ಮತ್ತೆ ಚೀನಾದ 47 ಆಪ್‌ ಬ್ಯಾನ್ ಮಾಡಿದ ಕೇಂದ್ರ ಸರ್ಕಾರ!

|

ಭಾರತದೊಂದಿಗೆ ಇತ್ತೀಚಿಗೆ ಗಡಿ ಕ್ಯಾತೆ ತೆಗೆದಿದ್ದ ಚೀನಾಗೆ ಕೇಂದ್ರ ಸರ್ಕಾರ ಚೀನಾದ ಜನಪ್ರಿಯ ಆಪ್‌ಗಳನ್ನು ದೇಶದಲ್ಲಿ ನಿಷೇಧಿಸುವ ಮೂಲಕ ಪೆಟ್ಟು ನೀಡಿತ್ತು. ಅದರ ಬೆನ್ನಲ್ಲೆ ಕೇಂದ್ರ ಸರ್ಕಾರ ಈಗ ಮತ್ತೆ 47 ಚೀನಾದ ಅಪ್ಲಿಕೇಶನ್ ನಿಷೇಧ ಮಾಡುವ ಆದೇಶ ಹೊರಡಿಸಿದ್ದು, ಈ ಮೂಲಕ ಮತ್ತೊಮ್ಮೆ ಚೀನಾಗೆ ಭಾರಿ ಹೊಡೆತ ನೀಡಿದೆ. ಕೇಂದ್ರ ನೀಡಿದ ಈ ಪೆಟ್ಟಿನಿಂದ ಚೀನಾಗೆ ದೊಡ್ಡ ಆಘಾತವಾಗಿದೆ.

ಚೀನಾದ 47

ಸುರಕ್ಷತೆ ದೃಷ್ಟಿಯಿಂದ ಮತ್ತೆ ಚೀನಾದ 47 ಆಪ್‌ಗಳ ಮೇಲೆ ನಿಷೇಧ ಹೇರಲಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ. ಈಗಾಗಲೇ 59 ಚೀನಾದ ಆಪ್‌ಗಳನ್ನು ಬ್ಯಾನ್ ಮಾಡಿದ್ದ ಕೇಂದ್ರ ಸರ್ಕಾರ, ಈಗ ಮತ್ತೆ 47 ಆಪ್‌ಗಳ ಮೇಲೆ ನಿಷೇಧ ಹೇರಿದೆ. ಹೀಗಾಗಿ ಒಟ್ಟು 106 ಚೀನಾ ಮೂಲದ ಅಪ್ಲಿಕೇಶನ್‌ಗಳಿಗೆ ಗೇಟ್‌ ಪಾಸ್‌ ಕೊಟ್ಟಂತಾಗಿದೆ.

ಅಪ್ಲಿಕೇಶನ್‌ಗಳ

ಜೂನ್‌ನಲ್ಲಿ ನಿಷೇಧಿಸಲಾದ 59 ಚೀನಾದ ಅಪ್ಲಿಕೇಶನ್‌ಗಳ ಮಾದರಿಯಲ್ಲಿರುವ/ಹೋಲುವ ಆಪ್‌ಗಳನ್ನು ಬ್ಯಾನ್‌ ಮಾಡಲಾದ 47 ಆಪ್‌ಗಳ ಲಿಸ್ಟ್‌ನಲ್ಲಿ ಇವೆ. ಅವುಗಳಲ್ಲಿ ಟಿಕ್‌ಟಾಕ್‌ ಲೈಟ್, ಹೆಲೋ ಲೈಟ್, ಶೇರ್‌ಇಟ್ ಲೈಟ್, ಬಿಗೊ ಲೈವ್ ಲೈಟ್ ಮತ್ತು VFY ಲೈಟ್ ಹೆಸರಿನ ಅಪ್ಲಿಕೇಶನ್‌ಗಳು ಸೇರಿವೆ ಎಂದು ಎಎನ್‌ಐ ಟ್ವೀಟ್ ಮಾಡಿದೆ.

275 ಆಪ್‌

ರಾಷ್ಟ್ರೀಯ ಭದ್ರತೆ ಮತ್ತು ಬಳಕೆದಾರರ ಗೌಪ್ಯತೆ ಉಲ್ಲಂಘನೆಗಾಗಿ ಪರಿಶೀಲನೆಗೆ ಒಳಪಟ್ಟಿರುವ 275 ಆಪ್‌ಗಳ ಮೇಲೆ ಭಾರತ ಸರ್ಕಾರ ನಿಗಾ ಇರಿಸಿದೆ. ಈ ಪಟ್ಟಿಯಲ್ಲಿ ಪಬ್‌ಜಿ ಮೊಬೈಲ್, ಲುಡೋ ವರ್ಲ್ಡ್, ಶಿಯೋಮಿ, ಅಲಿಎಕ್ಸ್ಪ್ರೆಸ್, ರೆಸ್ಸೊ ಮತ್ತು ಯುಲೈಕ್‌ನ ಅಪ್ಲಿಕೇಶನ್‌ಗಳು ಸೇರಿವೆ ಎಂದು ವರದಿಯಾಗಿದೆ. ಈ ಅಪ್ಲಿಕೇಶನ್‌ಗಳನ್ನು ಬ್ಯಾನ್ ಮಾಡುವ ಸಾಧ್ಯತೆಗಳು ಹೆಚ್ಚಾಗಿವೆ ಎನ್ನಲಾಗುತ್ತಿದೆ.

ಬ್ಯಾನ್

ಈ ಬಾರಿ ಬ್ಯಾನ್ ಮಾಡಿರುವ ಆಪ್‌ಗಳಲ್ಲಿ Tiktok Lite, Helo Lite, SHAREit Lite, BIGO LIVE Lite and VFY Lite ಸೇರಿವೆ. ಹಾಗೂ ಈಗಾಗಲೇ ಕೇಂದ್ರ ಸರ್ಕಾರ ಬ್ಯಾನ್ ಮಾಡಿರುವ ಜನಪ್ರಿಯ ಆಪ್‌ಗಳ ಲಿಸ್ಟ್‌ ಇಲ್ಲಿದೆ. TikTok, Shareit, Kwai, UC Browser, Baidu map, Shein, Clash of Kings, DU battery saver, Helo, Likee, YouCam makeup, Mi Community, CM Browers, Virus Cleaner, APUS Browser, ROMWE, Club Factory, Newsdog, Beutry Plus, WeChat, UC News, QQ Mail, Weibo, Xender, QQ Music, QQ Newsfeed, Bigo Live, SelfieCity, Mail Master


Parallel Space, Mi Video Call - Xiaomi, WeSync, ES File Explorer, Viva Video - QU Video Inc, Meitu, Vigo Video, New Video Status, DU Recorder, Vault- Hide, Cache Cleaner DU App studio, DU Cleaner, DU Browser, Hago Play With New Friends, Cam Scanner, Clean Master - Cheetah Mobile, Wonder Camera, Photo Wonder, QQ Player, We Meet, Sweet Selfie, Baidu Translate, Vmate, QQ International, QQ Security Center, QQ Launcher, U Video, V fly Status Video, Mobile Legends, DU Privacy

Best Mobiles in India

Read more about:
English summary
Ministry of Electronics and Information technology (MeitY) has barred 47 more Chinese apps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X