ಬೆಂಗಳೂರು ನಗರಿಯಲ್ಲಿ ಟಾಪ್ ಟೆಕ್ ಸಂಸ್ಥೆಗಳ ಝೇಂಕಾರ

Written By:

ಬೆಂಗಳೂರು ಮಹಾನಗರಿ ಇಂದು ಹೈಟೆಕ್ ಸಿಟಿಯಾಗಿ ಬೆಳೆಯುತ್ತಿದೆ. ತಂತ್ರಜ್ಞಾನ ಕ್ಷೇತ್ರದಲ್ಲೂ ಇಂದು ಉದ್ಯಾನ ನಗರಿ ತನ್ನ ಪ್ರಭಾವವನ್ನು ಬೀರುತ್ತಿದ್ದು ವಿಶ್ವದ ಅಗ್ರಗಣ್ಯ ಟೆಕ್ ಕಂಪೆನಿಗಳು ಇಂದು ಸಿಲಿಕಾನ್ ಸಿಟಿಯಲ್ಲಿ ತಲೆ ಎತ್ತುತ್ತಿವೆ. ಇಂದಿನ ನಮ್ಮ ವಿಶೇಷ ಲೇಖನದಲ್ಲಿ ಇಂತಹುದೇ ಬೆಂಗಳೂರಿನ ಟೆಕ್ ಸ್ಟಾರ್ಟಪ್‌ಗಳ ಮಾಹಿತಿಯನ್ನು ನಾವು ನೀಡುತ್ತಿದ್ದು ವಿಶ್ವವೇ ಇಂದು ನಮ್ಮ ನಗರಿಗೆ ಗೌರವವನ್ನು ಸಲ್ಲಿಸುತ್ತಿದೆ.

ಓದಿರಿ: ಸೋಲಿಗೆ ಸಡ್ಡುಹೊಡೆದ ಟೆಕ್ ಜಗದ ಮಿಂಚು ನಕ್ಷತ್ರಗಳು

ಈ ಕೆಳಗಿನ ಸ್ಲೈಡರ್‌ಗಳಲ್ಲಿ ಇಂತಹ ಟಾಪ್ ಸ್ಟಾರ್ಟಪ್‌ಗಳ (ಉದ್ಯಮ ಸಂಸ್ಥೆಗಳ) ಮಾಹಿತಿಯನ್ನು ನಾವು ನೀಡುತ್ತಿದ್ದು ಇದು ಹೆಚ್ಚು ಆಕರ್ಷಕ ಎಂದೆನಿಸಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಥಾಪನೆ ವರ್ಷ: 2007

ಫ್ಲಿಪ್‌ಕಾರ್ಟ್

ಬಿನ್ನಿ ಬನ್ಸಾಲ್ ಮತ್ತು ಸಚಿನ್ ಬನ್ಸಾಲ್ ಫ್ಲಿಪ್‌ಕಾರ್ಟ್ ಎಂಬ ಇ ಕಾಮರ್ಸ್ ಸಂಸ್ಥೆಯ ಹರಿಕಾರರೆಂದೆನಿಸಿದ್ದಾರೆ.

ಸ್ಥಾಪನೆ ವರ್ಷ: 2011

ಓಲಾ

ಅಂಕಿತ್ ಭಾಟಿ ಮತ್ತು ಭಾವಿಷ್ ಅಗರ್‌ವಾಲ್ ಓಲಾ ಕ್ಯಾಬ್‌ ಸ್ಥಾಪಕರು.

ಸ್ಥಾಪನೆ ವರ್ಷ: 2007

ಮಂಥನ್

ಇದೊಂದು ವಿಶ್ಲೇಷಣೆ ಸಂಸ್ಥೆಯಾಗಿದ್ದು ಸ್ಥಾಪಕರು ಅತುಲ್ ಜಲಾನ್ ಆಗಿದ್ದಾರೆ.

ಸ್ಥಾಪನೆ ವರ್ಷ: 2007

ಇನ್‌ಮೊಬಿ

ಮೊಬೈಲ್ ಜಾಹೀರಾತು ಸಂಸ್ಥೆಯಾಗಿರುವ ಇನ್‌ಮೊಬಿ ರುವಾರಿ ಮೋಹಿತ್ ಸಕ್ಸೇನಾ, ಅಭಯ್ ಸಿಂಘಲ್ ಮತ್ತು ಅಮಿತ್ ಗುಪ್ತಾ ಆಗಿದ್ದಾರೆ.

ಸ್ಥಾಪನೆ ವರ್ಷ: 2009

ಅರ್ಬನ್ ಲ್ಯಾಡರ್

ಇ ಕಾಮರ್ಸ್ ಸೈಟ್ ಆಗಿರುವ ಅರ್ಬನ್ ಲ್ಯಾಡರ್ ಹುಟ್ಟುಹಾಕಿದವರು ಆಶಿಷ್ ಗೋಯೆಲ್, ರಾಜೀವ್ ಶ್ರಿವತ್ಸ ಆಗಿದ್ದಾರೆ.

ಸ್ಥಾಪನೆ ವರ್ಷ: 2011

ಬ್ಲ್ಯೂಸ್ಟೋನ್

ಇ ಕಾಮರ್ಸ್ ಸಂಸ್ಥೆಯಾಗಿದೆ. ಸ್ಥಾಪಕರು ಗೌರವ್ ಸಿಂಗ್ ಕುಶ್ವಾ, ವಿದ್ಯಾ ನಟರಾಜ್

ಸ್ಥಾಪನೆ ವರ್ಷ: 2009

ನ್ಯೂಸ್ ಹಂಟ್

ಸುದ್ದಿ ಮಾಧ್ಯಮವಾಗಿರುವ ನ್ಯೂಸ್ ಹಂಟ್ ಸ್ಥಾಪಕರು ಉಮೇಶ್ ಕುಲಕರ್ಣಿ ಮತ್ತು ಚಂದ್ರಶೇಖರ್ ಸೊಹಾನಿಯಾಗಿದ್ದಾರೆ.

ಸ್ಥಾಪನೆ ವರ್ಷ: 2011

ನೇಟೀವ್ 5

ಮೊಬೈಲ್ ಅಪ್ಲಿಕೇಶನ್ ಆಗಿದ್ದು ಮಿಂತ್ರಾ ಕಂಪೆನಿ ಇದನ್ನು ಸ್ವಾಧೀನಪಡಿಸಿಕೊಂಡಿದೆ.

ಸ್ಥಾಪನೆ ವರ್ಷ: 2009

ಮಿಂತ್ರಾ

ಇ ಕಾಮರ್ಸ್ ಸೈಟ್ ಆಗಿರುವ ಮಿಂತ್ರಾವನ್ನು ಫ್ಲಿಪ್‌ಕಾರ್ಟ್ ಸ್ವಾಧೀನಪಡಿಸಿಕೊಂಡಿದೆ.

ಸ್ಥಾಪನೆ ವರ್ಷ: 2010

ಡೆಕ್‌ಸ್ಟ್ರಾ

ಆಂಡ್ರಾಯ್ಡ್ ಸಾಫ್ಟ್‌ವೇರ್ ಆಗಿದ್ದು ಕ್ವಿಕ್ಸೆ ಕಂಪೆನಿಯ ಒಡೆತನದಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
List of some amazing Bangalore based startups that have crossed the chasm and have been able to get past the Series A crunch, doing phenomenally well and have made the city proud.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot