ದೇಶದ ಎಲ್ಲಾ ರೈಲ್ವೆ ನಿಲ್ದಾಣಗಳಲ್ಲಿಯೂ 'ಉಚಿತ ವೈಫೈ'!!..ಗ್ರಾಮೀಣ ಪ್ರದೇಶಗಳೂ ಡಿಜಿಟಲ್!!

|

ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಡಿಜಿಟಲ್‌ ಇಂಡಿಯಾ ಆಂದೋಲನದ ಭಾಗವಾಗಿ ದೇಶದ ಎಲ್ಲಾ ರೈಲ್ವೆ ನಿಲ್ದಾಣಗಳಲ್ಲಿಯೂ ಉಚಿತ ವೈಫೈ ಸೇವೆ ಒದಗಿಸಲು ರೈಲ್ವೆ ಇಲಾಖೆ ಸಜ್ಜಾಗಿದೆ.! ಈ ಬಗ್ಗೆ ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದು, ಕೆಲವೇ ದಿನಗಳಲ್ಲಿ ಭಾರತದ ರೈಲ್ವೆ ಡಿಜಿಟಲ್ ರೈಲ್ವೆಯಾಗಿ ಬದಲಾಗಲಿದೆ!!

ಇದೇ ಮಾರ್ಚ್‌ ವೇಳೆಗೆ 600 ನಿಲ್ದಾಣಗಳಿಗೆ ವೈ-ಫೈ ಸೌಲಭ್ಯ ಒದಗಿಸಲಾಗುವುದು ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದು, ಗ್ರಾಮೀಣ ಪ್ರದೇಶಗಳೂ ಸೇರಿದಂತೆ ದೇಶದಲ್ಲಿರುವ ಎಲ್ಲ 8,500 ರೈಲ್ವೆ ನಿಲ್ದಾಣಗಳಿಗೂ ವೈ-ಫೈ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ.!! ಹಾಗಾದರೆ, ಉಚಿತ ವೈಫೈ ಯೋಜನೆಗೆ ಸರ್ಕಾರ ಮಾಡುತ್ತಿರುವ ವೆಚ್ಚ ಎಷ್ಟು? ಇದರಿಂದ ಪ್ರಯಾಣಿಕರಿಗೆ ಏನು ಲಾಭ ಎಂಬುದನ್ನು ಮುಂದೆ ನೋಡಿ.!!

700 ಕೋಟಿ ರೂ. ವೆಚ್ಚ.!!

700 ಕೋಟಿ ರೂ. ವೆಚ್ಚ.!!

'ದಿನ ನಿತ್ಯದ ಕೆಲಸಕಾರ್ಯಗಳಲ್ಲಿ ಅಂತರ್ಜಾಲ ಬಳಕೆಯು ಪ್ರಮುಖ ಪಾತ್ರವಹಿಸಿದೆ. ದೇಶದ ಎಲ್ಲ ನಿಲ್ದಾಣಗಳಲ್ಲೂ ಉಚಿತ ವೈ-ಫೈ ವ್ಯವಸ್ಥೆ ಜಾರಿಗೆ ಪ್ರಯತ್ನಗಳು ನಡೆದಿದ್ದು, ಇದಕ್ಕಾಗಿ 110 ಮಿಲಿಯನ್‌ ಡಾಲರ್‌(ಸುಮಾರು 700 ಕೋಟಿ ರೂ.) ವೆಚ್ಚವಾಗಲಿದೆ ಎಂದು ಹೇಳಲಾಗಿದೆ.!!

ಪ್ರಸ್ತುತ ವೈಫೈ ಲಭ್ಯತೆ?

ಪ್ರಸ್ತುತ ವೈಫೈ ಲಭ್ಯತೆ?

ಈಗಾಗಲೇ ದೇಶದ ಪ್ರಮುಖ 216 ರೈಲ್ವೆ ನಿಲ್ದಾಣಗಳಲ್ಲಿ ಉಚಿತ ವೈ-ಫೈ ಲಭ್ಯವಿದೆ. 216 ರೈಲ್ವೆ ನಿಲ್ದಾಣಗಳಿಂದ 70 ಲಕ್ಷ ಜನರಿಗೆ ಅಂತರ್ಜಾಲ ಬಳಕೆಗೆ ಅನುಕೂಲವಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಹಾಗಾಗಿ, ದೇಶದಾಧ್ಯಂತ ಉಚಿತ ವೈಫೈ ತರಲು ರೈಲ್ವೆ ಇಲಾಖೆ ಪಣತೊಟ್ಟಿದೆ.!!

