ಸೋಲಿಗೆ ಸಡ್ಡುಹೊಡೆದ ಟೆಕ್ ಜಗದ ಮಿಂಚು ನಕ್ಷತ್ರಗಳು

By Shwetha
|

ಇಂದಿನ ಆಧುನಿಕ ಯುಗದಲ್ಲಿ ತಂತ್ರಜ್ಞಾನ ಎಂಬುದು ಹೆಚ್ಚು ಪ್ರಗತಿಶೀಲವಾಗುತ್ತಿದೆ. ಸಣ್ಣ ಸಣ್ಣ ಇಲೆಕ್ಟ್ರಾನಿಕ್ ಉಪಕರಣಗಳನ್ನು ಇಂದು ಮಾನವನು ತನ್ನ ಬಳಕೆಗೆ ಅನುಗುಣವಾಗಿ ಮಾರ್ಪಡಿಸುತ್ತಿದ್ದು ಇದರಿಂದಾಗಿ ಹೊಸ ಹೊಸ ಅನ್ವೇಷಣೆಗಳು ನಮ್ಮನ್ನು ತಲುಪುತ್ತಿವೆ. ಇನ್ನು ವಿಶ್ವದ ಇತರ ರಾಷ್ಟ್ರಗಳೂ ಕೂಡ ಈ ನೆಲೆಯಲ್ಲಿ ನಮಗೆ ಮಾರ್ಗದರ್ಶನವನ್ನು ನೀಡುತ್ತಿವೆ ಎಂದರೆ ತಪ್ಪಾಗಲಾರದು.

ಓದಿರಿ: ಅರಳು ಹುರಿದಂತೆ ಇಂಗ್ಲೀಷ್ ಮಾತನಾಡಲು ಈ ಅಪ್ಲಿಕೇಶನ್ ಸಾಕು

ಬನ್ನಿ ಇಂತಹುದೇ ವಿಶ್ವದ ಟಾಪ್ ಶಕ್ತಿಯುತ ಇಲೆಕ್ಟ್ರಾನಿಕ್ ನಗರಗಳ ವಿವರ ಮಾಹಿತಿಯನ್ನು ಅರಿತುಕೊಳ್ಳೋಣ. ಈ ದೇಶಗಳೂ ಕೂಡ ಬಡತನ, ನಿರುದ್ಯೋಗ ಮೊದಲಾದ ವಿನಾಶಕಾರಿ ಅಂಶಗಳಿಂದ ಬಳಲುತ್ತಿದ್ದವು ಎಂಬುದು ನಿಮಗೆ ಗೊತ್ತೇ? ಆದರೆ ತಮ್ಮ ಸಾಧನೆ ಮತ್ತು ಅವಿರತ ಶ್ರಮದ ಮೂಲಕ ಈ ದೇಶಗಳು ಇಂದು ವಿಶ್ವದ ಟಾಪ್ ಬಲಿಷ್ಟ ರಾಷ್ಟ್ರಗಳೆಂದೆನಿಸಿವೆ ಜೊತೆಗೆ ತಂತ್ರಜ್ಞಾನದಲ್ಲೂ ಮುಂದಿವೆ.

ಜಪಾನ್

ಜಪಾನ್

ವಿಜ್ಞಾನ ಸಂಶೋಧನೆಗೆ ಹೆಸರುವಾಸಿಯಾಗಿರುವ ಈ ದೇಶ ಆಟೊಮೊಬೈಲ್ಸ್, ಇಲೆಕ್ಟ್ರಾನಿಕ್ಸ್, ಮೆಶೀನ್‌ಗಳು, ಭೂಕಂಪ ಇಂಜಿನಿಯರಿಂಗ್, ಹೀಗೆ ವಿವಿಧ ಕ್ಷೇತ್ರಗಳಿಗೆ ಅದ್ಭುತ ಕೊಡುಗೆಯನ್ನು ನೀಡಿವೆ. ಜಪಾನ್‌ನ ಸಂಶೋಧನೆಗಳು ನೋಬೆಲ್ ಪ್ರಶಸ್ತಿಯನ್ನು ಸ್ವೀಕರಿಸಿವೆ.

ಯುನೈಟೆಡ್ ಸ್ಟೇಟ್ಸ್

ಯುನೈಟೆಡ್ ಸ್ಟೇಟ್ಸ್

ಬಾಹ್ಯಾಕಾಶ ತಂತ್ರಜ್ಞಾನದಲ್ಲಿನ ಸುಧಾರಣೆಯು ಅಮೇರಿಕಾವನ್ನು ವಿಶ್ವದಲ್ಲಿಯೇ ಜಾಗತಿಕ ಶಕ್ತಿಯ ಕೇಂದ್ರಬಿಂದುವಾಗಿ ರೂಪಿಸಿದೆ. ಆಟೊಮಿಕ್ ಬಾಂಬ್‌ನಿಂದ ಹಿಡಿದು ನೀಲ್ ಆರ್ಮ್‌ಸ್ಟ್ರಾಂಗ್ ಅನ್ನು ಚಂದ್ರನಲ್ಲಿಗೆ ಕಳುಹಿಸಿದ ದೇಶವಾಗಿ ವಿಶ್ವ ಮಾನ್ಯತೆ ಪಡೆದಿದೆ. ವಿಶ್ವದ ಅತಿದೊಡ್ಡ ತಂತ್ರಜ್ಞಾನ ಕಂಪೆನಿಗಳಾದ ಗೂಗಲ್, ಫೇಸ್‌ಬುಕ್, ಆಪಲ್, ಇಂಟೆಲ್, ಮೈಕ್ರೋಸಾಫ್ಟ್‌ ಅಮೇರಿಕಾದ ಕೊಡುಗೆಗಳಾಗಿವೆ.

ದಕ್ಷಿಣ ಕೊರಿಯಾ

ದಕ್ಷಿಣ ಕೊರಿಯಾ

ಎಲ್‌ಜಿ, ಹುಂಡೈ ಮತ್ತು ಸ್ಯಾಮ್‌ಸಂಗ್ ಕಂಪೆನಿಗಳ ಜನ್ಮ ಸ್ಥಾನವಾಗಿ ದಕ್ಷಿಣ ಕೊರಿಯಾವನ್ನು ಪರಿಗಣಿಸಲಾಗಿದೆ. ಆಪಲ್ ಮತ್ತು ಟಯೋಟಾದಂತಹ ಜಾಗತಿಕ ತಂತ್ರಜ್ಞಾನ ಬ್ರ್ಯಾಂಡ್‌ಗಳೊಂದಿಗೆ ಇಂದು ಈ ಕಂಪೆನಿಗಳು ಪೈಪೋಟಿಯನ್ನು ಮಾಡುತ್ತಿವೆ. ಯುಎಸ್‌ನ ಮೂರು ಪಟ್ಟು ಅಧಿಕ ಇಂಟರ್ನೆಟ್ ವೇಗವನ್ನು ದಕ್ಷಿಣ ಕೊರಿಯಾ ಪಡೆದುಕೊಂಡಿದೆ.

ಇಸ್ರೇಲ್

ಇಸ್ರೇಲ್

ಇಸ್ರೇಲ್‌ನ 35 ಶೇಕಡದಷ್ಟು ರಫ್ತು ತಂತ್ರಜ್ಞಾನ ಸಂಬಂಧಿತವಾಗಿದೆ. ಇನ್ನು ಬಾಹ್ಯಾಕಾಶ ವಿಜ್ಞಾನದಲ್ಲೂ ಇಸ್ರೇಲ್ 5 ನೇ ಸ್ಥಾನವನ್ನ ಗಳಿಸಿಕೊಂಡಿದೆ.

ಜರ್ಮನಿ

ಜರ್ಮನಿ

ಹೈಟೆಕ್ ದೇಶ ಎಂಬ ಮನ್ನಣೆಯನ್ನು ಜಪಾನ್ ಗಳಿಸಿಕೊಂಡಿದೆ. ಇಂಜಿನಿಯರಿಂಗ್ ಕ್ಷೇತ್ರದಲ್ಲಿ ತನ್ನ ಸಾಧನೆಗಳ ಮೂಲಕ ಅದು ವಿಶ್ವಪ್ರಸಿದ್ಧಿಯನ್ನು ಪಡೆದುಕೊಂಡಿದೆ.

ರಷ್ಯಾ

ರಷ್ಯಾ

ಚಂದ್ರನ ಮೇಲ್ಮೈಯನ್ನು ತಲುಪುವ ಪ್ರಥಮ ಮಾನವ ನಿರ್ಮಿತ ವಸ್ತುವನ್ನು ರಷ್ಯಾ ಲಾಂಚ್ ಮಾಡಿತು. ಬಾಹ್ಯಾಕಾಶ ತಂತ್ರಜ್ಞಾನವನ್ನು ಹೊರತುಪಡಿಸಿ, ಭಾರೀ ಮಿಶನರಿಗಳ ಕ್ಷೇತ್ರದಲ್ಲಿ ಪಿತಾಮಹ ಎಂಬ ಬಿರುದಿಗೆ ರಷ್ಯಾ ಭಾಜನವಾಗಿದೆ.

