Home
ಸುದ್ದಿಜಾಲ

BharatGPT ಯೊಂದಿಗೆ ಭಾರತದ ಮೊದಲ ಸ್ವದೇಶಿ ಟ್ಯಾಬ್ಲೆಟ್ ಲಾಂಚ್‌: ಅಗ್ಗದ ಬೆಲೆ, ಭರ್ಜರಿ ಸೌಲಭ್ಯ..

ಮೇಡ್‌ ಇನ್‌ ಇಂಡಿಯಾ ಡಿವೈಸ್‌ಗಳು (Made in India device) ಇಂದು ಜಾಗತಿಕವಾಗಿ ಬಹಳ ಸದ್ದು ಮಾಡುತ್ತಿವೆ. ಅದರಲ್ಲೂ ಸ್ಮಾರ್ಟ್‌ಫೋನ್ ದೈತ್ಯರಾದ ಸ್ಯಾಮ್‌ಸಂಗ್‌ ಹಾಗೂ ಆಪಲ್‌ ಈಗಾಗಲೇ ಭಾರತದಲ್ಲಿ ಮೇಡ್‌ ಇನ್ ಇಂಡಿಯಾ ಡಿವೈಸ್‌ಗಳನ್ನು ತಯಾರು ಮಾಡಿ ಅವುಗಳನ್ನು ರಪ್ತು ಮಾಡುವ ಕೆಲಸವನ್ನೂ ಮಾಡುತ್ತಿವೆ. ಈ ಎಲ್ಲಾ ಬೆಳವಣಿಗೆ ನಡುವೆ ಸ್ಥಳೀಯವಾಗಿ ತಯಾರಿಸಿದ ಟ್ಯಾಬ್ಲೆಟ್ ಅನ್ನು ಘೋಷಣೆ ಮಾಡಲಾಗಿದೆ.

ಹೌದು, ಎಪಿಕ್ ಫೌಂಡೇಶನ್ (Epic Foundation) ಮೊದಲ ಸ್ಥಳೀಯವಾಗಿ ತಯಾರಿಸಿದ ಶೈಕ್ಷಣಿಕ ಸಂಬಂಧಿ ಟ್ಯಾಬ್ಲೆಟ್ ಅನ್ನು ಅನಾವರಣ ಮಾಡಿದೆ. ಈ ಟ್ಯಾಬ್ಲೆಟ್‌ ಅನ್ನು ಮೀಡಿಯಾಟೆಕ್‌ ಮತ್ತು ಕೋರೋವರ್‌.ಎಐ (CoRover.ai) ಸಹಯೋಗದೊಂದಿಗೆ ವಿವಿಡಿಎನ್ ಟೆಕ್ನಾಲಜೀಸ್‌ (VVDN Technologies) ವಿನ್ಯಾಸಗೊಳಿಸಿದೆ. ಹಾಗಿದ್ರೆ, ಈ ಟ್ಯಾಬ್ಲೆಟ್‌ ವಿಶೇಷತೆ ಏನು?, ಯಾವ ಉದ್ದೇಶಗಳಿಗೆ ಇದು ಸಹಯಕವಾಗಲಿದೆ ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

BharatGPT ಯೊಂದಿಗೆ ಭಾರತದ ಮೊದಲ ಸ್ವದೇಶಿ ಟ್ಯಾಬ್ಲೆಟ್ ಲಾಂಚ್‌: ಅಗ್ಗದ ಬೆಲೆ...

ಮಿಲ್ಕಿವೇ ಟ್ಯಾಬ್: ಈ ಟ್ಯಾಬ್‌ಗೆ ಮಿಲ್ಕಿವೇ (Milkyway tab) ಎಂದು ಹೆಸರಿಡಲಾಗಿದ್ದು, ಇದು ಪ್ರಮುಖವಾಗಿ ಸುಲಭವಾದ ರಿಪೇರಿ, ಅಪ್‌ಗ್ರೇಡಬಿಲಿಟಿ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI)-ಇಂಟಿಗ್ರೇಶನ್ ಸೌಲಭ್ಯ ಹೊಂದಿದೆ. ಹಾಗೆಯೇ ಎಪಿಕ್ ಫೌಂಡೇಶನ್ ಐಆರ್ಐಎಸ್ ಗ್ಲೋಬಲ್ ಮತ್ತು ವೇದವಾಗ್ ಸಿಸ್ಟಮ್ಸ್ ಲಿಮಿಟೆಡ್ ಸೇರಿದಂತೆ 12,000 ಕ್ಕೂ ಹೆಚ್ಚು ಘಟಕಗಳಿಗೆ ಎಂಒಯುಗೆ ಸಹಿ ಹಾಕಲಾಗಿದ್ದು. ರಾಜ್ಯ ಸರ್ಕಾರಗಳಿಗೆ ಮೂರು ಲಕ್ಷ ಟ್ಯಾಬ್ಲೆಟ್‌ಗಳನ್ನು ತಯಾರಿಸುವುದು ಕಂಪನಿಯ ಗುರಿಯಾಗಿದೆ.

ಇನ್ನು ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಈ ಟ್ಯಾಬ್ಲೆಟ್ ಭಾರತ್ಜಿಪಿಟಿ (BharatGPT) ವರ್ಚುವಲ್ ಅಸಿಸ್ಟೆಂಟ್‌ನೊಂದಿಗೆ ಬರಲಿದ್ದು, ಇದು ವಿಡಿಯೋ ಮತ್ತು ಚಾಟ್‌ಬಾಟ್‌ಗಳ ಸೌಲಭ್ಯಗಳನ್ನೂ ಸಹ ಪಡೆಯಬಹುದಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ ಕೋರೋವರ್‌.ಎಐ (CoRover.ai) ಮೂಲಕ ಸ್ಪೀಚ್‌ ಅನುವಾದ ಆಪ್‌ ಸೌಲಭ್ಯ ಪಡೆಯಬಹುದಾಗಿದೆ.

ಎಪಿಕ್ ಫೌಂಡೇಶನ್ ಶಾಲಾ ಮಕ್ಕಳ ಶೈಕ್ಷಣಿಕ ಅಗತ್ಯಗಳಿಗಾಗಿ ನಿರ್ಮಿಸಲಾದ ಮೊದಲ ಭಾರತದಲ್ಲಿ ವಿನ್ಯಾಸಗೊಳಿಸಿದ ಟ್ಯಾಬ್ಲೆಟ್ ಅನ್ನು ಅನಾವರಣಗೊಳಿಸಿದೆ. ಇದು ಸಂಪೂರ್ಣವಾಗಿ ರಿಪೇರಿ ಮಾಡಬಹುದಾದ ಮತ್ತು ನವೀಕರಿಸಬಹುದಾದ ಭಾರತದಲ್ಲಿ ವಿನ್ಯಾಸಗೊಂಡ ಮೊದಲ ಡಿವೈಸ್‌ ಆಗಿದೆ ಎಂದು ಎಪಿಕ್ ಫೌಂಡೇಶನ್ ಅಧ್ಯಕ್ಷ ಅಜಯ್ ಚೌಧರಿ ಹೇಳಿದ್ದಾರೆ.

BharatGPT ಯೊಂದಿಗೆ ಭಾರತದ ಮೊದಲ ಸ್ವದೇಶಿ ಟ್ಯಾಬ್ಲೆಟ್ ಲಾಂಚ್‌: ಅಗ್ಗದ ಬೆಲೆ...

ವರ್ಚುವಲ್ ಅಸಿಸ್ಟೆಂಟ್ ಆಗಿ ಭಾರತ್‌ಜಿಪಿಟಿ ಏಕೀಕರಣವು ಡಿಜಿಟಲ್ ಕಲಿಕೆ ಮತ್ತು ಬಳಕೆದಾರರಿಗೆ ಕಂಟೆಂಟ್‌ ಅನ್ನು ಸುಲಭವಾಗಿಸಲು ವಿವಿಧ ಭಾರತೀಯ ಭಾಷೆಗಳ ನಡುವೆ ಭಾಷಾಂತರವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಹಾಗಿದ್ರೆ ತಡಯಾಕೆ ಬನ್ನಿ ಈ ಸ್ವದೇಶಿ ಡಿವೈಸ್‌ನ ಫೀಚರ್ಸ್‌ ತಿಳಿಯೋಣ.

