Home
ಸುದ್ದಿಜಾಲ

ಭಾರತದಲ್ಲಿ ಇನ್ಫಿನಿಕ್ಸ್ GT 20 ಪ್ರೊ ಫೋನ್‌ ಲಾಂಚ್‌; ಆಕರ್ಷಕ ಫೀಚರ್ಸ್‌!

ಇನ್ಫಿನಿಕ್ಸ್ ಮೊಬೈಲ್‌ ಸಂಸ್ಥೆಯ ಬಹುನಿರೀಕ್ಷಿತ ಇನ್ಫಿನಿಕ್ಸ್ GT 20 ಪ್ರೊ ಮೊಬೈಲ್‌ ಇಂದು ಅಧಿಕೃತವಾಗಿ ಬಿಡುಗಡೆ ಆಗಿದೆ. ಇನ್ನು ಈ ಫೋನ್‌ ಡೈಮೆನ್ಸಿಟಿ 8200 ಅಲ್ಟಿಮೇಟ್ ಪ್ರೊಸೆಸರ್‌ ಸೌಲಭ್ಯದ ಪವರ್‌ ಪಡೆದಿದ್ದು, ಇದರೊಂದಿಗೆ ಹಿಂಭಾಗದಲ್ಲಿ ಪ್ರಾಥಮಿಕ ಕ್ಯಾಮೆರಾವು 108 ಮೆಗಾ ಪಿಕ್ಸಲ್‌ ಸೆನ್ಸಾರ್‌ ಕ್ಯಾಮೆರಾ ಪಡೆದುಕೊಂಡಿದೆ.

ಹೌದು, ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ಮೂಲಕ ಇನ್ಫಿನಿಕ್ಸ್ GT 20 ಪ್ರೊ ಫೋನ್‌ ದೇಶಿಯ ಮಾರುಕಟ್ಟೆಗೆ ಲಾಂಚ್ ಆಗಿದೆ. ಇದು ಸ್ಟೈಲಿಶ್‌ ಡಿಸೈನ್‌ ಪಡೆದಿರುವ ಜೊತೆಗೆ 12GB RAM + 256GB ವರೆಗೂ ಸ್ಟೋರೇಜ್‌ ಆಯ್ಕೆಯನ್ನು ನೀಡಿದೆ. ಅಲ್ಲದೇ 45W ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ಪಡೆದಿರುವುದು ಮತ್ತೊಂದು ಆಕರ್ಷಣೆ ಎನಿಸಿದೆ.

ಭಾರತದಲ್ಲಿ ಇನ್ಫಿನಿಕ್ಸ್ GT 20 ಪ್ರೊ ಫೋನ್‌ ಲಾಂಚ್‌; ಆಕರ್ಷಕ ಫೀಚರ್ಸ್‌!

ಹಾಗೆಯೇ ಈ ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದ್ದು, ಅಲ್ಲದೇ ಈ ಫೋನ್ ಮೆಕಾ ಸಿಲ್ವರ್, ಮೆಕಾ ಆರೆಂಜ್ ಮತ್ತು ಮೆಕಾ ಬ್ಲೂ ಕಲರ್‌ ಆಯ್ಕೆಗಳನ್ನು ಇದು ಪಡೆದುಕೊಂಡಿದೆ. ಹಾಗಾದರೇ ಇನ್ಫಿನಿಕ್ಸ್ GT 20 ಪ್ರೊ ಫೋನಿನ ಇತರೆ ಫೀಚರ್ಸ್‌ ಏನು ಹಾಗೂ ಬೆಲೆ ಎಷ್ಟು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಇನ್ಫಿನಿಕ್ಸ್ GT 20 ಪ್ರೊ ಫೀಚರ್ಸ್‌

ಇನ್ಫಿನಿಕ್ಸ್ GT 20 ಪ್ರೊ ಮೊಬೈಲ್‌ 6.78 ಇಂಚಿನ FHD+ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದ್ದು, ಇದರ ಜೊತೆಗೆ 144Hz ರಿಫ್ರೆಶ್ ರೇಟ್‌ ಸಪೋರ್ಟ್‌ ಪಡೆದಿದೆ. ಹಾಗೆಯೇ ಇದು 1300nits ಬ್ರೈಟ್ನೆಸ್‌ ಸಪೋರ್ಟ್‌ ಕೂಡಾ ಇದ್ದು, ಸ್ಕ್ರೀನ್‌ ಟು ಬಾಡಿ ನಡುವಿನ ಅನುಪಾತ ಶೇ 94.3% ರಷ್ಟು ಆಗಿದೆ.

