Home
ಸುದ್ದಿಜಾಲ

ಬಜೆಟ್‌ಗೂ ಮುನ್ನವೇ ಗುಡ್‌ ನ್ಯೂಸ್‌ ಕೊಟ್ಟ ಸರ್ಕಾರ! ಸ್ಮಾರ್ಟ್‌ಫೋನ್‌ ಪ್ರಿಯರಿಗೆ ಖುಷಿಯೋ ಖುಷಿ

ನಾಳೆಯಿಂದ ಬಜೆಟ್‌ ಅಧಿವೇಶನ (Budget session) ಆರಂಭ ಆಗಲಿದೆ. ಇದಕ್ಕೂ ಮೊದಲೇ ಕೇಂದ್ರ ಸರ್ಕಾರ ಸ್ಮಾರ್ಟ್‌ಫೋನ್‌ (Smartphone) ಸಂಬಂಧ ಗುಡ್‌ ನ್ಯೂಸ್‌ ಅನ್ನು ನೀಡಿದೆ. ಇದರಿಂದ ಸ್ಮಾರ್ಟ್‌ಫೋನ್‌ ತಯಾರಕರು ಹಾಗೂ ಸ್ಮಾರ್ಟ್‌ಫೋನ್‌ ಬಳಕೆದಾರರು ಹರ್ಷ ವ್ಯಕ್ತಪಡಿಸಿದ್ದಾರೆ.

ಹೌದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2024-2025 ರ ಆರ್ಥಿಕ ವರ್ಷಕ್ಕೆ 1 ಫೆಬ್ರವರಿ 2024 ರಂದು ಅಂದರೆ ನಾಳೆ ಬೆಳಿಗ್ಗೆ 11:00 ಗಂಟೆಗೆ ಬಜೆಟ್ ಮಂಡನೆ ಆರಂಭ ಮಾಡಲಿದ್ದಾರೆ. ಈ ಕ್ಷಣಕ್ಕಾಗಿ ದೇಶದ ಜನರು ಕಾದು ಕುಳಿತಿದ್ದು, ಏನಾದರೂ ಹೊಸ ಬಂಫರ್ ಯೋಜನೆಗಳನ್ನು ಜಾರಿ ಮಾಡಲಿದ್ದಾರಾ ಅನ್ನೋ ಆಸೆಯಲ್ಲಿದ್ದಾರೆ. ಹಾಗಿದ್ರೆ, ಬಜೆಟ್‌ಗೂ ಮುನ್ನವೇ ಘೋಷಣೆ ಮಾಡಲಾದ ಈ ವಿಷಯ ಏನು?, ಇದರಿಂದ ಏನೆಲ್ಲಾ ಲಾಭ ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಸ್ಮಾರ್ಟ್‌ಫೋನ್‌ ಸಂಬಂಧ ಬಜೆಟ್‌ಗೂ ಮುನ್ನವೇ ಗುಡ್‌ ನ್ಯೂಸ್‌ ಕೊಟ್ಟ ಸರ್ಕಾರ!

ಸ್ಮಾರ್ಟ್‌ಫೋನ್ ಘಟಕಗಳ ಆಮದು ಸುಂಕ ಕಡಿತ: ಭಾರತದಲ್ಲಿ ಈಗಾಗಲೇ ಪ್ರಮುಖ ಸ್ಮಾರ್ಟ್‌ಫೋನ್‌ ತಯಾರಿಕಾ ದೈತ್ಯರು ಶಾಶ್ವತ ನೆಲೆ ಕಂಡುಕೊಳ್ಳಲು ಮುಂದಾಗಿದ್ದಾರೆ. ಅದರಲ್ಲೂ ಮೇಡ್ ಇನ್‌ ಸ್ಯಾಮ್‌ಸಂಗ್‌ ಹಾಗೂ ಮೇಡ್‌ ಇನ್‌ ಆಪಲ್‌ ಫೋನ್‌ಗಳು ಜಾಗತಿಕವಾಗಿ ಸದ್ದು ಮಾಡುತ್ತಿವೆ. ಈ ಎಲ್ಲಾ ಬೆಳವಣಿಗೆ ನಡುವೆ ಸ್ಥಳೀಯ ಉದ್ಯಮವನ್ನು ಇನ್ನಷ್ಟು ಶಕ್ತ ಮಾಡಲು ಆಮದು ಸುಂಕವನ್ನು ಕಡಿಮೆ ಮಾಡಿದೆ.

ಸ್ಮಾರ್ಟ್‌ಫೋನ್‌ಗಳ ಸ್ಥಳೀಯ ಜೋಡಣೆಯನ್ನು ಪ್ರಾರಂಭಿಸಲು ಹೆಚ್ಚಿನ ಭಾರತೀಯ ಕಂಪನಿಗಳು ಸಿದ್ಧವಾಗುತ್ತಿದ್ದಂತೆ ಕೇಂದ್ರವು ಮೊಬೈಲ್ ಫೋನ್ ತಯಾರಿಕೆಯಲ್ಲಿ (Mobile phone manufacturing) ಬಳಸುವ ಹಲವಾರು ಘಟಕಗಳ ಮೇಲಿನ ಆಮದು ಸುಂಕವನ್ನು (Import duty) ಶೇಕಡಾ 15 ರಿಂದ 10 ಕ್ಕೆ ಇಳಿಕೆ ಮಾಡಿದೆ. ಈ ಸಂಬಂಧ ಹಣಕಾಸು ಸಚಿವಾಲಯ ಅಧಿಸೂಚನೆಯನ್ನು ಹೊರಡಿಸಿದೆ.

ಸ್ಮಾರ್ಟ್‌ಫೋನ್‌ ಸಂಬಂಧ ಬಜೆಟ್‌ಗೂ ಮುನ್ನವೇ ಗುಡ್‌ ನ್ಯೂಸ್‌ ಕೊಟ್ಟ ಸರ್ಕಾರ!

ಯಾವುದಕ್ಕೆಲ್ಲಾ ಸುಂಕ ಇಳಿಕೆ: ಈ ವರ್ಷದ ಮಧ್ಯಂತರ ಬಜೆಟ್‌ಗೆ ಒಂದು ದಿನ ಮುಂಚಿತವಾಗಿ ಈ ನಿಯಮ ಜಾರಿ ಮಾಡಲಾಗಿದ್ದು, ಆಮದು ಸುಂಕವನ್ನು ಕಡಿತಗೊಳಿಸಲಾದ ಘಟಕಗಳಲ್ಲಿ ಬ್ಯಾಟರಿ ಕವರ್, ಮುಂಭಾಗದ ಕವರ್, ಮಧ್ಯದ ಕವರ್, ಮುಖ್ಯ ಲೆನ್ಸ್, ಬ್ಯಾಕ್ ಕವರ್, ಜಿಎಸ್‌ಎಮ್‌ ಆಂಟೆನಾ/ಆಂಟೆನಾ ಸೇರಿವೆ.

ಇದರೊಂದಿಗೆ ಯಾವುದೇ ತಂತ್ರಜ್ಞಾನದ, ಪಿಯು ಕೇಸ್/ಸೀಲಿಂಗ್ ಗ್ಯಾಸ್ಕೆಟ್ ಮತ್ತು ಪಾಲಿಯುರೆಥೇನ್ ಫೋಮ್‌ನ ಇತರ ಸೀಲಿಂಗ್ ಗ್ಯಾಸ್ಕೆಟ್‌ಗಳು/ ಕೇಸ್, ಸೀಲಿಂಗ್ ಗ್ಯಾಸ್ಕೆಟ್‌ಗಳು/ಕೇಸ್‌ಗಳು ಪಿಇ, ಪಿಪಿ, ಇಪಿಎಸ್, ಪಿಸಿ ಮತ್ತು ಎಲ್ಲಾ ಇತರ ವೈಯಕ್ತಿಕ ಪಾಲಿಮರ್‌ಗಳು ಅಥವಾ ಪಾಲಿಮರ್‌ಗಳ ಸಂಯೋಜನೆ, ಸಿಮ್‌ ಸಾಕೆಟ್, ಸ್ಕ್ರೂ, ಪ್ಲಾಸ್ಟಿಕ್‌ನ ಇತರ ಯಾಂತ್ರಿಕ ವಸ್ತುಗಳು ಮತ್ತು ಲೋಹದ ಇತರ ಯಾಂತ್ರಿಕ ವಸ್ತುಗಳು ಇದರ ಪ್ಯಾಪ್ತಿಗೆ ಬರಲಿವೆ.

