ಅಂತರಿಕ್ಷಕ್ಕೆ ಸ್ಮಾರ್ಟ್‌ಫೋನ್‌ ರವಾನೆ- ಭಾರತದ ಐತಿಹಾಸಿಕ ಸಾಧನೆ

Posted By:

ಬಾಹ್ಯಾಕಾಶದಲ್ಲಿ ಸ್ಮಾರ್ಟ್‌ಫೋನ್‌ ಕಳುಹಿಸುವ ಮೂಲಕ ಭಾರತ ನೂತನ ದಾಖಲೆ ಬರೆದಿದೆ. ಈ ಮೂಲಕ ಬಾಹ್ಯಾಕಾಶಕ್ಕೆ ಸ್ಮಾರ್ಟ್‌ಫೋನ್‌ ಕಳುಹಿಸಿದ ವಿಶ್ವದ ಮೊದಲ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ.

ಅಂತರಿಕ್ಷಕ್ಕೆ ಸ್ಮಾರ್ಟ್‌ಫೋನ್‌ ರವಾನೆ - ಭಾರತದ ಐತಿಹಾಸಿಕ ಸಾಧನೆ

ಕೆಂಬ್ರಿಡ್ಜ್‌ ವಿಶ್ವವಿದ್ಯಾಲಯದ ಸ್ಪೇಸ್‌ ಫ್ಲೈಟ್‌ನವರು ಸಿದ್ದಪಡಿಸಿದ STRaND-1 ಉಪಗ್ರದಲ್ಲಿದ್ದ ಸ್ಮಾರ್ಟ್‌ಫೋನ್‌ನಲ್ಲಿ 360ಅಪ್ಲಿಕೇಶನ್‌ಗಳಿದ್ದು.ಈ ಅಪ್ಲಿಕೇಶನ್‌ಗಳು ಬಾಹ್ಯಾಕಾಶದಲ್ಲಿ ನಡೆಯುವ ಅಲ್ಫ್ವೆನ್ ತರಂಗಗಳು ಪತ್ತೆ ಮಾಡಲಿದೆ. ಅಲ್ಲದೇ ಈ ಸ್ಮಾರ್ಟ್‌ಫೋನಿಗಾಗಿ ವಿಶೇಷ ಕ್ಯಾಮೆರಾ ರೂಪಿಸಿದ್ದು ಈ ಕ್ಯಾಮೆರಾ ಬಾಹ್ಯಾಕಾಶದಲ್ಲಿ ನಡೆಯುವ ಚಟುವಟಿಕೆಗಳನ್ನು ಸೆರೆಹಿಡಿಯಲಿದೆ.

ಅಂತರಿಕ್ಷದಲ್ಲಿ ನಮ್ಮ ಕೂಗು ಯಾರಿಗೂ ಕೇಳಿಸುವುದಿಲ್ಲ ಎನ್ನುವ ಒಂದು ತರ್ಕವಿದೆ. ಈ ತರ್ಕವನ್ನು ಪರೀಕ್ಷೆ ಮಾಡಲು ಉಪಗ್ರಹದಲ್ಲಿ ವಿಡಿಯೋಗಳಿದ್ದು, ಈ ವೀಡಿಯೋಗಳ ಧ್ವನಿಗಳನ್ನು ಸ್ಮಾರ್ಟ್‌ಫೋನಿನಲ್ಲಿರುವ ಮೈಕ್ರೊಫೋನ್‌ ಧ್ವನಿಮುದ್ರಿಸಿಕೊಳ್ಳಲಿದೆ. ಧ್ವನಿಮುದ್ರಿಸಿಲು ಸ್ಮಾರ್ಟ್‌ಫೋನ್‌ನಲ್ಲಿ ಸ್ಕ್ರಿಮ್‌ ಇನ್‌ ಸ್ಪೇಸ್‌ ಎನ್ನುವ ಅಪ್ಲಿಕೇಶನ್‌ ಸಹಾಯಮಾಡಲಿದೆ. ಇಸ್ರೋದ ಈ ಪ್ರಯೋಗ ಯಶಸ್ವಿಯಾದರೆ ಬಾಹ್ಯಾಕಾಶ ಅಧ್ಯಯನದಲ್ಲಿ ಹೊಸ ಮೈಲುಗಲ್ಲು ಸ್ಥಾಪನೆಯಾಗಲಿದೆ.

ಕಳೆದ ಸೋಮವಾರ ಇಸ್ರೋ ಶ್ರೀಹರಿಕೋಟಾದಲ್ಲಿ ಪಿಎಸ್‌ಎಲ್‌ವಿ ರಾಕೆಟ್‌ STRaND-1 ಉಪಗ್ರಹ ಸೇರಿದಂತೆ, ಭಾರತ -ಫ್ರಾನ್ಸ್‌ ಪಾಲುದಾರಿಕೆಯ ಸಮದ್ರದ ಅಧ್ಯಯನ ಕುರಿತ 'ಸರಳ್‌,' ಆಸ್ಟ್ರೀಯಾದ 2, ಡೆನ್ಮಾರ್ಕ್, ಫ್ರಾನ್ಸ್‌ನ ಮತ್ತು ಕೆನಡಾದ ತಲಾ ಒಂದು ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷಗೆ ಸೇರಿಸಿತ್ತು.

ಲಿಂಕ್‌ : ಅಂತರಿಕ್ಷ ಯಾನಿಗಳ ಆಹಾರವನ್ನು ನೋಡಿದ್ದೀರಾ ?

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot