Subscribe to Gizbot

ಗೂಗಲ್‌ ಹಿಂದಿರುವ ಭಾರತೀಯ ಟೆಕ್ಕಿಗಳು

Posted By:

ಕಳೆದ ಎರಡು ದಿನಗಳಿಂದ ಸೋಶಿಯಲ್‌ ಮೀಡಿಯಾ ಸತ್ಯ ನಾದೆಳ್ಲ ಹೆಸರು ಟಾಪ್‌ ಟ್ರೆಂಡಿಂಗ್‌ ಮತ್ತು ಸರ್ಚ್ ಆಗುತ್ತಿದೆ. ನಿಜವಾಗಿಯೂ ನಾವೆಲ್ಲ ಚಪ್ಪಳೆ ತಟ್ಟಬೇಕಾದ ಸಂದರ್ಭ‌ವಿದು. ಭಾರತೀಯರಿಗೆ ಅವಕಾಶ ನೀಡಿದರೆ ತಮ್ಮ ಪ್ರತಿಭೆಯಿಂದಲೇ ಕಂಪೆನಿಯ ಸಿಇಒ ಪಟ್ಟವನ್ನು ಏರಬಹುದು ಎಂದು ಸತ್ಯ ನಾದೆಳ್ಲಾ ಸಾಧಿಸಿ ತೋರಿಸಿದ್ದಾರೆ.

ಸತ್ಯ ನಾದೆಳ್ಲಾರಂತೆ ಭಾರತೀಯ ಮೂಲದ ಟೆಕ್‌ ಪಂಡಿತರು ವಿವಿಧ ಕಂಪೆನಿಗಳಲ್ಲಿ ಹೊರ ದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಅದರಲ್ಲೂ ವಿಶೇಷವಾಗಿ ಗೂಗಲ್‌‌ನಲ್ಲಿ ಭಾರತೀಯರು ವಿವಿಧ ಉತ್ಪನ್ನಗಳ ಮುಖ್ಯಸ್ಥರಾಗಿ ಕಾರ್ಯ‌ನಿರ್ವ‌ಹಿಸುತ್ತಿದ್ದಾರೆ. ನಾವೆಲ್ಲಾ ಈ ಉತ್ಪನ್ನಗಳನ್ನು ಬಳಸುತ್ತಿದ್ದರೂ ಈ ಉತ್ಪನ್ನದ ಹಿಂದೆ ಇರುವ ಭಾರತೀಯ ಎಂಜಿನಿಯರ್‌ಗಳು ನಮಗೆಲ್ಲ ಅಪರಿಚಿತರಾಗಿದ್ದಾರೆ. ಹೀಗಾಗಿ ಗೂಗಲ್‌ ಹಿಂದೆ ಇರುವ ಭಾರತೀಯ ವ್ಯಕ್ತಿಗಳ ಕಿರುವ ಪರಿಚಯ ನಿಮಗಾಗಿ ಇಲ್ಲಿ ನೀಡಲಾಗಿದೆ.

ಇದನ್ನೂ ಓದಿ: ಗೂಗಲ್ ನ್ಯೂಸ್‌ನಲ್ಲಿ ಕನ್ನಡ ಬೇಕು ಎಂದು ಗೂಗಲ್‌ನ್ನು ಕೇಳಿ

ನಿರಂತರ ಸುದ್ದಿ ಪಡೆಯಲು ಫೇಸ್‌ಬುಕ್‌ನಲ್ಲಿ ಕನ್ನಡ ಗಿಝ್‌ಬಾಟ್‌ನ್ನು Like ಮಾಡಿ ಟ್ವೀಟರ್‌ನಲ್ಲಿ Follow ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಸುಂದರ್‌ ಪಿಚಾಯ್‌

ಗೂಗಲ್‌ ಹಿಂದಿರುವ ಭಾರತೀಯ ಟೆಕ್ಕಿಗಳು


ಸುಂದರ್ ಪಿಚಾಯ್‌ ಭಾರತೀಯ ಮೂಲದ ಅಮೆರಿಕದ ಕಂಪ್ಯೂಟರ್‌ ಎಂಜಿನಿಯರ್. ಮೂಲತಃ ಚೆನ್ನೈರವರಾದ ಸುಂದರ್‌ ಇಲ್ಲಿಯವರಗೆ ಗೂಗಲ್‌ ಕ್ರೋಮ್,ಆಂಡ್ರಾಯ್ಡ್ ಅಪ್ಲಿಕೇಶನ್‌, ಮತ್ತು ಗೂಗಲ್ ಡ್ರೈವ್‌ ವಿಭಾಗದ ಮುಖ್ಯಸ್ಥರಾಗಿ ನಿಯೋಜನೆಗೊಂಡಿದ್ದರು. 2004ರಲ್ಲಿ ಗೂಗಲ್‌ಗೆ ಸೇರಿದ ಪಿಚಾಯ್‌, ಖರಗ್‌ಪುರ್ ಐಐಟಿಯಿಂದ ಬಿ.ಟೆಕ್ ಪದವಿ,ಸ್ಟಾನ್‌ಫೋರ್ಡ್‌ ವಿಶ್ವವಿದ್ಯಾಲಯದಿಂದ ಎಂಎಸ್‌ ಪದವಿಗಳಿಸಿದ್ದಾರೆ.2013 ಆಂಡ್ರಾಯ್ಡ್‌ ವಿಭಾಗದ ಮುಖ್ಯಸ್ಥರಾಗಿ ಸುಂದರ್‌ ಪಿಚಾಯ್‌ ಕಾರ್ಯ‌ನಿರ್ವ‌ಹಿಸುತ್ತಿದ್ದಾರೆ

 ವಿಕ್‌ ಗುಂಡತ್ರಾ

ಗೂಗಲ್‌ ಹಿಂದಿರುವ ಭಾರತೀಯ ಟೆಕ್ಕಿಗಳು

ಹಿರಿಯ ಉಪಾಧ್ಯಕ್ಷ,ಸೋಶಿಯಲ್‌ ವಿಭಾಗ

ಮುಂಬೈ ಐಐಟಿಯ ಪದವಿಧರ ವಿಕ್‌ ಗುಂಡತ್ರಾ ಗೂಗಲ್‌ ಸೇರುವ ಮೊದಲು ಮೈಕ್ರೋಸಾಫ್ಟ್‌ ಜನರಲ್‌ ಮ್ಯಾನೇಜರ್‌ ಆಗಿ ಕಾರ್ಯ‌ನಿರ್ವ‌ಹಿಸಿದ್ದರು. 2007ರಲ್ಲಿ ಗೂಗಲ್‌ ಸೇರಿಕೊಂಡಿದ್ದ ಗುಂಡತ್ರಾ,ಗೂಗಲ್‌ ಪ್ಲಸ್‌ ಯಶಸ್ಸಿನ ಹಿಂದಿರುವ ವ್ಯಕ್ತಿ.ಸದ್ಯ ಗೂಗಲ್‌ ಪ್ಲಸ್‌‌ ಸೇರಿದಂತೆ ಸೋಶಿಯಲ್‌ ವಿಭಾಗ ಉಪಾಧ್ಯಕ್ಷರಾಗಿ ಕಾರ್ಯ‌ನಿರ್ವ‌ಹಿಸುತ್ತಿದ್ದಾರೆ.

 ನಿಕಿಶ್‌ ಅರೋರಾ.

ಗೂಗಲ್‌ ಹಿಂದಿರುವ ಭಾರತೀಯ ಟೆಕ್ಕಿಗಳು

ಹಿರಿಯ ಉಪಾಧ್ಯಕ್ಷ ಮತ್ತು ಮುಖ್ಯ ಬುಸಿನೆಸ್‌ ಅಧಿಕಾರಿ

ವಾರಣಾಸಿ ಐಐಟಿಯಲ್ಲಿ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ನಲ್ಲಿ 1989ರಲ್ಲಿ ಪದವಿ ಪಡೆದ ಅರೋರಾ ಬೋಸ್ಟನ್ ನಾರ್ಥ್‌ಇಸ್ಟರ್ನ್‌ ವಿವಿಯಿಂದ ಎಂಬಿಎ ಪದವಿಯನ್ನು ಪಡೆದಿದ್ದಾರೆ. 2004ರಲ್ಲಿ ಗೂಗಲ್‌ ಸೇರಿದ ಅರೋರಾ ಗೂಗಲ್‌ ಯುರೋಪ್‌‌,ಮಧ್ಯಪ್ರಾಚ್ಯ,ಆಫ್ರಿಕಾ ದೇಶಗಳ ಗೂಗಲ್‌‌ ಮಾರುಕಟ್ಟೆ ವಿಭಾಗದ ಅಧ್ಯಕ್ಷರಾಗಿ ಕಾರ್ಯ‌ನಿರ್ವ‌ಹಿಸಿದ್ದಾರೆ. ಸದ್ಯಕ್ಕೆ ಗೂಗಲ್‌ನ ಹಿರಿಯ ಉಪಾಧ್ಯಕ್ಷ ಮತ್ತು ಮುಖ್ಯ ಬುಸಿನೆಸ್‌ ಅಧಿಕಾರಿಯಾಗಿ ನಿಯೋಜನೆಗೊಂಡಿದ್ದಾರೆ.

 ಅಮಿತ್ ಸಿಂಘಾಲ್

ಗೂಗಲ್‌ ಹಿಂದಿರುವ ಭಾರತೀಯ ಟೆಕ್ಕಿಗಳು

ಹಿರಿಯ ಉಪಾಧ್ಯಕ್ಷ, ಸಾಫ್ಟ್‌ವೇರ್‌ ಎಂಜಿನಿಯರ್‌

ಐಐಟಿ ರೂರ್ಕಿಯಿಂದ ಕಂಪ್ಯೂಟರ್‍ ಸೈನ್ಸ್‌ನಲ್ಲಿ ಪದವಿ ಪಡೆದ ಇವರು ಆರಂಭದಲ್ಲಿ AT&T Labs ಕಂಪೆನಿಯಲ್ಲಿ ಉದ್ಯೋಗಆರಂಭಿಸಿ,ಗೂಗಲ್‌ ಸೇರಿದ್ದು 2000 ಇಸ್ವಿಯಲ್ಲಿ. ಬಳಕೆದಾರರ ಪ್ರಶ್ನೆಗಳಿಗೆ ನಿಖರವಾದ ಉತ್ತರವನ್ನು ಬರುವಂತೆ ಗೂಗಲ್‌ ಸರ್ಚ್‌ ಹೀಗೆ ಇರಬೇಕು ಎಂದು ಸಚ್‌‌ ಎಂಜಿನ್‌ ಕೋಡ್‌ ಬರೆದು ರೂಪಿಸಿದ್ದುಅಮಿತ್ ಸಿಂಘಾಲ್ ನೇತೃತ್ವದ ತಂಡ. ಗೂಗಲ್‌ನ "ranking algorithm"ನ ಪಂಡಿತ ಎಂದು ನ್ಯೂಯಾರ್ಕ್‌ ಟೈಮ್ಸ್‌ ಅಮಿತ್‌ ಸಿಂಘಾಲ್‌ರನ್ನು ಹೊಗಳಿದೆ.

 ಶ್ರೀಧರ್‌ ರಾಮಸ್ವಾಮಿ

ಗೂಗಲ್‌ ಹಿಂದಿರುವ ಭಾರತೀಯ ಟೆಕ್ಕಿಗಳು

ಹಿರಿಯ ಉಪಾಧ್ಯಕ್ಷ, ಜಾಹೀರಾತು ಮತ್ತು ವಾಣಿಜ್ಯ ವಿಭಾಗ

ಮದ್ರಾಸ್‌ ಐಐಟಿಯಿಂದ ಕಂಪ್ಯೂಟರ್‍ ಸೈನ್ಸ್‌ ವಿಭಾಗದಲ್ಲಿ ಪದವಿ ಪಡೆದಿರುವ ಶ್ರೀಧರ್‌ ರಾಮಸ್ವಾಮಿ, ಗೂಗಲ್‌ ಸೇರಿದ್ದು 2003ರಲ್ಲಿ.ಗೂಗಲ್‌ನ ಆದಾಯದ ಮೂಲ AdWords ರೂಪಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಡೇಟಾ ಬೇಸ್‌ ಸಿಸ್ಟಂ ಮತ್ತು ಡೇಟಾಬೇಸ್ ಸಿದ್ಧಾಂತ ಬಗ್ಗೆ ನೂರಕ್ಕೂ ಅಧಿಕ ಸಂಶೋಧನಾ ಪ್ರಬಂಧಗಳನ್ನು ಬರದಿದ್ದಾರೆ.

 ಕೃಷ್ಣಾ ಭರತ್‌

ಗೂಗಲ್‌ ಹಿಂದಿರುವ ಭಾರತೀಯ ಟೆಕ್ಕಿಗಳು

ಗೂಗಲ್‌ ನ್ಯೂಸ್‌‌ ಮುಖ್ಯಸ್ಥ

ಮೂಲತ ಬೆಂಗಳೂರಿನವರಾದ ಕೃಷ್ಣಾ ಭರತ್‌ ಐಐಟಿ ಮದ್ರಾಸ್‌ನಲ್ಲಿ ಪದವಿ ಗಳಿಸಿದ ಇವರು ಅಮೆರಿಕದ ಜಾರ್ಜಿಯಾ ಟೆಕ್ ವಿವಿಯಿಂದ ಪಿಎಚ್‌ಡಿ ಪದವಿಗಳಿಸಿದ್ದಾರೆ.
1999ರಲ್ಲಿ ಗೂಗಲ್‌‌ ಸೇರಿದ್ದ ಭರತ್‌ ಅವರಿಗೆಗೂಗಲ್‌ ನ್ಯೂಸ್‌ ಉತ್ಪನ್ನವನ್ನು ತಯಾರಿಸಿದ ಕೀರ್ತಿ‌ ಸಲ್ಲುತ್ತದೆ. ತನ್ನನ್ನು ತಾನೇ news guy ಎಂದು ಕರೆಯುತ್ತಿರುವ ಕೃಷ್ಣಾ ಭರತ್‌ ಗೂಗಲ್‌ ನ್ಯೂಸ್‌ ವಿಭಾಗದ ಮುಖ್ಯಸ್ಥರಾಗಿ ನಿಯೋಜನೆಗೊಂಡಿದ್ದಾರೆ.

ಲಲಿತೇಶ್ ಕತ್ರಗಡ್ಡ

ಗೂಗಲ್‌ ಹಿಂದಿರುವ ಭಾರತೀಯ ಟೆಕ್ಕಿಗಳು

ಬಾಂಬೆ ಐಐಟಿ ಹಳೇ ವಿದ್ಯಾರ್ಥಿ‌ಯಾಗಿರುವ ಲಲಿತೇಶ್ ಕತ್ರಗಡ್ಡ ಅವರಿಗೆ ಗೂಗಲ್‌ನ ಮ್ಯಾಪ್‌‌ನ್ನು ಸೃಷ್ಟಿಸಿದ ಕೀರ್ತಿ‌ ಸಲ್ಲುತ್ತದೆ.2002 ರಿಂದ ಗೂಗಲ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಲಲಿತೇಶ್ ಪ್ರಸ್ತತ ಮ್ಯಾಪ್‌ ವಿಭಾಗ ಮತ್ತು ಗೂಗಲ್‌ ಲಿಪ್ಯಂತರಣ(Transliteration) ವಿಭಾಗದಲ್ಲಿ ಕಾರ್ಯ‌ ನಿರ್ವ‌ಹಿಸುತ್ತಿದ್ದಾರೆ.

ಮನಿಕ್‌ ಗುಪ್ತ

ಗೂಗಲ್‌ ಹಿಂದಿರುವ ಭಾರತೀಯ ಟೆಕ್ಕಿಗಳು

ಗೂಗಲ್‌ಮ್ಯಾಪ್‌ ಜಾಗತಿಕ ಉಪಾಧ್ಯಕ್ಷ

ಈ ಹಿಂದೆ ಬೆಂಗಳೂರಿನಲ್ಲಿ ಭಾರತದ ಗೂಗಲ್‌ ಮ್ಯಾಪ್‌ ವಿಭಾಗದಲ್ಲಿ ಉದ್ಯೋಗದಲ್ಲಿದ್ದಲ ಮನಿಕ್‌ ಗುಪ್ತ ಸದ್ಯ ಗೂಗಲ್‌ನ ವಿಶ್ವದ ಮ್ಯಪ್‌‌ ವಿಭಾಗದ ಉಪಾಧ್ಯಕ್ಷರಾಗಿ ಕಾರ್ಯ‌‌‌‌‌ನಿರ್ವ‌ಹಿಸುತ್ತಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot