Home
ಸುದ್ದಿಜಾಲ

Infinix: ಇನ್ಫಿನಿಕ್ಸ್ ನಿಂದ ಹೊಸ ಕ್ರಾಂತಿ: ಇನ್ಮುಂದೆ ಸ್ಮಾರ್ಟ್‌ಫೋನ್‌ಗಳನ್ನು ಗಾಳಿ ಮೂಲಕ ಚಾರ್ಜ್ ಮಾಡಬಹುದು

ಇನ್ಫಿನಿಕ್ಸ್ (Infinix) ಹೊಸ ಹೊಸ ಸ್ಮಾರ್ಟ್‌ಫೋನ್‌ಗಳನ್ನು ವಿಶೇಷ ಫೀಚರ್ಸ್‌ ಮೂಲಕ ಲಾಂಚ್‌ ಮಾಡುವುದು ಅಷ್ಟೇ ಅಲ್ಲದೆ ವಿಶೇಷ ರೀತಿಯ ತಂತ್ರಜ್ಞಾನಗಳನ್ನೂ ಸಹ ಪರಿಚಯಿಸಿಕೊಂಡು ಬರುತ್ತಿದೆ. ಅದರಂತೆ ಈಗ ಎಲ್ಲರೂ ಹುಬ್ಬೇರಿಸುವ ತಂತ್ರಜ್ಞಾನದ ಬಗ್ಗೆ ಘೋಷಣೆ ಮಾಡಿದ್ದು, ಇದು ಸ್ಮಾರ್ಟ್‌ಫೋನ್‌ಗಳನ್ನು ಗಾಳಿಯಲ್ಲಿಯೇ ಚಾರ್ಜ್ ಮಾಡಲು ಅನುವು ಮಾಡಿಕೊಡುತ್ತದೆ.

ಹೌದು, ಈ ವಿಷಯ ಕೇಳಿ ನಿಮಗೆ ಶಾಕ್‌ ಆಗಿರಬಹುದು. ಆದರೆ ಇದು ಸತ್ಯ. ಇನ್ಫಿನಿಕ್ಸ್ ಏರ್‌ಚಾರ್ಜ್ ತಂತ್ರಜ್ಞಾನವನ್ನು (Infinix AirCharge technology) ಬಗ್ಗೆ ಘೋಷಣೆ ಮಾಡಿದ್ದು, ಇದು ಸ್ಮಾರ್ಟ್‌ಫೋನ್‌ಗಳನ್ನು ವೈರ್‌ಲೆಸ್ ಆಗಿ ಗಾಳಿಯಲ್ಲಿ ಚಾರ್ಜ್ ಮಾಡಬಹುದು ಎಂದಿದ್ದು, ಇದು ಮೊಬೈಲ್ ಉದ್ಯಮವನ್ನು ಕ್ರಾಂತಿಗೊಳಿಸುತ್ತದೆ ಎಂದು ಕಂಪೆನಿ ಹೇಳಿದೆ. ಹಾಗಿದ್ರೆ ಇದು ಹೇಗೆ ಕೆಲಸ ಮಾಡಲಿದೆ?, ವೈರ್‌ಲೆಸ್‌ ಚಾರ್ಜಿಂಗ್‌ ಗೊತ್ತು, ಇದೇನು ಏರ್‌ ಚಾರ್ಜ್‌ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿದ್ದರೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಇನ್ಮುಂದೆ ಸ್ಮಾರ್ಟ್‌ಫೋನ್‌ಗಳನ್ನು ಗಾಳಿ ಮೂಲಕ ಚಾರ್ಜ್ ಮಾಡಬಹುದು..

ಇನ್ಫಿನಿಕ್ಸ್ ನಿಂದ ಕ್ರಾಂತಿ: ಇನ್ಫಿನಿಕ್ಸ್ ಇದೀಗ ಎರಡು ಹೊಸ ತಂತ್ರಜ್ಞಾನಗಳನ್ನು ಘೋಷಣೆ ಮಾಡಿದ್ದು, ಇವು ಮೊಬೈಲ್ ಉದ್ಯಮವನ್ನು ಕ್ರಾಂತಿಗೊಳಿಸುತ್ತದೆ ಎಂದು ಹೇಳಿಕೊಂಡಿದೆ. ಇದರಲ್ಲಿ ಒಂದು ಏರ್‌ಚಾರ್ಜ್ ಮತ್ತೊಂದು ಎಕ್ಸ್‌ಟ್ರೀಮ್-ಟೆಂಪ್ ಬ್ಯಾಟರಿ ತಂತ್ರಜ್ಞಾನ (Extreme-Temp Battery Technology). ಇದನ್ನು CES 2024 ರ ಸಮಯದಲ್ಲಿ ಶೋಸ್ಟಾಪರ್ಸ್ ಈವೆಂಟ್‌ನಲ್ಲಿ ಜಗತ್ತಿಗೆ ಅನಾವರಣಗೊಳಿಸಲಾಗುವುದು ಎಂದು ಸಂಸ್ಥೆ ಮಾಹಿತಿ ನೀಡಿದೆ.

ಇನ್ಫಿನಿಕ್ಸ್ ಏರ್‌ಚಾರ್ಜ್ ಅಂದ್ರೆ ಏನು?: ಇನ್ಫಿನಿಕ್ಸ್ ನ ಏರ್‌ಚಾರ್ಜ್ ತಂತ್ರಜ್ಞಾನವು ವೈರ್‌ಲೆಸ್ ಚಾರ್ಜಿಂಗ್‌ನಲ್ಲಿನ (Wireless charging) ಪ್ರಗತಿ ಎಂದು ಇನ್ಫಿನಿಕ್ಸ್ ಹೇಳಿಕೊಂಡಿದೆ. ಇದು ಕೇಬಲ್‌ಗಳ ಅಗತ್ಯವಿಲ್ಲದೆ ಅಥವಾ ಚಾರ್ಜಿಂಗ್ ಪ್ಯಾಡ್ ಅನ್ನು ಭೌತಿಕವಾಗಿ ಸ್ಪರ್ಶಿಸದೆಯೇ ಸ್ಮಾರ್ಟ್ ಡಿವೈಸ್‌ಗಳನ್ನು ಚಾರ್ಜ್ ಮಾಡಲು ಅನುವು ಮಾಡಿಕೊಡುತ್ತದೆ. ಈ ತಂತ್ರಜ್ಞಾನವು 0-20 ಸೆಂಟಿಮೀಟರ್‌ಗಳಷ್ಟು ದೂರದಲ್ಲಿ ಚಾರ್ಜ್ ಮಾಡಲು ಅನುಮತಿಸುತ್ತದೆ ಎಂಬುದು ಸಹ ವಿಶೇಷವಾದ ವಿಷಯ.

ಇನ್ಮುಂದೆ ಸ್ಮಾರ್ಟ್‌ಫೋನ್‌ಗಳನ್ನು ಗಾಳಿ ಮೂಲಕ ಚಾರ್ಜ್ ಮಾಡಬಹುದು..

ಇನ್ನು ಟ್ರಾನ್ಸ್ಮಿಟಿಂಗ್ ಕಾಯಿಲ್ ಮತ್ತು ರಿಸೀವಿಂಗ್ ಕಾಯಿಲ್ ಅನ್ನು 60 ಡಿಗ್ರಿಗಳಷ್ಟು ಕೋನದಲ್ಲಿ ಓರೆಯಾಗಿಸಿದಾಗಲೂ ಸಹ ಕೆಲಸ ಮಾಡಲಿದ್ದು, ಇದನ್ನು ಸುಲಭವಾಗಿ ಬಳಕೆ ಮಾಡಿಕೊಳ್ಳಬಹುದಾಗಿದೆ. ಮಲ್ಟಿ-ಕಾಯಿಲ್ ಮ್ಯಾಗ್ನೆಟಿಕ್ ರೆಸೋನೆನ್ಸ್ ತಂತ್ರಜ್ಞಾನ ಮತ್ತು ಅಡಾಪ್ಟಿವ್ ಅಲ್ಗಾರಿದಮ್‌ಗಳ ಮೂಲಕ ಈ ಚಾರ್ಜಿಂಗ್ ಸಾಮರ್ಥ್ಯವನ್ನು ಸಕ್ರಿಯಗೊಳಿಸಲಾಗಿದೆ ಎಂದು ಇನ್ಫಿನಿಕ್ಸ್ ತಿಳಿಸಿದೆ.

ಇನ್ಫಿನಿಕ್ಸ್ ಏರ್‌ಚಾರ್ಜ್‌ 6.78MHz ಗಿಂತ ಕಡಿಮೆ ಸುರಕ್ಷಿತ ಕಡಿಮೆ ಆವರ್ತನದಲ್ಲಿ ಕೆಲಸ ಮಾಡಲಿದ್ದು, ಇದು 7.5W ವರೆಗೆ ಚಾರ್ಜಿಂಗ್ ಶಕ್ತಿಯನ್ನು ನೀಡುತ್ತದೆ. ಜೊತೆಗೆ ಎಂಡ್-ಟು-ಎಂಡ್ ರೆಸೋನೆನ್ಸ್ ಮತ್ತು ಓವರ್ ವೋಲ್ಟೇಜ್ ಪ್ರೊಟೆಕ್ಷನ್ (OVP) ಸರ್ಕ್ಯೂಟ್‌ನೊಂದಿಗೆ ಕಾಣಿಸಿಕೊಳ್ಳಲಿದ್ದು, ಸರ್ಕ್ಯೂಟ್ರಿಯನ್ನು ರಕ್ಷಣೆ ಮಾಡುವ ಕೆಲಸ ಮಾಡುತ್ತದೆ. ಅಷ್ಟೇ ಅಲ್ಲದೆ ಫೋನ್ ಮತ್ತು ಚಾರ್ಜಿಂಗ್ ಪ್ಯಾಡ್ ನಡುವಿನ ಅಂತರ ಮತ್ತು ಸ್ಥಾನವು ಬದಲಾದರೂ ಸಹ ಉತ್ತಮ ಸುರಕ್ಷತೆ ಹಾಗೂ ಚಾರ್ಜಿಂಗ್‌ ಅನ್ನು ಖಾತ್ರಿಗೊಳಿಸುತ್ತದೆ.

ಸ್ಟ್ಯಾಂಡರ್ಡ್ ವೈರ್‌ಲೆಸ್ ಚಾರ್ಜಿಂಗ್‌ಗಿಂತ ಏರ್‌ಚಾರ್ಜ್ ತಂತ್ರಜ್ಞಾನವು ಉತ್ತಮ ಅನುಕೂಲತೆಯನ್ನು ನೀಡುತ್ತದೆ ಎಂದು ಇನ್ಫಿನಿಕ್ಸ್ ಹೇಳಿಕೊಂಡಿದೆ. ಬಳಕೆದಾರರು ತಮ್ಮ ಡೆಸ್ಕ್‌ಗಳ ಕೆಳಗೆ ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್ ಅನ್ನು ಇನ್‌ಸ್ಟಾಲ್‌ ಮಾಡುವ ಮೂಲಕ ನಿರಂತವಾಗಿ ಗೇಮ್‌ ಆಡಬಹುದು ಅಥವಾ ವಿಡಿಯೋ ವೀಕ್ಷಣೆ ಮಾಡಬಹುದು ಎಂದು ಕಂಪೆನಿ ಮಾಹಿತಿ ನೀಡಿದ್ದು, ಈ ಮೂಲಕ ಚಾರ್ಜಿಂಗ್‌ ವಿಭಾಗದಲ್ಲಿ ಹೊಸ ಅಲೆಯನ್ನೇ ಸೃಷ್ಟಿ ಮಾಡಬಹುದು ಎನ್ನಲಾಗಿದೆ.

ಇನ್ಮುಂದೆ ಸ್ಮಾರ್ಟ್‌ಫೋನ್‌ಗಳನ್ನು ಗಾಳಿ ಮೂಲಕ ಚಾರ್ಜ್ ಮಾಡಬಹುದು..

ಇದೇ ಮೊದಲಲ್ಲ: ಇನ್ಫಿನಿಕ್ಸ್ ನಿಂದ ಘೋಷಣೆ ಆದ ಈ ಏರ್‌ಚಾರ್ಜ್‌ ತಂತ್ರಜ್ಞಾನ ವಿಶ್ವದಲ್ಲೇ ಇದೇ ಮೊದಲನೆಯದಲ್ಲ. ಏಕೆಂದರೆ ಶಿಯೋಮಿ (Xiaomi ) ಇದೇ ತಂತ್ರಜ್ಞಾನವನ್ನು 2021 ರಲ್ಲಿ ಅನಾವರಣಗೊಳಿಸಿದ ಮೊದಲನೆಯ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಆ ತಂತ್ರಜ್ಞಾನವನ್ನೂ ಸಹ ಶಿಯೋಮಿ ಏರ್‌ಚಾರ್ಜ್‌ (Xiaomi AirCharge) ಎಂತಲೇ ಕರೆದಿತ್ತು.

ಶಿಯೋಮಿ ತಂತ್ರಜ್ಞಾನ ಹೇಗೆ ಕೆಲಸ ಮಾಡಲಿದೆ?: ಶಿಯೋಮಿಯ ತಂತ್ರಜ್ಞಾನದಲ್ಲಿ ನಿಮ್ಮ ಫೋನ್ ಅನ್ನು ಯಾವುದೇ ರೀತಿಯ ಸ್ಟ್ಯಾಂಡ್‌ನಲ್ಲಿ ಇರಿಸಬೇಕಾದ ಅಗತ್ಯ ಇಲ್ಲ. ಆದರೆ ಚಾರ್ಜರ್ ಬಳಿ ಇರಬೇಕಾಗುತ್ತದೆ. ಪರಿಣಾಮ ನಿಮ್ಮ ಫೋನ್ ವೈರ್‌ಲೆಸ್ ಆಗಿ ಚಾರ್ಜ್ ಆಗುತ್ತದೆ. ಈ ತಂತ್ರಜ್ಞಾನವು ಚಾರ್ಜಿಂಗ್ ಸ್ಟೇಷನ್‌ನಿಂದ ಒಂದೆರಡು ಮೀಟರ್ ದೂರದಲ್ಲಿ 5 ವ್ಯಾಟ್‌ಗಳ ಶಕ್ತಿಯನ್ನು ತಲುಪಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಲಾಗಿದೆ.

ಇನ್ಫಿನಿಕ್ಸ್ ಎಕ್ಸ್ಟ್ರೀಮ್-ಟೆಂಪ್ ಬ್ಯಾಟರಿ: ಇನ್ನು ಇನ್ಫಿನಿಕ್ಸ್ ನ ಮತ್ತೊಂದು ತಂತ್ರಜ್ಞಾನದ ಬಗ್ಗೆ ತಿಳಿಸುವುದಾದರೆ ಅತ್ಯಂತ ಶೀತ (cold) ಪರಿಸರದಲ್ಲಿ ಮೊಬೈಲ್ ಫೋನ್‌ಗಳು ಎದುರಿಸುವ ಸಾಮಾನ್ಯ ಸವಾಲನ್ನು ಫೇಸ್‌ ಮಾಡಲು ಇನ್ಫಿನಿಕ್ಸ್ ಉದ್ಯಮ ಪ್ರಮುಖ ತಂತ್ರಜ್ಞಾನ ಪೂರೈಕೆದಾರರೊಂದಿಗೆ ಪಾಲುದಾರಿಕೆ ಹೊಂದಿದೆ. ನಿಯಮಿತ ಬ್ಯಾಟರಿಗಳು ಸಾಮಾನ್ಯವಾಗಿ ಲಿಥಿಯಂ ಐಯಾನ್ ಘನೀಕರಣವನ್ನು ಅನುಭವಿಸುತ್ತವೆ.

ಇದಕ್ಕಾಗಿ ಇನ್ಫಿನಿಕ್ಸ್ ಎಕ್ಸ್‌ಟ್ರೀಮ್ ಟೆಂಪ್ ಬ್ಯಾಟರಿಯನ್ನು ಅಭಿವೃದ್ಧಿಪಡಿಸಿದೆ. ಬಯೋಮಿಮೆಟಿಕ್ ಎಲೆಕ್ಟ್ರೋಲೈಟ್ ಮತ್ತು ಫ್ಯೂಷನ್ ಘನ ಸ್ಥಿತಿ ತಂತ್ರಜ್ಞಾನವನ್ನು ವಿದ್ಯುದ್ವಾರಗಳ ಮೇಲೆ ಇದು ಸಂಯೋಜಿಸುತ್ತದೆ. ಇನ್ಫಿನಿಕ್ಸ್ ಎಕ್ಸ್‌ಟ್ರೀಮ್ ಟೆಂಪ್ ಬ್ಯಾಟರಿ ತಂತ್ರಜ್ಞಾನವು -40 ° C ಗಿಂತ ಕಡಿಮೆ ತಾಪಮಾನದಲ್ಲಿಯೂ ಸಹ ಉತ್ತಮವಾಗಿ ಕೆಲಸ ಮಾಡುತ್ತದೆ.

Best Mobiles in India

English summary
Infinix has announced the Infinix AirCharge technology, which can charge smartphones wirelessly in the air.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+