ಸ್ಮಾರ್ಟ್‌ಫೋನ್ ಮೆಮೊರಿ ಸಮಸ್ಯೆ ಬಗ್ಗೆ ಅಚ್ಚರಿ ಮಾಹಿತಿ ಹೊರಹಾಕಿತು 'ಸ್ಯಾನ್‌ಡಿಸ್ಕ್'!!

ಮೊಬೈಲ್‌ ಅನ್ನು ಮತ್ತೊಂದು ಎಲೆಕ್ಟ್ರಾನಿಕ್ ಸಾಧನಕ್ಕೆ ಸಂಪರ್ಕಕ್ಕೆ ಅಳವಡಿಸಿ ಅಥವಾ ಇಂಟರ್‌ನೆಟ್ ಮುಖಾಂತರ ಆನ್‌ಲೈನ್‌ನಲ್ಲಿ ,ಫೋಟೊ ಮತ್ತು ವಿಡಿಯೊಗಳನ್ನು ಅತ್ಯಂತ ಸರಳವಾಗಿ ವರ್ಗಾಯಿಸಬಹುದು ಎಂಬುದು ಬಹುತೇಕರಿಗೆ ತಿಳಿದಿಲ್ಲ.

|

ಮೊಬೈಲ್‌ ಅನ್ನು ಮತ್ತೊಂದು ಎಲೆಕ್ಟ್ರಾನಿಕ್ ಸಾಧನಕ್ಕೆ ಸಂಪರ್ಕಕ್ಕೆ ಅಳವಡಿಸಿ ಅಥವಾ ಇಂಟರ್‌ನೆಟ್ ಮುಖಾಂತರ ಆನ್‌ಲೈನ್‌ನಲ್ಲಿ ,ಫೋಟೊ ಮತ್ತು ವಿಡಿಯೊಗಳನ್ನು ಅತ್ಯಂತ ಸರಳವಾಗಿ ವರ್ಗಾಯಿಸಬಹುದು ಎಂಬುದು ಬಹುತೇಕರಿಗೆ ತಿಳಿದಿಲ್ಲ. ಇದರಿಂದ ಭಾರತದಲ್ಲಿ ಮೊಬೈಲ್ ಬಳಕೆದಾರರು ಬಹಳ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ವರದಿಯೊಂದು ಹೇಳಿದೆ.

ಭಾರತದ ಸ್ಮಾರ್ಟ್‌ಫೋನ್‌ ಬಳಕೆದಾರರ ಮೊಬೈಲ್‌ ಮೆಮೊರಿ ಭರ್ತಿಯಾಗಿ, ಚಿತ್ರಗಳು ಮತ್ತು ವಿಡಿಯೊಗಳಿಗೆ ಜಾಗವಿಲ್ಲ ಎಂಬ ಸೂಚನೆ ಪಡೆಯುತ್ತಿರುತ್ತಾರೆ. ಇದು ಬಹುತೇಕರಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ಪ್ರಖ್ಯಾತ ಎಲೆಕ್ಟ್ರಾನಿಕ್ ಬಿಡಿಬಾಗಗಳ ತಯಾರಿಕಾ ಸಂಸ್ಥೆ ಸ್ಯಾನ್‌ಡಿಸ್ಕ್ ತನ್ನ ನೂತನ ಸಮೀಕ್ಷೆಯೊಂದರಲ್ಲಿ ಅಚ್ಚರಿಯ ಮಾಹಿತಿಗಳನ್ನು ಹೊರಹಾಕಿದೆ.

ಫೋನ್ ಮೆಮೊರಿ ಸಮಸ್ಯೆ ಬಗ್ಗೆ ಅಚ್ಚರಿ ಮಾಹಿತಿ ಹೊರಹಾಕಿತು 'ಸ್ಯಾನ್‌ಡಿಸ್ಕ್'!!

ಮೊಬೈಲ್‌ ಸ್ಮರಣ ಸಾಮರ್ಥ್ಯ ಸಮಸ್ಯೆ ಬಗ್ಗೆ ಸಮೀಕ್ಷೆ ನಡೆಸಿರುವ ಸ್ಯಾನ್‌ಡಿಸ್ಕ್ ಕಂಪೆನಿ, ಶೇ 29ರಷ್ಟು ಮೊಬೈಲ್ ಬಳಕೆದಾರರು ವಾರದಲ್ಲಿ ಕನಿಷ್ಠ ಒಮ್ಮೆಯಾದರೂ ಸಾಕಷ್ಟು ಜಾಗವಿಲ್ಲದ ಸಮಸ್ಯೆ ಎದುರಿಸುತ್ತಾರೆ. ಶೇ 62 ಮಂದಿ ಮೂರು ತಿಂಗಳಿಗೊಮ್ಮೆ ಈ ಸಮಸ್ಯೆ ಎದುರಿಸುತ್ತಾರೆ ಎಂಬ ಕೆಲ ಹೊಸ ಸಂಗತಿಗಳನ್ನು ಸಮೀಕ್ಷೆಯಲ್ಲಿ ತಿಳಿಸಿದೆ.

What is Jio Cricket Gold Pass? How to Buy it

ಮೊಬೈಲ್ ಮೆಮೊರಿ ಸಮಸ್ಯೆಯಿಂದಾಗಿ, ಈಗಾಗಲೇ ಇರುವ ಚಿತ್ರ ಮತ್ತು ವಿಡಿಯೊಗಳನ್ನು ಡಿಲೀಟ್‌ ಮಾಡಲು ಶೇ 65ರಷ್ಟು ಮೊಬೈಲ್ ಬಳಕೆದಾರರು ಬೇಸರ ವ್ಯಕ್ತಪಡಿಸಿದ್ದಾರೆ. ಇದರಲ್ಲಿ ರೆ. ಶೇ 46 ಮಂದಿ ವಾರಕ್ಕೊಮ್ಮೆಚಿತ್ರ ಮತ್ತು ವಿಡಿಯೊಗಳನ್ನು ಡಿಲೀಟ್ ಮಾಡಿದರೆ, ಶೇ 77 ಮಂದಿ ತಿಂಗಳಿಗೊಮ್ಮೆ ಡಿಲೀಟ್‌ ಮಾಡುತ್ತಿದ್ದಾರಂತೆ.

ಫೋನ್ ಮೆಮೊರಿ ಸಮಸ್ಯೆ ಬಗ್ಗೆ ಅಚ್ಚರಿ ಮಾಹಿತಿ ಹೊರಹಾಕಿತು 'ಸ್ಯಾನ್‌ಡಿಸ್ಕ್'!!

ಭಾರತದ ಪ್ರತಿ ಮೊಬೈಲ್ ಬಳಕೆದಾರನೂ ವಾರಕ್ಕೆ ಸರಾಸರಿ 31 ಚಿತ್ರಗಳು ಮತ್ತು 14 ವಿಡಿಯೊಗಳನ್ನು ಸೆರೆ ಹಿಡಿಯುತ್ತಾರೆ. ಈ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗುತ್ತಿದ್ದು, ಎಲ್ಲವನ್ನೂ ಮೊಬೈಲ್‌ನಲ್ಲಿ ಸಂಗ್ರಹಿಸಿಕೊಳ್ಳುವುದು ಬಳಕೆದಾರರ ಮೇಲೆ ಒತ್ತಡ ಉಂಟು ಮಾಡುತ್ತದೆ ಎಂದು ಸ್ಯಾನ್‌ಡಿಸ್ಕ್ ಕಂಪೆನಿಯು ತಾನು ನಡೆಸಿರುವ ಸಮೀಕ್ಷೆಯಲ್ಲಿ ಹೇಳಿಕೊಂಡಿದೆ.

ಓದಿರಿ: ಮೊಬೈಲ್ ಮೂಲಕವೇ ವಿಡಿಯೊ ವ್ಲೋಗಿಂಗ್ ಮಾಡಿ ಹಣಗಳಿಸಿ!!

Best Mobiles in India

English summary
Indian mobile phone users regularly run out of space? Here is what SanDisk survey has found.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X