Home
ಸುದ್ದಿಜಾಲ

70 ಲಕ್ಷ ಭಾರತೀಯ ಬಳಕೆದಾರರ ಮೊಬೈಲ್ ಸಂಪರ್ಕ ಕಡಿತ: ಈ ತಪ್ಪುಗಳನ್ನು ನೀವು ಎಂದಿಗೂ ಮಾಡದಿರಿ!

ಸ್ಮಾರ್ಟ್‌ಫೋನ್‌ (Smartphone) ಬಳಕೆ ಹೆಚ್ಚಾದಂತೆ ಆನ್‌ಲೈನ್‌ ವಂಚನೆ (online fraud) ಪ್ರಕರಣಗಳು ಸಹ ಹೆಚ್ಚಾಗುತ್ತಿವೆ. ಈ ಮೂಲಕ ಸಾಕಷ್ಟು ಜನರು ಅಪಾರ ಪ್ರಮಾಣದಲ್ಲಿ ಹಣ ಹಾಗೂ ಖಾಸಗಿ ಮಾಹಿತಿಗಳನ್ನು ಕಳೆದುಕೊಂಡು ಸಂಕಷ್ಟ ಅನುಭವಿಸಿದ್ದಾರೆ. ಈ ಕಾರಣಕ್ಕೆ ಈಗ ಭಾರತದಲ್ಲಿ 70 ಲಕ್ಷ ಬಳಕೆದಾರರ ಮೊಬೈಲ್ ಸಂಖ್ಯೆಯ ಸಂಪರ್ಕ ಕಡಿತ ಮಾಡಲಾಗಿದೆ.

ಹೌದು, 70 ಲಕ್ಷ ಭಾರತೀಯ ಬಳಕೆದಾರರ ಮೊಬೈಲ್ ಸಂಖ್ಯೆಗಳ (mobile numbers) ಸಂಪರ್ಕವನ್ನು ಸರ್ಕಾರ ಕಡಿತಗೊಳಿಸಿದೆ. ಭಾರತದಲ್ಲಿ ಹೆಚ್ಚಾಗುತ್ತಿರುವ ಆನ್‌ಲೈನ್ ಹಗರಣಗಳು ಮತ್ತು ಹಣಕಾಸು ವಂಚನೆಗಳ ಉಲ್ಬಣಕ್ಕೆ ಪ್ರತಿಕ್ರಿಯೆಯಾಗಿ ಈ ಬೆಳವಣಿಗೆ ಕಂಡು ಬಂದಿದೆ. ಇದರೊಂದಿಗೆ ವಂಚನೆಯ ಕರೆಗಳು ಮತ್ತು ಎಸ್‌ಎಂಎಸ್‌ಗಳ ಬಗ್ಗೆ ಜಾಗರೂಕರಾಗಿರಲು ಸರ್ಕಾರ ಜನರಿಗೆ ತಿಳಿಸಿದೆ. ಹಾಗಿದ್ರೆ, ಏನಿದು ಹೊಸ ವಿಚಾರ?, ಈ ರೀತಿಯ ಸಮಸ್ಯೆಗಳಿಂದ ಪಾರಾಗುವುದು ಹೇಗೆ? ಎನ್ನುವ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

70 ಲಕ್ಷ ಭಾರತೀಯ ಬಳಕೆದಾರರ ಮೊಬೈಲ್ ಸಂಪರ್ಕ ಕಡಿತ...

70 ಲಕ್ಷ ಭಾರತೀಯ ಬಳಕೆದಾರರ ಮೊಬೈಲ್ ಸಂಖ್ಯೆ ನಿರ್ಬಂಧ: ಭಾರತವು ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ವಂಚನೆಗಳು ಮತ್ತು ಹಣಕಾಸಿನ ವಂಚನೆಗಳ ಉಲ್ಬಣಕ್ಕೆ ಪ್ರಮುಖ ಕೇಂದ್ರವಾಗಿದೆ. ಈಗಾಗಲೇ ದೇಶಾದ್ಯಂತ ಹಲವಾರು ನಾಗರಿಕರು ಈ ಸಮಸ್ಯೆಗಳಿಗೆ ಬಲಿಯಾಗಿದ್ದಾರೆ. ಜೊತೆಗೆ ಸಾಕಷ್ಟು ಹಣ ಕಳೆದುಕೊಂಡು ಪೊಲೀಸ್‌ ಠಾಣೆ ಮೆಟ್ಟಿಲೇರುವಂತೆ ಆಗಿದೆ. ಅದರಂತೆ ಬೆಳೆಯುತ್ತಿರುವ ಈ ಸಮಸ್ಯೆಯನ್ನು ಆರಂಭದಲ್ಲೇ ಚಿವುಟಿ ಹಾಕಲು ಭಾರತ ಸರ್ಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತಿದೆ. ಈ ಕಾರಣಕ್ಕೆ 70 ಲಕ್ಷ ಮೊಬೈಲ್ ಸಂಖ್ಯೆಗಳನ್ನು ನಿರ್ಬಂಧಿಸಿದೆ.

