ಇಂದು ದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ಇನ್ಫಿನಿಕ್ಸ್ GT 20 ಪ್ರೊ ಸ್ಮಾರ್ಟ್‌ಫೋನ್!
ಇನ್ಫಿನಿಕ್ಸ್ ಮೊಬೈಲ್ ಸಂಸ್ಥೆಯ ಬಹುನಿರೀಕ್ಷಿತ ಇನ್ಫಿನಿಕ್ಸ್ GT 20 ಪ್ರೊ ಮೊಬೈಲ್ ಇಂದು (ಮೇ 21 ರಂದು) ಅಧಿಕೃತವಾಗಿ ಬಿಡುಗಡೆ ಆಗಲಿದೆ. ಇನ್ನು ಮಾರುಕಟ್ಟೆಗೆ ಲಗ್ಗೆ ಇಡಲಿರುವ ಈ ಫೋನ್ ಡೈಮೆನ್ಸಿಟಿ 8200 ಅಲ್ಟಿಮೇಟ್ ಪ್ರೊಸೆಸರ್ ಸೌಲಭ್ಯದ ಪವರ್ ಪಡೆದಿರುವುದು ಬಹುತೇಕ ಕನ್ಫರ್ಮ್ ಆಗಿದೆ. ಅಲ್ಲದೇ ಈ ಫೋನ್ ಹಿಂಭಾಗದಲ್ಲಿ Cyber Mecha ಡಿಸೈನ್ ರಚನೆ ಒಳಗೊಂಡಿದೆ.
ಹೌದು, ಫ್ಲಿಪ್‌ಕಾರ್ಟ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಮೂಲಕ ಇಂದು ಮಧ್ಯಾಹ್ನ 12 ಗಂಟೆಗೆ ಇನ್ಫಿನಿಕ್ಸ್ GT 20 ಪ್ರೊ ಮೊಬೈಲ್ ಮಾರುಕಟ್ಟೆಗೆ ಅಧಿಕೃತವಾಗಿ ಲಾಂಚ್ ಆಗಲಿದೆ. ಸ್ಟೈಲಿಶ್ ಡಿಸೈನ್ ಜೊತೆಗೆ ಈ ಫೋನ್ ಬೆಸಲ್ ಲೆಸ್ ಡಿಸ್‌ಪ್ಲೇ ಅನ್ನು ಪಡೆದಿದೆ. ಹಾಗೆಯೇ 45W ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆಯನ್ನು ಪಡೆದಿರುವುದು ನಿಕ್ಕಿ ಎಂದು ತಿಳಿದುಬಂದಿದೆ.

ಹಾಗೆಯೇ ಈ ಫೋನ್ 12 GB RAM ಮತ್ತು 256 GB ಆಂತರೀಕ ಸ್ಟೋರೇಜ್ ವೇರಿಯಂಟ್ ಆಯ್ಕೆ ಒಳಗೊಂಡಿರಲಿದೆ. ಇದರ ಜೊತೆಗೆ ಈ ಫೋನ್ ಪ್ರಾಥಮಿಕ ಕ್ಯಾಮೆರಾವು 108 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ. ಹಾಗಾದರೇ ಇನ್ಫಿನಿಕ್ಸ್ GT 20 ಪ್ರೊ ಮೊಬೈಲ್ ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಇನ್ಫಿನಿಕ್ಸ್ GT 20 ಪ್ರೊ ನಿರೀಕ್ಷಿತ ಫೀಚರ್ಸ್
ಇನ್ಫಿನಿಕ್ಸ್ GT 20 ಪ್ರೊ ಮೊಬೈಲ್ 6.78 ಇಂಚಿನ FHD+ ಅಮೋಲೆಡ್ ಡಿಸ್‌ಪ್ಲೇ ಪಡೆದಿರಲಿದ್ದು, ಇದರ ಜೊತೆಗೆ 144Hz ರಿಫ್ರೆಶ್ ರೇಟ್ ಸಪೋರ್ಟ್ ಹೊಂದಿರಲಿದೆ. ಹಾಗೆಯೇ ಇದು 1300nits ಬ್ರೈಟ್ನೆಸ್ ಸಪೋರ್ಟ್ ಕೂಡಾ ಒಳಗೊಂಡಿದ್ದು, ಸ್ಕ್ರೀನ್ ಟು ಬಾಡಿ ನಡುವಿನ ಅನುಪಾತ ಶೇ 94.3% ರಷ್ಟು ಆಗಿದೆ.
ಇನ್ಫಿನಿಕ್ಸ್ GT 20 ಪ್ರೊ ಮೊಬೈಲ್ ಡೈಮೆನ್ಸಿಟಿ 8200 ಅಲ್ಟಿಮೇಟ್ ಪ್ರೊಸೆಸರ್ ಪವರ್ ಪಡೆದಿರುವುದು ಬಹುತೇಕ ಖಚಿತ ಆಗಿದೆ. ಇದಕ್ಕೆ ಅನುಗುಣವಾಗಿ ಆಂಡ್ರಾಯ್ಡ್ 14 ಓಎಸ್ ಕೆಲಸ ಮಾಡಲಿದೆ. ಇನ್ನು ಈ ಫೋನ್ 12 GB RAM + 256 GB ಸ್ಟೋರೇಜ್ ಸಪೋರ್ಟ್ ಸಹ ಪಡೆದುಕೊಂಡಿದೆ. ವಿಸಿ ಲಿಕ್ವಿಡ್ ಕೂಲಿಂಗ್ ಹಾಗೂ ಗೇಮಿಂಗ್ ಚಿಪ್‌ಸೆಟ್ ಅಪೋರ್ಟ್ ಕೂಡಾ ಇರಲಿದೆ.
ಇನ್ಫಿನಿಕ್ಸ್ GT 20 ಪ್ರೊ ಮೊಬೈಲ್ ಹಿಂಭಾಗದಲ್ಲಿ ಮೂರು ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು 108 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಇನ್ನು ಸೆಕೆಂಡರಿ ಕ್ಯಾಮೆರಾವು ಡೆಪ್ತ್ ಕ್ಯಾಮೆರಾ ಸೆನ್ಸಾರ್ ಸಾಮರ್ಥ್ಯ ಪಡೆದಿರಲಿದ್ದು, ಇನ್ನು ತೃತೀಯ ಕ್ಯಾಮೆರಾವು ಮೈಕ್ರೋ ಕ್ಯಾಮೆರಾ ಆಗಿರಲಿದೆ. ಹಾಗೆಯೇ ಈ ಫೋನ್ ಮುಂಭಾಗದಲ್ಲಿ 32 ಮೆಗಾ ಪಿಕ್ಸಲ್ ಸೆಲ್ಫಿ ಕ್ಯಾಮೆರಾ ರಚನೆ ಹೊಂದಿರಲಿದೆ.
ಇನ್ಫಿನಿಕ್ಸ್ GT 20 ಪ್ರೊ ಮೊಬೈಲ್ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸಪೋರ್ಟ್ ಹೊಂದಿದ್ದು, ಇದಕ್ಕೆ ಪೂರಕವಾಗಿ 45W ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ಪಡೆದಿರಲಿದೆ. ಇದರ ಜೊತೆಗೆ ಇದು ಡ್ಯುಯಲ್ ಸ್ಪೀಕರ್ ಸೌಲಭ್ಯ ಸಹ ಪಡೆದಿರಲಿದೆ. ಇದರೊಂದಿಗೆ ಈ ಫೋನ್ ಇತ್ತೀಚಿನ ಅಗತ್ಯ ಕನೆಕ್ಟಿವಿಟಿ ಸೌಲಭ್ಯಗಳ ಆಯ್ಕೆಯನ್ನು ಸಹ ಪಡೆದಿರಲಿದೆ ಎಂದು ಹೇಳಲಾಗಿದೆ.
ಇನ್ಫಿನಿಕ್ಸ್ GT 20 ಪ್ರೊ ಮೊಬೈಲ್ ಹಿಂಭಾಗದಲ್ಲಿ Cyber Mecha ಡಿಸೈನ್ ರಚನೆ ಅನ್ನು ಪಡೆದಿದ್ದು, ಇದು 8 ಕಲರ್ ಕಾಂಬಿನೇಶನ್ ಹಾಗೂ 4 ಲೈಟಿಂಗ್ ಎಫೆಕ್ಟ್ ಸೌಲಭ್ಯವನ್ನು ಪಡೆದುಕೊಂಡಿದೆ. ಈ ಫೋನ್ ಇಂದು (ಮೇ 21 ರಂದು) ಫ್ಲಿಪ್‌ಕಾರ್ಟ್ ತಾಣದ ಮೂಲಕ ಮಾರುಕಟ್ಟೆಗೆ ಲಗ್ಗೆ ಇಡಲಿದೆ.


Click it and Unblock the Notifications








