೆ?: ಇತ್ತೀಚಿನ ಕಂಡುಬಂದ ದೋಷಗಳು ಆಂಡ್ರಾಯ್ಡ್‌ ಆವೃತ್ತಿ 11, 12, 13, ಮತ್ತು 14 ಮೇಲೆ ಪರಿಣಾಮ ಬೀರುತ್ತವೆ ಎಂದು ತಿಳಿಸಲಾಗಿದೆ. ಈ ವಿಭಾಗದಲ್ಲಿ ಗ್ಯಾಲಕ್ಸಿ S23 ಸರಣಿ, ಗ್ಯಾಲಕ್ಸಿ ಫ್ಲಿಪ್ 5 ಮತ್ತು ಇತರ ಸ್ಯಾಮ್‌ಸಂಗ್‌ ಡಿವೈಸ್‌ಗಳಿವೆ. ನೀವು ಏನಾದರೂ ಮೇಲೆ ತಿಳಿಸಿದ ಆವೃತ್ತಿಯಲ್ಲಿ ರನ್‌ ಆಗುವ ಸ್ಯಾಮ್‌ಸಂಗ್‌ ಡಿವೈಸ್‌ ಬಳಕೆ ಮಾಡುತ್ತಿದ್ದರೆ ತಕ್ಷಣವೇ ಅಪ್‌ಡೇಟ್‌ ಮಾಡಿ.

ನಿಮ್ಮ ಡಿವೈಸ್‌ ಸುರಕ್ಷತೆಯಿಂದ ಇರಲು ಏನು ಮಾಡಬೇಕು?:
ಅಪ್‌ಡೇಟ್‌ ಮಾಡಿ: ಬಳಕೆದಾರರು ಸ್ಯಾಮ್‌ಸಂಗ್‌ ನೀಡುವ ಭದ್ರತಾ ನವೀಕರಣಗಳನ್ನು ತ್ವರಿತವಾಗಿ ಅನ್ವಯಿಸಬೇಕು. ಇದಕ್ಕಾಗಿ ನೀವು ಸೆಟ್ಟಿಂಗ್ಸ್‌ > ಸಾಫ್ಟ್‌ವೇರ್ ಅಪ್‌ಡೇಟ್ > ಡೌನ್‌ಲೋಡ್ ಮತ್ತು ಇನ್‌ಸ್ಟಾಲ್ ಮಾಡುವ ಮೂಲಕ ನಿಮ್ಮ ಡಿವೈಸ್‌ ಅನ್ನು ನವೀಕರಣ ಮಾಡಬಹುದು. ಇದರಿಂದ ಏನೇ ಸಮಸ್ಯೆಗಳಿದ್ದರೆ ಸರಿಯಾಗುತ್ತವೆ.

ಭಾರತ ಸರ್ಕಾರದಿಂದ ಈ ಸ್ಯಾಮ್‌ಸಂಗ್‌ ಫೋನ್‌ ಬಳಕೆದಾರರಿಗೆ ಎಚ್ಚರಿಕೆ...

ಎಚ್ಚರಿಕೆಯಿಂದ ಫೋನ್‌ ಬಳಕೆ ಮಾಡಿ: ಅಪ್‌ಡೇಟ್ ಅನ್ವಯಿಸುವವರೆಗೆ ನೀವು ನಿಮ್ಮ ಪೀಡಿತ ಸ್ಮಾರ್ಟ್‌ಫೋನ್‌ ಅನ್ನು ಬಳಕೆ ಮಾಡುವಾಗ ವಿಶ್ವಾಸಾರ್ಹವಲ್ಲದ ಮೂಲಗಳು ಅಥವಾ ಅಜ್ಞಾತ ಆಪ್‌ಗಳನ್ನು ಬಳಕೆ ಮಾಡುವಾಗ ಎಚ್ಚರಿಕೆ ವಹಿಸಿ. ಜೊತೆಗೆ ಬ್ಯಾಂಕಿಂಗ್‌ ವ್ಯವಹಾರವನ್ನು ಆದಷ್ಟು ಕಡಿಮೆ ಮಾಡಿ.

ಆಪ್‌ಗಳನ್ನೂ ಅಪ್‌ಡೇಟ್‌ ಮಾಡಿ: ನಿಮ್ಮ ಫೋನ್‌ನಲ್ಲಿ ಇರುವ ಆಪ್‌ಗಳನ್ನು ದೀರ್ಘಕಾಲದ ವರೆಗೆ ಅಪ್‌ಡೇಟ್‌ ಮಾಡದೆ ಇದ್ದರೂ ನಿಮ್ಮ ಫೋನ್‌ ಸಮಸ್ಯೆಗಳಿಗೆ ಸಿಲುಕುತ್ತದೆ. ಅಪ್‌ಡೇಟ್‌ ಮಾಡಿಲ್ಲದ ಆಪ್‌ಗಳನ್ನು ಸ್ಕ್ಯಾಮರ್‌ಗಳು ದುರುಪಯೋಗ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ನೀವು ಗೂಗಲ್‌ ಪ್ಲೇ ಸ್ಟೋರ್‌ಗೆ ಹೋಗಿ ಆಪ್‌ಗಳನ್ನು ಅಪ್‌ಡೇಟ್ ಮಾಡಬಹುದು.

Best Mobiles in India

English summary
Indian government has issued a high-risk warning to Samsung Galaxy mobile phone users about multiple vulnerabilities. These vulnerabilities pose significant threats.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+