ಈ ಕ್ರಮವು ಮೊಬೈಲ್ ಡಿವೈಸ್‌ಗಳ IMEI ಅನ್ನು ನಿರ್ಬಂಧಿಸುವುದು ಮತ್ತು ಅನುಮಾನಾಸ್ಪದ ಎಂದು ಫ್ಲ್ಯಾಗ್ ಮಾಡಲಾದ ಖಾತೆಗಳನ್ನು ಹಿಂಪಡೆಯುವಂತೆ ಮಾಡುತ್ತದೆ. ಅಂದರೆ ಈ ನಂಬರ್‌ ಮೇಲೆ ಇರುವ ಖಾತೆಗಳನ್ನು ನಿರ್ಬಂಧ ಮಾಡುವ ಮೂಲಕ ಮೋಸಗಾರರಿಗೆ ತಕ್ಕ ಪಾಠ ಕಲಿಸಲಾಗುತ್ತಿದೆ. ಇದರಿಂದ ಭವಿಷ್ಯದ ಸಂಭಾವ್ಯ ಮೋಸದ ಚಟುವಟಿಕೆಗಳನ್ನು ಸುಲಭವಾಗಿ ತಡೆಗಟ್ಟಲು ಸಹಕಾರಿಯಾಗಲಿದೆ.

70 ಲಕ್ಷ ಭಾರತೀಯ ಬಳಕೆದಾರರ ಮೊಬೈಲ್ ಸಂಪರ್ಕ ಕಡಿತ...

ಇನ್ನು RBI, TRAI, NPCI ಮತ್ತು IT ಸಚಿವಾಲಯದ ಅಧಿಕಾರಿಗಳೊಂದಿಗೆ ಹಣಕಾಸು ಸೇವೆಗಳ ಕಾರ್ಯದರ್ಶಿ ವಿವೇಕ್ ಜೋಶಿ ಅವರು ಸಭೆ ನಡೆಸಿದ್ದು, ಕೆಲವು ಬ್ಯಾಂಕ್‌ ಖಾತೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಅಂದರೆ ಕಡಿಮೆ ಬ್ಯಾಲೆನ್ಸ್‌ಗಳನ್ನು ಹೊಂದಿದ್ದ ಖಾತೆಗಳು ಹಠಾತ್ತನೇ ಹೆಚ್ಚಿನ ಬ್ಯಾಲೆನ್ಸ್‌ ಹೊಂದಿದರೆ ಅವುಗಳ ಬಗ್ಗೆ ಹದ್ದಿನ ಕಣ್ಣಿಡಬೇಕು ಎಂದು ಚರ್ಚಿಸಲಾಗಿದೆ. ಈ ಮೂಲಕ ಜನರಿಗೆ ಆಗುತ್ತಿರುವ ಹಣಕಾಸಿನ ವಂಚನೆಯನ್ನು ತಡೆಯಬಹುದು ಎಂದು ಸಭೆಯಲ್ಲಿ ಒತ್ತಿ ಹೇಳಲಾಗಿದೆ.

