ಕಂಕಣ ಸೂರ್ಯಗ್ರಹಣ ಕಣ್ತುಂಬಿಕೊಂಡ ಜನರು

|

9 ವರ್ಷದ ಬಳಿಕ ಸಂಭವಿಸಿರುವ ವಿಸ್ಮಯಕಾರಿ ಕಂಕಣ ಸೂರ್ಯ ಗ್ರಹಣಕ್ಕೆ ಇಂದು ಸೌರವ್ಯೂಹವು ಸಾಕ್ಷಿಯಾಗಿದೆ. ಇಂದು ಬೆಳಗ್ಗೆ 8.04ಕ್ಕೆ ಆರಂಭವಾಗಿದ್ದ ಕಂಕಣ ಸೂರ್ಯಗ್ರಹಣವು ಬೆಳಗ್ಗೆ 11.11ಕ್ಕೆ ಮುಕ್ತಾಯದವರೆಗೂ ಕರಾವಳಿ ಭಾಗ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಗೋಚರಿಸಿದೆ. ಇನ್ನು ರಾಜ್ಯದಲ್ಲಿ ಮೋಡ ಮುಸುಕಿದ ವಾತಾವರಣ ಇರುವ ಹಿನ್ನೆಲೆ, ಸೂರ್ಯಗ್ರಹಣ ಅಸ್ಪಷ್ಟವಾಗಿ ಗೋಚರವಾಗಿದೆ.

ಕಂಕಣ ಸೂರ್ಯಗ್ರಹಣ ಕಣ್ತುಂಬಿಕೊಂಡ ಜನರು

ಬೆಂಗಳೂರು ಸೇರಿದಂತೆ ರಾಜ್ಯದ ಹುಬ್ಬಳ್ಳಿ, ಚಿತ್ರದುರ್ಗ, ದಾವಣಗೆರೆ, ಮಡಿಕೇರಿ, ಹಲವು ನಗರಗಳಲ್ಲಿಯೂ ಜನರು ಸೂರ್ಯಗ್ರಹಣವನ್ನು ಭಾರಿ ಕುತೂಹಲದಿಂದ ವೀಕ್ಷಿಸಿದ್ದಾರೆ. ಈ ಅಪರೂಪದ ಸೂರ್ಯಗ್ರಹಣವನ್ನು ಬರಿಗಣ್ಣಿನಿಂದ ವೀಕ್ಷಿಸಬಾರದಾಗಿದ್ದರಿಂದ ಜನರು ಟೆಲಿಸ್ಕೋಪ್, ಬೈನಾಲ್ಯುಲರ್, ಕೂಲಿಂಗ್ ಗ್ಲಾಸ್, ಎಕ್ಸ್‌ರೇ ಶೀಟ್‌ಗಳ ಮೂಲಕ ನೋಡಿ ಕಣ್ತುಂಬಿಕೊಂಡರು.

ಕಂಕಣ ಸೂರ್ಯಗ್ರಹಣ ಕಣ್ತುಂಬಿಕೊಂಡ ಜನರು

ಬೆಂಗಳೂರಿನ ನೆಹರೂ ತಾರಾಲಯದಲ್ಲಿ ಕಂಕಣ ಸೂರ್ಯಗ್ರಹಣ ವೀಕ್ಷಣೆಗೆಗಾಗಿ ಜನರಿಗೆ ಅವಕಾಶ ಮಾಡಿಕೊಡಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಗ್ರಹಣ ವೀಕ್ಷಿಸಿದರು. ಗ್ರಹಣದ ವೇಳೆ ಸೂರ್ಯ 'ಬೆಂಕಿ ಉಂಗುರ'ದಂತೆ ಕಂಡುಬರುತ್ತಾನೆ ಇಂತಹ ಅಪರೂಪದ ದೃಶ್ಯವನ್ನು ನೋಡುವ ಕೌತುಕ ಹೊಂದಿದ್ದ ಜನರಿಗೆ ಮೋಡ ಕವಿದ ವಾತಾವರಣದಿಂದ ಸ್ವಲ್ಪ ನಿರಾಸೆ ಮಾಡಿದೆ. ಗ್ರಹಣ ಕಾಲವು ಒಟ್ಟು ಸುಮಾರು 2 ಗಂಟೆ 59 ನಿಮಿಷಗಳು ಆಗಿತ್ತು.

ಮತ್ತೆ ಈ ರೀತಿಯ ಸೂರ್ಯಗ್ರಹಣ ಆಕಾಶದಲ್ಲಿ ಕಾಣುವುದು ಮುಂದೆ 2064 ನೇ ವರ್ಷದಲ್ಲಿ.

Best Mobiles in India

English summary
Thick fog in several parts of the national capital blocked the view of the much-awaited annual solar eclipse. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X