ಭಾರತ ತಂಡ ಇಂಡಸ್‌ಗೆ ಗೂಗಲ್‌ನಿಂದ 1 ಮಿಲಿಯನ್ ಬಹುಮಾನ

Written By:

ಭಾರತದ ತಂಡವೂ ಸೇರಿದಂತೆ ಒಟ್ಟು $5.25 ಮಿಲಿಯನ್ ಅನ್ನು ಪ್ರಶಸ್ತಿಯಾಗಿ ಐದು ಗೂಗಲ್ ಲೂನಾರ್ ಎಕ್ಸ್ ಪ್ರೈಜ್ ತಂಡಗಳಿಗೆ ಘೋಷಿಸಿದೆ. ಈ ಪ್ರಶಸ್ತಿಯು ಮೂರು ವರ್ಗಗಳನ್ನು ಹೊಂದಿದ್ದು ಇಮೇಜಿಂಗ್, ಮೊಬಿಲಿಟಿ ಮತ್ತು ಲ್ಯಾಂಡಿಂಗ್ ಸಿಸ್ಟಮ್‌ಗಳನ್ನು ಇದು ಒಳಗೊಂಡಿದೆ. ಚಂದ್ರನಲ್ಲಿ ರೋಬೋಟ್ ಅನ್ನು ಯಶಸ್ವಿಯಾಗಿ ಲ್ಯಾಂಡ್ ಮಾಡುವುದಕ್ಕಾಗಿ ತಂಡವನ್ನು ಉತ್ತೇಜಿಸುವ ಗುರಿಯನ್ನು ಗೂಗಲ್ ಲೂನಾರ್ ಎಕ್ಸ್ ಪ್ರೈಜ್ ಹೊಂದಿತ್ತು.

ಭಾರತ ತಂಡ ಇಂಡಸ್‌ಗೆ ಗೂಗಲ್‌ನಿಂದ 1 ಮಿಲಿಯನ್ ಬಹುಮಾನ

ಗೂಗಲ್ ಒಂಭತ್ತು ಮೈಲ್‌ಸ್ಟೋನ್ ಪ್ರಶಸ್ತಿಗಳನ್ನು ಐದು ತಂಡಗಳಿಗೆ ವಿತರಿಸಿದ್ದು, ಇಂಡಿಯಾದ ತಂಡವೂ ಸೇರಿದಂತೆ $1 ಮಿಲಿಯನ್ ಅನ್ನು ಗೆದ್ದುಕೊಂಡಿದೆ. ಚಂದ್ರನಲ್ಲಿ ಗೂಗಲ್ ಲೂನಾರ್ ಎಕ್ಸ್ ಪ್ರೈಜ್ ಸ್ಪೇಸ್‌ಕ್ರಾಫ್ಟ್ ಅನ್ನು ಲಾಂಡ್ ಮಾಡುವ ಬೆಂಬಲಕ್ಕಾಗಿ ಎಲ್ಲಾ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಅಗತ್ಯವಾಗಿದೆ ಎಂದು ಗೂಗಲ್ ವಿವರಿಸಿತ್ತು.

ಇದನ್ನೂ ಓದಿ: ಫೋನ್ ನೀರಲ್ಲಿ ಬಿದ್ದಾಗ ಈ ಟ್ರಿಕ್‌ಗಳನ್ನು ಅನುಸರಿಸಿ

ಯೂಎಸ್ ಮೂಲದ ಆಸ್ಟ್ರೋಬೋಟಿಕ್ ಹಾಗೂ ಮೂನ್ ಎಕ್ಸ್‌ಪ್ರೆಸ್ ಲ್ಯಾಂಡಿಂಗ್ ಸಿಸ್ಟಮ್‌ಗಳಿಗಾಗಿ ಮೈಲ್‌ಸ್ಟೋನ್ ಪ್ರಶಸ್ತಿಯನ್ನು ಗಳಿಸಿಕೊಂಡಿದೆ. ಭಾರತದ ತಂಡ ಇಂಡಸ್, ಬೆಂಗಳೂರು ಎರಡು ಸಂಪೂರ್ಣ ಮೈಲ್‌ಸ್ಟೋನ್ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಲ್ಯಾಂಡಿಂಗ್ ಹಾಗೂ ಇಮೇಜಿಂಗ್ ಪ್ರಶಸ್ತಿಗಳನ್ನು ಇದು ಒಳಗೊಂಡಿದೆ.

English summary
This article tells about A combined $5.25 million has been awarded to five Google Lunar Xprize teams, including one from India.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot