Home
ಸುದ್ದಿಜಾಲ

ಇಂದು ಇನ್ಫಿನಿಕ್ಸ್ GT 20 ಪ್ರೊ ಫೋನ್‌ ಫಸ್ಟ್‌ ಸೇಲ್‌; ಸಿಗುತ್ತೆ ಬೊಂಬಾಟ್‌ ಆಫರ್‌!

ಇನ್ಫಿನಿಕ್ಸ್ ಮೊಬೈಲ್‌ ಬ್ರ್ಯಾಂಡ್‌ ದೇಶಿಯ ಮಾರುಕಟ್ಟೆಯಲ್ಲಿ ಹೊಸದಾಗಿ ಲಾಂಚ್ ಮಾಡಿರುವ ಇನ್ಫಿನಿಕ್ಸ್ GT 20 ಪ್ರೊ ಮೊಬೈಲ್‌ ಡಿಸೈನ್‌ ಹಾಗೂ ಫೀಚರ್ಸ್‌ಗಳಿಂದ ಆಕರ್ಷಕ ಎನಿಸಿದೆ. ಇನ್ನು ಈ ಫೋನಿನ ಸೇಲ್‌ ಇಂದು (ಮೇ 28 ರಂದು) ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತಾಣದ ಮೂಲಕ ಪ್ರಾರಂಭ ಆಗಲಿದೆ.

ಹೌದು, ಇನ್ಫಿನಿಕ್ಸ್ ಸಂಸ್ಥೆಯ ಇನ್ಫಿನಿಕ್ಸ್ GT 20 ಪ್ರೊ ಸ್ಮಾರ್ಟ್‌ಫೋನ್‌ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ಮೂಲಕ ಇಂದು (ಮೇ 28 ರಂದು) ಸೇಲ್‌ ಶುರು ಮಾಡಲಿದೆ. ಈ ಫೋನ್‌ ಡೈಮೆನ್ಸಿಟಿ 8200 ಅಲ್ಟಿಮೇಟ್ ಪ್ರೊಸೆಸರ್‌ ಸೌಲಭ್ಯ ಪಡೆದಿದ್ದು, ಇದರೊಂದಿಗೆ 108 ಮೆಗಾ ಪಿಕ್ಸಲ್‌ ಪ್ರಾಥಮಿಕ ಕ್ಯಾಮೆರಾ ರಚನೆ ಸಹ ಪಡೆದಿದೆ.

ಇಂದು ಇನ್ಫಿನಿಕ್ಸ್ GT 20 ಪ್ರೊ ಫೋನ್‌ ಫಸ್ಟ್‌ ಸೇಲ್‌; ಸಿಗುತ್ತೆ ಬೊಂಬಾಟ್‌ ಆಫರ್

ಇನ್ನು ಈ ಹೊಸ 5G ಮೊಬೈಲ್‌ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಪಡೆದಿದ್ದು, ಇದರ ಜೊತೆಗೆ 12 GB RAM + 256 GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಪಡೆದುಕೊಂಡಿದೆ. ಇನ್ನುಳಿದಂತೆ ಇನ್ಫಿನಿಕ್ಸ್ GT 20 ಪ್ರೊ ಮೊಬೈಲ್‌ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ ಓದಿರಿ.

ಇನ್ಫಿನಿಕ್ಸ್ GT 20 ಪ್ರೊ ಫೀಚರ್ಸ್‌ ಹೀಗಿವೆ

ಇನ್ಫಿನಿಕ್ಸ್ GT 20 ಪ್ರೊ ಫೋನ್‌ 6.78 ಇಂಚಿನ FHD+ ಅಮೋಲೆಡ್‌ ಡಿಸ್‌ಪ್ಲೇ ಪಡೆದಿದ್ದು, ಇದರ ಜೊತೆಗೆ 144Hz ರಿಫ್ರೆಶ್ ರೇಟ್‌ ಸಪೋರ್ಟ್‌ ಪಡೆದಿದೆ. ಹಾಗೆಯೇ ಇದು 1300 nits ಬ್ರೈಟ್ನೆಸ್‌ ಸಪೋರ್ಟ್‌ ಕೂಡಾ ಇದ್ದು, ಸ್ಕ್ರೀನ್‌ ಟು ಬಾಡಿ ನಡುವಿನ ಅನುಪಾತ ಶೇ 94.3% ರಷ್ಟು ಆಗಿದೆ.

ಇನ್ಫಿನಿಕ್ಸ್‌ GT 20 ಪ್ರೊ ಫೋನ್‌ ಡೈಮೆನ್ಸಿಟಿ 8200 ಅಲ್ಟಿಮೇಟ್ ಪ್ರೊಸೆಸರ್‌ ಪವರ್‌ನಲ್ಲಿ ಕೆಲಸ ಮಾಡಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 14 ಓಎಸ್ ಸಪೋರ್ಟ್‌ ಇದೆ. ಇನ್ನು ಈ ಫೋನ್‌ 12 GB RAM + 256 GB ಸ್ಟೋರೇಜ್‌ ಸಪೋರ್ಟ್‌ ಸಹ ಒಳಗೊಂಡಿದ್ದು. ವಿಸಿ ಲಿಕ್ವಿಡ್‌ ಕೂಲಿಂಗ್ ಹಾಗೂ ಗೇಮಿಂಗ್ ಚಿಪ್‌ಸೆಟ್‌ ಅಪೋರ್ಟ್‌ ಕೂಡಾ ಪಡೆದಿದೆ.

ಇನ್ಫಿನಿಕ್ಸ್‌ GT 20 ಪ್ರೊ ಫೋನ್‌ ಹಿಂಭಾಗದಲ್ಲಿ ಮೂರು ಕ್ಯಾಮೆರಾ ರಚನೆ ಹೊಂದಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು 108 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಇನ್ನು ದ್ವಿತೀಯ ಕ್ಯಾಮೆರಾವು ಡೆಪ್ತ್‌ ಕ್ಯಾಮೆರಾ ಸೆನ್ಸಾರ್‌ ಇದ್ದು, ಇನ್ನು ಮೂರನೇ ಕ್ಯಾಮೆರಾವು ಮೈಕ್ರೋ ಕ್ಯಾಮೆರಾ ಆಗಿದೆ. ಹಾಗೆಯೇ ಈ ಫೋನ್‌ ಮುಂಭಾಗದಲ್ಲಿ 32 ಮೆಗಾ ಪಿಕ್ಸಲ್‌ ಸೆಲ್ಫಿ ಕ್ಯಾಮೆರಾ ರಚನೆ ಪಡೆದಿದೆ.

ಇನ್ಫಿನಿಕ್ಸ್‌ GT 20 ಪ್ರೊ ಫೋನ್‌ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸಪೋರ್ಟ್‌ ಪಡೆದಿದ್ದು, ಇದಕ್ಕೆ ಪೂರಕವಾಗಿ 45W ಫಾಸ್ಟ್‌ ಚಾರ್ಜಿಂಗ್ ಅನ್ನು ಸಪೋರ್ಟ್‌ ಹೊಂದಿದೆ. ಇದರ ಜೊತೆಗೆ ಇದು ಡ್ಯುಯಲ್‌ ಸ್ಪೀಕರ್‌ ಜೆಬಿಎಲ್‌ ಆಡಿಯೋ ಸೌಲಭ್ಯ ಸಹ ಪಡೆದಿದೆ. ಇದರೊಂದಿಗೆ ಈ ಫೋನ್‌ ಇತ್ತೀಚಿನ ಅಗತ್ಯ ಕನೆಕ್ಟಿವಿಟಿ ಸೌಲಭ್ಯಗಳ ಆಯ್ಕೆಯನ್ನು ಸಹ ಪಡೆದಿದೆ.

ಇನ್ಫಿನಿಕ್ಸ್‌ GT 20 ಪ್ರೊ ಫೋನ್‌ 8GB ವೇರಿಯಂಟ್‌ ಹಾಗೂ 12GB ವೇರಿಯಂಟ್‌ ಸ್ಟೋರೇಜ್‌ ಆಯ್ಕೆಯಲ್ಲಿ ಖರೀದಿಗೆ ಲಭ್ಯ ಆಗಲಿದೆ. ಇನ್ನು ಈ ಫೋನ್‌ ಬ್ಲೂ, ಆರೆಂಜ್‌ ಹಾಗೂ ಸಿಲ್ವರ್‌ ಕಲರ್‌ ಆಯ್ಕೆಯಲ್ಲಿ ಖರೀದಿಗೆ ದೊರೆಯುತ್ತದೆ.

Best Mobiles in India

English summary
Infinix GT 20 Pro 5G Sale Today via Flipkart. check Price, Offers and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+