Home
ಸುದ್ದಿಜಾಲ

ನಾಳೆ ಎಂಟ್ರಿ ಕೊಡಲಿದೆ ಇನ್ಫಿನಿಕ್ಸ್ GT 20 ಪ್ರೊ; ಇದು ಪಕ್ಕಾ ಗೇಮಿಂಗ್‌ ಫೋನ್‌!?

ಮೊಬೈಲ್‌ ಪ್ರಿಯರು ನಿರೀಕ್ಷೆಯಿಂದ ಕಾಯುತ್ತಿರುವ ಇನ್ಫಿನಿಕ್ಸ್ GT 20 ಪ್ರೊ ಸ್ಮಾರ್ಟ್‌ಫೋನ್‌ ನಾಳೆ (ಮೇ 21 ರಂದು) ಭಾರತೀಯ ಮಾರುಕಟ್ಟೆಗೆ ಅಧಿಕೃತವಾಗಿ ಎಂಟ್ರಿ ಕೊಡಲಿದೆ. ಈ ಮೊಬೈಲ್‌ನ ಕೆಲವು ಲೀಕ್ ಫೀಚರ್ಸ್‌ ಈಗಾಗಲೇ ಮೊಬೈಲ್‌ ಪ್ರಿಯರನ್ನು ಆಕರ್ಷಿಸಿದ್ದು, ಪಕ್ಕಾ ಗೇಮಿಂಗ್‌ ಫೋನ್‌ ಆಗಿ ಕಾಣಿಸಿಕೊಂಡಿದೆ.

ಹೌದು, ಇನ್ಫಿನಿಕ್ಸ್ GT 20 ಪ್ರೊ ಫೋನ್‌ ದೇಶಿಯ ಮಾರುಕಟ್ಟೆಯಲ್ಲಿ ನಾಳೆ ಬಿಡುಗಡೆ ಆಗಲಿದೆ. ಈ ಫೋನ್‌ ಲಾಂಚ್‌ ಬಗ್ಗೆ ದೈತ್ಯ ಇ ಕಾಮರ್ಸ್‌ ಫ್ಲಿಪ್‌ಕಾರ್ಟ್‌ ತಾಣವು ಮೈಕ್ರೋ ಪೇಜ್‌ ಕೂಡಾ ತೆರೆದಿದೆ. ಲೀಕ್‌ ಮಾಹಿತಿಯಂತೆ ಈ ಫೋನ್‌ ಡೈಮೆನ್ಸಿಟಿ 8200 ಅಲ್ಟಿಮೇಟ್ ಪ್ರೊಸೆಸರ್‌ ಸೌಲಭ್ಯ ಪಡೆದಿದ್ದು, ಇದರ ಡಿಸ್‌ಪ್ಲೇಯು 144Hz ರಿಫ್ರೆಶ್ ರೇಟ್‌ ಸಪೋರ್ಟ್‌ ಒಳಗೊಂಡಿರಲಿದೆ.

ನಾಳೆ ಎಂಟ್ರಿ ಕೊಡಲಿದೆ ಇನ್ಫಿನಿಕ್ಸ್ GT 20 ಪ್ರೊ; ಇದು ಪಕ್ಕಾ ಗೇಮಿಂಗ್‌ ಫೋನ್‌!?

ಹಾಗೆಯೇ ಈ ಫೋನ್‌ ಟ್ರಿಪಲ್‌ ಕ್ಯಾಮೆರಾ ರಚನೆ ಪಡೆದಿರಲಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು 108 ಮೆಗಾ ಪಿಕ್ಸಲ್‌ ಪ್ರಾಥಮಿಕ ಕ್ಯಾಮೆರಾ ಸೆನ್ಸಾರ್‌ ಪಡೆದಿರಲಿದೆ. ಹಾಗೆಯೇ ಇದು 5000mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿರಲಿದ್ದು, ಇದಕ್ಕೆ ಪೂರಕವಾಗಿ 45W ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ಕೂಡಾ ಒಳಗೊಂಡಿರಲಿದೆ. ಇನ್ನುಳಿದಂತೆ ಇನ್ಫಿನಿಕ್ಸ್ GT 20 ಪ್ರೊ ಫೋನಿನ ಇತರೆ ನಿರೀಕ್ಷಿತ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಇನ್ಫಿನಿಕ್ಸ್ GT 20 ಪ್ರೊ ನಿರೀಕ್ಷಿತ ಫೀಚರ್ಸ್‌

ಇನ್ಫಿನಿಕ್ಸ್ GT 20 ಪ್ರೊ ಫೋನ್ 6.78 ಇಂಚಿನ FHD+ ಅಮೋಲೆಡ್‌ ಡಿಸ್‌ಪ್ಲೇ ಪಡೆದಿರಲಿದ್ದು, ಇದರ ಜೊತೆಗೆ 144Hz ರಿಫ್ರೆಶ್ ರೇಟ್‌ ಸಪೋರ್ಟ್‌ ಹೊಂದಿರಲಿದೆ. ಹಾಗೆಯೇ ಇದು 1300nits ಬ್ರೈಟ್ನೆಸ್‌ ಸಪೋರ್ಟ್‌ ಕೂಡಾ ಒಳಗೊಂಡಿದ್ದು, ಸ್ಕ್ರೀನ್‌ ಟು ಬಾಡಿ ನಡುವಿನ ಅನುಪಾತ ಶೇ 94.3% ರಷ್ಟು ಆಗಿದೆ.

ಇನ್ಫಿನಿಕ್ಸ್‌ GT 20 ಪ್ರೊ ಫೋನ್‌ ಡೈಮೆನ್ಸಿಟಿ 8200 ಅಲ್ಟಿಮೇಟ್ ಪ್ರೊಸೆಸರ್‌ ಪವರ್‌ ಪಡೆದಿರುವುದು ಬಹುತೇಕ ಖಚಿತ ಆಗಿದೆ. ಇದಕ್ಕೆ ಅನುಗುಣವಾಗಿ ಆಂಡ್ರಾಯ್ಡ್‌ 14 ಓಎಸ್ ಕೆಲಸ ಮಾಡಲಿದೆ. ಇನ್ನು ಈ ಫೋನ್‌ 12 GB RAM + 256 GB ಸ್ಟೋರೇಜ್‌ ಸಪೋರ್ಟ್‌ ಸಹ ಪಡೆದುಕೊಂಡಿದೆ. ವಿಸಿ ಲಿಕ್ವಿಡ್‌ ಕೂಲಿಂಗ್ ಹಾಗೂ ಗೇಮಿಂಗ್ ಚಿಪ್‌ಸೆಟ್‌ ಅಪೋರ್ಟ್‌ ಕೂಡಾ ಇದೆ.

ಇನ್ಫಿನಿಕ್ಸ್‌ GT 20 ಪ್ರೊ ಫೋನ್‌ ಹಿಂಭಾಗದಲ್ಲಿ ಮೂರು ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು 108 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಇನ್ನು ಸೆಕೆಂಡರಿ ಕ್ಯಾಮೆರಾವು ಡೆಪ್ತ್‌ ಕ್ಯಾಮೆರಾ ಸೆನ್ಸಾರ್‌ ಸಾಮರ್ಥ್ಯ ಪಡೆದಿರಲಿದ್ದು, ಇನ್ನು ತೃತೀಯ ಕ್ಯಾಮೆರಾವು ಮೈಕ್ರೋ ಕ್ಯಾಮೆರಾ ಆಗಿರಲಿದೆ. ಹಾಗೆಯೇ ಈ ಫೋನ್‌ ಮುಂಭಾಗದಲ್ಲಿ 32 ಮೆಗಾ ಪಿಕ್ಸಲ್‌ ಸೆಲ್ಫಿ ಕ್ಯಾಮೆರಾ ರಚನೆ ಪಡೆದಿರಲಿದೆ.

ಇನ್ಫಿನಿಕ್ಸ್‌ GT 20 ಪ್ರೊ ಫೋನ್‌ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸಪೋರ್ಟ್‌ ಹೊಂದಿದ್ದು, ಇದಕ್ಕೆ ಪೂರಕವಾಗಿ 45W ಫಾಸ್ಟ್‌ ಚಾರ್ಜಿಂಗ್ ಅನ್ನು ಸಪೋರ್ಟ್‌ ಪಡೆದಿರಲಿದೆ. ಅಲ್ಲದೇ ಇದು ಡ್ಯುಯಲ್‌ ಸ್ಪೀಕರ್‌ ಸೌಲಭ್ಯ ಸಹ ಪಡೆದಿರಲಿದೆ. ಇದರೊಂದಿಗೆ ಈ ಫೋನ್‌ ಇತ್ತೀಚಿನ ಅಗತ್ಯ ಕನೆಕ್ಟಿವಿಟಿ ಸೌಲಭ್ಯಗಳ ಆಯ್ಕೆಯನ್ನು ಸಹ ಪಡೆದಿರಲಿದೆ ಎಂದು ನಿರೀಕ್ಷಿಸಲಾಗಿದೆ.

ಇನ್ನು ಈ ಫೋನ್‌ ಹಿಂಭಾಗದಲ್ಲಿ Cyber Mecha ಡಿಸೈನ್‌ ರಚನೆ ಅನ್ನು ಪಡೆದಿದ್ದು, ಇದು 8 ಕಲರ್‌ ಕಾಂಬಿನೇಶನ್ ಹಾಗೂ 4 ಲೈಟಿಂಗ್ ಎಫೆಕ್ಟ್‌ ಸೌಲಭ್ಯವನ್ನು ಪಡೆದುಕೊಂಡಿದೆ. ಈ ಫೋನ್ ನಾಳೆ ಫ್ಲಿಪ್‌ಕಾರ್ಟ್‌ ತಾಣದ ಮೂಲಕ ಮಾರುಕಟ್ಟೆಗೆ ಲಾಂಚ್ ಆಗಲಿದೆ.

Best Mobiles in India

English summary
Infinix GT 20 Pro 5G is launching in India tomorrow. Expected Specifications and more details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+