ಸುತ್ತಮುತ್ತಲಿನ ಜನರಿಗೂ ಅಂತರ್ಜಾಲ!!

ಸುತ್ತಮುತ್ತಲಿನ ಜನರಿಗೂ ಅಂತರ್ಜಾಲ!!

ದೇಶದಾಧ್ಯಂತ ರೈಲ್ವೆ ನಿಲ್ದಾಣಗಳಲ್ಲಿ ಉಚಿತ ವೈಫೈಯೋಜನೆ ಜಾರಿಯಾದರೆ ರೈಲು ಪ್ರಯಾಣಿಕರಿಗೆ ಮಾತ್ರವಲ್ಲ, ಸುತ್ತಮುತ್ತಲಿನ ಜನರಿಗೂ ಅಂತರ್ಜಾಲ ಸಂಪರ್ಕ ಉಚಿತವಾಗಿ ಲಭ್ಯವಾಗಲಿದೆ. ಸರಕಾರದ ಪ್ರಮಾಣ ಪತ್ರಗಳ ವಿಲೇವಾರಿ, ಡಿಜಿಟಲ್‌ ಬ್ಯಾಂಕಿಂಗ್‌, ಆಧಾರ್ ನೋಂದಣಿಗೂ ಇದು ಪೂರಕವಾಗಲಿದೆ.!!

ಡಿಜಿಟಲ್‌ ಹಾಟ್‌ ಸ್ಪಾಟ್‌!!

ಡಿಜಿಟಲ್‌ ಹಾಟ್‌ ಸ್ಪಾಟ್‌!!

ರೈಲ್ವೆ ಅಧಿಕಾರಿಗಳು ನಡೆಸಿದ ಸಭೆಯಲ್ಲಿ ವೈಫೈ ಸೇವೆ ವಿಸ್ತರಿಸುವ ಕುರಿತು ತೀರ್ಮಾನ ತೆಗೆದುಕೊಳ್ಳಲಾಗಿದೆ.! ಗ್ರಾಮೀಣ ಪ್ರದೇಶದಲ್ಲಿರುವ ರೈಲ್ವೆ ನಿಲ್ದಾಣಗಳು ವೈ-ಫೈವುಳ್ಳ ಕಿಯೋಸ್ಕ್‌ಗಳನ್ನು ಹೊಂದದ್ದು, ಇವುಗಳು ಹಾಟ್‌ ಸ್ಪಾಟ್‌ ಆಗಲಿವೆ.!!

How to Sharing a Mobile Data Connection with Your PC (KANNADA)
2019ರ ಮಾರ್ಚ್ ಗುರಿ.!!

2019ರ ಮಾರ್ಚ್ ಗುರಿ.!!

2018ರ ಮಾರ್ಚ್​ ವೇಳೆಗೆ 600 ನಿಲ್ದಾಣಗಳಿಗೆ ವೈಫೈ ಸೇವೆ ನೀಡಲು ಸಿದ್ಧತೆ ನಡೆದಿದೆ. 2019ರ ಮಾರ್ಚ್​ ವೇಳೆಗೆ ಎಲ್ಲಾ 8500 ರೈಲು ನಿಲ್ದಾಣಗಳಲ್ಲಿ ವೈಫೈ ಸೇವೆ ನೀಡುವ ಗುರಿ ಹೊಂದಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದುರ್ಬಲ ಜನರಿಂದ ರಹಸ್ಯವಾಗಿ ಹಣ ಗಳಿಸುತ್ತಿದೆ ಗೂಗಲ್!!?

Most Read Articles
Best Mobiles in India

English summary
All railway stations -- nearly 8,500 across the country, including those in rural and remote areas -- will be equipped with WiFi facilities at an estimated cost of Rs 700 crore

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more