Home
ಸುದ್ದಿಜಾಲ

ಭಾರತದಲ್ಲಿನ ಎಲ್ಲಾ ಆಂಡ್ರಾಯ್ಡ್‌ ಫೋನ್‌ ಬಳಕೆದಾರರಿಗೆ ಸಂಕಷ್ಟ, ಸರ್ಕಾರದ ಗಂಭೀರ ಎಚ್ಚರಿಕೆ ಏನು?

ಭಾರತದಲ್ಲಿ ಆಂಡ್ರಾಯ್ಡ್‌ ಫೋನ್‌ (Android phones) ಬಳಕೆದಾರರ ಸಂಖ್ಯೆ ಹೆಚ್ಚಾಗಿಯೇ ಇದೆ. ಈ ನಡುವೆ ಪ್ರಮುಖ ಕಂಪೆನಿಗಳು ವಿವಿಧ ಸುಧಾರಿತ ಫೀಚರ್ಸ್‌ ನೊಂದಿಗೆ ಹೊಸ ಹೊಸ ಫೋನ್‌ ಗಳನ್ನು ಅನಾವರಣ ಮಾಡಿಕೊಂಡು ಬರುತ್ತಲೇ ಇದ್ದು, ಇವುಗಳನ್ನು ಖರೀದಿ ಮಾಡುವವರ ಸಂಖ್ಯೆ ಸಹ ಹೆಚ್ಚುತ್ತಲೇ ಇದೆ. ಆದರೆ, ಈ ನಡುವೆ ಶಾಕಿಂಗ್‌ ಮಾಹಿತಿಯೊಂದು ಹೊರಬಿದ್ದಿದೆ.

ಹೌದು, ಭಾರತದಲ್ಲಿ ಲಕ್ಷಾಂತರ ಬಳಕೆದಾರರ ಮೇಲೆ ಪರಿಣಾಮ ಬೀರುವ ಆಂಡ್ರಾಯ್ಡ್‌ ಫೋನ್‌ಗಳಲ್ಲಿ ಹೆಚ್ಚಿನ ಅಪಾಯದ ದೋಷಗಳನ್ನು ಸರ್ಕಾರ ಪತ್ತೆ ಮಾಡಿದೆ. ಹಾಗೆಯೇ ಪತ್ತೆ ಮಾಡಲಾದ ಆಂಡ್ರಾಯ್ಡ್‌ ಅಪಾಯಗಳು ಭಾರತದಲ್ಲಿನ ಲಕ್ಷಾಂತರ ಬಳಕೆದಾರರ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎಂದು ತಿಳಿಸಲಾಗಿದೆ. ಹಾಗಿದ್ರೆ, ಏನಿದು ಅಪಾಯ?, ಆಂಡ್ರಾಯ್ಡ್‌ ಬಳಕೆದಾರರು ಏನು ಮಾಡಬೇಕು ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

ಭಾರತದಲ್ಲಿನ ಎಲ್ಲಾ ಆಂಡ್ರಾಯ್ಡ್‌ ಫೋನ್‌ ಬಳಕೆದಾರರಿಗೆ ಸಂಕಷ್ಟ...

ಭದ್ರತಾ ಅಪಾಯದ ಎಚ್ಚರಿಕೆ: ERT-In ಭಾರತದಲ್ಲಿನ ಆಂಡ್ರಾಯ್ಡ್‌ ಫೋನ್ ಬಳಕೆದಾರರಿಗೆ ಈ ದೊಡ್ಡ ಭದ್ರತಾ ಅಪಾಯದ ಎಚ್ಚರಿಕೆಯನ್ನು ನೀಡಲಾಗಿದ್ದು, ಈ ದೋಷಗಳು ಕಡಿಮೆಯಾಗದಿದ್ದರೆ ದಾಳಿಕೋರರು ಫೋನ್‌ಗೆ ಸುಲಭ ಪ್ರವೇಶ ಪಡೆಯಲಿದ್ದಾರೆ ಎಂದು ತಿಳಿಸಲಾಗಿದೆ.ಈ ಸಂಬಂಧ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಮಾಹಿತಿಗಳನ್ನು ಉಲ್ಲೇಖ ಮಾಡಿದೆ. ಇದರೊಂದಿಗೆ ಪ್ಲೇ ಸ್ಟೋರ್ ಮೂಲಕ ನೇರವಾಗಿ ಆಪ್‌ಗಳನ್ನು ನವೀಕರಿಸುವುದೊಂದೇ ಪರಿಹಾರವಾಗಿದೆ ಎಂದು ಹೇಳಲಾಗಿದೆ.

ಇನ್ನು ಆಂಡ್ರಾಯ್ಡ್ 11, ಆಂಡ್ರಾಯ್ಡ್ 12 ಮತ್ತು ಆಂಡ್ರಾಯ್ಡ್ 13 ನಲ್ಲಿ ಕಾರ್ಯನಿರ್ವಹಿಸುವ ಸ್ಮಾರ್ಟ್‌ಫೋನ್‌ಗಳನ್ನು ಹೊಂದಿರುವ ಬಳಕೆದಾರರ ಮೇಲೆ ಈ ದೋಷಗಳು ಹೆಚ್ಚಾಗಿ ಕಾಣಿಸಿಕೊಂಡಿವೆ ಎಂದು ತಿಳಿದುಬಂದಿದೆ. ಜೊತೆಗೆ ಈ ಅಪಾಯದ ಪ್ರಮಾಣವು ದೊಡ್ಡದಾಗಿರಬಹುದು ಎಂದೂ ಸಹ ಹೇಳಲಾಗುತ್ತಿದೆ. ಹಾಗೆಯೇ ಆಂಡ್ರಾಯ್ಡ್‌ 12L-ಆಧಾರಿತ ಓಎಸ್‌ ಜೊತೆಗೆ ಟ್ಯಾಬ್ಲೆಟ್‌ಗಳು ಮತ್ತು ಫೋಲ್ಡಬಲ್‌ಗಳನ್ನು ಬಳಸುವ ಬಳಕೆದಾರರು ಸಹ ಅಪಾಯದಲ್ಲಿದ್ದಾರೆ ಎಂದು ಗಂಭೀರ ಸಂದೇಶ ನೀಡಲಾಗಿದೆ.

CERT ಎಚ್ಚರಿಕೆಯ ಸಂದೇಶದಲ್ಲಿ ಏನಿದೆ?: 'ಆಂಡ್ರಾಯ್ಡ್‌ನಲ್ಲಿ ಹಲವಾರು ದುರ್ಬಲತೆಗಳು ವರದಿಯಾಗಿದೆ, ಇದು ಆಕ್ರಮಣಕಾರರಿಗೆ ಉನ್ನತ ಸವಲತ್ತುಗಳನ್ನು ಪಡೆಯಲು, ಸೂಕ್ಷ್ಮ ಮಾಹಿತಿಯನ್ನು ಪಡೆಯಲು, ರಿಮೋಟ್ ಕೋಡ್ ಅನ್ನು ಕಾರ್ಯಗತಗೊಳಿಸಲು ಅಥವಾ ಸೇವಾ ಪರಿಸ್ಥಿತಿಗಳ ನಿರಾಕರಣೆಗೆ ಕಾರಣವಾಗಬಹುದು' ಎಂದು ತಿಳಿಸಲಾಗಿದೆ.

ಏನೆಲ್ಲಾ ದೋಷಗಳಿವೆ?: ಫ್ರೇಮ್‌ವರ್ಕ್, ಸಿಸ್ಟಮ್, ಗೂಗಲ್ ಪ್ಲೇ ಸಿಸ್ಟಮ್, ಕ್ವಾಲ್ಕಾಮ್ ಕಾಂಪೊನೆಂಟ್‌ಗಳು ಮತ್ತು ಕ್ವಾಲ್ಕಾಮ್ ಕ್ಲೋಸ್ಡ್-ಸೋರ್ಸ್ ಘಟಕಗಳಲ್ಲಿನ ದೋಷಗಳಿಂದಾಗಿ ಆಂಡ್ರಾಯ್ಡ್‌ನಲ್ಲಿ ಬಹು ದೋಷಗಳು ಈಗ ಸ್ಕ್ಯಾಮರ್‌ಗಳಿಗೆ ಸುಲಭ ಹಾದಿ ಮಾಡಿಕೊಡಲಿವೆ ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಈ ದುರ್ಬಲತೆಗಳನ್ನೇ ಬಳಕೆ ಮಾಡಿಕೊಂಡು ಆಕ್ರಮಣಕಾರರು ತಮಗೆ ಬೇಕಾದದ್ದನ್ನು ಈಡೇರಿಸಿಕೊಳ್ಳುತ್ತಾರೆ ಎಂದು ಹೇಳಲಾಗಿದೆ.

ಯಾರಿಗೆಲ್ಲಾ ಸಮಸ್ಯೆ: ಮೊದಲೇ ತಿಳಿಸಿದಂತೆ ಆಂಡ್ರಾಯ್ಡ್ 11, ಆಂಡ್ರಾಯ್ಡ್ 12 ಮತ್ತು ಆಂಡ್ರಾಯ್ಡ್ 13 ಓಎಸ್‌ ಹೊಂದಿರುವ ಎಲ್ಲಾ ಫೋನ್‌ಬಳಕೆದಾರರು ಈ ಸಮಸ್ಯೆಗಳಿಂದ ಹೊರತಲ್ಲ. ಹೀಗಾಗಿ ಈ ಅಪಾಯವು ಭಾರತದಲ್ಲಿನ ಮಿಲಿಯನ್‌ಗಟ್ಟಲೆ ಬಳಕೆದಾರರ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎನ್ನಲಾಗಿದೆ. ಕಾರಣ ದೇಶವು ದೊಡ್ಡ ಆಂಡ್ರಾಯ್ಡ್ ಬಳಕೆದಾರರನ್ನು ಹೊಂದಿದೆ. ಸ್ಟ್ಯಾಟಿಸ್ಟಾ ಪ್ರಕಾರ ಆಂಡ್ರಾಯ್ಡ್ 2022 ರಲ್ಲಿ ಭಾರತದಲ್ಲಿ ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಮಾರುಕಟ್ಟೆಯಲ್ಲಿ ಶೇಕಡಾ 95.26 ರಷ್ಟು ಪಾಲನ್ನು ಹೊಂದಿತ್ತು.

ಹಾಗಿದ್ರೆ ಇದರಿಂದ ಬಚಾವ್‌ ಆಗಲು ಏನು ಮಾಡಬೇಕು?: ನಿಮ್ಮ ಫೋನ್ ಅನ್ನು ಅಪ್-ಟು-ಡೇಟ್ ಆಗಿರಿಸುವುದರ ಮೂಲಕ ಭದ್ರವಾಗಿರಿಸಿಕೊಳ್ಳಬಹುದು. ಅಂದರೆ ನಿಮ್ಮ ಫೋನ್‌ನಲ್ಲಿರುವ ಎಲ್ಲಾ ಆಪ್‌ಗಳು ಇತ್ತೀಚಿನ ಆವೃತ್ತಿಯಲ್ಲಿ ರನ್‌ ಆಗಬೇಕು. ಯಾವುದೇ ಬಾಕಿ ಉಳಿದಿರುವ ಓಎಸ್ ನವೀಕರಣಗಳು ಇದ್ದಲ್ಲಿ ಅದನ್ನು ಈಗಲೇ ಪರಿಶೀಲಿಸಿ. ಲಭ್ಯವಿರುವ ಅಪ್‌ಡೇಟ್‌ಗಳಿಗಾಗಿ ಪರಿಶೀಲಿಸುವ ಹಂತಗಳು ವಿಭಿನ್ನ ಆಂಡ್ರಾಯ್ಡ್‌ ಫೋನ್‌ಗಳಲ್ಲಿ ಸ್ವಲ್ಪ ಬದಲಾಗಬಹುದು.

