256GB ಸ್ಟೋರೇಜ್‌ನ ಈ ಮೊಬೈಲ್‌ಗೆ ಬಿಗ್ ಆಫರ್; ಸಖತ್ ಸ್ಟೈಲಿಶ್ ಡಿಸೈನ್!
ಇನ್ಫಿನಿಕ್ಸ್ (Infinix) ಮೊಬೈಲ್ ಸಂಸ್ಥೆಯ ಕೆಲವು ಮೊಬೈಲ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಸದ್ದು ಮಾಡಿವೆ. ಆ ಪೈಕಿ ಇನ್ಫಿನಿಕ್ಸ್ GT 20 ಪ್ರೊ (Infinix GT 20 Pro) ಸಹ ಫೀಚರ್ಸ್‌ಗಳ ಮೂಲಕ ಗ್ರಾಹಕರ ಗಮನ ಸೆಳೆದಿದೆ. ಈ ಸ್ಮಾರ್ಟ್‌ಫೋನ್ ಮಿಡಿಯಾ ಟೆಕ್ ಡೈಮೆನ್ಸಿಟಿ 8200 ಅಲ್ಟಿಮೇಟ್ ಪ್ರೊಸೆಸರ್ ಸೌಲಭ್ಯ ಒಳಗೊಂಡಿದ್ದು, ಅಮೋಲೆಡ್ ಡಿಸ್‌ಪ್ಲೇ ಪಡೆದಿದೆ. ಸದ್ಯ ಈ ಫೋನ್ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ತಾಣದಲ್ಲಿ ಬೊಂಬಾಟ್ ಬೆಲೆ ಇಳಿಕೆ ಪಡೆದಿದ್ದು, ಖರೀದಿದಾರರು ಹುಬ್ಬೇರಿಸುವಂತೆ ಆಗಿದೆ.
ಹೌದು, ಫ್ಲಿಪ್‌ಕಾರ್ಟ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ನಲ್ಲಿ ಸದ್ಯ 'ಸ್ಮಾರ್ಟ್‌ಫೋನ್ ಫೆಸ್ಟಿವಲ್ ಸೇಲ್' ಲೈವ್ ಇದೆ. ಈ ಸೇಲ್‌ನಲ್ಲಿ ಇನ್ಫಿನಿಕ್ಸ್ GT 20 ಪ್ರೊ (Infinix GT 20 Pro) ಫೋನ್ ಶೇ. 28% ರಷ್ಟು ನೇರ ಡಿಸ್ಕೌಂಟ್ ದರದಲ್ಲಿ ಕಾಣಿಸಿಕೊಂಡಿದೆ. ಇನ್ನು ಈ ಮೊಬೈಲ್‌ನ 8 GB RAM + 256 GB ಸ್ಟೋರೇಜ್ ವೇರಿಯಂಟ್ ಆಫರ್‌ನಲ್ಲಿ 22,999ರೂ. ಗಳ ಬೆಲೆಯಲ್ಲಿ ಖರೀದಿಗೆ ಸಿಗಲಿದೆ. ಅಲ್ಲದೇ ಹೆಚ್ಚುವರಿಯಾಗಿ ಕೆಲವು ಆಯ್ದ ಬ್ಯಾಂಕ್‌ಗಳಿಂದ ರಿಯಾಯಿತಿ ಸಹ ಪಡೆಯಬಹುದಾಗಿದೆ.

ಅಂದಹಾಗೆ ಇನ್ಫಿನಿಕ್ಸ್ GT 20 ಪ್ರೊ ಮೊಬೈಲ್ ಮೆಕಾ ಸಿಲ್ವರ್, ಮೆಕಾ ಆರೆಂಜ್ ಮತ್ತು ಮೆಕಾ ಬ್ಲೂ ಕಲರ್ ಆಯ್ಕೆಗಳನ್ನು ಇದು ಪಡೆದುಕೊಂಡಿದೆ. ಇದರ ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಅನ್ನು ಪಡೆದಿದೆ. ಹಾಗಾದರೇ ಇನ್ಫಿನಿಕ್ಸ್ GT 20 ಪ್ರೊ (Infinix GT 20 Pro) ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಇನ್ಫಿನಿಕ್ಸ್ GT 20 ಪ್ರೊ ಫೀಚರ್ಸ್
ಇನ್ಫಿನಿಕ್ಸ್ GT 20 ಪ್ರೊ ಫೋನ್ 6.78 ಇಂಚಿನ FHD+ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, ಇದರ ಜೊತೆಗೆ 144Hz ರಿಫ್ರೆಶ್ ರೇಟ್ ಸಪೋರ್ಟ್ ಪಡೆದಿದೆ. ಹಾಗೆಯೇ ಇದು 1300nits ಬ್ರೈಟ್ನೆಸ್ ಸಪೋರ್ಟ್ ಕೂಡಾ ಇದ್ದು, ಸ್ಕ್ರೀನ್ ಟು ಬಾಡಿ ನಡುವಿನ ಅನುಪಾತ ಶೇ 94.3% ರಷ್ಟು ಆಗಿದೆ.
ಇನ್ಫಿನಿಕ್ಸ್ GT 20 ಪ್ರೊ ಫೋನ್ ಮಿಡಿಯಾ ಟೆಕ್ ಡೈಮೆನ್ಸಿಟಿ 8200 ಅಲ್ಟಿಮೇಟ್ ಪ್ರೊಸೆಸರ್ ಬಲದಲ್ಲಿ ಕೆಲಸ ಮಾಡಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 14 ಓಎಸ್ ಸಪೋರ್ಟ್ ಇದೆ. ಇನ್ನು ಈ ಫೋನ್ 12 GB RAM + 256 GB ಸ್ಟೋರೇಜ್ ಸಪೋರ್ಟ್ ಸಹ ಒಳಗೊಂಡಿದ್ದು. ವಿಸಿ ಲಿಕ್ವಿಡ್ ಕೂಲಿಂಗ್ ಹಾಗೂ ಗೇಮಿಂಗ್ ಚಿಪ್‌ಸೆಟ್ ಅಪೋರ್ಟ್ ಕೂಡಾ ಪಡೆದಿದೆ.
ಇನ್ಫಿನಿಕ್ಸ್ GT 20 ಪ್ರೊ ಫೋನ್ ಹಿಂಭಾಗದಲ್ಲಿ ಮೂರು ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು 108 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಇನ್ನು ಎರಡನೇ ಕ್ಯಾಮೆರಾವು ಡೆಪ್ತ್ ಕ್ಯಾಮೆರಾ ಸೆನ್ಸಾರ್ ಇದ್ದು, ಇನ್ನು ಮೂರನೇ ಕ್ಯಾಮೆರಾವು ಮೈಕ್ರೋ ಕ್ಯಾಮೆರಾ ಆಗಿದೆ. ಹಾಗೆಯೇ ಈ ಫೋನ್ ಮುಂಭಾಗದಲ್ಲಿ 32 ಮೆಗಾ ಪಿಕ್ಸಲ್ ಸೆಲ್ಫಿ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದಿದೆ.
ಇನ್ಫಿನಿಕ್ಸ್ GT 20 ಪ್ರೊ ಫೋನ್ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸಪೋರ್ಟ್ ಪಡೆದಿದ್ದು, ಇದಕ್ಕೆ ಪೂರಕವಾಗಿ 45W ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ಹೊಂದಿದೆ. ಇದರ ಜೊತೆಗೆ ಇದು ಡ್ಯುಯಲ್ ಸ್ಪೀಕರ್ ಜೆಬಿಎಲ್ ಆಡಿಯೋ ಸೌಲಭ್ಯ ಸಹ ಪಡೆದಿದೆ. ಇದರೊಂದಿಗೆ ಈ ಫೋನ್ ಇತ್ತೀಚಿನ ಅಗತ್ಯ ಕನೆಕ್ಟಿವಿಟಿ ಸೌಲಭ್ಯಗಳ ಆಯ್ಕೆಯನ್ನು ಸಹ ಒಳಗೊಂಡಿದೆ.


Click it and Unblock the Notifications








