Home
ಸುದ್ದಿಜಾಲ

Infinix: ಭಾರತದಲ್ಲಿ ಮೇ 21 ರಂದು ಲಾಂಚ್‌ ಆಗಲಿದೆ ಇನ್ಫಿನಿಕ್ಸ್ GT 20 ಪ್ರೊ! ಲ್ಯಾಪ್‌ಟಾಪ್ ಕೂಡ ಲಾಂಚ್‌ ಆಗಲಿದೆ..

ಭಾರತದಲ್ಲಿ ಇನ್ಫಿನಿಕ್ಸ್ ಸ್ಮಾರ್ಟ್‌ಫೋನ್‌ಗಳಿಗೆ (Infinix smartphone) ಸ್ಮಾರ್ಟ್‌ಫೋನ್‌ ವಿಶೇಷವಾದ ಬೇಡಿಕೆ ಇದ್ದು, ಈ ನಡುವೆ ಹೊಸ ಹೊಸ ಡಿವೈಸ್‌ಗಳನ್ನು ಆಗಾಗ್ಗೆ ಅನಾವರಣ ಮಾಡುತ್ತಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಇನ್ಫಿನಿಕ್ಸ್ ಭಾರತದಲ್ಲಿ ಹೊಸ ಹಾಗೂ ವಿಶೇಷ ಸ್ಮಾರ್ಟ್‌ಫೋನ್‌ ಅನ್ನು ಲಾಂಚ್‌ ಮಾಡಲಿದೆ ಎಂದು ತಿಳಿದುಬಂದಿದೆ.

ಹೌದು, ಭಾರತದಲ್ಲಿ ಮೇ 21 ರಂದು ಇನ್ಫಿನಿಕ್ಸ್ GT 20 ಪ್ರೊ ಸ್ಮಾರ್ಟ್‌ಫೋನ್‌ (Infinix GT 20 Pro Smartphone) ಅನ್ನು ಲಾಂಚ್ ಮಾಡಲಿದೆ ಎಂದು ತಿಳಿದುಬಂದಿದೆ. ಈ ಫೋನ್‌ ಜೊತೆಗೆ ಇನ್ಫಿನಿಕ್ಸ್ ಲ್ಯಾಪ್‌ಟಾಪ್‌ ಅನ್ನೂ ಸಹ ಅನಾವರಣ ಮಾಡಲಿದೆ ಎಂದು ಹೇಳಲಾಗಗುತ್ತಿದೆ. ಹಾಗಿದ್ರೆ, ಈ ಫೋನ್‌ ಏನೆಲ್ಲಾ ಫೀಚರ್ಸ್‌ ಪಡೆದಿರಲಿದೆ? ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಭಾರತದಲ್ಲಿ ಮೇ 21 ರಂದು ಲಾಂಚ್‌ ಆಗಲಿದೆ ಇನ್ಫಿನಿಕ್ಸ್ GT 20 ಪ್ರೊ!..

ಇನ್ಫಿನಿಕ್ಸ್ GT 20 ಪ್ರೊ: ಇನ್ಫಿನಿಕ್ಸ್ ಮೇ 21 ರಂದು ಈ ಡಿವೈಸ್‌ಗಳ ಬಿಡುಗಡೆ ಕಾರ್ಯಕ್ರಮವನ್ನು ಆಯೋಜನೆ ಮಾಡಿದೆ. ಕಂಪನಿಯು ತನ್ನ "GT-verse" ಶ್ರೇಣಿಯನ್ನು ರಿಫ್ರೆಶ್ ಮಾಡುತ್ತಿದ್ದು, ಈವೆಂಟ್‌ನಲ್ಲಿ ಕಂಪನಿಯು ಇನ್ಫಿನಿಕ್ಸ್ GT 20 ಪ್ರೊ 5G ಸ್ಮಾರ್ಟ್‌ಫೋನ್ ಮತ್ತು ಹೊಸ ಜಿಟಿ ಬುಕ್ ಲ್ಯಾಪ್‌ಟಾಪ್ ಅನ್ನು ಲಾಂಚ್‌ ಮಾಡಲಿದೆ. ಹಲವಾರು ಟೀಸರ್‌ಗಳು ಮತ್ತು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಈ ವಿಷಯವನ್ನು ದೃಢಪಡಿಸಿವೆ.