ಫಿನ್‌ಲ್ಯಾಂಡ್

ಫಿನ್‌ಲ್ಯಾಂಡ್

ಹೈಟೆಕ್ ಪ್ರಾಜೆಕ್ಟ್‌ಗಳು ಮತ್ತು ಆರೋಗ್ಯ ಕಾಳಜಿ ಸೌಲಭ್ಯಗಳಿಗಾಗಿ ಫಿನ್‌ಲ್ಯಾಂಡ್ ಪ್ರಸಿದ್ಧವಾಗಿದೆ. ನೋಕಿಯಾದ ಉಗಮ ಸ್ಥಾನ ಫಿನ್‌ಲ್ಯಾಂಡ್ ಆಗಿದೆ.

ಯುನೈಟೆಡ್ ಕಿಂಗ್‌ಡಮ್

ಯುನೈಟೆಡ್ ಕಿಂಗ್‌ಡಮ್

ವಿಶ್ವದ ಪ್ರಥಮ ಕೈಗಾರಿಕಾ ದೇಶವಾಗಿದೆ ಯುನೈಟೆಡ್ ಕಿಂಗ್‌ಡಮ್. ಹೈಡ್ರೋಜನ್‌ನ ಅನ್ವೇಷಣೆಗೆ ಈ ದೇಶ ಮಾನ್ಯತೆಯನ್ನು ಪಡೆದುಕೊಂಡಿದೆ.

ಕೆನಡಾ

ಕೆನಡಾ

ತಂತ್ರಜ್ಞಾನ ಮಟ್ಟದಲ್ಲಿ ಹೆಚ್ಚು ಸುಧಾರಿತ ದೇಶವಾಗಿ ಕೆನಡಾ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಕೈಗಾರಿಕಾ ಸಂಶೋಧನೆಗೆ ಕೆನಡಾ ಸರಕಾರ ಪ್ರೋತ್ಸಾಹವನ್ನು ನೀಡುತ್ತಿದೆ.

ಸಿಂಗಪೂರ್

ಸಿಂಗಪೂರ್

ಹೈಟೆಕ್ ಅಂತೆಯೇ ವ್ಯವಹಾರ ಸ್ನೇಹಿ ದೇಶವಾಗಿ ವಿಶ್ವದಾದ್ಯಂತ ಮಾನ್ಯತೆಯನ್ನು ಪಡೆದಿದೆ. ಜ್ಞಾನ ಆಧಾರಿತ, ಅನ್ವೇಷಣಾ ದೇಶವಾಗಿ ಪ್ರಾಬಲ್ಯವನ್ನು ಪಡೆದುಕೊಂಡಿದೆ.

 ನೆದರ್‌ಲ್ಯಾಂಡ್

ನೆದರ್‌ಲ್ಯಾಂಡ್

ಸಂವಹನ ವ್ಯವಸ್ಥೆ, ಕಂಪ್ಯೂಟರ್‌ಗಳ ತಯಾರಿಕೆಯಲ್ಲಿ ನೆದರ್‌ಲ್ಯಾಂಡ್ ಮುಂದಿದೆ. ಪೆಂಡ್ಯುಲಾಮ್ ಕ್ಲಾಕ್, ಮೈಕ್ರೋಸ್ಕೋಪ್ ತಯಾರಿಯಲ್ಲಿ ಈ ದೇಶ ಮುಂದಿದೆ.

ಚೀನಾ

ಚೀನಾ

ಮುಂದಿನ ಸೂಪರ್ ಪವರ್ ಎಂಬ ಹೆಗ್ಗಳಿಕೆಗೆ ಚೀನಾ ಪಾತ್ರವಾಗಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಚೀನಾ ಮಾಡಿರುವ ಸಾಧನೆ ಮಹತ್ತರವಾದುದು. ಗನ್ ಪೌಡರ್ ಮತ್ತು ದಿಕ್ಸೂಚಿಯನ್ನು ಚೀನಾದಲ್ಲಿ ಪ್ರಥಮ ಬಾರಿಗೆ ಬಳಸಲಾಯಿತು.

Most Read Articles
Best Mobiles in India

English summary
Technology is the application of scientific knowledge for practical purposes, especially in industry. Many nations worldwide have used technology to enhance the quality of life of their people.Here are the 12 most technologically advanced countries in the world as of 2015..

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more