Infinix: ಇನ್ಫಿನಿಕ್ಸ್ GT 20 ಪ್ರೊ ಸ್ಮಾರ್ಟ್‌ಫೋನ್ ಲಾಂಚ್! ಅಮೋಲೆಡ್ ಡಿಸ್‌ಪ್ಲೇ, ಡೆಡಿಕೇಟೆಡ್ ಗೇಮಿಂಗ್ ಚಿಪ್
ಇನ್ಫಿನಿಕ್ಸ್ ಸ್ಮಾರ್ಟ್‌ಫೋನ್‌ಗಳು (Infinix Smartphones) ಇತ್ತೀಚೆಗೆ ಭಿನ್ನ ಫೀಚರ್ಸ್ ಆಯ್ಕೆ ಪಡೆಯವ ಮೂಲಕ ಬಳಕೆದಾರರಿಗೆ ವಿಶೇಷವಾದ ಅನುಭವ ನೀಡುತ್ತವೆ. ಅದರಂತೆ ಈಗ ಇನ್ಫಿನಿಕ್ಸ್ GT 20 ಪ್ರೊ ಸ್ಮಾರ್ಟ್‌ಫೋನ್ (Infinix GT 20 Pro Smartphone) ಅನ್ನು ಲಾಂಚ್ ಮಾಡಲಾಗಿದೆ.
ಹೌದು, ಇನ್ಫಿನಿಕ್ಸ್ GT 20 ಪ್ರೊ ಸ್ಮಾರ್ಟ್‌ಫೋನ್ ಅನ್ನು ಅನಾವರಣ ಮಾಡಲಾಗಿದ್ದು, ಮೀಡಿಯಾಟೆಕ್ ಪ್ರೊಸೆಸರ್ ಬಲ ಹಾಗೂ 144Hz ಅಮೋಲೆಡ್ ಡಿಸ್‌ಪ್ಲೇ, ಕ್ವಾಡ್ ಕ್ಯಾಮೆರಾ ರಚನೆ, ದೊಡ್ಡ ಬ್ಯಾಟರಿ ಮತ್ತು ಡ್ಯುಯಲ್ ಸ್ಟಿರಿಯೊ ಸ್ಪೀಕರ್ ಆಯ್ಕೆ ಪಡೆದುಕೊಂಡಿದೆ. ಹಾಗಿದ್ರೆ, ಈ ಫೋನ್‌ನ ಪ್ರಮುಖ ಫೀಚರ್ಸ್ ಹಾಗೂ ಇದರ ಬೆಲೆ ವಿವರ ಇಲ್ಲಿದೆ ನೋಡಿ.

ಇನ್ಫಿನಿಕ್ಸ್ GT 20 ಪ್ರೊ ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಮಾಹಿತಿ: ಈ ಫೋನ್ 6.78 ಇಂಚಿನ FHD+ ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, ಇದು 1,300 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್, 144Hz ರಿಫ್ರೆಶ್ ರೇಟ್, 360Hz ಟಚ್ ಸ್ಯಾಂಪಲಿಂಗ್ ರೇಟ್ ಮತ್ತು 2304Hz PWM ಮಬ್ಬಾಗಿಸುವಿಕೆಯನ್ನು ಹೊಂದಿದೆ. ಇದರ ಜೊತೆಗೆ ಗೇಮಿಂಗ್ ಸಮಯದಲ್ಲಿ 120fps ಸಾಧಿಸಲು MEMC ಮತ್ತು ಗೇಮ್ ಆಪ್ಟಿಕಲ್ ಆಪ್ಟಿಮೈಸೇಶನ್ ತಂತ್ರಜ್ಞಾನವನ್ನು ಬಳಸುವ ಪಿಕ್ಸೆಲ್‌ವರ್ಕ್ಸ್ X5 ಟರ್ಬೊ ಗೇಮಿಂಗ್ ಡಿಸ್ಪ್ಲೇ ಚಿಪ್‌ನೊಂದಿಗ ಈ ಫೋನ್ ಕಾಣಿಸಿಕೊಂಡಿದೆ.
ಇನ್ಫಿನಿಕ್ಸ್ GT 20 ಪ್ರೊ ಸ್ಮಾರ್ಟ್‌ಫೋನ್ ಪ್ರೊಸೆಸರ್ ವಿವರ: ಈ ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 8200 ಅಲ್ಟ್ರಾ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಮಾಲಿ G610 GPU ಬಲ ಪಡೆದುಕೊಂಡಿದೆ. ಹಾಗೆಯೇ 12GB ವರೆಗೆ LPDDR5X RAM ಮತ್ತು 256GB UFS 3.1 ಇಂಟರ್ ಸ್ಟೋರೇಜ್ ಆಯ್ಕೆ ಇದ್ದು, ಹಿಂದಿನ ಸರಣಿ ಫೋನ್‌ಗಿಂದ 78% ದೊಡ್ಡದಾದ ವಿಸಿ ಕೂಲಿಂಗ್ ಏರಿಯಾ (VC cooling area) ಆಯ್ಕೆ ಪಡೆದುಕೊಂಡಿದೆ. ಇದರ ಜೊತೆಗೆ ಆಂಡ್ರಾಯ್ಡ್ 14 ಅನ್ನು ರನ್ ಮಾಡಲಿದ್ದು, XOS 14 ನ ಬ್ಲೋಟ್-ಫ್ರೀ ಆವೃತ್ತಿಯನ್ನು ಹೊಂದಿದೆ. ಅಲ್ಲದೆ ಎರಡು ವರ್ಷದ ಓಸ್ ನವೀಕರಣಗಳು ಮತ್ತು ಮೂರು ವರ್ಷಗಳ ಸಾಫ್ಟ್‌ವೇರ್ ನವೀಕರಣದ ಭರವಸೆ ನೀಡಲಾಗಿದೆ.

ಇನ್ಫಿನಿಕ್ಸ್ GT 20 ಪ್ರೊ ಸ್ಮಾರ್ಟ್‌ಫೋನ್ ಕ್ಯಾಮೆರಾ ರಚನೆ: ಈ ಸ್ಮಾರ್ಟ್‌ಫೋನ್ OIS ಬೆಂಬಲದೊಂದಿಗೆ 108 ಮೆಗಾಪಿಕ್ಸೆಲ್ ಸ್ಯಾಮ್‌ಸಂ್ HM6 ಸೆನ್ಸರ್, 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸರ್ ಅನ್ನು ಹೊಂದಿದೆ. ಅಲ್ಲದೆ ಸೆಲ್ಫಿ ಹಾಗೂ ವಿಡಿಯೋ ಕರೆಗಾಗಿ ಈ ಫೋನ್, f/2.2 ದ್ಯುತಿರಂಧ್ರದೊಂದಿಗೆ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ.
ಇನ್ಫಿನಿಕ್ಸ್ GT 20 ಪ್ರೊ ಸ್ಮಾರ್ಟ್‌ಫೋನ್ ಬ್ಯಾಟರಿ ಹಾಗೂ ಇತರೆ: ಈ ಹ್ಯಾಂಡ್‌ಸೆಟ್ 45W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5,000 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಉಳಿದಂತೆ ಈ ಫೋನ್ ಜೆಬಿಎಲ್ ನಿಂದ ಟ್ಯೂನ್ ಮಾಡಲಾದ ಸ್ಟೀರಿಯೋ ಸ್ಪೀಕರ್‌ಗಳು ಮತ್ತು ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ರೀಡರ್ ಅನ್ನು ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G, ವೈ ಫೈ 6,ಎನ್‌ಎಫ್‌ಸಿ, ಜಿಪಿಎಸ್, ಬ್ಲೂಟೂತ್ 5.3 ಮತ್ತು ಇನ್ನೂ ಅನೇಕ ಸೌಲಭ್ಯಗಳನ್ನು ಈ ಫೋನ್‌ನಲ್ಲಿ ಕಾಣಬಹುದಾಗಿದೆ.

ಇನ್ಫಿನಿಕ್ಸ್ GT 20 ಪ್ರೊ ಸ್ಮಾರ್ಟ್‌ಫೋನ್ ಬೆಲೆ ಹಾಗೂ ಲಭ್ಯತೆ: 12GB/256GB ಸ್ಟೋರೇಜ್ ಮಾದರಿಗೆ SAR 1,299 (ಸುಮಾರು28,900ರೂ.ಗಳು) ಗೆ ನಿಗದಿಪಡಿಸಲಾಗಿದೆ. ಸದ್ಯಕ್ಕೆ ಈ ಫೋನ್ ಸೌದಿ ಅರೇಬಿಯಾದಲ್ಲಿ ಮುಂಗಡ ಕೋರಿಕೆಗೆ ಲಭ್ಯವಿದೆ ಮತ್ತು ಮೇ 1 ರಂದು ಮಾರಾಟವಾಗಲಿದೆ. ಈ ಫೋನ್ ಮೆಚಾ ಬ್ಲೂ, ಮೆಚಾ ಆರೆಂಜ್ ಮತ್ತು ಮೆಚಾ ಸಿಲ್ವರ್ ಬಣ್ಣದ ಆಯ್ಕೆಗಳಲ್ಲಿ ಲಭ್ಯ ಇದೆ. ಭಾರತದಲ್ಲಿ ಈ ಫೋನ್‌ನ ಲಭ್ಯತೆಯ ಕುರಿತು ಕಂಪೆನಿ ಇನ್ನೂ ವಿವರಗಳನ್ನು ನೀಡಿಲ್ಲ, ಅದಾಗ್ಯೂ ಮುಂದಿನ ತಿಂಗಳು ದೇಶದಲ್ಲಿ ಲಾಂಚ್ ಆಗುವ ಸಾಧ್ಯತೆಯಿದೆ.


Click it and Unblock the Notifications