ಲ್ಯಾಪ್‌ಟಾಪ್ ಕುರಿತು ಹೆಚ್ಚಿನ ಮಾಹಿತಿ ಇಲ್ಲ. ಆದರೆ, ಟೀಸರ್‌ಗಳು ಸೂಚಿಸುವ ಪ್ರಕಾರ, ಸ್ಮಾರ್ಟ್‌ಫೋನ್ ಭಾರತದಲ್ಲಿ ಗೇಮರ್‌ಗಳನ್ನು ಗುರಿಯಾಗಿರಿಸಿಕೊಂಡಿದೆ ಎನ್ನಲಾಗಿದೆ. ಇನ್ಫಿನಿಕ್ಸ್‌ನ X ಖಾತೆಯಲ್ಲಿನ ಪೋಸ್ಟ್‌ಗಳಲ್ಲೊಂದು ಜಿಟಿ ಬುಕ್ ಅನ್ನು ಎನ್ವಿಡಿಯಾ ಜೀಫೋರ್ಸ್‌ಆರ್‌ಟಿಎಕ್ಸ್‌ ಮತ್ತು 13 ನೇ ಜನ್ ಇಂಟೆಲ್ ಕೋರ್ ಸರಣಿಯಿಂದ ನಡೆಸಲಾಗುವುದು ಎಂದು ತಿಳಿಸಲಾಗಿದೆ. ಲ್ಯಾಪ್‌ಟಾಪ್ ಅಡಾಪ್ಟಿವ್ ಎಲ್‌ಇಡಿ ಡಿಸ್‌ಪ್ಲೇ ಮತ್ತು ಐಸ್ ಸ್ಟಾರ್ಮ್ 3.0 ಕೂಲಿಂಗ್ ಸಿಸ್ಟಮ್ ಅನ್ನು ಸಹ ಹೊಂದಿದೆ ಎಂದು ಲೀಕ್ ಮಾಹಿತಿಯನ್ನು ಉಲ್ಲೇಖ ಮಾಡಲಾಗಿದೆ.

ಭಾರತದಲ್ಲಿ ಮೇ 21 ರಂದು ಲಾಂಚ್‌ ಆಗಲಿದೆ ಇನ್ಫಿನಿಕ್ಸ್ GT 20 ಪ್ರೊ!..

ಇನ್ಫಿನಿಕ್ಸ್‌ GT 20 ಪ್ರೊ ನಿರೀಕ್ಷಿತ ಫೀಚರ್ಸ್‌: ಟೆಕ್ ಯೂಟ್ಯೂಬರ್ ಸೋನು ಪ್ರಜಾಪತಿ ಅವರ ಲೀಕ್‌ ಮಾಹಿತಿ ಪ್ರಕಾರ, ಇನ್ಫಿನಿಕ್ಸ್‌ GT 20 ಪ್ರೊ 5G ಸ್ಮಾರ್ಟ್‌ಫೋನ್‌ 144Hz ರಿಫ್ರೆಶ್ ರೇಟ್‌ ಆಯ್ಕೆಯೊಂದಿಗೆ 6.78 ಇಂಚಿನ FHD+ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ. ಇದರ ಜೊತೆಗೆ ಡೈಮೆನ್ಸಿಟಿ 8200 ಅಲ್ಟಿಮೇಟ್ ಪ್ರೊಸೆಸರ್‌ನಲ್ಲಿ ಈ ಫೋನ್‌ ಕಾಣಿಸಿಕೊಳ್ಳಲಿದೆ ಎಂದು ತಿಳಿದುಬಂದಿದ್ದು, LPDDR5X RAM ಮತ್ತು UFS 3.1 ಸ್ಟೋರೇಜ್‌ ಆಯ್ಕೆಯನ್ನು ಈ ಫೋನ್‌ನಲ್ಲಿ ಕಾಣಬಹುದಾಗಿದೆ. ಇದರ ಜೊತೆಗೆ ಆಂಡ್ರಾಯ್ಡ್‌ 14 ಓಎಸ್ ನಲ್ಲಿ ಈ ಫೋನ್‌ ರನ್‌ ಆಗಲಿದೆ ಎಂದು ಹೇಳಲಾಗುತ್ತಿದೆ. ಹಾಗೆಯೇ 2 OS ನವೀಕರಣಗಳು ಮತ್ತು 3 ಭದ್ರತಾ ನವೀಕರಣಗಳ ಭರವಸೆಯನ್ನೂ ಕಂಪೆನಿ ನೀಡಲಿದೆಯಂತೆ.

ಈ ಫೋನ್‌ನ ಕ್ಯಾಮೆರಾ ವಿಚಾರಕ್ಕೆ ಬಂದರೆ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಬೆಂಬಲದೊಂದಿಗೆ 108 ಮೆಗಾಪಿಕ್ಸೆಲ್ HM6 ಸೆನ್ಸರ್‌ ನೊಂದಿಗೆ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಈ ಸ್ಮಾರ್ಟ್‌ಫೋನ್‌ನಲ್ಲಿ ನಿರೀಕ್ಷಿಸಲಾಗಿದೆ. ಹಾಗೆಯೇ 2 ಮೆಗಾಪಿಕ್ಸೆಲ್ ಕ್ಯಾಮೆರಾವನ್ನೂ ಸಹ ಈ ಫೋನ್‌ನಲ್ಲಿ ನೋಡಬಹುದಾಗಿದೆ. ಅವುಗಳಲ್ಲಿ ಒಂದು ಮ್ಯಾಕ್ರೋ ಮತ್ತು ಇನ್ನೊಂದು ಅಲ್ಟ್ರಾವೈಡ್ ಆಗಿರಲಿದೆ ಎಂದು ಹೇಳಲಾಗಿದೆ. ಅಲ್ಲದೆ ಸೆಲ್ಫಿಗಳಿಗಾಗಿ, ಈ ಫೋನ್ 32 ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆ ಪಡೆದಿರಲಿದೆ ಎಂದು ಕಂಡುಬಂದಿದೆ.

ಇದರ ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಇದು 45W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ ನಿರೀಕ್ಷೆಯಿದೆ. ಉಳಿದಂತೆ ಈ ಫೋನ್ ಆಡಿಯೋ ಔಟ್‌ಪುಟ್‌ಗಾಗಿ ಡ್ಯುಯಲ್ ಜೆಬಿಎಲ್‌ ಸ್ಪೀಕರ್‌ಗಳನ್ನು ಪಡೆದಿರಲಿದೆ ಎಂದು ಲೀಕ್‌ ಮಾಹಿತಿಯಲ್ಲಿ ತಿಳಿಸಲಾಗಿದೆ. ಉಳಿದಂತೆ ಈ ಫೋನ್ ಈ ಫೋನ್‌ ಬೆಲೆ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯಿಲ್ಲದಿದ್ದರೂ, 25,000 ರೂ.ಗಿಂತ ಕಡಿಮೆ ಬೆಲೆಗೆ ಈ ಫೋನ್‌ ಲಭ್ಯ ಇರಲಿದೆ ಎಂದು ತಿಳಿದುಬಂದಿದೆ.

ಭಾರತದಲ್ಲಿ ಮೇ 21 ರಂದು ಲಾಂಚ್‌ ಆಗಲಿದೆ ಇನ್ಫಿನಿಕ್ಸ್ GT 20 ಪ್ರೊ!..

ಬೆಲೆ ಅಂದಾಜುಗಳು ನಿಜವಾಗಿದ್ದರೆ ಮತ್ತು ವದಂತಿಯ ಫೀಚರ್ಸ್‌ ಇವೇ ಇದ್ದರೆ ಈ ಫೋನ್‌ ನಥಿಂಗ್ ಫೋನ್ 2a, ರೆಡ್ಮಿ ನೋಟ್‌ 13 ಪ್ರೊ ಮತ್ತು ರಿಯಲ್‌ಮಿ 12 ಪ್ರೊ ನಂತಹ ಫೋನ್‌ಗಳಿಗೆ ತೀವ್ರ ಪೈಪೋಟಿ ನೀಡಲಿದೆ. ಅಲ್ಲದೆ ಮಿಡ್ ರೇಂಜ್ ವಿಭಾಗದಲ್ಲಿ ಈ ಫೋನ್‌ ದೊಡ್ಡ ಮಟ್ಟದ ಸೌಂಡ್‌ ಮಾಡಲಿದೆ.

Best Mobiles in India

English summary
Infinix GT 20 Pro Smartphone will be launched in India on May 21. Along with this phone, Infinix is also said to unveil a laptop.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+