ಸಭೆಯ ಸಂದರ್ಭದಲ್ಲಿ, ಡಿಜಿಟಲ್ ಇಂಟೆಲಿಜೆನ್ಸ್ ಪ್ಲಾಟ್‌ಫಾರ್ಮ್‌ಗಳ ಮೂಲಕ ವರದಿ ಮಾಡಿದಂತೆ ಸೈಬರ್ ಅಪರಾಧ ಅಥವಾ ಹಣಕಾಸು ವಂಚನೆಗೆ ಸಂಬಂಧಿಸಿದ 7 ಮಿಲಿಯನ್ ಮೊಬೈಲ್ ಸಂಪರ್ಕಗಳನ್ನು ಇಲ್ಲಿಯವರೆಗೆ ನಿಷ್ಕ್ರಿಯಗೊಳಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಅಷ್ಟೇ ಅಲ್ಲದೆ ಈ ಸಂಬಂಧ ಹೆಚ್ಚಿನ ಚರ್ಚೆ ಮಾಡಲು ಮುಂದಿನ ಅಧಿವೇಶನವನ್ನು ಜನವರಿಗೆ ನಿಗದಿಪಡಿಸಲಾಗಿದೆ ಎಂದು ತಿಳಿಸಲಾಗಿದೆ.

ಹಾಗಿದ್ರೆ ನಿಮ್ಮ ಫೋನ್ ಸಂಖ್ಯೆಯನ್ನು ಸುರಕ್ಷಿತವಾಗಿರಿಸುವುದು ಹೇಗೆ?:
ವಂಚನೆಯ ಸಿಮ್ ಸಂಖ್ಯೆಗಳ ಮೇಲಿನ ಇತ್ತೀಚಿನ ದಮನ ಕಾರ್ಯವು ಸಕಾರಾತ್ಮಕದ ಪ್ರಮುಖ ಹೆಜ್ಜೆಯಾಗಿದ್ದರೂ ಸಹ ನೀವು ಜಾಗರೂಕರಾಗಿರಲು ಮತ್ತು ಸಂಭಾವ್ಯ ವಂಚನೆಯಿಂದ ನಿಮ್ಮ ಫೋನ್ ಸಂಖ್ಯೆಗಳು ಮತ್ತು ಡಿವೈಸ್‌ಗಳನ್ನು ರಕ್ಷಣೆ ಮಾಡಲು ಮುಂಚೆಯೇ ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯವಾಗಿದೆ.

ಸಿಮ್ ಸ್ವಾಪಿಂಗ್: ಸ್ಕ್ಯಾಮರ್ ನಿಮ್ಮ ಸಿಮ್‌ನ ಕಂಟ್ರೋಲ್‌ ಅನ್ನು ಪಡೆದರೆ ಅದನ್ನು ಸಿಮ್ ಸ್ವಾಪಿಂಗ್ ಎಂದು ಕರೆಯಲಾಗುತ್ತದೆ. ಸಿಮ್‌ನ ನಿಯಂತ್ರಣವನ್ನು ತೆಗೆದುಕೊಂಡ ನಂತರ, ಹ್ಯಾಕರ್‌ಗಳು ನಿಮ್ಮ ಎಲ್ಲಾ ವಿವರಗಳನ್ನು ಸಂಗ್ರಹಿಸುತ್ತಾರೆ. ಇದರ ನಂತರ ಅವರು ಟೆಲಿಕಾಂ ಆಪರೇಟರ್ ಅನ್ನು ಸಂಪರ್ಕಿಸಿ ಮತ್ತು ಬಳಕೆದಾರರ ಸಿಮ್ ಕಾರ್ಡ್ ಕಳೆದುಹೋಗಿದೆ ಎಂದು ಅವರಿಗೆ ತಿಳಿಸುತ್ತಾರೆ. ನಂತರ ಈ ರೀತಿಯಲ್ಲಿ ಹ್ಯಾಕರ್‌ಗಳು ಬಳಕೆದಾರರ ಸಿಮ್ ಕಾರ್ಡ್ ಅನ್ನು ಮರು ಪಡೆದು ಇತರರಿಗೆ ಮೋಸ ಮಾಡಲು ಮುಂದಾಗುತ್ತದೆ.

70 ಲಕ್ಷ ಭಾರತೀಯ ಬಳಕೆದಾರರ ಮೊಬೈಲ್ ಸಂಪರ್ಕ ಕಡಿತ...

