Home
ಸುದ್ದಿಜಾಲ

ಇಂದಿರಾ ಗಾಂಧಿ ಸ್ಮಾರ್ಟ್‌ಫೋನ್‌ ಯೋಜನೆ; ಇಂದಿನಿಂದ ಮಹಿಳೆಯರಿಗೆ ಸ್ಮಾರ್ಟ್‌ಫೋನ್‌ ವಿತರಣೆ!

ಸ್ಮಾರ್ಟ್‌ಫೋನ್‌ಗಳು (Smartphone) ಇಂದು ಮಾಹಿತಿ ಮನರಂಜನೆ ಜೊತೆಗೆ ಜನರ ಅವಿಭಾಜ್ಯ ಅಂಗದಂತೆ ಆಗಿಹೋಗಿವೆ. ಅದಾಗ್ಯೂ ದೇಶದಲ್ಲಿ ಇನ್ನೂ ಸಹ ಹಲವಾರು ಜನರ ಬಳಿ ಸ್ಮಾರ್ಟ್‌ಫೋನ್‌ ಇಲ್ಲ. ಪ್ರಮುಖವಾಗಿ ಹಲವು ಮಹಿಳೆಯರಿಗೆ ಸ್ಮಾರ್ಟ್‌ಫೋನ್‌ ಖರೀದಿ ಮಾಡುವುದಕ್ಕೂ ಸಾಧ್ಯವಾಗಿಲ್ಲ. ಆದರೆ ಈಗ ಈ ಸರ್ಕಾರ ಮಹಿಳೆಯರಿಗೆ ಇಂದಿನಿಂದ ಉಚಿತ ಸ್ಮಾರ್ಟ್‌ಫೋನ್ ವಿತರಣೆ ಮಾಡುವ ಕೆಲಸ ಮಾಡುತ್ತಿದೆ.

ಹೌದು, ಇಂದಿನಿಂದ ಇಂದಿರಾ ಗಾಂಧಿ ಸ್ಮಾರ್ಟ್ ಫೋನ್ ಯೋಜನೆಯಡಿ (Indira Gandhi Smartphone Scheme) ಸ್ಮಾರ್ಟ್‌ಫೋನ್‌ ವಿತರಣೆ ಮಾಡುವ ಕೆಲಸ ನಡೆಯುತ್ತಿದೆ. ಆರಂಭದಲ್ಲಿ ಒಟ್ಟು 16 ಸ್ಥಳಗಳಲ್ಲಿ ಶಿಬಿರಗಳನ್ನು ಆಯೋಜಿಸಲಾಗಿದ್ದು, ಜಿಲ್ಲಾ ಕೇಂದ್ರದಲ್ಲಿ ನಾಲ್ಕು ಶಿಬಿರಗಳನ್ನು ಆಯೋಜಿಸಿದರೆ, ಪಂಚಾಯತ್ ಸಮಿತಿ ಕೇಂದ್ರ ಕಚೇರಿಯಲ್ಲಿ 12 ಶಿಬಿರಗಳನ್ನು ಆಯೋಜಿಸಲಾಗಿದೆ. ಈ ಮೂಲಕ ಮಹಿಳೆಯರಿಗೆ ಸ್ಮಾರ್ಟ್‌ಫೋನ್‌ಗಳನ್ನು ಹಂಚಿಕೆ ಮಾಡಲಾಗುತ್ತಿದೆ. ಹಾಗಿದ್ರೆ, ಎಲ್ಲಿ ಈ ಯೋಜನೆ ಆರಂಭ ಆಗಿರುವುದು?, ಸ್ಮಾರ್ಟ್‌ಫೋನ್ ಪಡೆಯಲು ಏನೆಲ್ಲಾ ದಾಖಲೆ ಬೇಕು ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

ಇಂದಿರಾ ಗಾಂಧಿ ಸ್ಮಾರ್ಟ್‌ಫೋನ್‌ ಯೋಜನೆ;  ಮಹಿಳೆಯರಿಗೆ ಸ್ಮಾರ್ಟ್‌ಫೋನ್‌ ವಿತರಣೆ!

ಕರ್ನಾಟಕವೂ ಸೇರಿದಂತೆ ಭಾರತದ ಹಲವಾರು ರಾಜ್ಯಗಳು ಟೆಕ್ನಾಲಜಿ ಸಂಬಂಧ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿವೆ. ಈ ನಡುವೆ ಒಂದು ಹೆಜ್ಜೆ ಮುಂದೆ ಹೋಗಿರುವ ರಾಜಸ್ಥಾನ ಸರ್ಕಾರ (Rajasthan Govt) ಈಗ ಇಂದಿರಾ ಗಾಂಧಿ ಸ್ಮಾರ್ಟ್‌ಫೋನ್ ಯೋಜನೆಯಡಿ ಮಹಿಳೆಯರಿಗೆ ಉಚಿತ ಸ್ಮಾರ್ಟ್‌ಫೋನ್‌ ವಿತರಣೆ ಮಾಡುವ ಕೆಲಸ ಮಾಡುತ್ತಿದೆ. ಅದರಂತೆ ಭರತ್‌ ಪುರ ಜಿಲ್ಲೆ ಸೇರಿದಂತೆ ಅನೇಕ ಕಡೆ ಶಿಬಿರಗಳನ್ನು ಆಯೋಜನೆ ಮಾಡಲಾಗಿದೆ.

ಜಿಲ್ಲಾಧಿಕಾರಿ ಲೋಕಬಂಧು ಈ ಸಂಬಂಧ ಮಾಹಿತಿ ನೀಡಿದ್ದು, ಇಂದಿನಿಂದ ಮೊದಲ ಹಂತದಲ್ಲಿ ಜಿಲ್ಲೆಯ ಸುಮಾರು 95 ಸಾವಿರ ಫಲಾನುಭವಿಗಳಿಗೆ ಸ್ಮಾರ್ಟ್ ಫೋನ್ ನೀಡಲಾಗುವುದು. ಮೊದಲ ಹಂತದಲ್ಲಿ ಆಯ್ಕೆಯಾದ ಚಿರಂಜೀವಿ ಕುಟುಂಬದ ಒಂಟಿ ಮಹಿಳೆಯರು/ವಿಧವೆ ಮಹಿಳೆಯರು, ಸರ್ಕಾರಿ ಶಾಲೆಗಳ 9-12 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರು, ಸರ್ಕಾರಿ ಐಟಿಐ ಮತ್ತು ಪಾಲಿಟೆಕ್ನಿಕ್‌ಗಳಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರು ಹಾಗೂ ಸಂಸ್ಕೃತ ಕಾಲೇಜುಗಳಲ್ಲಿ ಮತ್ತು 100 ಕೆಲಸದ ದಿನಗಳನ್ನು ಪೂರೈಸಿದ ಕುಟುಂಬದ ಮಹಿಳಾ ಮುಖ್ಯಸ್ಥರು ಇದಕ್ಕೆ ಅರ್ಹರು ಎಂದು ತಿಳಿಸಿದ್ದಾರೆ.

ಇದರೊಂದಿಗೆ MNREGA ಮತ್ತು ಇಂದಿರಾಗಾಂಧಿ ನಗರ ಉದ್ಯೋಗ ಯೋಜನೆಯಲ್ಲಿ 50 ಕೆಲಸದ ದಿನಗಳನ್ನು ಪೂರೈಸಿದ ಕುಟುಂಬದ ಮಹಿಳಾ ಮುಖ್ಯಸ್ಥರಿಗೂ ಸಹ ಈ ಸ್ಮಾರ್ಟ್‌ಫೋನ್‌ಗಳನ್ನು ವಿತರಣೆ ಮಾಡಲು ಕೆಲಸ ಮಾಡಲಾಗುತ್ತದೆ. ಸ್ಮಾರ್ಟ್‌ಫೋನ್‌ ಕೊಟ್ಟು ಸುಮ್ಮನಾಗದ ಸರ್ಕಾರ ಈ ಫೋನ್‌ಗೆ ಇಂಟರ್ನೆಟ್‌ ಸೌಲಭ್ಯ ಸಹ ಕಲ್ಪಿಸಿಕೊಡುತ್ತಿರುವುದು ವಿಶೇಷ ಸಂಗತಿ.

ಈ ಸ್ಮಾರ್ಟ್‌ಫೋನ್‌ಗಳನ್ನು ಪಡೆದುಕೊಳ್ಳಲು ಫಲಾನುಭವಿ ಮಹಿಳೆ ತನ್ನ ಜನಾಧರ್ ಕಾರ್ಡ್, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ಜನಾಧರ್ ಕಾರ್ಡ್‌ನಲ್ಲಿ ನೋಂದಾಯಿಸಲಾದ ಮೊಬೈಲ್ ಫೋನ್ ಅನ್ನು ನೀಡಬೇಕಿದೆ. ಇದರೊಂದಿಗೆ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರು, ವಿಧವೆ ಮಹಿಳೆಯರು ಗುರುತಿನ ಚೀಟಿ, ದಾಖಲಾತಿ ಕಾರ್ಡ್ ಮತ್ತು ಪಿಪಿಒ ಮಾಹಿತಿ ನೀಡಬೇಕು.

ಇನ್ನು ಈ ಶಿಬಿರದಲ್ಲಿ IGSY ಪೋರ್ಟಲ್‌ನಲ್ಲಿ ಅರ್ಹ ಮಹಿಳೆಯರ ಇ-ಕೆವೈಸಿ ಮಾಡಿಕೊಳ್ಳಲಾಗುತ್ತದೆ. ಅರ್ಹ ಮಹಿಳೆಯ ವಿವರಗಳನ್ನು ಪೋರ್ಟಲ್‌ನಲ್ಲಿ ಅವರ ಜನಧರ್ ಸಂಖ್ಯೆಯನ್ನು ನಮೂದಿಸುವ ಮೂಲಕ ಪರಿಶೀಲಿಸಲಾಗುತ್ತದೆ. ಪರಿಶೀಲನೆ ವೇಳೆ ಫಲಾನುಭವಿ ತಂದ ಮೊಬೈಲ್‌ಗೆ ಜನಧಾರ್‌ ಇ-ವ್ಯಾಲೆಟ್‌ ಲಿಂಕ್‌ ಮಾಡಲಾಗುತ್ತದೆ. ಇದರ ನಂತರ, IGSY ಪೋರ್ಟಲ್‌ನಲ್ಲಿ ಫಲಾನುಭವಿಯ ಪ್ಯಾನ್ ಕಾರ್ಡ್‌ನ ವಿವರಗಳನ್ನು ನಮೂದಿಸಿದ ನಂತರ ಮೂರು ರೀತಿಯ ನಮೂನೆಗಳನ್ನು ಮುದ್ರಿಸಿ ಅವರಿಗೆ ನೀಡಲಾಗುತ್ತದೆ.

ಇಂದಿರಾ ಗಾಂಧಿ ಸ್ಮಾರ್ಟ್‌ಫೋನ್‌ ಯೋಜನೆ;  ಮಹಿಳೆಯರಿಗೆ ಸ್ಮಾರ್ಟ್‌ಫೋನ್‌ ವಿತರಣೆ!

ಇನ್ನು ಮೊದಲ ಹಂತದಲ್ಲಿ 40 ಲಕ್ಷ ಮಹಿಳಾ ಫಲಾನುಭವಿಗಳು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ನಿಂದ ಅಧಿಕೃತವಾದ ಟೆಲಿಕಾಂ ಸೇವಾ ಪೂರೈಕೆದಾರರಿಂದ ಡೇಟಾ ಸಂಪರ್ಕದೊಂದಿಗೆ ಸ್ಮಾರ್ಟ್‌ಫೋನ್‌ಗಳು ಮತ್ತು ಸಿಮ್ ಕಾರ್ಡ್‌ಗಳನ್ನು ಪಡೆದುಕೊಳ್ಳಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ವೇಳೆ ಫಲಾನುಭವಿಗಳು ತಮ್ಮ ಇ-ವ್ಯಾಲೆಟ್‌ಗೆ ನೇರ ಲಾಭ ವರ್ಗಾವಣೆ (ಡಿಬಿಟಿ) ಮೂಲಕ 6,800ರೂ.ಗಳನ್ನು ಪಡೆಯಲಿದ್ದಾರೆ.

ಮೋಸ ಹೋಗದಿರಿ ಎಚ್ಚರ...: ಈ ಸ್ಮಾರ್ಟ್‌ಫೋನ್‌ ಯೋಜನೆಯನ್ನು ಭಾರತ ಸರ್ಕಾರ ಆಯೋಜಿಸಿದೆ ಎಂದು ಹೇಳಿ ಕೆಲವು ಸ್ಕ್ಯಾಮರ್‌ಗಳು ಈಗಾಗಲೇ ನಕಲಿ ಲಿಂಕ್‌ಗಳನ್ನು ಎಲ್ಲಾ ಕಡೆ ಶೇರ್‌ ಮಾಡುತ್ತಿರುವ ಮಾಹಿತಿ ಲಭ್ಯ ಆಗುತ್ತಿದೆ. ಆದರೆ, ಇದನ್ನು ರಾಜಸ್ಥಾನ ಸರ್ಕಾರ ಮಾತ್ರ ಜಾರಿ ಮಾಡಿದ್ದು, ಅಲ್ಲಿನ ಜನರಿಗೆ ಈ ಸ್ಮಾರ್ಟ್‌ಫೋನ್‌ಗಳನ್ನು ಹಂಚಿಕೆ ಮಾಡುವ ಕೆಲಸ ಮಾಡಲಾಗುತ್ತಿದೆಯೇ ಹೊರತು ಬೇರೆ ಎಲ್ಲೂ ಅದರಲ್ಲೂ ಕರ್ನಾಟಕದಲ್ಲಂತೂ ಈ ಸ್ಮಾರ್ಟ್‌ಫೊನ್‌ ವಿತರಣೆ ಯೋಜನೆ ಇಲ್ಲ ಎಂಬುದು ನಿಮ್ಮ ಗಮನಕ್ಕೆ ಇರಲಿ.

Best Mobiles in India

English summary
From today onwards, the work of distribution of smartphones under Indira Gandhi Smart Smartphone by Rajasthan government is going on. Initially camps were organized at total 16 places.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+