ಈ ಮೇಲೆ ಉಲ್ಲೇಖಿಸಿದ ಘಟಕಗಳನ್ನು ತಯಾರಿಸಲು ಬಳಸುವ ಇನ್‌ಪುಟ್‌ಗಳ ಮೇಲಿನ ಆಮದು ಸುಂಕವನ್ನು ಸಹ ಶೂನ್ಯಕ್ಕೆ ಕಡಿತಗೊಳಿಸಲಾಗಿದೆ. ಆಪಲ್‌ನಂತಹ ಪ್ರಮುಖ ಸ್ಮಾರ್ಟ್‌ಫೋನ್ ಬ್ರಾಂಡ್‌ಗಳನ್ನು ಪ್ರತಿನಿಧಿಸುವ ಇಂಡಿಯಾ ಸೆಲ್ಯುಲರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ (ICEA) ಈ ತಿಂಗಳ ಆರಂಭದಲ್ಲಿ ಬಿಡುಗಡೆ ಮಾಡಿದ ವರದಿಯಲ್ಲಿ ಉದ್ಯಮ ಲಾಬಿ ಗ್ರೂಫ್‌ ಭಾರತದಿಂದ ಸ್ಮಾರ್ಟ್‌ಫೋನ್ ರಫ್ತುಗಳನ್ನು ಹೆಚ್ಚಿಸಲು ಘಟಕಗಳು ಮತ್ತು ಉಪ ಅಸೆಂಬ್ಲಿಗಳ ಮೇಲಿನ ಸುಂಕಗಳಲ್ಲಿ ಕಡಿತಕ್ಕೆ ಮನವಿ ಮಾಡಿತ್ತು.

ಸ್ಮಾರ್ಟ್‌ಫೋನ್‌ ಸಂಬಂಧ ಬಜೆಟ್‌ಗೂ ಮುನ್ನವೇ ಗುಡ್‌ ನ್ಯೂಸ್‌ ಕೊಟ್ಟ ಸರ್ಕಾರ!

ಇನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದಿಂದ ಮೊಬೈಲ್ ಫೋನ್ ರಫ್ತು $49-50 ಶತಕೋಟಿಯ ಒಟ್ಟು ಉತ್ಪಾದನೆಯ 30% ನಷ್ಟು ತಲುಪುವ ನಿರೀಕ್ಷೆಯಿದೆ ಎಂದು ICEA ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಅದಾಗ್ಯೂ, ಸ್ಪರ್ಧಾತ್ಮಕತೆಯ ಮೇಲೆ ಪ್ರಭಾವ ಬೀರುವ ಇತರ ಅಂಶಗಳ ಜೊತೆಗೆ ಚೀನಾ ಮತ್ತು ವಿಯೆಟ್ನಾಂನ ಸ್ಪರ್ಧಾತ್ಮಕ ಸುಂಕದ ವಿಷಯದಲ್ಲಿ ಹೊಂದಾಣಿಕೆ ಮಾಡಬೇಕಾದ ಅಗತ್ಯ ಇದೆ ಎನ್ನಲಾಗಿದೆ. ಇನ್ನು ಈ ಸುಂಕದ ಇಳಿಕೆಯಿಂದಾಗಿ ಸ್ಮಾರ್ಟ್‌ಫೋನ್‌ಗಳ ದರ ಸಹ ಕಡಿಮೆ ಆಗಲಿದೆ ಎನ್ನುವ ಮಾತು ಕೇಳಿಬರುತ್ತಿದೆ.

Best Mobiles in India

English summary
A day ahead of this year's Interim Budget, import duty on components and inputs required for smartphone manufacturing has been reduced.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+