ಫಿಶಿಂಗ್ ಲಿಂಕ್‌ಗಳು ಮತ್ತು ಮೆಸೆಜ್‌ಗಳು: ಲಿಂಕ್‌ಗಳ ಮೇಲೆ ಕ್ಲಿಕ್ ಮಾಡುವ ಅಥವಾ ಮೆಸೆಜ್‌ಗಳಿಗೆ ಪ್ರತಿಕ್ರಿಯಿಸುವ ಬಗ್ಗೆ ಜಾಗರೂಕರಾಗಿರಿ. ನಿಮ್ಮ ಬ್ಯಾಂಕ್, ಸರ್ಕಾರಿ ಸಂಸ್ಥೆಗಳು ಅಥವಾ ಇತರ ವಿಶ್ವಾಸಾರ್ಹ ಸಂಸ್ಥೆಗಳು ಎಂದು ಹೇಳಿಕೊಳ್ಳುವ ಯಾವುದೇ ಕರೆಗೆ ಉತ್ತರಿಸಬೇಡಿ. ಅದರಲ್ಲೂ ಬ್ಯಾಂಕಿಗ್‌ ಹಾಗೂ ಇನ್ನಿತರೆ ಖಾಸಗಿ ಮಾಹಿತಿಗಳನ್ನು ಶೇರ್‌ ಮಾಡಿಕೊಳ್ಳಬೇಡಿ.

ವಾಟ್ಸಾಪ್‌ ಮೆಸೆಜ್‌ ಬಗ್ಗೆ ಎಚ್ಚರ: ಸ್ಕ್ಯಾಮರ್‌ಗಳು ಬಳಕೆದಾರರನ್ನು ಮೋಸಗೊಳಿಸಲು ಈ ವಾಟ್ಸಾಪ್‌ ಅನ್ನು ಸುಲಭವಾಗಿ ಬಳಕೆ ಮಾಡುತ್ತಾರೆ. ಅವರು ವಿಶ್ವಾಸಾರ್ಹ ಮೂಲದಿಂದ ಬಂದ ಮೆಸೆಜ್‌ ನಂತೆಯೇ ನಿಮಗೆ ಮೆಸೆಜ್‌ ಮಾಡುತ್ತಾರೆ. ಈ ವೇಳೆ ಲಿಂಕ್ ಅನ್ನು ಕ್ಲಿಕ್ ಮಾಡಲು ಅಥವಾ ಸೂಕ್ಷ್ಮ ಮಾಹಿತಿಯನ್ನು ಶೇರ್‌ ಮಾಡಿಕೊಳ್ಳಲು ನಿಮ್ಮನ್ನು ಒತ್ತಾಯಿಸುತ್ತಾರೆ. ಈ ವೇಳೆ ನೀವು ಯಾವುದೇ ಪರಿಶೀಲನೆ ಇಲ್ಲದೆ ಏನನ್ನೂ ಶೇರ್‌ ಮಾಡಿಕೊಳ್ಳಲು ಮುಂದಾಗಬೇಡಿ.

ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸುರಕ್ಷಿತಗೊಳಿಸಿ: ನಿಮ್ಮ ವೈಯಕ್ತಿಕ ಮಾಹಿತಿಯನ್ನು ರಕ್ಷಿಸುವುದು ಈ ಸಂದರ್ಭದಲ್ಲಿ ಬಹಳ ಮುಖ್ಯವಾದ ಕೆಲಸವಾಗಿದೆ. ಮೆಸೆಜ್‌ಗಳು ಅಥವಾ ಕರೆಗಳ ಮೂಲಕ ಪಾಸ್‌ವರ್ಡ್‌ಗಳು ಅಥವಾ ಪಿನ್‌ಗಳಂತಹ ಸೂಕ್ಷ್ಮ ವಿವರಗಳನ್ನು ಯಾವುದೇ ಕಾರಣಕ್ಕೂ ಶೇರ್‌ ಮಾಡಿಕೊಳ್ಳಬೇಡಿ. ಹಾಗೆಯೇ ಸಾಮಾಜಿಕ ಮಾಧ್ಯಮದಲ್ಲಿ ನೀವು ಹಂಚಿಕೊಳ್ಳುವ ಮಾಹಿತಿಯ ಬಗ್ಗೆ ಗಮನವಿರಲಿ. ಯಾಕೆಂದರೆ ಸ್ಕ್ಯಾಮರ್‌ಗಳು ಸಾರ್ವಜನಿಕವಾಗಿ ಲಭ್ಯವಿರುವ ಡೇಟಾವನ್ನು ಬಳಕೆ ಮಾಡಿಕೊಂಡು ನಿಮಗೆ ಮೋಸ ಮಾಡುತ್ತಾರೆ.

Best Mobiles in India

English summary
The Indian government has disconnected the mobile numbers of 70 lakh Indian users. The development comes in response to the growing number of online scams and financial frauds in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+