ಇನ್ಫಿನಿಕ್ಸ್‌ GT 20 ಪ್ರೊ ಮೊಬೈಲ್‌ ಡೈಮೆನ್ಸಿಟಿ 8200 ಅಲ್ಟಿಮೇಟ್ ಪ್ರೊಸೆಸರ್‌ ಬಲದಲ್ಲಿ ಕೆಲಸ ಮಾಡಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 14 ಓಎಸ್ ಸಪೋರ್ಟ್‌ ಇದೆ. ಇನ್ನು ಈ ಫೋನ್‌ 12 GB RAM + 256 GB ಸ್ಟೋರೇಜ್‌ ಸಪೋರ್ಟ್‌ ಸಹ ಒಳಗೊಂಡಿದ್ದು. ವಿಸಿ ಲಿಕ್ವಿಡ್‌ ಕೂಲಿಂಗ್ ಹಾಗೂ ಗೇಮಿಂಗ್ ಚಿಪ್‌ಸೆಟ್‌ ಅಪೋರ್ಟ್‌ ಕೂಡಾ ಪಡೆದಿದೆ.

ಇನ್ಫಿನಿಕ್ಸ್‌ GT 20 ಪ್ರೊ ಮೊಬೈಲ್‌ ಹಿಂಭಾಗದಲ್ಲಿ ಮೂರು ಕ್ಯಾಮೆರಾ ರಚನೆ ಹೊಂದಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು 108 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಇನ್ನು ಸೆಕೆಂಡರಿ ಕ್ಯಾಮೆರಾವು ಡೆಪ್ತ್‌ ಕ್ಯಾಮೆರಾ ಸೆನ್ಸಾರ್‌ ಇದ್ದು, ಇನ್ನು ತೃತೀಯ ಕ್ಯಾಮೆರಾವು ಮೈಕ್ರೋ ಕ್ಯಾಮೆರಾ ಆಗಿದೆ. ಹಾಗೆಯೇ ಈ ಫೋನ್‌ ಮುಂಭಾಗದಲ್ಲಿ 32 ಮೆಗಾ ಪಿಕ್ಸಲ್‌ ಸೆಲ್ಫಿ ಕ್ಯಾಮೆರಾ ರಚನೆ ಪಡೆದಿದೆ.

ಇನ್ಫಿನಿಕ್ಸ್‌ GT 20 ಪ್ರೊ ಮೊಬೈಲ್‌ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸಪೋರ್ಟ್‌ ಹೊಂದಿದ್ದು, ಇದಕ್ಕೆ ಪೂರಕವಾಗಿ 45W ಫಾಸ್ಟ್‌ ಚಾರ್ಜಿಂಗ್ ಅನ್ನು ಸಪೋರ್ಟ್‌ ಹೊಂದಿದೆ. ಇದರ ಜೊತೆಗೆ ಇದು ಡ್ಯುಯಲ್‌ ಸ್ಪೀಕರ್‌ ಜೆಬಿಎಲ್‌ ಆಡಿಯೋ ಸೌಲಭ್ಯ ಸಹ ಪಡೆದಿದೆ. ಇದರೊಂದಿಗೆ ಈ ಫೋನ್‌ ಇತ್ತೀಚಿನ ಅಗತ್ಯ ಕನೆಕ್ಟಿವಿಟಿ ಸೌಲಭ್ಯಗಳ ಆಯ್ಕೆಯನ್ನು ಸಹ ಪಡೆದಿದೆ.

ಬೆಲೆ ಮತ್ತು ಲಭ್ಯತೆ

ಇನ್ಫಿನಿಕ್ಸ್‌ GT 20 ಪ್ರೊ - 8GB ವೇರಿಯಂಟ್‌ ಬೆಲೆ 24,999ರೂ
ಇನ್ಫಿನಿಕ್ಸ್‌ GT 20 ಪ್ರೊ - 12GB ವೇರಿಯಂಟ್‌ ಬೆಲೆ 26,999ರೂ

ಇನ್ನು ಪರಿಚಯಾತ್ಮಕ ಆಫರ್‌ ಆಗಿ ಇನ್ಫಿನಿಕ್ಸ್‌ ಸಂಸ್ಥೆಯು 8000ರೂ. ಗಳ ಡಿಸ್ಕೌಂಟ್‌ ತಿಳಿಸಿದೆ. ಅಲ್ಲದೇ ಖರೀದಿದಾರರು ಆಯ್ದ ಬ್ಯಾಂಕ್ ನ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ವಹಿವಾಟಿನ ಮೇಲೆ ಸುಮಾರು 2,000ರೂ. ಗಳ ರಿಯಾಯಿತಿ ಸಹ ಪಡೆಯಬಹುದು.

Best Mobiles in India

English summary
Infinix GT 20 Pro With 5,000mAh battery Launched in India. Know more about phone Price, Specifications and other details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+