Home
ಸುದ್ದಿಜಾಲ

ಈ ವರ್ಷ ಟೆಲಿಕಾಂ ವಲಯದಲ್ಲಿ ಭಾರಿ ಬದಲಾವಣೆ ಸಾಧ್ಯತೆ!

2019ರಲ್ಲಿ ದೇಶದ ಟೆಲಿಕಾಂ ವಲಯವು ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ವರ್ಷದ ಕೊನೆಯಲ್ಲಿ ಖಾಸಗಿ ಟೆಲಿಕಾಂಗಳು ಪ್ರೀಪೇಡ್ ಪ್ಲ್ಯಾನ್‌ಗಳ ಬೆಲೆ ಏರಿಕೆ ಮಾಡಿ ಗ್ರಾಹಕರಿಗೆ ಹೊರೆ ಮಾಡಿದ್ದವು. ಹಾಗೆಯೇ ಪ್ರಸಕ್ತ 2020 ರಲ್ಲಿಯೂ ದೇಶದ ಟೆಲಿಕಾಂ ವಲಯದಲ್ಲಿ ಭಾರೀ ಮಹತ್ತರ ಬದಲಾವಣೆಗಳು ನಡೆಯಲಿವೆ ಎಂದು ನಿರೀಕ್ಷಿಸಲಾಗಿದೆ. ಹೊಸ ಬದಲಾವಣೆಗಳು ಗ್ರಾಹಕರಿಗೆ ಹೊಸ ಪ್ರಯೋಜನಗಳನ್ನು ಒದಗಿಸಲಿದೆ.

ಬಿಎಸ್‌ಎನ್‌ಎಲ್‌

ಹೌದು, ಪ್ರಸಕ್ತ ವರ್ಷ ದೇಶದ ಟೆಲಿಕಾಂ ವಲಯದಲ್ಲಿ ಅಚ್ಚರಿಯ ಬದಲಾವಣೆಗಳು ನಡೆಯಲಿವೆ. ಬಿಎಸ್‌ಎನ್‌ಎಲ್‌ 4G, ಪ್ರಾಯೋಗಿಕ 5G ನೆಟವರ್ಕ್, ಓಟಿಟಿ ಸೇವೆಗಳು ಸೇರಿದಂತೆ ಹೊಸತನ ಸೇವೆಗಳು ಪರಿಚಯವಾಗಲಿವೆ. ಹಾಗಾದರೇ 2020 ರಲ್ಲಿ ಟೆಲಿಕಾಂ ವಲಯದಲ್ಲಿ ಯಾವೆಲ್ಲಾ ಹೊಸ ಸೇವೆಗಳು ಮತ್ತು ಬದಲಾವಣೆಗಳು ಸೇರಿಕೊಳ್ಳಲಿವೆ ಎಂಬುದರ ಮಾಹಿತಿ ಬಗ್ಗೆ ತಿಳಿಯಲು ಮುಂದೆ ಓದಿರಿ.

ಪ್ರಾಯೋಗಿಕ 5G ನೆಟವರ್ಕ್

ಪ್ರಾಯೋಗಿಕ 5G ನೆಟವರ್ಕ್

ಪ್ರಸಕ್ತ 2020ರಲ್ಲಿ ದೇಶದಲ್ಲಿ ಪ್ರಾಯೋಗಿಕ 5G ನೆಟವರ್ಕ್ ಸೇವೆಗಳು ಶುರುವಾಗುವ ಸಾಧ್ಯತೆಗಳು ಹೆಚ್ಚಿವೆ. ಈ ವರ್ಷ ಮಾರ್ಚ್ನಲ್ಲಿ 5G ನೆಟವರ್ಕ್ ಸ್ಪೆಕ್ಟ್ರಮ್ ಹರಾಜು ಪ್ರಕ್ರಿಯೆ ನಡೆಯಲಿದೆ ಎನ್ನಲಾಗಿದೆ. ಟೆಲಿಕಾಂ ಕಂಪನಿಗಳು ಸ್ಪೆಕ್ಟ್ರಮ್ ಅನ್ನು ಆಯ್ದ ವಲಯಗಳಲ್ಲಿ ನಿಯೋಜಿಸಬಹುದು, ಆದರೆ ಆರಂಭದಲ್ಲಿ 5G ನೆಟವರ್ಕ್ ವಾಣಿಜ್ಯ ಆವೃತ್ತಿಯಲ್ಲಿ ಲಭ್ಯವಾಗುವುದಿಲ್ಲ ಎನ್ನಲಾಗಿದೆ.

ಬಿಎಸ್‌ಎನ್‌ಎಲ್ 4G

ಬಿಎಸ್‌ಎನ್‌ಎಲ್ 4G

ಸರಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಇನ್ನು 3G ನೆಟವರ್ಕ್‌ನಲ್ಲಿದೆ ಇಂಟರ್ನೆಟ್ ಸ್ಲೋ ಇದೆ ಎನ್ನವ ಗ್ರಾಹಕರಿಗೆ ಸಿಹಿಸುದ್ದಿ. ಈ ವರ್ಷ ಬಿಎಸ್‌ಎನ್ಎಲ್ 4G ನೆಟವರ್ಕಗೆ ಅಪ್‌ಡೇಟ್ ಆಗಲಿದೆ ಎಂದು ಹೇಳಲಾಗುತ್ತಿದೆ. ಈ ಸೇವೆಯು ದೇಶವ್ಯಾಪಿ ಎಲ್ಲ ಟೆಲಿಕಾಂ ಸರ್ಕಲ್‌ಗಳಲ್ಲಿಯೂ ಲಭ್ಯವಾಗಲಿದೆ ಎನ್ನಲಾಗಿದೆ.

OTT ಸೇವೆಗಳು

OTT ಸೇವೆಗಳು

ಓವರ್-ದಿ-ಟಾಪ್ (OTT) ಕಂಟೆಂಟ್‌ಗಳಿಗೆ 2019 ಉತ್ತಮ ಪ್ಲಾಟ್‌ಫಾರ್ಮ್‌ ಆಗಿತ್ತು. ಹಾಗೆಯೇ 2020 ಸಹ ಇನ್ನಷ್ಟು ಹೆಚ್ಚಿನ ಅನುಕೂಲ ಒದಗಿಸಲಿದೆ. 2020 ರಲ್ಲಿ ಬಿಎಸ್‌ಎನ್‌ಎಲ್ ಸಹ ಈ ವಲಯಕ್ಕೆ ಉತ್ಸಾಹದಿಂದ ಸೇರಲಿದೆ ಎಂದು ನಿರೀಕ್ಷಿಸಲಾಗಿದೆ, ಆದರೆ ಇತರ ಟೆಲಿಕಾಂ ಆಪರೇಟರ್‌ಗಳು ತಮ್ಮ ಕೊಡುಗೆಗಳನ್ನು ಅಧಿಕ ಗೊಳಿಸಲಿವೆ.

ಸೆಲ್ಫ ಕೇರ್ ಅಪ್ಲಿಕೇಶನ್

ಸೆಲ್ಫ ಕೇರ್ ಅಪ್ಲಿಕೇಶನ್

ಈಗಾಗಲೇ ಟೆಲಿಕಾಂ ಕಂಪನಿಗಳು ಸ್ವಯಂ-ಆರೈಕೆ ಅಪ್ಲಿಕೇಶನ್‌ಗಳ ಮೂಲಕ ಗ್ರಾಹಕರಿಗೆ ಉತ್ತಮ ಅನುಭವವನ್ನು ನೀಡುವ ಗುರಿಯನ್ನು ಹೊಂದಿವೆ. ಉದಾಹರಣೆಗೆ, ಏರ್‌ಟೆಲ್ ಥ್ಯಾಂಕ್ಸ್‌ ಅಪ್ಲಿಕೇಶನ್‌ನಲ್ಲಿ ಎಂಎನ್‌ಪಿ ಟ್ರ್ಯಾಕಿಂಗ್ ಸೇರ್ಪಡೆ ಅಥವಾ ಇತರ ಸೇವೆಗಳು ಮತ್ತು ಏಕೀಕರಣಗಳು ಗ್ರಾಹಕರನ್ನು ಸೆಳೆಯಲು ಮತ್ತು ಅಪ್ಲಿಕೇಶನ್‌ಗೆ ಹೆಚ್ಚಿನ ಸಮಯವನ್ನು ಕಳೆಯಲು ಬಳಸಲಾಗುತ್ತಿದೆ. ಮೈ ಜಿಯೊ ಅಪ್ಲಿಕೇಶನ್ ಈಗ ಜಿಯೋ ಸಾವ್ನ್ ಏಕೀಕರಣ ಮತ್ತು ಹೆಚ್ಚಿನ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಈ ವರ್ಷ ಸ್ವಯಂ-ಆರೈಕೆ ಅಪ್ಲಿಕೇಶನ್‌ಗಳಲ್ಲಿ ಹೆಚ್ಚಿನ ಆವಿಷ್ಕಾರ ಮತ್ತು ವೈಶಿಷ್ಟ್ಯ-ಪ್ಯಾಕೇಜಿಂಗ್ ಕಾಣಿಸಲಿವೆ.

Best Mobiles in India

English summary
The telecom industry is going to see major breakthroughs this year and some of them will include the rollout of BSNL 4G network, 5G trials among others. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+