ಭಾರತೀಯ ರೈಲ್ವೇ: ಪೇಪರ್ ರಹಿತ ಕಾಯ್ದಿರಿಸದ ಟಿಕೇಟ್‌ಗಾಗಿ ಹೊಸ ಅಪ್ಲಿಕೇಶನ್

By Shwetha
|

ಮೊಬೈಲ್ ಪ್ಲಾಟ್‌ಫಾರ್ಮ್‌ಗಳ ಬಳಕೆ ಮತ್ತು ಅದರ ವಿಶೇಷತೆಗಳನ್ನು ಹೆಚ್ಚು ಉಪಯೋಗಿಸಬೇಕು ಎಂಬ ನಿಟ್ಟಿನಲ್ಲಿ ಪೇಪರ್ ರಹಿತ ಕಾಯ್ದಿರಿಸದ ಟಿಕೇಟ್‌ಗಳನ್ನು ಬುಕ್ ಮಾಡುವ ಸೌಲಭ್ಯವನ್ನು ಆರಂಭಿಸಿದೆ. ಅಂತೆಯೇ ಪ್ಲಾಟ್‌ಫಾರ್ಮ್ ಟಿಕೇಟ್‌ಗಳ ಸೌಲಭ್ಯವನ್ನು ಪ್ರಯಾಣಿಕರಿಗೆ ಒದಗಿಸಿದ್ದು ರಿಸರ್ವೇಶನ್ ಕೌಂಟರ್‌ಗಳಲ್ಲಿ ಸಾಲುಗಟ್ಟುವಿಕೆಯನ್ನು ತಡೆಯಲು ರೈಲ್ವೇ ಈ ನಿರ್ಧಾರವನ್ನು ಕೈಗೊಂಡಿದೆ.

ಓದಿರಿ: ಭಾರತೀಯ ರೈಲ್ವೇ: ಟಿಕೇಟ್ ಬುಕ್ ಮಾಡಲು ಮೊಬೈಲ್ ಅಪ್ಲಿಕೇಶನ್

ಮುಂಬೈನಲ್ಲಿ 75 ಲಕ್ಷ ಪ್ರಯಾಣಿಕರು ಸ್ಥಳೀಯ ರೈಲ್ವೇಯನ್ನೇ ಅವಲಂಬಿಸಿದ್ದು ಈ ಪ್ರಯಾಣಿಕರಿಗೆ ಈ ವ್ಯವಸ್ಥೆ ಹೆಚ್ಚು ಪ್ರಯೋಜನಕಾರಿಯಾಗಲಿದೆ. ಕೆಳಗಿನ ಸ್ಲೈಡರ್‌ಗಳಲ್ಲಿ ಇನ್ನಷ್ಟು ಮಾಹಿತಿಗಳನ್ನು ನಾವು ನೀಡುತ್ತಿದ್ದೇವೆ.

ಡಿಜಿಟಲ್ ಇಂಡಿಯಾಕ್ಕೆ ಬೆಂಬಲ

ಡಿಜಿಟಲ್ ಇಂಡಿಯಾಕ್ಕೆ ಬೆಂಬಲ

ಐಟಿ ಸಕ್ರಿಯಗೊಂಡಿರುವ ಪ್ರಯಾಣಿಕ ಸೇವೆಯನ್ನು ಸಂಸ್ಥೆ ಆರಂಭಿಸುತ್ತಿದ್ದು, ರೈಲ್ವೇ ಸಚಿವರಾದ ಸುರೇಶ್ ಪ್ರಭು ತಿಳಿಸಿದ್ದಾರೆ. ಮೋದಿಯವರ ಡಿಜಿಟಲ್ ಇಂಡಿಯಾಕ್ಕೆ ಬೆಂಬಲ ನೀಡುವ ಸಲುವಾಗಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಮನೆಯಲ್ಲೇ ಟಿಕೇಟ್ ಬುಕ್

ಮನೆಯಲ್ಲೇ ಟಿಕೇಟ್ ಬುಕ್

ಪ್ರಯಾಣಕ್ಕೂ ಮುನ್ನ ಪ್ರಯಾಣಿಕರು ತಮ್ಮ ಮನೆಯಲ್ಲೇ ಟಿಕೇಟ್ ಬುಕ್ ಮಾಡಬಹುದಾಗಿದ್ದು ಇದು ಅವರ ಸಮಯವನ್ನು ಉಳಿತಾಯ ಮಾಡಲಿದೆ.