ಮಿಲ್ಕಿವೇ ಟ್ಯಾಬ್ 8 ಇಂಚಿನ 1280x800 ಐಪಿಎಸ್‌ ಡಿಸ್‌ಪ್ಲೇಯನ್ನು ಹೊಂದಿದ್ದು, ಮೀಡಿಯಾಟೆಕ್‌ MT8766A ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲಿದೆ. ಹಾಗೆಯೇ ಈ ಟ್ಯಾಬ್ ಎರಡು ಕಾನ್ಫಿಗರೇಶನ್‌ಗಳಲ್ಲಿ ಬರುತ್ತದೆ. ಅಂದರೆ ಒಂದು 3GB RAM + 32GB ಇಂಟರ್‌ ಸ್ಟೋರೇಜ್‌ ಆಯ್ಕೆ ಮತ್ತೊಂದು 4GB RAM + 64GB ಇಂಟರ್‌ ಸ್ಟೋರೇಜ್ ಆಯ್ಕೆ.

ಜೊತೆಗೆ ಈ ಟ್ಯಾಬ್ 8 ಮೆಗಾಪಿಕ್ಸೆಲ್‌ ರಿಯರ್‌ ಕ್ಯಾಮೆರಾ ಮತ್ತು 5 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾವನ್ನು ಹೊಂದಿದ್ದು, 5,100mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಬ್ಯಾಟರಿಯನ್ನು ಸಹ ಬದಲಾಯಿಸಬಹುದು ಅನ್ನೋದು ವಿಶೇಷ. ಮತ್ತು ಈ ಟ್ಯಾಬ್ಲೆಟ್ 4G LTE ಮತ್ತು ಬ್ಲೂಟೂತ್ 5.0 ಕನೆಕ್ಟಿವಿಟಿ ಪಡೆದಿದ್ದು, ಮುಂದಿನ ಆವೃತ್ತಿಯು 5G ಬೆಂಬಲವನ್ನು ಪಡೆಯಬಹುದು ಎಂದು ಕಂಪನಿ ಹೇಳಿಕೊಂಡಿದೆ.

BharatGPT ಯೊಂದಿಗೆ ಭಾರತದ ಮೊದಲ ಸ್ವದೇಶಿ ಟ್ಯಾಬ್ಲೆಟ್ ಲಾಂಚ್‌: ಅಗ್ಗದ ಬೆಲೆ...

ಇನ್ನು ಈ ಟ್ಯಾಬ್ಲೆಟ್‌ ಖರೀದಿ ಮಾಡುವ ಜನರು ದೇಶದಲ್ಲಿ ಎಲ್ಲಿ ಬೇಕಾದರೂ ದುರಸ್ತಿ ಮಾಡಿಕೊಳ್ಳಬಹುದು ಎಂದು ತಿಳಿಸಿದ್ದು, ಇದನ್ನು 9,900ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ. ಅಲ್ಲದೆ ಈ ವೇಳೆ ಆಫರ್ ಸಹ ಅನ್ವಯ ಆಗುತ್ತವೆ. ಹಾಗೆಯೇ ಐರಿಸ್ ವೇವ್ಸ್ ಈ ಉತ್ಪನ್ನವನ್ನು ಮಾರುಕಟ್ಟೆಗೆ ತರಲಿದ್ದು, ಮಾರಾಟದ ನಂತರದ ಸೇವೆಯನ್ನು ಸಹ ಒದಗಿಸುತ್ತದೆ. ಈಗಾಗಲೇ 12,000 ಟ್ಯಾಬ್ಲೆಟ್‌ಗಳನ್ನು ಆರ್ಡರ್ ಮಾಡಲಾಗಿದೆ.

Best Mobiles in India

English summary
Milkyway tab with BharatGPT has been launched in India. It features easy repairability, upgradability and artificial intelligence (AI)-integration.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+