ಹೊಸ ದೋಷಗಳು ಸಿಸ್ಟಮ್-ಸಂಬಂಧಿತ ನ್ಯೂನತೆಗಳಾಗಿದ್ದರೂ ಸಹ ಬಳಕೆದಾರರಿಗೆ ಸಾಮಾನ್ಯವಾಗಿ ವಿಶ್ವಾಸಾರ್ಹ ಡೆವಲಪರ್‌ಗಳಿಂದ ಆಪ್‌ಗಳನ್ನು ಬಳಕೆ ಮಾಡಲು ಸಲಹೆ ನೀಡಲಾಗುತ್ತದೆ. ಹಾಗೆಯೇ ಮೂರನೇ ವ್ಯಕ್ತಿಯ ಆನ್‌ಲೈನ್ ಸ್ಟೋರ್‌ಗಳಿಂದ ಆಪ್‌ಗಳನ್ನು ಇನ್‌ಸ್ಟಾಲ್‌ ಮಾಡಬೇಡಿ. ಈ ಮೂಲಕ ಮುಂದಿನ ದಿನಗಳಲ್ಲಿ ನಿಮ್ಮ ಫೋನ್‌ ಅನ್ನು ಅತ್ಯುತ್ತಮವಾಗಿ ಕೆಲಸ ಮಾಡುವಂತೆ ನೋಡಿಕೊಳ್ಳಬಹುದು.

ಭಾರತದಲ್ಲಿನ ಎಲ್ಲಾ ಆಂಡ್ರಾಯ್ಡ್‌ ಫೋನ್‌ ಬಳಕೆದಾರರಿಗೆ ಸಂಕಷ್ಟ...

CERT-In ಇದೇ ರೀತಿಯ ಗಂಭೀರ ಎಚ್ಚರಿಕೆಯನ್ನು ಆಗಸ್ಟ್ 2023 ರಲ್ಲಿ ನೀಡಿತ್ತು. ಆ ಸಮಯದಲ್ಲಿ, ಆಂಡ್ರಾಯ್ಡ್‌ ದೋಷಗಳು ಭಾರತದಲ್ಲಿ ಆಂಡ್ರಾಯ್ಡ್‌ 13-ಚಾಲಿತ ಫೋನ್ ಬಳಕೆದಾರರ ಮೇಲೆ ಪರಿಣಾಮ ಬೀರಿತ್ತು. ಅಂದರೆ ಇದರಲ್ಲೂ ಸಹ ಫ್ರೇಮ್‌ವರ್ಕ್, ಆಂಡ್ರಾಯ್ಡ್ ರನ್‌ಟೈಮ್, ಸಿಸ್ಟಮ್ ಕಾಂಪೊನೆಂಟ್, ಗೂಗಲ್ ಪ್ಲೇ ಸಿಸ್ಟಮ್ ಅಪ್‌ಡೇಟ್‌ಗಳು, ಕರ್ನಲ್, ಆರ್ಮ್ ಕಾಂಪೊನೆಂಟ್‌ಗಳು, ಮೀಡಿಯಾ ಟೆಕ್ ಕಾಂಪೊನೆಂಟ್‌ಗಳು ಮತ್ತು ಕ್ವಾಲ್ಕಾಮ್ ಕ್ಲೋಸ್ಡ್-ಸೋರ್ಸ್ ಕಾಂಪೊನೆಂಟ್‌ಗಳಲ್ಲಿನ ಸಮಸ್ಯೆಗಳನ್ನು ವರದಿ ಮಾಡಲಾಗಿತ್ತು.

Best Mobiles in India

English summary
The government has discovered high-risk bugs in Android phones affecting millions of users in India. Also, the detected Android vulnerabilities could adversely affect millions of users in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+