ಪೇಪರ್‌ಲೆಸ್ ಪ್ಲಾಟ್‌ಫಾರ್ಮ್ ಟಿಕೆಟ್

ಪೇಪರ್‌ಲೆಸ್ ಪ್ಲಾಟ್‌ಫಾರ್ಮ್ ಟಿಕೆಟ್

ಪೇಪರ್‌ಲೆಸ್ ಪ್ಲಾಟ್‌ಫಾರ್ಮ್ ಟಿಕೆಟ್ ಪ್ರೊಗ್ರಾಮ್ ಮುಂಬೈ ಸಬ್‌ಅರ್ಬನ್ ಸೆಕ್ಶನ್‌ಗಳಲ್ಲಿ ಮುಖ್ಯ ಸೆಕ್ಶನ್‌ಗಳನ್ನು ಇದು ಕವರ್ ಮಾಡಲಿದೆ.

ಯೋಜನೆ

ಯೋಜನೆ

ನವ ದೆಹಲಿ ಮತ್ತು ಹಜರತ್ ನಿಜಾಮುದ್ದೀನ್ ಸ್ಟೇಶನ್‌ಗಳಲ್ಲಿ ಈ ಯೋಜನೆ ಜಾರಿಗೆ ಬರಲಿದೆ.

ಸೀಸನ್ ಟಿಕೇಟ್ ವ್ಯವಸ್ಥೆ

ಸೀಸನ್ ಟಿಕೇಟ್ ವ್ಯವಸ್ಥೆ

ವೆಸ್ಟರ್ನ್ ರೈಲ್ವೇ, ಸೆಂಟ್ರಲ್ ರೈಲ್ವೇ ಮತ್ತು ನಾರ್ತರ್ನ್ ರೈಲ್ವೇಗಳಲ್ಲಿ ಪೇಪರ್‌ಲೆಸ್ ಸೀಸನ್ ಟಿಕೇಟ್ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.

ಸ್ವಯಂಚಾಲಿತ ಟಿಕೇಟ್

ಸ್ವಯಂಚಾಲಿತ ಟಿಕೇಟ್

ಕರೆನ್ಸಿ ಕಾಯಿನ್ ಅಥವಾ ಕಾರ್ಡ್ ಆಪರೇಟ್ ಮಾಡಲಾಗುವ ಸ್ವಯಂಚಾಲಿತ ಟಿಕೇಟ್ ವೆಂಡಿಂಗ್ ಮೆಶೀನ್‌ಗಳನ್ನು ಹೆಚ್ಚಿನ ಸಬ್ ಅರ್ಬನ್ ಸ್ಟೇಶನ್‌ಗಳಲ್ಲಿ ಲಾಂಚ್ ಮಾಡಲಾಗುತ್ತದೆ.

ಹೊಸ ಯೋಜನೆ

ಹೊಸ ಯೋಜನೆ

ಈ ವರ್ಷದ ಬಜೆಟ್ ಮಂಡನೆಯಲ್ಲಿ ಈ ಹೊಸ ಯೋಜನೆಗಳನ್ನು ಪ್ರಸ್ತುತಪಡಿಸಲಾಗುತ್ತಿದೆ.

ಟಿಕೇಟ್ ಇಲ್ಲದೆ ಪ್ರಯಾಣಿಸುವ ಸಂಬವನೀಯತೆ

ಟಿಕೇಟ್ ಇಲ್ಲದೆ ಪ್ರಯಾಣಿಸುವ ಸಂಬವನೀಯತೆ

ಟಿಕೇಟ್ ಇಲ್ಲದೆ ಪ್ರಯಾಣಿಸುವ ಸಂಬವನೀಯತೆಯನ್ನು ಇದು ಕಡಿಮೆ ಮಾಡಲಿದೆ. ಐಓಎಸ್ ಪ್ಲಾಟ್‌ಫಾರ್ಮ್ ಅನ್ನು ಸದ್ಯದಲ್ಲಿಯೇ ರೈಲ್ವೇ ಟಿಕೇಟ್‌ಗಾಗಿ ಲಾಂಚ್ ಮಾಡಲಿದ್ದು 90% ದಷ್ಟು ಮೊಬೈಲ್ ಬಳಕೆದಾರರು ಅಪ್ಲಿಕೇಶನ್ ಬಳಸಿ ರೈಲು ಚಲನೆಯನ್ನು ಪರಿಶೀಲಿಸಿಕೊಳ್ಳಬಹುದು.

Best Mobiles in India

English summary
Railways today launched facilities for booking of paperless unreserved tickets as well as platform tickets to cut queues at the reservation counters.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X