Subscribe to Gizbot

ಅಮೆರಿಕಾದ ಆಸೆ ಬಿಡಿ..ಭಾರತೀಯ ಟೆಕ್ಕಿಗಳಿಗೆ ಮತ್ತೆ ಶಾಕ್ ನೀಡಿದ ಟ್ರಂಪ್!!

Written By:

ಅಮೆರಿಕಾದಲ್ಲಿ ಉದ್ಯೋಗ ಪಡೆಯುವ ಭಾರತೀಯ ಆಕಾಂಕ್ಷಿಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಂದು ಆಘಾತ ನೀಡಿದ್ದಾರೆ. ಅಮೆರಿಕದ ಆಂತರಿಕ ಭದ್ರತಾ ಇಲಾಖೆ ಹೆಚ್‌-1ಬಿ ವೀಸಾ ವಿರುದ್ಧ ಹಲವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು, ಹೆಚ್‌-1ಬಿ ವೀಸಾ ವಿತರಣೆಯ ನಿಯಮಾವಳಿಗಳನ್ನು ತಿದ್ದುಪಡಿ ಮಾಡಲು ಚಿಂತಿಸಿದೆ.!!

ಹೆಚ್‌-1ಬಿ ವೀಸಾ ಪಡೆಯುವುದಕ್ಕೆ ಕಂಪ್ಯೂಟರ್‌ ಪ್ರೋಗ್ರಾಮರ್‌ ಆಗಿರುವುದಷ್ಟೇ ಒಂದು ಅರ್ಹತೆಯಲ್ಲ. ಅದಕ್ಕೆ ಸೂಕ್ತ ಅರ್ಹತೆಯೂ ಬೇಕು. ಇದನ್ನು ಸಾಬೀತು ಪಡಿಸಲು ಇನ್ನೂ ಹೆಚ್ಚಿನ ದಾಖಲೆಗಳನ್ನು ನೀಡಿ ಎಂದು ಅಮೆರಿಕದ ಕಂಪನಿಗಳಿಗೆ ಆಂತರಿಕ ಭದ್ರತಾ ಇಲಾಖೆಯು ಸೂಚಿಸಿದೆ.

ಅಮೆರಿಕಾದ ಆಸೆ ಬಿಡಿ..ಭಾರತೀಯ ಟೆಕ್ಕಿಗಳಿಗೆ ಮತ್ತೆ ಶಾಕ್ ನೀಡಿದ ಟ್ರಂಪ್!!

ಚಾರ್ಜಿಂಗ್ ಸಮಯದಲ್ಲಿ ಫೋನ್ ಬಳಕೆ ಸ್ಪೋಟಕ್ಕೆ ಕಾರಣವಲ್ಲ!! ಹಾಗಾದರೆ ನಿಜವಾದ ಕಾರಣ?

ಐಟಿ ಕಂಪನಿಗಳು ಹೆಚ್‌-1ಬಿ ವೀಸಾವನ್ನು ದುರ್ಬಳಕೆ ಮಾಡಿಕೊಂಡು ಅಮೆರಿಕದ ನೌಕರರು ಅವಕಾಶ ವಂಚಿತರಾಗಬಾರದು. ಅಮೆರಿಕದ ನೌಕರರಿಗೆ ಅನ್ಯಾಯ ಎಸಗುವುದನ್ನು ಅಮೆರಿಕದ ನ್ಯಾಯಾಂಗ ಇಲಾಖೆ ಸಹಿಸುವುದಿಲ್ಲ. ಅಮೆರಿಕನ್ನರ ವಿರುದ್ಧ ತಾರತಮ್ಯ ಎಸಗದಂತೆ ಐಟಿ ಕಂಪೆನಿಗಳಿಗೆ ಟ್ರಂಪ್ ಆಡಳಿತ ಎಚ್ಚರಿಕೆ ನೀಡಿದೆ.

ಅಮೆರಿಕಾದ ಆಸೆ ಬಿಡಿ..ಭಾರತೀಯ ಟೆಕ್ಕಿಗಳಿಗೆ ಮತ್ತೆ ಶಾಕ್ ನೀಡಿದ ಟ್ರಂಪ್!!

ಇನ್ನು ಈ ಕಠಿಣ ಕ್ರಮದಿಂದಾಗಿ ಡಿಸೆಂಬರ್ 22 2000 ರ ಅಮೆರಿಕ ಸರ್ಕಾರದ ಹೆಚ್-1ಬಿ ವೀಸಾ ಮೆಮೋ ರದ್ದಾಗಿದ್ದು, ಕಂಪನಿಗಳಿಂದ ಹೆಚ್-1ಬಿ ವೀಸಾ ಪಡೆಯುವವರು ಕೇವಲ ಕಂಪ್ಯೂಟರ್ ಪದವಿ ಹೊಂದಿದ್ದರೆ ಸಾಲದು, ತಮ್ಮ ಸಾಮರ್ಥ್ಯ ಪ್ರದರ್ಶಿಸಬಲ್ಲ ಹೆಚ್ಚಿನ ದಾಖಲೆಗಳನ್ನು ನೀಡಬೇಕಿದೆ.!!

Read more about:
English summary
This takes away the cost advantage of hiring cheap from, say India.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot