Home
ಸುದ್ದಿಜಾಲ

ಶೀಘ್ರದಲ್ಲೇ ಲಾಂಚ್‌ ಆಗಲಿದೆ ಈ ಗೇಮಿಂಗ್‌ ಸ್ಮಾರ್ಟ್‌ಫೋನ್‌; ವೇಗದ ಪ್ರೊಸೆಸರ್‌!

ಬಜೆಟ್‌ ದರದಲ್ಲಿ ಭಿನ್ನ ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿರುವ ಇನ್ಫಿನಿಕ್ಸ್‌ ಸಂಸ್ಥೆಯು ಇದೀಗ ಭಾರತದಲ್ಲಿ ನೂತನವಾಗಿ ಇನ್ಫಿನಿಕ್ಸ್ GT 20 ಪ್ರೊ ಸ್ಮಾರ್ಟ್‌ಫೋನ್‌ ಅನ್ನು ಲಾಂಚ್ ಮಾಡಲು ಸಜ್ಜಾಗಿದೆ. ಇನ್ನು ಬರಲಿರುವ ಈ ಫೋನ್‌ ಗೇಮಿಂಗ್‌ ಸ್ಮಾರ್ಟ್‌ಫೋನ್‌ ಆಗಿರಲಿದ್ದು, ಮೀಡಿಯಾಟೆಕ್‌ ಡೈಮೆನ್ಸಿಟಿ 8200 ಅಲ್ಟ್ರಾ ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದೆ.

ಹೌದು, ಇನ್ಫಿನಿಕ್ಸ್‌ ಸಂಸ್ಥೆಯು ಸದ್ಯದಲ್ಲೇ ಹೊಸದಾಗಿ ಇನ್ಫಿನಿಕ್ಸ್ GT 20 ಪ್ರೊ ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಲು ರೆಡಿಯಾಗಿದೆ. ಸಂಸ್ಥೆಯು ಬಿಡುಗಡೆಯ ಅಧಿಕೃತ ದಿನಾಂಕ ಹೊರಹಾಕಿಲ್ಲ ಆದರೆ ತನ್ನ ಅಧಿಕೃತ ವೆಬ್‌ಸೈಟ್‌ ಈ ಫೋನಿನ ಲಾಂಚ್‌ ಬಗ್ಗೆ ಮೈಕ್ರೋಸೈಟ್ ತೆರೆದಿದೆ. ಇನ್ನು ಈ ಮೊಬೈಲ್‌ ಪ್ರಾಥಮಿಕ ಕ್ಯಾಮೆರಾವು 108 ಮೆಗಾ ಪಿಕ್ಸಲ್‌ ಸೆನ್ಸಾರ್‌ ರಚನೆಯನ್ನು ಒಳಗೊಂಡಿರಲಿದೆ.

ಶೀಘ್ರದಲ್ಲೇ ಲಾಂಚ್‌ ಆಗಲಿದೆ ಈ ಗೇಮಿಂಗ್‌ ಸ್ಮಾರ್ಟ್‌ಫೋನ್‌; ವೇಗದ ಪ್ರೊಸೆಸರ್‌!

ಇನ್ಫಿನಿಕ್ಸ್‌ ಕಂಪನಿಯು ಇನ್ಫಿನಿಕ್ಸ್ GT 20 ಪ್ರೊ ಸ್ಮಾರ್ಟ್‌ಫೋನ್‌ 12GB RAM ಮತ್ತು 256GB ವೇರಿಯಂಟ್‌ ಆಯ್ಕೆ ಪಡೆದಿರಲಿದ್ದು, 5,000 mAh ಸಾಮರ್ಥ್ಯದ ಬ್ಯಾಟರಿ ಸೌಲಭ್ಯವನ್ನು ಪಡೆದುಕೊಂಡಿದೆ. ಹಾಗಾದರೇ ಇನ್ನುಳಿದಂತೆ ಈ ಫೋನಿನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಇನ್ಫಿನಿಕ್ಸ್ GT 20 ಪ್ರೊ - ಫೀಚರ್ಸ್‌

ಇನ್ಫಿನಿಕ್ಸ್ GT 20 ಪ್ರೊ ಫೋನ್ 6.78 ಇಂಚಿನ FHD+ ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, ಇದು 1,300 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌, 144Hz ರಿಫ್ರೆಶ್ ರೇಟ್‌, 360Hz ಟಚ್‌ ಸ್ಯಾಂಪಲಿಂಗ್ ರೇಟ್‌ ಮತ್ತು 2304Hz PWM ಡಿಮ್ಮ ಆಯ್ಕೆ ಪಡೆದದೆ. ಇದರ ಜೊತೆಗೆ ಗೇಮಿಂಗ್ ಸಮಯದಲ್ಲಿ 120fps ಸಾಧಿಸಲು MEMC ಮತ್ತು ಗೇಮ್ ಆಪ್ಟಿಕಲ್ ಆಪ್ಟಿಮೈಸೇಶನ್ ತಂತ್ರಜ್ಞಾನವನ್ನು ಬಳಸುವ ಪಿಕ್ಸೆಲ್‌ವರ್ಕ್ಸ್ X5 ಟರ್ಬೊ ಗೇಮಿಂಗ್ ಡಿಸ್‌ಪ್ಲೇ ಸೌಲಭ್ಯ ಇದೆ.

ಇನ್ಫಿನಿಕ್ಸ್ GT 20 ಪ್ರೊ ಫೋನ್ ಮೀಡಿಯಾಟೆಕ್‌ ಡೈಮೆನ್ಸಿಟಿ 8200 ಅಲ್ಟ್ರಾ ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದ್ದು, ಮಾಲಿ G610 GPU ಬಲ ಪಡೆದುಕೊಂಡಿದೆ. ಹಾಗೆಯೇ 12GB RAM ಮತ್ತು 256GB UFS 3.1 ಸ್ಟೋರೇಜ್‌ ಆಯ್ಕೆ ಇದ್ದು, ಇದರ ಜೊತೆಗೆ ಆಂಡ್ರಾಯ್ಡ್ 14 ಅನ್ನು ರನ್‌ ಮಾಡಲಿದೆ. ಓಎಸ್‌ ನವೀಕರಣಗಳು ಹಾಘು ಸಾಫ್ಟ್‌ವೇರ್ ಅಪ್‌ಡೇಟ್‌ಗಳಿಗೆ ಸಪೋರ್ಟ್‌ ಇದೆ.

ಇನ್ಫಿನಿಕ್ಸ್ GT 20 ಪ್ರೊ ಫೋನ್ ತ್ರಿವಳಿ ಕ್ಯಾಮೆರಾ ರಚನೆ ಪಡೆದಿದ್ದು, ಇದರ ಮುಖ್ಯ ಕ್ಯಾಮೆರಾವು 108 ಮೆಗಾಪಿಕ್ಸೆಲ್‌ ಸೆನ್ಸರ್, ಉಳಿದೆರಡು ಕ್ಯಾಮೆರಾಗಳು 2 ಮೆಗಾ ಪಿಕ್ಸೆಲ್‌ ಡೆಪ್ತ್ ಸೆನ್ಸರ್ ಮತ್ತು 2 ಮೆಗಾ ಪಿಕ್ಸೆಲ್‌ ಮ್ಯಾಕ್ರೋ ಸೆನ್ಸರ್‌ ಅನ್ನು ಪಡೆದಿವೆ. ಅಲ್ಲದೆ ಸೆಲ್ಫಿಗಾಗಿ ಈ ಫೋನ್, f/2.2 ಅಪರ್ಚರ್‌ನ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ.

ಇನ್ಫಿನಿಕ್ಸ್ GT 20 ಪ್ರೊ ಫೋನ್ 45W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಜೊತೆಗೆ 5,000 mAh ಸಾಮರ್ಥ್ಯದ ಬ್ಯಾಟರಿ ಸೌಲಭ್ಯ ಹೊಂದಿದೆ. ಹಾಗೆಯೇ ಜೆಬಿಎಲ್‌ನ ಸ್ಟೀರಿಯೋ ಸ್ಪೀಕರ್‌ಗಳು ಮತ್ತು ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ರೀಡರ್ ಆಯ್ಕೆಗಳು ಇವೆ. ಕನೆಕ್ಟಿವಿಟಿ ಸೌಲಭ್ಯಗಳಲ್ಲಿ 5G, 4G, ವೈ ಫೈ 6,ಎನ್‌ಎಫ್‌ಸಿ, ಜಿಪಿಎಸ್, ಬ್ಲೂಟೂತ್ 5.3 ಮತ್ತು ಇನ್ನೂ ಅನೇಕ ಸೌಲಭ್ಯಗಳನ್ನು ಈ ಫೋನ್‌ನಲ್ಲಿ ಕಾಣಬಹುದಾಗಿದೆ.

ಇನ್ಫಿನಿಕ್ಸ್ GT 20 ಪ್ರೊ ಫೋನ್ 12GB/256GB ಸ್ಟೋರೇಜ್‌ ಆಯ್ಕೆಯಲ್ಲಿ ಖರೀದಿಗೆ ಲಭ್ಯ ಆಗಲಿದೆ. ಅಲ್ಲದೇ ಇದು ಮೆಚಾ ಬ್ಲೂ, ಮೆಚಾ ಆರೆಂಜ್ ಮತ್ತು ಮೆಚಾ ಸಿಲ್ವರ್ ಬಣ್ಣದ ಆಯ್ಕೆಗಳಲ್ಲಿ ಲಭ್ಯ ಆಗುವ ಸಾಧ್ಯತೆಯಿದೆ.

Best Mobiles in India

English summary
Infinix GT 20 Pro launching in India soon. check what to Expect and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+