Subscribe to Gizbot

ದುರ್ಬಲ ಜನರಿಂದ ರಹಸ್ಯವಾಗಿ ಹಣ ಗಳಿಸುತ್ತಿದೆ ಗೂಗಲ್!!?

Written By:

ದುರ್ಬಲ ಜನರಿಂದ ಮಿಲಿಯನ್‌ಗಟ್ಟಲೆ ಹಣವನ್ನು ಗೂಗಲ್ ರಹಸ್ಯವಾಗಿ ಹಣ ಗಳಿಸುತ್ತಿದೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ.! ರೆಫರಲ್ ಜಾಹಿರಾತು ನೀಡುವವರ ವೆಬ್‌ಸೈಟ್‌ಗೆ ಭೇಟಿ ನೀಡಿದ ಪ್ರತಿಯೋರ್ವರಿಗೆ 200 ಪೌಂಡ್‌ಗಳಷ್ಟು ಶುಲ್ಕವನ್ನು ಗೂಗಲ್ ಪಡೆಯುತ್ತಿದೆ ಎಂದು ದಿ ಸಂಡೇ ಟೈಮ್ಸ್ ಪ್ರಕಟಿಸಿದೆ.!!

ಅಂತರ್ಜಾಲ ದೈತ್ಯ ಮಧ್ಯವರ್ತಿಗಳನ್ನು ರೆಫರಲ್ ಏಜೆಂಟ್‌ಗಳೆಂದು ಕರೆಯಲಾಗುತ್ತದೆ. ಇಂತಹ ಏಜೆಂಟ್‌ಗಳೂ ಆರೋಗ್ಯ ಮತ್ತು ಇತರ ವಿಷಯಗಳ ಮೇಲೆ ಉಚಿತ ಸಲಹಾ ಹೆಲ್ಪ್ ಲೈನ್ ಹೆಸರಿನಲ್ಲಿ ಜಾಹಿರಾತು ನೀಡಿ ನಂತರ ದುರ್ಬಲ ಜನರನ್ನು ಮೋಸಗೊಳಿಸುತ್ತಿದ್ದಾರೆ. ಇದರ ಹಣದ ಪಾಲನ್ನು ಗೂಗಲ್ ಸಹ ಪಡೆಯುತ್ತಿದೆ ಎಂದು ಹೇಳಲಾಗಿದೆ.!!

ದುರ್ಬಲ ಜನರಿಂದ ರಹಸ್ಯವಾಗಿ ಹಣ ಗಳಿಸುತ್ತಿದೆ ಗೂಗಲ್!!?

ರೆಫರಲ್ ಏಜೆಂಟ್‌ಗಳು ಉಚಿತ ಸಲಹಾ ಹೆಲ್ಪ್ ಲೈನ್ ಹೆಸರಿನಲ್ಲಿ ಜಾಹಿರಾತು ನೀಡುತ್ತಾರೆ, ಆದರೆ ಖಾಸಗಿ ಪುನರ್ವಸತಿ ಕ್ಲಿನಿಕ್‌ಗಳಿಗೆ ಹೊಸ ರೋಗಿಗಳನ್ನು ರೆಫರ್ ಮಾಡಿದಾಗಲೆಲ್ಲಾ 20,000 ಪೌಂಡ್ ಗಳನ್ನು ಕಮಿಷನ್ ರೂಪದಲ್ಲಿ ಪಡೆಯುತ್ತಾರೆ ಎಂದು ತಿಳಿದುಬಂದಿದೆ. ಇದರಲ್ಲಿ 200 ಪೌಂಡ್‌ಗಳಷ್ಟು ಶುಲ್ಕವನ್ನು ಗೂಗಲ್ ಪಡೆಯುತ್ತಿದೆ ಎನ್ನಲಾಗಿದೆ.!!

ದುರ್ಬಲ ಜನರಿಂದ ರಹಸ್ಯವಾಗಿ ಹಣ ಗಳಿಸುತ್ತಿದೆ ಗೂಗಲ್!!?

ಅಮೆರಿಕಾದಲ್ಲಿ ರೆಫರಲ್ ಏಜೆಂಟ್ ಗಳಿಗೆ ಜಾಹಿರಾತು ನೀಡುವುದಕ್ಕೆ ನಿರ್ಬಂಧವಿದೆ. ಆದರೆ ಬ್ರಿಟನ್‌ನಲ್ಲಿ ಗೂಗಲ್ ಸಂಸ್ಥೆ ಅದೇ ರೆಫರಲ್ ಜಾಹಿರಾತುಗಳಿಂದ ಮಿಲಿಯನ್ ಗಟ್ಟಲೆ ಹಣ ಗಳಿಸುತ್ತಿದ್ದು, 2016 ರಲ್ಲಿ ಗೂಗಲ್ ರೆಫರಲ್ ಜಾಹಿರಾತುಗಳಿಂದಲೇ 59 ಬಿಲಿಯನ್ ಪೌಂಡ್ ಹಣ ಗಳಿಸಿದೆ.!!

2 ನಿಮಿಷದಲ್ಲಿ Aadhaar-ಮೊಬೈಲ್ ಲಿಂಕ್ ಮಾಡುವುದು ಹೇಗೆ..? ಸಿಂಪಲ್ ಟಿಪ್ಸ್..!

ಓದಿರಿ: ಒಂದೇ ದಿನದಲ್ಲಿ ವಿಶ್ವದೆಲ್ಲೆಡೆ ಹೆಸರಾಯ್ತು ನೂತನ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್!!

English summary
Google in a statement on Sunday said that they have decided to "extend" the practice of banning referral agents to Britain.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot